Viral Video: ಮಗುವಿನ ಚಪ್ಪಲಿಯನ್ನು ವಾಪಾಸು ಕೊಟ್ಟ ಆನೆಯ ಹಳೆಯ ವಿಡಿಯೋ ವೈರಲ್

Wildlife : ಈ ಆನೆಯನ್ನು ನಾನು ಸಾಕುತ್ತೇನೆ. ಈಗಲೇ ಇದು ನನಗೆ ಬೇಕು. ಸೌಮ್ಯ ಹೃದಯೀ ದೈತ್ಯದೇಹಿ ನಿನ್ನನ್ನು ಯಾವಾಗಲೂ ಪ್ರೀತಿಸುತ್ತೇನೆ... ನೆಟ್ಟಿಗರು ಈ ಹಳೆಯ ವಿಡಿಯೋ ನೋಡಿ ಹೇಳುತ್ತಿದ್ದಾರೆ. ಐಎಫ್​ಎಸ್​ ಸುಸಾಂತ ನಂದಾ ಈ ವಿಡಿಯೋ ಹಂಚಿಕೊಂಡಿದ್ದು ಇದೀಗ ಇದು ಮತ್ತೆ ವೈರಲ್ ಆಗುತ್ತಿದೆ. ಆನೆಯ ಕಾಳಜಿಯನ್ನು ನೋಡಿ ಅನೇಕರ ಹೃದಯ ಮೃದುವಾಗುತ್ತಿದೆ.

Viral Video: ಮಗುವಿನ ಚಪ್ಪಲಿಯನ್ನು ವಾಪಾಸು ಕೊಟ್ಟ ಆನೆಯ ಹಳೆಯ ವಿಡಿಯೋ ವೈರಲ್
ಆನೆ ತನ್ನ ಸೊಂಡಿಲಿನಿಂದ ಮಗುವಿಗೆ ವಾಪಾಸು ಚಪ್ಪಲಿ ಕೊಡುತ್ತಿರುವುದು
Follow us
ಶ್ರೀದೇವಿ ಕಳಸದ
|

Updated on:Sep 29, 2023 | 5:31 PM

China: ಚೀನಾದ ಮೃಗಾಲಯವೊಂದಕ್ಕೆ ಆನೆಯನ್ನು (Elephant) ನೋಡಲು ಈ ಪುಟ್ಟ ಮಗು ತನ್ನ ಪೋಷಕರೊಂದಿಗೆ ಹೋಗಿದೆ. ಈ ದೊಡ್ಡ ಆನೆಯನ್ನು ಮೈಮರೆತು ನೋಡುವಾಗ ಅದರ ಪುಟ್ಟ ಪಾದದ ಚಪ್ಪಲಿ ಕೆಳಗೆ ಬಿದ್ದಿದೆ. ಆಗ ಆನೆ ಕಾಳಜಿಯಿಂದ ಮಗುವಿನ ಚಪ್ಪಲಿಯನ್ನು ಸೊಂಡಿಲಿಂದ ಎತ್ತಿ ಅದರ ಪುಟ್ಟ ಕೈಗೆ ಇತ್ತಿದೆ. ಇದು ಹಳೆಯ ವಿಡಿಯೋ. ಮತ್ತೀಗ ವೈರಲ್ ಆಗುತ್ತಿದೆ. ಐಎಫ್​ಎಸ್​ ಅಧಿಕಾರಿ ಸುಸಾಂತ ನಂದಾ ಸೆ. 28ರಂದು Xನಲ್ಲಿ ಈ ವಿಡಿಯೋ ಹಂಚಿಕೊಂಡಿದ್ದಾರೆ. ಈತನಕ ಸುಮಾರು 49,000 ಜನರು ನೋಡಿದ್ದಾರೆ. ಅನೇಕರು ‘ಸೌಮ್ಯ  ಮನಸಿನ ದೈತ್ಯ’ನನ್ನು ಕೊಂಡಾಡಿದ್ದಾರೆ. ಆನೆಯು ಬುದ್ಧಿವಂತ ಮತ್ತು ಸೂಕ್ಷ್ಮ ಮನಸಿನ ಪ್ರಾಣಿ ಎಂದಿದ್ದಾರೆ.

