Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ನೀರು ಕುಡಿದ ನಂತರ ನಲ್ಲಿ ಬಂದ್ ಮಾಡುವ ನಾಯಿ; ಇದು ಮನುಷ್ಯರಿಗಿಂತ ಜವಾಬ್ದಾರಿಯುತ

Dog Lovers: ಎಷ್ಟು ಛಂದ ಈ ನಾಯಿ ತನ್ನ ತಿಳಿವಳಿಕೆ ಮೀರಿ ಜವಾಬ್ದಾರಿಯನ್ನು ನಿಭಾಯಿಸಿದೆ. ಇಂಥ ಬುದ್ಧಿ ಮನುಷ್ಯನಿಗೆ ಯಾಕಿಲ್ಲ ಎಂದು ನೆಟ್ಟಿಗರು ಅಚ್ಚರಿಯಿಂದ ಪ್ರತಿಕ್ರಿಯಿಸುತ್ತಿದ್ದಾರೆ. ಈ ನಾಯಿ ನನಗೆ ಬೇಕು, ಮನುಷ್ಯನಿಗಿಂತ ಇಂಥ ನಾಯಿಗಳೇ ಮೇಲು ಎಂದು ಅನೇಕರು ಹೇಳುತ್ತಿದ್ದಾರೆ. ನೀವೂ ಈ ವಿಡಿಯೋ ನೋಡಿದ ಮೇಲೆ ಈ ನಾಯಿ ನಮಗೂ ಬೇಕು ಎನ್ನುತ್ತೀರೋ ಹೇಗೆ?

Viral Video: ನೀರು ಕುಡಿದ ನಂತರ ನಲ್ಲಿ ಬಂದ್ ಮಾಡುವ ನಾಯಿ; ಇದು ಮನುಷ್ಯರಿಗಿಂತ ಜವಾಬ್ದಾರಿಯುತ
ನೀರು ಕುಡಿದ ಬಳಿಕ ನಲ್ಲಿಯನ್ನು ಬಂದ್ ಮಾಡುವ ನಾಯಿ
Follow us
ಶ್ರೀದೇವಿ ಕಳಸದ
|

Updated on:Oct 03, 2023 | 1:50 PM

Dog : ರೆಡ್ಡಿಟ್​ನಲ್ಲಿ ಈ ವಿಡಿಯೋ ಪೋಸ್ಟ್ ಮಾಡಲಾಗಿದೆ. ಈ ವಿಡಿಯೋದಲ್ಲಿ ನಾಯಿಯೊಂದು ನಲ್ಲಿಯ ನೀರನ್ನು ಕುಡಿದ ನಂತರ ತನ್ನ ಮೂಗಿನಿಂದ ನಲ್ಲಿಯನ್ನು ಬಂದ್​ ಮಾಡುತ್ತದೆ. ನೆಟ್ಟಿಗರು ಈ ವಿಡಿಯೋ ನೋಡಿ ಪರಮಾಶ್ಚರ್ಯಗೊಂಡಿದ್ದಾರೆ. ಮನುಷ್ಯರಿಗಿಂತ ಜವಾಬ್ದಾರಿಯುತವಾಗಿ ವರ್ತಿಸುತ್ತಿದೆ, ಇದು ತುಂಬಾ ಬುದ್ಧಿವಂತ ನಾಯಿ ಎಂದು ಶ್ಲಾಘಿಸುತ್ತಿದ್ದಾರೆ. ಮೂಲತಃ ಈ ವಿಡಿಯೋ ಅನ್ನು ಟಿಕ್​ಟಾಕ್​ನಲ್ಲಿ ಪೋಸ್ಟ್ ಮಾಡಲಾಗಿತ್ತು. ರೆಡ್ಡಿಟ್​ನಲ್ಲಿ (Reddit) ಈತನಕ 2,900 ಜನರು ಲೈಕ್ ಮಾಡಿದ್ದಾರೆ. ನೂರಾರು ಜನರು ತಮಗೆ ಅನ್ನಿಸಿದ್ದನ್ನು ಹೇಳಿದ್ದಾರೆ.

