AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Optical Illusion: ಈ ಚಿತ್ರದಲ್ಲಿ ಆಮೆಗಳು ಕಾಣುತ್ತಿವೆಯೋ, ಕ್ರಿಕೆಟ್ ಪಟುವೋ?

M S Dhoni: ಈ ಚಿತ್ರದಲ್ಲಿ ಅಮ್ಮ ಆಮೆಯೊಂದು ತನ್ನ ಮರಿಯನ್ನು ಮೇಲೆ ಕೂರಿಸಿಕೊಂಡಿದೆ ಎನ್ನಿಸುತ್ತದೆಯೇ? ಅಥವಾ ಭಾರತದ ಕ್ರಿಕೆಟ್​ ಪಟುವೊಬ್ಬರು ಇದರಲ್ಲಿ ಅಡಗಿದ್ಧಾರೆ ಎನ್ನಿಸುತ್ತದೆಯೋ? ಕಣ್ಣು ತೆರೆದು ನೋಡಿದರೆ ಏನು ಕಾಣುತ್ತದೆ, ಅರೆಗಣ್ಣಿನಿಂದ ನೋಡಿದರೆ ಏನು ಕಾಣುತ್ತದೆ. ಇಲ್ಲಿ ಕಾಲಾವಕಾಶದ ಮಿತಿಯಿಲ್ಲ. ವಾರಾಂತ್ಯಕ್ಕೆ ಇದೊಂದು ಸರಳವಾದ ಮೋಜು. ಏನಂತೀರಿ?

Viral Optical Illusion: ಈ ಚಿತ್ರದಲ್ಲಿ ಆಮೆಗಳು ಕಾಣುತ್ತಿವೆಯೋ, ಕ್ರಿಕೆಟ್ ಪಟುವೋ?
ಎರಡು ಆಮೆಗಳ ನಡುವೆ ನಿಮಗೆ ಯಾರು ಕಾಣುತ್ತಿದ್ದಾರೆ?
ಶ್ರೀದೇವಿ ಕಳಸದ
ಶ್ರೀದೇವಿ ಕಳಸದ|

Updated on: Sep 30, 2023 | 11:38 AM

Share

Brain Activity: ವಾರಾಂತ್ಯವೆಂದು ನೀವು ನಿಧಾನವಾಗಿ ಕಣ್ಣುಬಿಡುತ್ತಿರುಬಹುದು. ಪೂರ್ತಿ ಕಣ್ಣುಬಿಡದೆ ಹಾಗೇ ನೋಡಿದರೆ ಮಾತ್ರ ಈ ಚಿತ್ರದೊಳಗೆ ಯಾರು ಅಡಗಿದ್ದಾರೆನ್ನುವುದು ತಿಳಿಯುತ್ತಿದೆ. ನಿಮ್ಮ ನೆಚ್ಚಿನ ಕ್ರಿಕೆಟ್ ಆಟಗಾರರೊಬ್ಬರನ್ನು ಈ ಭ್ರಮಾತ್ಮಕ ಚಿತ್ರದಲ್ಲಿ ಅಡಗಿದ್ದಾರೆ. ಕಣ್ಣುಬಿಟ್ಟು ನೇರ ನೋಡಿದರೆ ನಿಮಗೆ ಆಮೆ ಕಾಣುತ್ತದೆ. ಆದರೆ ಕಣ್ಣನ್ನು ಅರೆತೆರೆದು ನೋಡಿದರೆ ಯಾರು ಕಾಣುತ್ತಾರೆ? ಅದನ್ನು ನೀವೇ ಹೇಳಬೇಕು. ಹೌದು ಇಲ್ಲಿ ಕ್ರಿಕೆಟ್​​ ಪಟು ಎಂ. ಎಸ್​. ಧೋನಿ (M S Dhoni) ಅಡಗಿದ್ದಾರೆ. ನೆಟ್ಟಿಗರನೇಕರು ಮೊದಲ ನೋಟಕ್ಕೆ ಧೋನಿಯನ್ನು ಕಂಡುಹಿಡಿದಿದ್ದಾರೆ. ನೀವು ಎಷ್ಟು ಸೆಕೆಂಡುಗಳಲ್ಲಿ ಧೋನಿಯನ್ನು ಪತ್ತೆ ಹಚ್ಚಿದಿರಿ?

