Viral Brain Teaser: ಹಣ್ಣುಗಳ ರಾಶಿಯಲ್ಲಿ ಅಡಗಿರುವ ಮೂರು ಪಕ್ಷಿಗಳನ್ನು ಕಂಡುಹಿಡಿಯಬಹುದೆ?

Optical Illusion: ಹಣ್ಣು ಮತ್ತು ತರಕಾರಿಗಳ ರಾಶಿಯೇ ಇಲ್ಲಿದೆ. ಇವುಗಳ ಮಧ್ಯೆ ಮೂರು ಪುಟ್ಟ ಹಕ್ಕಿಗಳು ಅಡಗಿಕೊಂಡು ಆಟವಾಡಿಸುತ್ತಿವೆ. ಕೆಲ ನೆಟ್ಟಿಗರು ಕಷ್ಟಪಟ್ಟು ಹುಡುಕಿದ್ಧಾರೆ. ಇನ್ನೂ ಕೆಲವರು ಸಾಧ್ಯವೇ ಆಗಲಿಲ್ಲ ಎಂದಿದ್ದಾರೆ. ನಿಮ್ಮದು ಚುರುಕುಗಣ್ಣು, ಖಂಡಿತ ನೀವು ಇಲ್ಲಿ ಅಡಗಿರುವ ಆ ಪಕ್ಷಿಗಳನ್ನು ಹುಡುಕುತ್ತೀರಿ ಎಂಬ ಭರವಸೆ ನಮ್ಮದು. ನಿಮಗಿರುವ ಸಮಯ 10 ಸೆಕೆಂಡುಗಳು ಮಾತ್ರ.

Viral Brain Teaser: ಹಣ್ಣುಗಳ ರಾಶಿಯಲ್ಲಿ ಅಡಗಿರುವ ಮೂರು ಪಕ್ಷಿಗಳನ್ನು ಕಂಡುಹಿಡಿಯಬಹುದೆ?
ಹಣ್ಣು ತರಕಾರಿ ರಾಶಿಗಳ ಮಧ್ಯೆ ಅಡಗಿರುವ ಮೂರು ಪಕ್ಷಿಗಳನ್ನು ಕಂಡುಹಿಡಿಯಿರಿ
Follow us
ಶ್ರೀದೇವಿ ಕಳಸದ
|

Updated on: Oct 03, 2023 | 10:29 AM

Brain Activity: ಹಂಗೇರಿಯ ಡಿಜಿಟಲ್ ಕಲಾವಿದ ಗರ್ಗೆಲಿ ಡುಡಾಸ್​ (Gergely Dudas) ತಮ್ಮ ಫೇಸ್​ಬುಕ್ ಖಾತೆಯಲ್ಲಿ ಆಗಾಗ ತಮ್ಮ ಫಾಲೋವರುಗಳ ಮೆದುಳಿಗೆ ಆಗಾಗ ಕಸರತ್ತನ್ನು ಕೊಡುತ್ತಿರುತ್ತಾರೆ. ಈ ಬಾರಿ ಅವರು ಪೋಸ್ಟ್ ಮಾಡಿದ ಚಿತ್ರ ಹಣ್ಣು ಮತ್ತು ತರಕಾರಿಗಳ ರಾಶಿಯದು. ಈ ರಾಶಿಯ ಮಧ್ಯೆ ಮೂರು ಪಕ್ಷಿಗಳನ್ನು  (Birds) ಅಡಗಿಸಿಟ್ಟಿದ್ದಾರೆ. ಅವುಗಳನ್ನು ಪತ್ತೆ ಹಚ್ಚುವ ಕೆಲಸ ನಿಮ್ಮದು. ಇಲ್ಲಿ ಬಾಳೆಹಣ್ಣು, ಟೊಮ್ಯಾಟೋ, ಪೇರಳೆ, ಕುಂಬಳಕಾಯಿ, ಬದನೆಕಾಯಿ ಹೀಗೆ ಮುಂತಾದವುಗಳನ್ನು ಸುರಿಯಲಾಗಿದೆ. 10 ಸೆಕೆಂಡುಗಳಲ್ಲಿ ನೀವು ಆ ಮೂರು ಪಕ್ಷಿಗಳನ್ನು ಹುಡುಕಬೇಕು. ಸವಾಲು ಸ್ವೀಕರಿಸಲು ಸಿದ್ಧರಿದ್ದೀರಾ?

