Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ‘ನನಗೆ ಡಿಸ್ಕೌಂಟ್ ಕೊಡಬಹುದೆ?’​ ಕ್ಯಾಬ್​ ಡ್ರೈವರ್​ ಲೆನ್ಸ್​ಕಾರ್ಟ್ ಉದ್ಯೋಗಿಗೆ ಕೇಳುತ್ತಾನೆ, ಮುಂದೇನಾಗುತ್ತದೆ ನೋಡಿ

Lenskart : ಈ ಕ್ಯಾಬ್​ ಡ್ರೈವರ್ ಕೋಪಿಸಿಕೊಳ್ಳುವುದಿಲ್ಲ. ಫೋನ್​ನಲ್ಲಿ ಜೋರಾಗಿ ಮಾತನಾಡುವುದಿಲ್ಲ. ಅನಗತ್ಯವಾಗಿ ನಿಮ್ಮ ವೈಯಕ್ತಿಕ ಕೇಳುವುದಿಲ್ಲ. ತನ್ನ ಪಾಡಿಗೆ ತಾ ಇರುವುದಿಲ್ಲ; ಇವನೊಬ್ಬ ಗ್ರಾಹಕಸ್ನೇಹಿ ಡ್ರೈವರ್. ತನ್ನ ಗ್ರಾಹಕರೊಂದಿಗೆ ಮಾತಿಗಳಿದು ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್​ಲೋಡ್ ಮಾಡುತ್ತಾನೆ. ಹಾಗಿದ್ದರೆ ಇವನ ಈ ವಿಡಿಯೋದ ವೈಶಿಷ್ಟ್ಯ ಏನು?

Viral Video: 'ನನಗೆ ಡಿಸ್ಕೌಂಟ್ ಕೊಡಬಹುದೆ?'​ ಕ್ಯಾಬ್​ ಡ್ರೈವರ್​ ಲೆನ್ಸ್​ಕಾರ್ಟ್ ಉದ್ಯೋಗಿಗೆ ಕೇಳುತ್ತಾನೆ, ಮುಂದೇನಾಗುತ್ತದೆ ನೋಡಿ
ಕ್ಯಾಬ್​ ಡ್ರೈವರ್ ಅಂಗಕಿತ್ ಜೋಶಿ ಲೆನ್ಸ್​ಕಾರ್ಟ್​ ಉದ್ಯೋಗಿಗೆ ಡಿಸ್ಕೌಂಟ್​ ಕೇಳಿದ ಕ್ಷಣ
Follow us
ಶ್ರೀದೇವಿ ಕಳಸದ
|

Updated on:Sep 30, 2023 | 12:45 PM

Cab Driver: ಗ್ರಾಹಕಿ ತನ್ನ ಕ್ಯಾಬ್​ ಏರಿ ಕುಳಿತುಕೊಳ್ಳುತ್ತಿದ್ದಂತೆ ಕ್ಯಾಬ್​ ಡ್ರೈವರ್ ಗುಡ್​ ಮಾರ್ನಿಂಗ್ ಮ್ಯಾಡಮ್​, ನಿಮ್ಮ ಪರ್ಫ್ಯೂಮ್​ ಗಾಢವಾಗಿದೆ ಎಂದು ಸಹಜವಾಗಿ ಮಾತಿಗಿಳಿಯುತ್ತಾನೆ. ತಾನು ಇನ್​ಸ್ಟಾಗ್ರಾಂ ಮತ್ತು ಯೂಟ್ಯೂಬ್ ಚಾನೆಲ್ ಹೊಂದಿದ್ದೇನೆ. ನನ್ನ ಗ್ರಾಹಕರೊಂದಿಗೆ ನಾನು ಸಹಜವಾಗಿ ನಡೆಸುವ ಸಂಭಾಷಣೆಯನ್ನು ರೆಕಾರ್ಡ್ ಮಾಡಿ ಅಪ್​ಲೋಡ್ ಮಾಡುತ್ತೇನೆ. ನಿಮಗೇನು ಅಭ್ಯಂತರವಿಲ್ಲ ತಾನೆ? ಎನ್ನುತ್ತಾನೆ. ಖಂಡಿತ ಇಲ್ಲ, ಈ ಹೊಸರೀತಿ ತುಂಬಾ ಆಸಕ್ತಿದಾಯಕವಾಗಿದೆ, ನೋಡುಗರಿಗೆ ಇದು ಸ್ಫೂರ್ತಿಯನ್ನೂ ಕೊಡುತ್ತದೆ ಎನ್ನುತ್ತಾಳೆ.  ಹಾಗೆಂದು ಇದಕ್ಕಾಗಿ ನಾನೇನು ಪ್ರಶ್ನೆಪತ್ರಿಕೆ ತಯಾರಿ ಮಾಡಿಕೊಳ್ಳುವುದಿಲ್ಲ ಹಾಗೇ ಸುಮ್ಮನೇ ಮಾತಮಾತಲ್ಲಿ ಎನ್ನುತ್ತಾನೆ. ನೀವು ಎಲ್ಲಿ ಕೆಲಸ ಮಾಡುತ್ತೀರಿ ಎಂದು ಕೇಳುತ್ತಾನೆ. ಲೆನ್ಸ್​ಕಾರ್ಟ್ (Lenscart)​ ಎನ್ನುತ್ತಾಳೆ ಆಕೆ. ಹಾಗಾದರೆ ನನಗೆ ಡಿಸ್ಕೌಂಟ್​ ಕೊಡಿಸಬಹುದಾ? ಎಂದು ಕೇಳುತ್ತಾನೆ ಆತ.

