Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಮರುಜನ್ಮ; 20 ವರ್ಷದ ಮಗನಿಗೆ ಕಿಡ್ನಿ ದಾನ ಮಾಡಿದ ಅಪ್ಪ

Kidney Transplant : ಇತ್ತೀಚೆಗೆ ಮಗಳೊಬ್ಬಳು ತಂದೆಗೆ ಲಿವರ್ ದಾನ ಮಾಡಿದ ಸ್ಟೋರಿ ಓದಿದ್ದಿರಿ. ಇದೀಗ ತಂದೆಯೊಬ್ಬರು ಮಗನಿಗೆ ಕಿಡ್ನಿ ದಾನ ಮಾಡಿದ್ಧಾರೆ. 'ನನ್ನ ತಂದೆ ನನ್ನೊಂದಿಗೆ ಕಂಬದಂತೆ ನಿಂತುಕೊಂಡರು. ಅವರು ನನಗೆ ಮರುಜನ್ಮ ನೀಡಿದರೆಂದರೆ ತಪ್ಪಾಗಲಾರದು. ಈ ಮೂಲಕ ನಮ್ಮಿಬ್ಬರ ಬಂಧ ಮತ್ತಷ್ಟು ಗಟ್ಟಿಗೊಂಡಿತು' ಎಂದಿದ್ದಾನೆ 20 ವರ್ಷದ ಯುವಕ ಹರ್ಷ ಗುಪ್ತಾ.

Viral Video: ಮರುಜನ್ಮ; 20 ವರ್ಷದ ಮಗನಿಗೆ ಕಿಡ್ನಿ ದಾನ ಮಾಡಿದ ಅಪ್ಪ
ಹರ್ಷ ಗುಪ್ತಾ ತನ್ನ ತಂದೆಯೊಂದಿಗೆ
Follow us
ಶ್ರೀದೇವಿ ಕಳಸದ
|

Updated on: Sep 30, 2023 | 4:31 PM

Father Son: ‘ನನಗೀಗ ಇಪ್ಪತ್ತು ವರ್ಷ. ಕಳೆದ ವರ್ಷ ಇದ್ದಕ್ಕಿದ್ದ ಹಾಗೆ ಹಸಿವು ಮಾಯವಾಯಿತು. ಬರುಬರುತ್ತ ಉಸಿರಾಡುವುದೂ ಕಷ್ಟವೆನ್ನಿಸತೊಡಗಿತು. ಆಗ ವೈದ್ಯರು ಕೆಲ ಪರೀಕ್ಷೆಗಳನ್ನು ಮಾಡಿದ ಮೇಲೆ ತೀವ್ರತರವಾದ ಕಿಡ್ನಿ ಸಮಸ್ಯೆ ಇದೆ ಎಂದರು. ವಾರದಲ್ಲಿ ಎರಡು ಸಲ ಡಯಲಾಸಿಸ್​ಗೆ ಒಳಗಾಗಬೇಕಾಯಿತು. ಕಿಡ್ನಿ ಕಸಿ  (Kidney Transplant) ಮಾಡದಿದ್ದರೆ ಬದುಕುಳಿಯುವುದು ಕಷ್ಟ ಎಂದರು. ಆಗ ನನ್ನ ಅಪ್ಪ, ನಾನು ಕಿಡ್ನಿ ಕೊಡುತ್ತೇನೆ ಎಂದರು. ಅವರು ಕಿಡ್ನಿ ಕೊಡಲು ಅಡ್ಡಿಯಿಲ್ಲ ಎಂದು ವೈದ್ಯರು ಹೇಳಿದರು. ಇಬ್ಬರೂ ಶಸ್ತ್ರಚಿಕಿತ್ಸೆಗೆ ಒಳಗಾದೆವು. ಕೆಲ ತಿಂಗಳುಗಳ ನಂತರ ಇಬ್ಬರೂ ಸುಧಾರಿಸಿಕೊಂಡೆವು. ಈಗ ನನ್ನ ಮತ್ತು ಅಪ್ಪನ ಬಂಧ ಎಂದಿಗಿಂತಲೂ ಗಟ್ಟಿಯಾಗಿದೆ.’ ಹರ್ಷ ಗುಪ್ತಾ