ಇದನ್ನೂ ಓದಿ : Viral Video: ಮಿಸ್ಸಿಸ್ಸಿಪ್ಪಿ: ಕಾಣೆಯಾಗಿದ್ದ ಕೋತಿ 24 ಗಂಟೆಯೊಳಗೆ ತನ್ನ ಕುಟುಂಬದ ಮಡಿಲಿನೊಳಗೆ

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ನಿಮ್ಮ ಕಣ್ಣು ಮತ್ತು ಮೆದುಳು ಪರಸ್ಪರ ಆಟಕ್ಕೆ ಬೀಳುವಂತೆ ಭ್ರಮಾತ್ಮಕ ಚಿತ್ರಗಳನ್ನು ಚಿತ್ರಿಸಲಾಗಿರುತ್ತದೆ. ಹಾಗಾಗಿ ವಾಸ್ತವದಿಂದ ದೂರವಿರುವ ವಿಷಯಗಳನ್ನು ನಿಮ್ಮ ಮೆದುಳು ಗ್ರಹಿಸುತ್ತದೆ. ಇದೀಗ ಅರೆಗಣ್ಣಿನಲ್ಲಿ ಕಂಡ ಧೋನಿಯನ್ನು ಮತ್ತೆ ನೋಡಬೇಕೆ?

ಆಮೆಯೊಳಗೆ ಅಡಗಿರುವ ಧೋನಿ

ಸೆ. 24ರಂದು X ನಲ್ಲಿ ಹಂಚಿಕೊಳ್ಳಲಾದ ಈ ಪೋಸ್ಟ್​ ಅನ್ನು ಈತನಕ 23,000ಕ್ಕೂ ಹೆಚ್ಚು ಜನರು ನೋಡಿದ್ಧಾರೆ. ಅನೇಕರು ಪ್ರತಿಕ್ರಿಯಿಸಿದ್ದಾರೆ. ಎಐ ಮೂಲಕವೂ ಈಗ ಭ್ರಮಾತ್ಮಕ ಚಿತ್ರಗಳನ್ನು ಚಿತ್ರಿಸಬಹುದೆ? ಎಂದಿದ್ದಾರೆ ಒಬ್ಬರು. ಅರೆ ಇದು ಅಚ್ಚರಿ ಕೊಡುತ್ತಿದೆ, ಎಂಎಸ್​ ಧೋನಿ ಅಭಿಮಾನಿಗಳಿಗೆ ಇದು ಹಬ್ಬ ಎಂದಿದ್ದಾರೆ ಇನ್ನೊಬ್ಬರು. ಇದು ಬಹಳ ಅದ್ಭುತವಾಗಿದೆ ಎಂದಿದ್ದಾರೆ ಮತ್ತೊಬ್ಬರು. ಈ ಚಿತ್ರವನ್ನು ಮತ್ತೆ ಮತ್ತೆ ನೋಡುತ್ತಿದ್ದೇನೆ, ನೀವು ಹೇಳಿದ ಹಾಗೆ ಅರೆಗಣ್ಣಿನಿಂದ ನೋಡಿದರೆ ಮಾತ್ರ ಧೋನಿ, ಇಲ್ಲವಾದರೆ ಆಮೆ ಎಂದಿದ್ದಾರೆ ಅನೇಕರು.

ಇದನ್ನೂ ಓದಿ :  Viral Video: ‘ಒಂದು ಕಾಲು ಕಳೆದುಕೊಂಡ ನನ್ನೊಂದಿಗೆ ವರ್ಷಾ ಕಲ್ಲಿನಂತೆ ನಿಂತಳು’

ಇದು ನನ್ನ ಕೈಯ್ಯಾರೆ ಮಾಡಿದ ಪೇಂಟಿಂಗ್ ಎಂದು ಒಬ್ಬರು ತಮಾಷೆ ಮಾಡಿದ್ದಾರೆ. ಮತ್ತೆ ಮತ್ತೆ ನೋಡಿದೆ ನನಗೆ ಧೋನಿ ಕಾಣುತ್ತಿಲ್ಲ, ಆಮೆ ಮತ್ತು ಆಮೆಯ ಅಮ್ಮ ಮಾತ್ರ ಕಾಣುತ್ತಿವೆ ಎಂದಿದ್ದಾರೆ ಇನ್ನೊಬ್ಬರು.

ಈ ಫೋಟೋ ನೋಡಿದ ನಿಮಗೆ ಧೋನಿ ಕಂಡರೆ?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Follow Us
ಶ್ರೀದೇವಿ ಕಳಸದ
ಶ್ರೀದೇವಿ ಕಳಸದ

ಶ್ರೀದೇವಿ ಕಳಸದ : ಮುಖ್ಯ ಉಪಸಂಪಾದಕಿ. ವಿಜಯ ಕರ್ನಾಟಕ, ಸುವರ್ಣ ನ್ಯೂಸ್, ಪ್ರಜಾವಾಣಿ ಮತ್ತು ವಿವಿಧ ಮಾಧ್ಯಮ ಸಂಸ್ಥೆಗಳು ಸೇರಿದಂತೆ ಒಟ್ಟು 16 ವರ್ಷಗಳ ಅನುಭವ. ಸಂಗೀತ, ಸಾಹಿತ್ಯ ಮತ್ತು ಲಲಿತ ಕಲೆಗಳಲ್ಲಿ ವಿಶೇಷ ಆಸಕ್ತಿ.

ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್