ಇದನ್ನೂ ಓದಿ : Viral Optical Illusion: ಈ ಚಿತ್ರದಲ್ಲಿ ಆಮೆಗಳು ಕಾಣುತ್ತಿವೆಯೋ, ಕ್ರಿಕೆಟ್ ಪಟುವೋ?

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಅಂಗಕಿತ್ ಜೋಶಿ ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಈ ವಿಡಿಯೋ ಅಪ್​ಲೋಡ್ ಮಾಡಿದ್ದಾರೆ. ‘ಹಾಂ ಖಂಡಿತ, ನನ್ನ ಬಳಿ ಒಂದಿಷ್ಟು ಸ್ಯಾಂಪಲ್ಸ್​ ಇವೆ’ ಎಂದು ಆಕೆ ಹೇಳಿದಾಗ ಕ್ಯಾಬ್ ಡ್ರೈವರ್ ಜೋಶಿ ಅಚ್ಚರಿಯಿಂದ ಧನ್ಯವಾದ ಹೇಳುತ್ತಾನೆ. ಮುಂದೇನಾಗುತ್ತದೆ ಎಂದು ಈ ವಿಡಿಯೋದಲ್ಲಿಯೇ ನೋಡಿ.

 ಅಂಗಕಿತ್ ಜೋಶಿಯೊಂದಿಗೆ ಲೆನ್ಸ್​ಕಾರ್ಟ್ ಉದ್ಯೋಗಿ

View this post on Instagram

A post shared by Angkit joshi (@angkitjoshi)

ಈ ಪೋಸ್ಟ್ ಅನ್ನು ಸೆ. 22 ರಂದು ಹಂಚಿಕೊಳ್ಳಲಾಗಿದೆ. ಈತನಕ 4.7 ಲಕ್ಷಕ್ಕಿಂತಲೂ ಹೆಚ್ಚು ಜನರು ಲೈಕ್ ಮಾಡಿದ್ದಾರೆ. ಸಾವಿರಾರು ಜನರು ಪ್ರತಿಕ್ರಿಯಿಸಿದ್ದಾರೆ. ಇವರಿಬ್ಬರ ವಿನಯವಂತಿಕೆ ಉನ್ನತ ಮಟ್ಟದಲ್ಲಿದೆ ಎಂದಿದ್ದಾರೆ ಒಬ್ಬರು. ಇಂಥ ಸಂಗತಿಗಳನ್ನು ನೋಡಲು ನನಗೆ ಬಹಳ ಖುಷಿ ಎನ್ನಿಸುತ್ತದೆ ಎಂದಿದ್ದಾರೆ ಇನ್ನೊಬ್ಬರು. ಆಕೆ ತುಂಬಾ ಸೌಜನ್ಯಯುತವಾಗಿ ನಡೆದುಕೊಂಡಿದ್ದಾರೆ ಎಂದಿದ್ದಾರೆ ಮತ್ತೊಬ್ಬರು. ಇಂಥ ವಿಷಯಗಳು ನಮಗೆ ಇಂದು ಬೇಕು ಎಂದಿದ್ದಾರೆ ಮಗದೊಬ್ಬರು.

ಇದನ್ನೂ ಓದಿ : Viral Video: ಮಗುವಿನ ಚಪ್ಪಲಿಯನ್ನು ವಾಪಾಸು ಕೊಟ್ಟ ಆನೆಯ ಹಳೆಯ ವಿಡಿಯೋ ವೈರಲ್

ಡ್ರೈವರ್ ಕಾನ್ಸೆಪ್ಟ್​ ಹೊಸದಾಗಿದೆ. ಅವರ ವಿನಮ್ರ ಸ್ವಭಾವ ಮತ್ತು ಪ್ರಾಮಾಣಿಕತೆಯಿಂದ ನಾನು ಪ್ರಭಾವಿತನಾದೆ ಎಂದಿದ್ದಾರೆ ಒಬ್ಬರು. ಇದು ಎಷ್ಟೊಂದು ಸುಂದರ ಮತ್ತು ಗೌರವಾನ್ವಿತ ಸಂಭಾಷಣೆ ಎಂದಿದ್ದಾರೆ ಅನೇಕರು.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 12:42 pm, Sat, 30 September 23