ಇದನ್ನೂ ಓದಿ : Viral Video: ಅಮೆರಿಕ: ‘ಅಂತ್ಯಕ್ರಿಯೆ’ ಪರಿಕಲ್ಪನೆಯಡಿ ಪ್ರೆಗ್ನೆನ್ಸಿ ಶೂಟ್ ಮಾಡಿಸಿಕೊಂಡ ಮಹಿಳೆ 

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಈ ಆನೆಗಳ ಮಿದುಳಲ್ಲಿ ಬುದ್ಧಿವಂತಿಕೆ ಮತ್ತು ಹೃದಯದಲ್ಲಿ ಪ್ರೀತಿ ತುಂಬಿರುತ್ತದೆ ಎಂದಿದ್ದಾರೆ ಒಬ್ಬರು. ನಿಜಕ್ಕೂ ಈ ಆನೆ ತುಂಬಾ ಮುದ್ದಾಗಿದೆ ಎಂದಿದ್ದಾರೆ ಇನ್ನೊಬ್ಬರು. ಈ ಶಾಂತ, ದೈತ್ಯಜೀವಿಯನ್ನು ನಾನು ಸದಾ ಪ್ರೀತಿಸುತ್ತೇನೆ ಎಂದಿದ್ದಾರೆ ಮತ್ತೊಬ್ಬರು. ಅದು ತನ್ನ ಸೊಂಡಿಲನ್ನು ಗ್ರಿಲ್​ಗೆ ಸುತ್ತಿದುದರ ಅರ್ಥ ಯಾರಿಗಾದರೂ ಆಯಿತೇ? ಎಂದು ಕೇಳಿದ್ದಾರೆ ಮಗದೊಬ್ಬರು.

ಚಪ್ಪಲಿಯನ್ನು ಮಗುವಿಗೆ ಹಿಂದಿರುಗಿಸಿದ ಆನೆಯ ವಿಡಿಯೋ

ನಿಜಕ್ಕೂ ಇದು ಬಹಳ ಆಪ್ತವಾದ ವಿಡಿಯೋ, ಇದನ್ನು ಹಂಚಿಕೊಂಡಿದ್ದಕ್ಕೆ ಧನ್ಯವಾದ ಎಂದು ಅನೇಕರು ಹೇಳಿದ್ಧಾರೆ. ಇದರ ಸೌಮ್ಯತನ ಇದರ ಮೇಲೆ ಮತ್ತಷ್ಟು ಗೌರವವನ್ನು ಹೆಚ್ಚಿಸುತ್ತದೆ ಎಂದಿದ್ದಾರೆ ಒಬ್ಬರು. ನಿಜಕ್ಕೂ ಈಗಲೇ ಈ ಆನೆಯನ್ನು ತಬ್ಬಬೇಕು ಎನ್ನಿಸುತ್ತಿದೆ ಎಂದಿದ್ದಾರೆ ಇನ್ನೊಬ್ಬರು. ಈ ಆನೆ ನನಗೆ ಬೇಕು ನಾನು ಸಾಕಿಕೊಳ್ಳುತ್ತೇನೆ ಎಂದು ಪ್ರೀತಿಗರೆದಿದ್ದಾರೆ ಮತ್ತೊಬ್ಬರು.

ಇದನ್ನೂ ಓದಿ : Viral Video: ‘ಒಂದು ಕಾಲು ಕಳೆದುಕೊಂಡ ನನ್ನೊಂದಿಗೆ ವರ್ಷಾ ಕಲ್ಲಿನಂತೆ ನಿಂತಳು’

ನಾನು ಅದೆಷ್ಟು ಬಾರಿ ಈ ವಿಡಿಯೋ ನೋಡಿದೆನೋ ಕಾಣೆ ಎಂದಿದ್ದಾರೆ ಒಬ್ಬರು. ದೈತ್ಯದ ಶಾಂತ ಮತ್ತು ಕಾಳಜಿ, ಹಾಗೆಯೇ ಆ ಪುಟ್ಟ ಕೈಗಳು, ಪುಟ್ಟ ಚಪ್ಪಲಿ ಆಹಾ… ಸ್ವರ್ಗ ಎಂದಿದ್ದಾರೆ ಇನ್ನೊಬ್ಬರು.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್  ಮಾಡಿ

Published On - 5:31 pm, Fri, 29 September 23

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