ಇದನ್ನೂ ಓದಿ : Viral Video: ರಸ್ತೆಬದಿ ತರಕಾರಿ ಮಾರಲು ಔಡಿ ಎ4 ಕಾರಿನಲ್ಲಿ ಬರುವ ಕೇರಳದ ರೈತ

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

2 ದಿನಗಳ ಹಿಂದೆ ಇನ್​ಸ್ಟಾಗ್ರಾಂನ officialpeopleofindia ಪುಟದಲ್ಲಿ ಈ ಪೋಸ್ಟ್​ ಮಾಡಲಾಗಿದೆ. ಈತನಕ ಎರಡು ಮಿಲಿಯನ್​ ಜನರು ಈ ವಿಡಿಯೋ ನೋಡಿದ್ದಾರೆ. ಸುಮಾರು 1.8 ಲಕ್ಷ ಜನರು ಲೈಕ್ ಮಾಡಿದ್ದಾರೆ. ಸಾವಿರಾರು ಜನರು ಪ್ರತಿಕ್ರಿಯಿಸಿ ಅಪ್ಪ ಮಗನ ಆರೋಗ್ಯ ಸುಧಾರಿಸಲಿ, ಈ ಬಂಧ ಗಟ್ಟಿಯಾಗಿರಲಿ ಎಂದು ಹಾರೈಸಿದ್ದಾರೆ.

ಅಪ್ಪ ಮಗನಿಗೆ ಕಿಡ್ನಿ ದಾನ ಮಾಡಿದಾಗ

ನಿಮ್ಮ ಯೋಗಕ್ಷೇಮಕ್ಕಾಗಿ ಬೇಷರತ್ತಾಗಿ ತ್ಯಾಗ ಮಾಡುವವರು ನಿಮ್ಮ ಪೋಷಕರು ಮಾತ್ರ. ಇದನ್ನು ಸಾಬೀತುಪಡಿಸಿದ ನಿಮ್ಮ ತಂದೆಗೆ ನಮಸ್ಕಾರ ಎಂದಿದ್ಧಾರೆ ಒಬ್ಬರು. ತನ್ನ ಮಕ್ಕಳನ್ನು ರಕ್ಷಿಸಲು ತಂದೆ ಏನು ಬೇಕಾದರೂ ಮಾಡುತ್ತಾರೆ ಎಂದಿದ್ದಾರೆ ಇನ್ನೊಬ್ಬರು. ತಾಯಿ ಜನ್ಮ ನೀಡುತ್ತಾಳೆ ತಂದೆ ಜೀವನವನ್ನು ನೀಡುತ್ತಾರೆ ಎಂದಿದ್ದಾರೆ ಮತ್ತೊಬ್ಬರು. ದಾನಿಗಳು ದೇವರಿಗೆ ಸಮಾನ ಎಂದಿದ್ದಾರೆ ಮಗದೊಬ್ಬರು. ಹೆತ್ತವರು ತೋರುವ ಪ್ರೀತಿ ಮಾತ್ರ ಶಾಶ್ವತ ಎಂದಿದ್ದಾರೆ ಮಗದೊಬ್ಬರು. ನನ್ನ ತಂದೆ ಕೂಡ 2020ರಲ್ಲಿ ನನಗೆ ಕಿಡ್ನಿ ದಾನ ಮಾಡಿ ನನ್ನನ್ನು ಉಳಿಸಿದ್ದಾರೆ ಎಂದು ಮತ್ತೊಬ್ಬರು ಹೇಳಿದ್ಧಾರೆ. ಈ ವಿಡಿಯೋ ನೋಡಿ ನಾನು ಬಿಕ್ಕುತ್ತಿದ್ದೇನೆ ಎಂದಿದ್ದಾರೆ ಇನ್ನೊಬ್ಬರು.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