ಸರ್ಕಾರಕ್ಕೆ ಹಿನ್ನಡೆಯಾಗಲಿ ಅಂತ ನಾವು ಯಾವತ್ತೂ ಬಯಸಲ್ಲ: ಯದುವೀರ್
ಸರ್ಕಾರಕ್ಕೆ ಹಿನ್ನಡೆಯಾಗಲಿ ಅಂತ ನಾವು ಯಾವತ್ತೂ ಬಯಸಲ್ಲ: ಯದುವೀರ್
ಕಡುಗೆಂಪಗಿರುವುದೆಲ್ಲ ತಿನ್ನಲು-ಯೋಗ್ಯ ಕಲ್ಲಂಗಡಿ ಹಣ್ಣಲ್ಲ!
ಕಡುಗೆಂಪಗಿರುವುದೆಲ್ಲ ತಿನ್ನಲು-ಯೋಗ್ಯ ಕಲ್ಲಂಗಡಿ ಹಣ್ಣಲ್ಲ!
ಮಾರ್ಚ್​ 22ರಂದು ಅಖಂಡ ಕರ್ನಾಟಕ ಬಂದ್​ಗೆ ಕರೆ: ಯಾರೆಲ್ಲಾ ಬೆಂಬಲ?
ಮಾರ್ಚ್​ 22ರಂದು ಅಖಂಡ ಕರ್ನಾಟಕ ಬಂದ್​ಗೆ ಕರೆ: ಯಾರೆಲ್ಲಾ ಬೆಂಬಲ?
ವಿಶ್ವವಿಖ್ಯಾತ ಹಂಪಿ ಉತ್ಸವ ಕಳೆದ ಸಲಕ್ಕಿಂತ ಅದ್ದೂರಿಯಾಗಿದೆ: ಜಮೀರ್ ಅಹ್ಮದ್
ವಿಶ್ವವಿಖ್ಯಾತ ಹಂಪಿ ಉತ್ಸವ ಕಳೆದ ಸಲಕ್ಕಿಂತ ಅದ್ದೂರಿಯಾಗಿದೆ: ಜಮೀರ್ ಅಹ್ಮದ್
ದೇವರ ಮೇಲಿರೋ ಹೂ ಕೊಡಿ; ತುಳುವಿನಲ್ಲಿ ಮುದ್ದಾಗಿ ಕೇಳಿದ ಶಿಲ್ಪಾ ಶೆಟ್ಟಿ
ದೇವರ ಮೇಲಿರೋ ಹೂ ಕೊಡಿ; ತುಳುವಿನಲ್ಲಿ ಮುದ್ದಾಗಿ ಕೇಳಿದ ಶಿಲ್ಪಾ ಶೆಟ್ಟಿ
ದುಬಾರಿ ಬೈಕ್​ಗಳು ಕಳ್ಳನ ಪ್ರಥಮ ಆದ್ಯತೆ, ಅವು ಸಿಗದಿದ್ದರೆ ಬೇರೆಯವೂ ಓಕೆ
ದುಬಾರಿ ಬೈಕ್​ಗಳು ಕಳ್ಳನ ಪ್ರಥಮ ಆದ್ಯತೆ, ಅವು ಸಿಗದಿದ್ದರೆ ಬೇರೆಯವೂ ಓಕೆ
ಚೀನಾ: ಕಾರ್ಯಕ್ರಮವೊಂದರಲ್ಲಿ ಜನರ ಮೇಲೆ ಎಐ ರೊಬೊಟ್​ನಿಂದ ಹಲ್ಲೆ
ಚೀನಾ: ಕಾರ್ಯಕ್ರಮವೊಂದರಲ್ಲಿ ಜನರ ಮೇಲೆ ಎಐ ರೊಬೊಟ್​ನಿಂದ ಹಲ್ಲೆ
ಶಾಲು ಹೊದಿಸಿದ ವಿಜಯೇಂದ್ರರ ಬೆನ್ನುತಟ್ಟಿದ ಮುಖ್ಯಮಂತ್ರಿ ಸಿದ್ದರಾಮಯ್ಯ
ಶಾಲು ಹೊದಿಸಿದ ವಿಜಯೇಂದ್ರರ ಬೆನ್ನುತಟ್ಟಿದ ಮುಖ್ಯಮಂತ್ರಿ ಸಿದ್ದರಾಮಯ್ಯ
Shilpa Shetty: ಕಟೀಲು ದೇವಾಲಯಕ್ಕೆ ಬಂದ ನಟಿ ಶಿಲ್ಪಾ ಶೆಟ್ಟಿ
Shilpa Shetty: ಕಟೀಲು ದೇವಾಲಯಕ್ಕೆ ಬಂದ ನಟಿ ಶಿಲ್ಪಾ ಶೆಟ್ಟಿ
ತಮ್ಮ ಹೇಳಿಕೆಯಲ್ಲಿ ಶ್ರೀರಾಮುಲು ಶಿಂಧೆಯನ್ನು ಹತ್ತಾರು ಬಾರಿ ನೆನೆಯುತ್ತಾರೆ
ತಮ್ಮ ಹೇಳಿಕೆಯಲ್ಲಿ ಶ್ರೀರಾಮುಲು ಶಿಂಧೆಯನ್ನು ಹತ್ತಾರು ಬಾರಿ ನೆನೆಯುತ್ತಾರೆ