AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ‘ರೋಸಿ’ಯ ಸೀಮಂತದ ವಿಡಿಯೋ ವೈರಲ್; ಇದು ಬಹಳ ಆಪ್ತ, ಸುಂದರವೆಂದ ನೆಟ್ಟಿಗರು

Golden Retriever : ನಾಯಿಯ ಜನನ ಪ್ರಮಾಣಪತ್ರ, ನಾಯಿಯ ನಾಮಕರಣ, ನಾಯಿಯ ಮದುವೆ... ವಿಜೃಂಭಣೆಯಿಂದ ನಡೆದ ಈ ಎಲ್ಲ ಕಾರ್ಯಗಳ ವಿಡಿಯೋ ನೋಡಿದಿರಿ. ಇದೀಗ ನಾಯಿಯ ಸೀಮಂತ ಮಾಡಿದ ವಿಡಿಯೋ ನೋಡಿ. ಗೋಲ್ಡನ್ ರಿಟ್ರೈವರ್​ ರೋಸಿಯ ಸೀಮಂತವನ್ನು ಹಿಂದೂ ಸಂಪ್ರದಾಯದಂತೆ ಶಾಸ್ತ್ರೋಕ್ತವಾಗಿ ನೆರವೇರಿಸಿದ್ದಾರೆ ಆಕೆಯ ಪೋಷಕರು. ಅಪರೂಪದ ವಿಡಿಯೋ ನಿಮಗಾಗಿ.

Viral Video: 'ರೋಸಿ'ಯ ಸೀಮಂತದ ವಿಡಿಯೋ ವೈರಲ್; ಇದು ಬಹಳ ಆಪ್ತ, ಸುಂದರವೆಂದ ನೆಟ್ಟಿಗರು
ರೋಸಿ-ರೆಮೋ ಸಿಮಂತ.
Follow us
ಶ್ರೀದೇವಿ ಕಳಸದ
|

Updated on:Sep 30, 2023 | 3:07 PM

Dog Lover: ಮನೆಯ ಮಗನೋ, ಮಗಳಿಗೋ ಮದುವೆ (Marriage) ಮಾಡಿದಂತೆ ಹಿಂದೂ ಸಂಪ್ರದಾಯದ ಪ್ರಕಾರ ಸಾಕಿದ ನಾಯಿಗಳಿಗೆ ಮದುವೆ ಮಾಡಿದ ಸಾಕಷ್ಟು ವಿಡಿಯೋಗಳನ್ನು ನೋಡಿದ್ದೀರಿ. ಲಗ್ನಪತ್ರಿಕೆ ಹಂಚುವುದರಿಂದ ಹಿಡಿದು ಬಂಧು ಬಳಗದವರನ್ನು ಕರೆದು ಲಕ್ಷಾಂತರ ರೂಪಾಯಿ ಖರ್ಚು ಮಾಡಿ, ಪೆಂಡಾಲ್​ ಹಾಕಿಸಿ, ಮದುಮಕ್ಕಳನ್ನು ಸಿಂಗರಿಸಿ, ಬೆಲೆಬಾಳುವ ಬಟ್ಟೆ ಒಡವೆ ಹಾಕಿ, ಅತಿಥಿಗಳಿಗೆ ಭೂರಿ ಭೋಜನ ಉಡುಗೊರೆ ವ್ಯವಸ್ಥೆ ಮಾಡಿದ್ದನ್ನು ನೋಡಿ ಅಚ್ಚರಿ ಪಟ್ಟಿದ್ದೀರಿ. ಇದೀಗ ನಾಯಿಯ ಪೋಷಕರು ತಮ್ಮ ಗೋಲ್ಡನ್​ ರಿಟ್ರೈವರ್ ನಾಯಿಗೆ ಸೀಮಂತ ಮಾಡಿದ್ದಾರೆ. ಈ ವಿಡಿಯೋ ಅನ್ನು ನೆಟ್​ಮಂದಿ ಅಚ್ಚರಿಯಿಂದ ನೋಡುತ್ತಿದೆ.