ಮೀಸಲಾತಿ ಕುರಿತು ನಿತೀಶ್ ಕುಮಾರ್, ರಾಬ್ರಿ ದೇವಿ ನಡುವೆ ತೀವ್ರ ವಾಗ್ವಾದ
ಮೀಸಲಾತಿ ಕುರಿತು ನಿತೀಶ್ ಕುಮಾರ್, ರಾಬ್ರಿ ದೇವಿ ನಡುವೆ ತೀವ್ರ ವಾಗ್ವಾದ
ಹನಿಟ್ರ್ಯಾಪ್​: ರಾಜಣ್ಣ, ಪರಮೇಶ್ವರ್​ ದಿಢೀರ್ ಜಂಟಿ ಸುದ್ದಿಗೋಷ್ಠಿ ಲೈವ್​
ಹನಿಟ್ರ್ಯಾಪ್​: ರಾಜಣ್ಣ, ಪರಮೇಶ್ವರ್​ ದಿಢೀರ್ ಜಂಟಿ ಸುದ್ದಿಗೋಷ್ಠಿ ಲೈವ್​
ವಿನಯ್-ರಜತ್ ಅವರ ಮಹಜರಿಗೆ ಕರೆತಂದ ಪೊಲೀಸರು: ವಿಡಿಯೋ
ವಿನಯ್-ರಜತ್ ಅವರ ಮಹಜರಿಗೆ ಕರೆತಂದ ಪೊಲೀಸರು: ವಿಡಿಯೋ
ಕೇವಲ ಒಬ್ಬ ಕಾರ್ಯಕರ್ತನ ಹಿಂದೆ ಹತ್ತಾರು ಪೊಲೀಸರು!
ಕೇವಲ ಒಬ್ಬ ಕಾರ್ಯಕರ್ತನ ಹಿಂದೆ ಹತ್ತಾರು ಪೊಲೀಸರು!
ಹನಿಟ್ರ್ಯಾಪ್‌ನಲ್ಲಿ ನನ್ನದೂ ತಪ್ಪಿದೆ ಎಂದಿದ್ಯಾಕೆ ರಾಜಣ್ಣ..?
ಹನಿಟ್ರ್ಯಾಪ್‌ನಲ್ಲಿ ನನ್ನದೂ ತಪ್ಪಿದೆ ಎಂದಿದ್ಯಾಕೆ ರಾಜಣ್ಣ..?
ರಾಜಣ್ಣ ದೂರು ನೀಡಿದರೆ ಸರ್ಕಾರ ತನಿಖೆ ಮಾಡಿಸಲು ಸಿದ್ಧವಿದೆ: ಚಲುವರಾಯಸ್ವಾಮಿ
ರಾಜಣ್ಣ ದೂರು ನೀಡಿದರೆ ಸರ್ಕಾರ ತನಿಖೆ ಮಾಡಿಸಲು ಸಿದ್ಧವಿದೆ: ಚಲುವರಾಯಸ್ವಾಮಿ
ಲಾಂಗ್ ಹಿಡಿದ ಪ್ರಕರಣ: ಮತ್ತೆ ಪೊಲೀಸ್ ಠಾಣೆಗೆ ರಜತ್, ವಿನಯ್ ಗೌಡ ಅಲೆದಾಟ
ಲಾಂಗ್ ಹಿಡಿದ ಪ್ರಕರಣ: ಮತ್ತೆ ಪೊಲೀಸ್ ಠಾಣೆಗೆ ರಜತ್, ವಿನಯ್ ಗೌಡ ಅಲೆದಾಟ
ನಟ್ಟು ಬೋಲ್ಟು ಸರಿಮಾಡುವ ಸ್ಪ್ಯಾನರ್ ಜನರ ಬಳಿ ಇರುತ್ತದೆ: ನಿಖಿಲ್
ನಟ್ಟು ಬೋಲ್ಟು ಸರಿಮಾಡುವ ಸ್ಪ್ಯಾನರ್ ಜನರ ಬಳಿ ಇರುತ್ತದೆ: ನಿಖಿಲ್
ಮತ್ತೆ ಹಳ್ಳಿ ಹುಡುಗಿ ಅವತಾರದಲ್ಲಿ ಸಪ್ತಮಿ ಗೌಡ; ಅನುಭವ ಹಂಚಿಕೊಂಡ ನಟಿ
ಮತ್ತೆ ಹಳ್ಳಿ ಹುಡುಗಿ ಅವತಾರದಲ್ಲಿ ಸಪ್ತಮಿ ಗೌಡ; ಅನುಭವ ಹಂಚಿಕೊಂಡ ನಟಿ
ಸತೀಶ್ ಜಾರಕಿಹೊಳಿ ದೆಹಲಿಗೆ ಯಾಕೆ ಹೋಗಿದ್ದು ಅಂತ ಗೊತ್ತಿಲ್ಲ: ರಾಜಣ್ಣ
ಸತೀಶ್ ಜಾರಕಿಹೊಳಿ ದೆಹಲಿಗೆ ಯಾಕೆ ಹೋಗಿದ್ದು ಅಂತ ಗೊತ್ತಿಲ್ಲ: ರಾಜಣ್ಣ