ಇದನ್ನೂ ಓದಿ : Viral Video: ಮಗಳ ಹುಟ್ಟುಹಬ್ಬಕ್ಕೆ ಕೊಳಕುನೀರಿನ ಬಾಟಲಿಯನ್ನು ಗಿಫ್ಟ್ ಕೊಟ್ಟ ತಂದೆ

ತುಂಬಾ ಒಳ್ಳೆಯ ಹುಡುಗನಿವ, ನೀರು ಕುಡಿದ ಮೇಲೆ ನಲ್ಲಿಯನ್ನು ತಿರುಗಿಸುವುದೂ ಇವನಿಗೆ ಗೊತ್ತಿದೆ ಎಂದಿದ್ಧಾರೆ ಒಬ್ಬರು. ಜಲಸಂರಕ್ಷಣೆಯಲ್ಲಿ ಮನುಷ್ಯರಿಗಿಂತ ಹೆಚ್ಚು ತಿಳಿವಳಿಕೆ ನಾಯಿಗಿದೆ ಎಂದಿದ್ದಾರೆ ಇನ್ನೊಬ್ಬರು. ನಿಜಕ್ಕೂ ಈ ವಿಡಿಯೋದಿಂದ ನಾನು ಪ್ರಭಾವಿತಗೊಂಡಿದ್ದೇನೆ ಎಂದು ಮತ್ತೊಬ್ಬರು ಹೇಳಿದ್ದಾರೆ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ನೀರು ಕುಡಿದು ನಲ್ಲಿಯನ್ನು ಬಂದ್​ ಮಾಡುವ ನಾಯಿ

He opened the tap like, he pays the rent! by inDOG

ಬಹುಶಃ ನಾಯಿಗಳಿಗೆ ತರಬೇತಿ ಕೊಟ್ಟರೆ ಮನುಷ್ಯ ಮಾಡುವ ಅರ್ಧದಷ್ಟು ಕೆಲಸಗಳನ್ನು ಅವು ಮಾಡಬಲ್ಲವೇನೋ ಎಂದಿದ್ದಾರೆ ಒಬ್ಬರು. ಈಗಾಗಲೇ ನಾಯಿ, ಕೋತಿ ಮನುಷ್ಯರನ್ನು ಅನುಕರಿಸುವಲ್ಲಿ ಮೊದಲ ಸ್ಥಾನದಲ್ಲಿವೆ ಎಂದಿದ್ದಾರೆ ಇನ್ನೊಬ್ಬರು. ನಮ್ಮ ಮನೆಯ ಬೆಕ್ಕು ಕೂಡ ಹೀಗೆಯೇ ಜವಾಬ್ದಾರಿಯಿಂದ ವರ್ತಿಸುತ್ತದೆ. ನೀರು ಕುಡಿದ ಮೇಲೆ ಮೂತಿಯಿಂದ ನಲ್ಲಿಯನ್ನು ಬಂದ್​ ಮಾಡುತ್ತದೆ ಎಂದಿದ್ದಾರೆ ಮಗದೊಬ್ಬರು.

ಇದನ್ನೂ ಓದಿ : Viral: ನಾಯಿಯ ಪೋಷಕರನ್ನು ಪತ್ತೆ ಹಚ್ಚಲು ಸಹಾಯ ಕೋರಿದ ರತನ್​ ಟಾಟಾ

ನಾನು ಸಾಕಿದ ನಾಯಿ ತಾನಲ್ಲದೇ ನನಗೂ ಹಾಸಿಗೆಯನ್ನು ಹಾಸಿ ಕೊಡಲು ಪ್ರಯತ್ನಿಸುತ್ತಿತ್ತು ಎಂದಿದ್ದಾರೆ ಒಬ್ಬರು. ಪರಿಸರದ ಬಗ್ಗೆ ನಾಯಿಗೆ ಇರುವಷ್ಟು ಅರಿವು ಮನುಷ್ಯನಿಗಿಲ್ಲ, ಬಹಳ ಬೇಸರವೆನ್ನಿಸುತ್ತದೆ ಎಂದಿದ್ದಾರೆ ಇನ್ನೊಬ್ಬರು. ಈ ನಾಯಿಯನ್ನು ನಾನು ಮನೆಗೆ ಕರೆದುಕೊಂಡು ಹೋಗುತ್ತೇನೆ ಎಂದಿದ್ದಾರೆ ಮತ್ತೊಬ್ಬರು. ನಿಜಕ್ಕೂ ಇದು ನಾಯಿಗಳ ವಿಕಾಸ. ಬಹಳ ಖುಷಿ ಎನ್ನಿಸುತ್ತಿದೆ ಈ ತಿಳಿವಳಿಕೆಯನ್ನು ನೋಡಿ ಎಂದಿದ್ದಾರೆ ಮಗದೊಬ್ಬರು. ಮನುಷ್ಯ ಇಂಥ ಪ್ರಾಣಿಗಳನ್ನು ತನ್ನ ಸಹಾಯಕರಂತೆ ನೇಮಿಸಿಕೊಳ್ಳುವ ದಿನಗಳು ದೂರವೇನಿಲ್ಲ ಎಂದಿದ್ದಾರೆ ಕೆಲವರು.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 1:42 pm, Tue, 3 October 23