Viral Video: ಮಿಸ್ಸಿಸ್ಸಿಪ್ಪಿ: ಕಾಣೆಯಾಗಿದ್ದ ಕೋತಿ 24 ಗಂಟೆಯೊಳಗೆ ತನ್ನ ಕುಟುಂಬದ ಮಡಿಲಿನೊಳಗೆ

Pet Lover: ಎರಡು ವರ್ಷಗಳ ಹಿಂದೆ ಆರು ವಾರದ ಮರಿಕೋತಿಯನ್ನು ದತ್ತು ಪಡೆದಿದ್ದರು ಮಿಸ್ಸಿಸ್ಸಿಪ್ಪಿಯ ದಂಪತಿ. ಆದರೆ ಇದ್ದಕ್ಕಿದ್ದಂತೆ ಅದು ಕಾಣೆಯಾದಾಗ ಕಳವಳಕ್ಕೊಳಗಾದರು. ಫೇಸ್​ಬುಕ್​ ಮೂಲಕ ಸಹಾಯ ಕೇಳಿದರು. ನಂತರ ಬೇಟೆನಾಯಿಗಳ ಸಹಾಯದಿಂದ 24 ಗಂಟೆಯೊಳಗೆ ಕೋತಿ ತನ್ನ ಪೋಷಕರ ಮನೆ ಸೇರಿತು. ಈ ಪೋಸ್ಟ್​ ಓದಿದ ಜನರು ಪ್ರಾರ್ಥನೆಯ ಫಲವಿದು ಎಂದಿದ್ದಾರೆ.

Viral Video: ಮಿಸ್ಸಿಸ್ಸಿಪ್ಪಿ: ಕಾಣೆಯಾಗಿದ್ದ ಕೋತಿ 24 ಗಂಟೆಯೊಳಗೆ ತನ್ನ ಕುಟುಂಬದ ಮಡಿಲಿನೊಳಗೆ
ಕೆಂಝಿ ತನ್ನ ಕುಟುಂಬದವರನ್ನು ಮತ್ತೆ ಸೇರಿದ ಕ್ಷಣಗಳು
Follow us
ಶ್ರೀದೇವಿ ಕಳಸದ
|

Updated on: Sep 30, 2023 | 10:46 AM

Mississippi: ಮಿಸ್ಸಿಸ್ಸಿಪ್ಪಿಯಲ್ಲಿರುವ ಕುಟುಂಬವೊಂದು 24 ಗಂಟೆಗಳಿಗೂ ಹೆಚ್ಚು ಕಾಲ ಕಾಣೆಯಾಗಿದ್ದ ತಮ್ಮ ಕೋತಿ (Monkey) ಕೆಂಝಿಯೊಂದಿಗೆ ಮತ್ತೆ ಒಂದಾಗಿದೆ. ಬೇಟೆನಾಯಿಗಳ ಸಹಾಯದಿಂದ ಕೆಂಝಿಯನ್ನು ಪತ್ತೆ ಹಚ್ಚಿ ಮನೆಗೆ ಕರೆತರಲಾಗಿದೆ. ಎರಡು ವರ್ಷಗಳ ಹಿಂದೆ ಕ್ಯಾಮರೂನ್ ಮತ್ತು ಕೈಟ್ಲಿನ್ ಕ್ಯುವಾಸ್ ಆರು ವಾರಗಳ ಮಗು ಕೆಂಝಿಯನ್ನು ದತ್ತು ಪಡೆದಿದ್ದರು. ಅಂದಿನಿಂದ ಈಕೆ ಈ ಮನೆಯ ಸದಸ್ಯರಲ್ಲಿ ಒಬ್ಬಳಾಗಿ ಬೆಳೆಯುತ್ತ ಹೋದಳು. ಅಕಸ್ಮಾತ್ ಆಗಿ ಈಕೆ ತಪ್ಪಿಸಿಕೊಂಡು ಕಾಡಿನಲ್ಲಿ ಕಣ್ಮರೆಯಾದಳು. ಆಗ ದಂಪತಿ ಕೆಂಝಿಯ ಫೋಟೋದೊಂದಿಗೆ ವಿಷಯವನ್ನು ಫೇಸ್​ಬುಕ್​ನಲ್ಲಿ ಪೋಸ್ಟ್​ ಮಾಡಿ, ನೆಟ್ಟಿಗರಲ್ಲಿ ಸಹಾಯ ಕೇಳಿದರು.

ಇದನ್ನೂ ಓದಿ : Viral Video: ಅಮೆರಿಕ: ‘ಅಂತ್ಯಕ್ರಿಯೆ’; ಪರಿಕಲ್ಪನೆಯಡಿ ಪ್ರೆಗ್ನೆನ್ಸಿ ಶೂಟ್ ಮಾಡಿಸಿಕೊಂಡ ಮಹಿಳೆ

‘ಇಂದು ಬೆಳಗ್ಗೆ 10ರ ಸುಮಾರಿಗೆ ನಮ್ಮ ಕೆಂಝಿ ಲೇಬೌಯ್ ರಸ್ತೆಯಲ್ಲಿರುವ ಮೆಂಗೆಯಿಂದ ಹೊರಹೋಗಿದ್ದಾಳೆ. ಬೂದುಬಣ್ಣದ ಡೈಪರ್​ ಹಾಕಿಕೊಂಡಿದ್ದಾಳೆ. ದಯವಿಟ್ಟು ಈಕೆಯನ್ನು ಹುಡುಕುವಲ್ಲಿ ಸಹಾಯ ಮಾಡಿ’ ಎಂದು ಕ್ಯಾಮರೂನ್​ ಫೇಸ್​ಬುಕ್​ನಲ್ಲಿ ಪೋಸ್ಟ್ ಮಾಡಿದ್ದಾರೆ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಕೆಂಝಿಯನ್ನು ಹುಡುಕಲು ಸಹಾಯ ಮಾಡಿ