ಇದನ್ನೂ ಓದಿ : Viral Video: ಮರುಜನ್ಮ; 20 ವರ್ಷದ ಮಗನಿಗೆ ಕಿಡ್ನಿ ದಾನ ಮಾಡಿದ ಅಪ್ಪ 

14 ಗಂಟೆಗಳ ಹಿಂದೆ ಫೇಸ್​ಬುಕ್​ನಲ್ಲಿ ಇದನ್ನು ಪೋಸ್ಟ್​ ಮಾಡಲಾಗಿದೆ. ಈತನಕ ಸುಮಾರು 500 ಜನರು ಪ್ರತಿಕ್ರಿಯಿಸಿದ್ದಾರೆ. ಆಹ್​! ಪಕ್ಷಿಗಳು ಕಂಡವು, ಇದು ನಿಜಕ್ಕೂ ತುಂಬಾ ಚೇತೋಹಾರಿಯಾದ ಸವಾಲು, ಮತ್ತಷ್ಟು ಇಂಥ ಸವಾಲುಗಳಿಗಾಗಿ ಕಾಯುತ್ತಿದ್ದೇವೆ ಎಂದು ಕೆಲವರು ಹೇಳಿದ್ದಾರೆ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಹಣ್ಣುಗಳ ರಾಶಿಯಲ್ಲಿ ಅಡಗಿರುವ ಮೂರು ಪಕ್ಷಿಗಳನ್ನು ಕಂಡುಹಿಡಿಯಿರಿ

ನನಗೆ ಆ ಮೂರೂ ಪಕ್ಷಿಗಳು ಕಂಡವು. ಆದರೆ ಪ್ರತೀ ಪೇರಳೆ ಹಣ್ಣುನ್ನು ನೋಡಿ ನೋಡಿದಾಗೆಲ್ಲ ಇದು ಪಕ್ಷಿಯೇ ಎಂದು ಅಂದುಕೊಳ್ಳುತ್ತಿದ್ದೆ ಎಂದಿದ್ದಾರೆ ಒಬ್ಬರು. ನನಗೆ ಒಂದೂ ಹಕ್ಕಿ ಸಿಗಲಿಲ್ಲ, ಕೋಪ ಬಂತು ಎಂದಿದ್ದಾರೆ ಇನ್ನೊಬ್ಬರು. ಶರತ್ಕಾಲದ ಈ ಬಣ್ಣಗಳು ನನಗೆ ಅತ್ಯಂತ ಪ್ರಿಯ ಎಂದಿದ್ದಾರೆ ಮತ್ತೊಬ್ಬರು. ನನಗೆ ಹತ್ತು ಸೆಕೆಂಡುಗಳು ಸಾಕಾಗಲಿಲ್ಲ ಆದರೆ ಹಣ್ಣುಗಳು ಕಂಡವು ಎಂದಿದ್ದಾರೆ ಮಗದೊಬ್ಬರು.

ಇದನ್ನೂ ಓದಿ: Viral Video: ರಸ್ತೆಬದಿ ತರಕಾರಿ ಮಾರಲು ಔಡಿ ಎ4 ಕಾರಿನಲ್ಲಿ ಬರುವ ಕೇರಳದ ರೈತ

ಈತನಕ ಪಕ್ಷಿಗಳನ್ನು ಹುಡುಕಲು ಸಾಧ್ಯವೇ ಆಗಿಲ್ಲವೆಂದುಕೊಳ್ಳುವವರು ಬೇಸರಿಸಿಕೊಳ್ಳಬೇಕಿಲ್ಲ. ನೆಟ್ಟಿಗರಲ್ಲಿ ಅನೇಕರು ಕೂಡ ನಿಮ್ಮ ಹಾಗೆ ವೈಫಲ್ಯ ಅನುಭವಿಸಿದ್ದಾರೆ. ಹಾಗಾಗಿ ನಿಮಗೆ ಸಹಾಯವಾಗಲೆಂದು ಈ ಕೆಳಗಿನ ಚಿತ್ರ ಕೊಡುತ್ತಿದ್ದೇವೆ.

ಇಲ್ಲಿವೆ ಆ ಮೂರು ಹಕ್ಕಿಗಳು

Viral Brain Teaser Find the three birds in fruits yard

ಇಲ್ಲಿದೆ ಉತ್ತರ!

ಮತ್ತಷ್ಟು ಇಂಥ ಸವಾಲುಳ್ಳ ಚಿತ್ರಗಳಿಗಾಗಿ ಕಾಯುತ್ತಾ ಇರಿ. ಈ ದಿನ ನಿಮ್ಮಲ್ಲಿ ಚೈತನ್ಯವನ್ನು ತರಲಿ.

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್