ಇದನ್ನೂ ಓದಿ : Viral Video: ‘ನನಗೆ ಡಿಸ್ಕೌಂಟ್ ಕೊಡಬಹುದೆ?’​ ಕ್ಯಾಬ್​ ಡ್ರೈವರ್​ ಲೆನ್ಸ್​ಕಾರ್ಟ್ ಉದ್ಯೋಗಿಗೆ ಕೇಳುತ್ತಾನೆ, ಮುಂದೇನಾಗುತ್ತದೆ ನೋಡಿ

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ರೋಸಿ ಮತ್ತು ರೆಮೋ ಎಂಬ ಜೋಡಿನಾಯಿಯ ಪೋಷಕ ಸಿದ್ಧಾರ್ಥ್ ಶಿವಂ ಇನ್ಸ್ಟಾಗ್ರಾಮ್​ನಲ್ಲಿ ಈ ವಿಡಿಯೋ ಅನ್ನು ನಿನ್ನೆ ಹಂಚಿಕೊಂಡಿದ್ದಾರೆ. ಈತನಕ ಸುಮಾರು 90,000 ಲೈಕ್ ಮಾಡಿದ್ದಾರೆ. ಈತನಕ ಸುಮಾರು 7 ಲಕ್ಷ ಜನರು ಈ ವಿಡಿಯೋ ನೋಡಿದ್ದಾರೆ. ನೂರಾರು ಜನರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದ್ದಾರೆ.

ರೋಸಿ ಮತ್ತು ರೆಮೋ ಸೀಮಂತ

ಈ ವಿಡಿಯೋ ನೋಡಿ ಮನಸ್ಸು ತುಂಬಿ ಬಂದಿದೆ, ಮುಂದಿನ ಹಂತದ ವಿಡಿಯೋಗಳನ್ನು ನೋಡಲು ಕಾತುರರಾಗಿದ್ದೇವೆ ಎಂದು ಅನೇಕರು ಪ್ರತಿಕ್ರಿಯಿಸಿದ್ದಾರೆ. ನಿಮ್ಮ ಮಗಳಿಗೆ ಸುಗಮವಾಗಿ ಹೆರಿಗೆ ಆಗಲಿ, ಆರೋಗ್ಯವಂತ ಮೊಮ್ಮಕ್ಕಳನ್ನು ನೀವು ಪಡೆಯಿರಿ, ದೇವರು ನಿಮ್ಮ ಕುಟುಂಬವನ್ನು ಆಶೀರ್ವದಿಸಲಿ ಎಂದಿದ್ದಾರೆ ಒಬ್ಬರು. ಅವಳಿಗೆ ಬಿಗಿಯಾಗಿ ಅಪ್ಪಿಕೊಂಡು ಮುತ್ತು ನೀಡಬೇಕು ಎಂದಿದ್ದಾರೆ ಇನ್ನೊಬ್ಬರು.

ಇದನ್ನೂ ಓದಿ : Viral Video: ಮಿಸ್ಸಿಸ್ಸಿಪ್ಪಿ: ಕಾಣೆಯಾಗಿದ್ದ ಕೋತಿ 24 ಗಂಟೆಯೊಳಗೆ ತನ್ನ ಕುಟುಂಬದ ಮಡಿಲಿನೊಳಗೆ

ಇಂದು ನಾನು ಇಂಟರ್​ನೆಟ್​ನಲ್ಲಿ ನೋಡಿದ ಅತ್ಯಂತ ಮೋಹಕ ವಿಡಿಯೋ ಇದಾಗಿದೆ ಎಂದಿದ್ದಾರೆ ಒಬ್ಬರು. ಎಷ್ಟೊಂದು ಖುಷಿಯಿಂದ ಇದ್ದಾಳೆ ಅವಳ ಮುಖ ನೋಡಿ ಎಂದಿದ್ದಾರೆ ಇನ್ನೊಬ್ಬರು. ಈ ಎರಡೂ ಮಕ್ಕಳು ತುಂಬಾ ಮುದ್ದಾಗಿದ್ಧಾರೆ ಎಂದಿದ್ದಾರೆ ಮತ್ತೊಬ್ಬರು.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್​ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 2:15 pm, Sat, 30 September 23