ಆನಂತರ ಅನೇಕರು ಈ ಪೋಸ್ಟ್​ಗೆ ಸ್ಪಂದಿಸಿ ಸಹಾಯಕ್ಕೆ ಬಂದಿದ್ದಾರೆ. ಆ ಪೈಕಿ ಕಾಣೆಯಾದ, ಗಾಯಗೊಂಡ ಪ್ರಾಣಿಗಳನ್ನು ಪತ್ತೆ ಹಚ್ಚಲು ಬೇಟೆನಾಯಿಗಳನ್ನು ಬಳಸಿಕೊಳ್ಳುವ ಬೆನ್​ ವಾರ್ಡ್​ನ ಸ್ಥಳೀಯ ಬೇಟೆಗಾರನೊಬ್ಬ, ‘ನಾನು ಬರುವ ಹೊತ್ತಿಗೆ ಜನರ ಗುಂಪೊಂದು ಆಗಲೇ ಕೆಂಝಿಯನ್ನು ಹುಡುಕುತ್ತಿತ್ತು. ಅವರೊಂದಿಗೆ ನಾನು ಬೇಟೆನಾಯಿಗಳೊಂದಿಗೆ ಸೇರಿಕೊಂಡೆ. ಈ ನಾಯಿಗಳದು ಮನುಷ್ಯರಿಗಿಂತ 10,000 ಪಟ್ಟು ಅದ್ಭುತ ವಾಸನಾ ಗ್ರಹಣ ಶಕ್ತಿ ಇದೆ. 14ಗಂಟೆಗಳ ನಿರಂತರ ಹುಡುಕಾಟದ ನಂತರ ಕೆಂಝಿಯನ್ನು ಪತ್ತೆ ಹಚ್ಚಿದವು.’ ಎಂದಿದ್ದಾರೆ.

ಇದನ್ನೂ ಓದಿ : Viral Video: ಮಗುವಿನ ಚಪ್ಪಲಿಯನ್ನು ವಾಪಾಸು ಕೊಟ್ಟ ಆನೆಯ ಹಳೆಯ ವಿಡಿಯೋ ವೈರಲ್

ಆನಂತರ ಕ್ಯಾಮರೂನ್ ಫೇಸ್​ಬುಕ್​ನಲ್ಲಿ ಕೆಂಝಿ ಬಗ್ಗೆ ಅಪ್​ಡೇಟ್ ಕೊಟ್ಟಿದ್ದಾರೆ. ’24 ತಾಸುಗಳ ಸುದೀರ್ಘ ಹುಟುಕಾಟ ಮುಗಿದಿದೆ. ಅಳುತ್ತ ಮೈಲಿಗಟ್ಟಲೆ ನಡೆದಿದ್ದು ಮತ್ತು ಪ್ರಾರ್ಥಿಸಿದ್ದು ಫಲಿಸಿದೆ. ಕೆಂಝಿ ಈಗ ಮನೆಗೆ ಬಂದಿದ್ದಾಳೆ. ಸ್ನಾನ ಮಾಡಿ ಬ್ಲೋ ಡ್ರೈ ಮಾಡಿ ಊಟ ಮಾಡಿದ ನಂತರ ಚೆನ್ನಾಗಿ ನಿದ್ದೆ ಮಾಡುತ್ತಿದ್ದಾಳೆ. ಸ್ವಲ್ಪ ಹೊತ್ತಿನ ನಂತರ ಪಶುವೈದ್ಯರ ಬಳಿ ಹೋಗಲಿದ್ದಾಳೆ. ಸ್ವಲ್ಪ ದಣಿದಿದ್ದಾಳೆ, ಹೆದರಿದ್ದಾಳೆ. ಆದರೆ ಮನೆಯಲ್ಲಿದ್ದಾಳೆ ಎನ್ನುವುದು ದೊಡ್ಡ ಸಮಾಧಾನ. ಈಕೆಯನ್ನು ಹುಡುಕಲು ಸಹಾಯ ಮಾಡಿದ ಜನರಿಗೆ, ನಾಯಿಗಳಿಗೆ ಧನ್ಯವಾದ’.

ಕೆಂಝಿ ಮರಳಲು ಸಹಾಯ ಮಾಡಿದವರಿಗೆ ಧನ್ಯವಾದ

ದೇವರೇ ಧನ್ಯವಾದ, ಆಕೆ ಸುರಕ್ಷಿತವಾಗಿ ಮನೆಗೆ ಬಂದಿದ್ದಾಳೆ ಎಂದು ಅನೇಕರು ನಿಟ್ಟುಸಿರು ಬಿಟ್ಟಿದ್ದಾರೆ. ಇದನ್ನು ಓದಿ, ನೋಡಿ ಮನಸ್ಸು ತುಂಬಿ ಬಂದಿದೆ, ಪ್ರಾರ್ಥನೆಯನ್ನು ಎಂದಿಗೂ ನಿಲ್ಲಿಸದಿರಿ, ಅದು ಖಂಡಿತ ಫಲ ಕೊಡುತ್ತೆ ಎಂದು ಕೆಲವರು ಹೇಳಿದ್ದಾರೆ.

ಇದನ್ನು ಓದಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