ಸೀಟ್​​ ಸಿಗದಿದ್ದಕ್ಕೆ ಬಸ್​ ಮುಂದೆ ಮಲಗಿದ ವೃದ್ಧ: ಮುಂದೇನಾಯ್ತು?
ಸೀಟ್​​ ಸಿಗದಿದ್ದಕ್ಕೆ ಬಸ್​ ಮುಂದೆ ಮಲಗಿದ ವೃದ್ಧ: ಮುಂದೇನಾಯ್ತು?
ತಮ್ಮ ಬೀಗ ಬೈರತಿ ಸುರೇಶ್​ಗೂ ಖಡ್ಗ ನೀಡಿ ಗೌರವಿಸಿದ ವಿಶ್ವನಾಥ್
ತಮ್ಮ ಬೀಗ ಬೈರತಿ ಸುರೇಶ್​ಗೂ ಖಡ್ಗ ನೀಡಿ ಗೌರವಿಸಿದ ವಿಶ್ವನಾಥ್
ಅಶ್ರಫ್ ಕೊಲೆ ಪ್ರಕರಣಕ್ಕೆ ನ್ಯಾಯ ಕೇಳಿದ ಮುಸ್ಲಿಂ ಮುಖಂಡರು
ಅಶ್ರಫ್ ಕೊಲೆ ಪ್ರಕರಣಕ್ಕೆ ನ್ಯಾಯ ಕೇಳಿದ ಮುಸ್ಲಿಂ ಮುಖಂಡರು
ಕನ್ನಡ ಚಿತ್ರರಂಗದಿಂದ ಸೋನು ನಿಗಂಗೆ ನಿಷೇಧ: ಉಮೇಶ್ ಬಣಕಾರ್ ಹೇಳಿದ್ದೇನು?
ಕನ್ನಡ ಚಿತ್ರರಂಗದಿಂದ ಸೋನು ನಿಗಂಗೆ ನಿಷೇಧ: ಉಮೇಶ್ ಬಣಕಾರ್ ಹೇಳಿದ್ದೇನು?
ಪ್ರವಾದಿ ಮೊಹಮ್ಮದ್ ವಿಷಯದಲ್ಲಿ ಯತ್ನಾಳ್ ಮಾತಾಡಿದ್ದು ತಪ್ಪು: ಎಂಬಿ ಪಾಟೀಲ್
ಪ್ರವಾದಿ ಮೊಹಮ್ಮದ್ ವಿಷಯದಲ್ಲಿ ಯತ್ನಾಳ್ ಮಾತಾಡಿದ್ದು ತಪ್ಪು: ಎಂಬಿ ಪಾಟೀಲ್
ಐಪಿಎಲ್ ಧಡೂತಿ ಲೀಗ್​ ಆಗಿ ಬದಲಾದ್ರೆ ಹೇಗಿರುತ್ತೆ? ಇಲ್ಲಿದೆ ವಿಡಿಯೋ
ಐಪಿಎಲ್ ಧಡೂತಿ ಲೀಗ್​ ಆಗಿ ಬದಲಾದ್ರೆ ಹೇಗಿರುತ್ತೆ? ಇಲ್ಲಿದೆ ವಿಡಿಯೋ
ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ: ಚಿಕ್ಕಮಗಳೂರಿನಲ್ಲಿ ಬಿಗಿ ಬಂದೋಬಸ್ತ್
ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ: ಚಿಕ್ಕಮಗಳೂರಿನಲ್ಲಿ ಬಿಗಿ ಬಂದೋಬಸ್ತ್
ಬನಸಗೌಡ ಯತ್ನಾಳ್ ಮಾಧ್ಯಮದವರ ಕೈಗೆ ಸಿಗುತ್ತಿಲ್ಲವಂತಲ್ಲ? ಜಮೀರ್ ಅಹ್ಮದ್
ಬನಸಗೌಡ ಯತ್ನಾಳ್ ಮಾಧ್ಯಮದವರ ಕೈಗೆ ಸಿಗುತ್ತಿಲ್ಲವಂತಲ್ಲ? ಜಮೀರ್ ಅಹ್ಮದ್
ಮೇ 6ರವರೆಗೆ ನಿಷೇಧಾಜ್ಞೆ ಜಾರಿಯಲ್ಲಿಟ್ಟಿರುವ ದಕ್ಷಿಣ ಕನ್ನಡ ಜಿಲ್ಲಾಡಳಿತ
ಮೇ 6ರವರೆಗೆ ನಿಷೇಧಾಜ್ಞೆ ಜಾರಿಯಲ್ಲಿಟ್ಟಿರುವ ದಕ್ಷಿಣ ಕನ್ನಡ ಜಿಲ್ಲಾಡಳಿತ
ಯುದ್ಧ ಮಾಡದೆಯೇ ಪಾಕಿಸ್ತಾನಕ್ಕೆ ಮರ್ಮಾಘಾತ ನೀಡಿದ ಭಾರತದ 9 ನಿರ್ಧಾರಗಳಿವು..
ಯುದ್ಧ ಮಾಡದೆಯೇ ಪಾಕಿಸ್ತಾನಕ್ಕೆ ಮರ್ಮಾಘಾತ ನೀಡಿದ ಭಾರತದ 9 ನಿರ್ಧಾರಗಳಿವು..