Viral Video: ಮಗಳ ಹುಟ್ಟುಹಬ್ಬಕ್ಕೆ ಕೊಳಕುನೀರಿನ ಬಾಟಲಿಯನ್ನು ಗಿಫ್ಟ್ ಕೊಟ್ಟ ತಂದೆ

Father and Daughter: ಪೆಟ್ರೀಷಿಯಾ ಮೌ, 'ನಾನು ತಮಾಷೆ ಮಾಡುತ್ತಿಲ್ಲ. ನಿಜವಾಗಿಯೂ ಕೊಳಕು ನೀರಿನ ಬಾಟಲಿಯನ್ನು ಉಡುಗೊರೆಯನ್ನು ಪಡೆದಿದ್ದೇನೆ. ಇಂಥ ಅಪರೂಪದ ಉಡುಗೊರೆಗಳನ್ನು ತಂದೆಯಿಂದ ಪಡೆದಿರುವುದು ಮೊದಲೇನಲ್ಲ. ಈ ಹಿಂದೆ ಫರ್ಸ್ಟ್​ ಏಡ್​ ಕಿಟ್​, ಪೆಪ್ಪರ್​ ಸ್ಪ್ರೇ, ಎನ್​ಸೈಕ್ಲೋಪೀಡಿಯಾ, ಕೀಚೈನ್ ಕೊಟ್ಟಿದ್ದರು. ಅವರು ಬರೆದ ಪುಸ್ತಕವನ್ನು ನನಗೆ ಅರ್ಪಿಸಿದ್ದರು.'

Viral Video: ಮಗಳ ಹುಟ್ಟುಹಬ್ಬಕ್ಕೆ ಕೊಳಕುನೀರಿನ ಬಾಟಲಿಯನ್ನು ಗಿಫ್ಟ್ ಕೊಟ್ಟ ತಂದೆ
1. ಕೊಳಕು ನೀರಿನ ಬಾಟಲಿಯನ್ನು ಉಡುಗೊರೆಯಾಗಿ ಕೊಡಲು ಸಿದ್ಧಪಡಿಸುತ್ತಿರುವ ತಂದೆ. 2. ತಂದೆ ಕೊಟ್ಟ ಬಾಟಲಿಯನ್ನು ಸಮುದ್ರಕ್ಕೆ ಸುರಿಯುತ್ತಿರುವ ಮಗಳು.
Follow us
|

Updated on:Oct 03, 2023 | 12:11 PM

Birthday Gift: ಇಂಥ ತಂದೆಯೂ ಇರಲು ಸಾಧ್ಯವೆ? ಶೀರ್ಷಿಕೆ ಓದಿ ಸಿಡಿಮಿಡಿಗೊಂಡಿದ್ದೀರಾ? ಆದರೆ ಇದು ನಿಜ. ತಂದೆ ತನ್ನ ಮಗಳ ಹುಟ್ಟುಹಬ್ಬಕ್ಕೆ ಕೊಳಕು ನೀರಿನ ಬಾಟಲಿಯನ್ನು ಉಡುಗೊರೆಯಾಗಿ ಕೊಟ್ಟಿದ್ದಾರೆ. ಈ ವಿಷಯವನ್ನು ಮಗಳು ಫೋಟೋ ಸಮೇತ X ನಲ್ಲಿ ಪೋಸ್ಟ್ ಮಾಡಿದ್ದಾರೆ. ‘ಈ ವರ್ಷದ ಹುಟ್ಟುಹಬ್ಬಕ್ಕೆ ನನ್ನ ತಂದೆ ಕೊಳಕು ನೀರಿನಿಂದ ತುಂಬಿದ ಬಾಟಲಿಯನ್ನು ಉಡುಗೊರೆಯಾಗಿ(Gift) ನೀಡಿದ್ದಾರೆ. ನನ್ನ ತಂದೆ ಪ್ರತೀ ವರ್ಷ ಕೊಡುವ ಉಡುಗೊರೆಗಳು ನಿಜಕ್ಕೂ ಅಸಾಮಾನ್ಯ’ ಎಂದು ಹೇಳುತ್ತಾ, ಇಂಥ ಉಡುಗೊರೆಗಳ ಹಿಂದಿ ಕಾರಣವೇನು ಎನ್ನುವುದನ್ನು ಆಕೆ ತಿಳಿಸಿದ್ದಾರೆ.

ಇದನ್ನೂ ಓದಿ : Viral Brain Teaser: ಹಣ್ಣುಗಳ ರಾಶಿಯಲ್ಲಿ ಅಡಗಿರುವ ಮೂರು ಪಕ್ಷಿಗಳನ್ನು ಕಂಡುಹಿಡಿಯಬಹುದೆ?

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಪೆಟ್ರೀಷಿಯಾ ಮೌ, ‘ನಾನು ತಮಾಷೆ ಮಾಡುತ್ತಿಲ್ಲ. ನಿಜವಾಗಿಯೂ ಕೊಳಕು ನೀರಿನ ಬಾಟಲಿಯನ್ನು ಉಡುಗೊರೆಯನ್ನು ಪಡೆದಿದ್ದೇನೆ. ಇಂಥ ಅಪರೂಪದ ಉಡುಗೊರೆಗಳನ್ನು ಪಡೆದಿರುವುದು ಮೊದಲೇನಲ್ಲ. ಈ ಹಿಂದೆ ಫರ್ಸ್ಟ್​ ಏಡ್​ ಕಿಟ್​, ಪೆಪ್ಪರ್​ ಸ್ಪ್ರೇ, ಎನ್​ಸೈಕ್ಲೋಪೀಡಿಯಾ, ಕೀಚೈನ್ ಕೊಟ್ಟಿದ್ದರು. ಅವರು ಬರೆದ ಪುಸ್ತಕವನ್ನು ನನಗೆ ಅರ್ಪಿಸಿದ್ದರು. ಅವರು ಕೊಡುವ ಉಡುಗೊರೆಗಳನ್ನು ಹಣದಿಂದ ಖರೀದಿಸಲು ಸಾಧ್ಯವಿಲ್ಲ. ನಿಜಕ್ಕೂ ಅವು ಜೀವನದ ಅತ್ಯಮೂಲ್ಯ ಉಡುಗೊರೆಗಳು’ ಎಂದಿದ್ದಾರೆ.

ಹೇಗಿದೆ ಅಪ್ಪನ ಈ ಉಡುಗೊರೆ!

‘ಬಾಟಲಿಯನ್ನು ಅಲುಗಾಡಿಸಿದಾಗ ಆ ನೀರು ಹೇಗಿರುತ್ತದೆ? ಎಲ್ಲವೂ ಕೊಳಕು ಎಂಬಂತಾಗುತ್ತದೆ ತಾನೆ? ನಾವು ಜೀವನದಲ್ಲಿ ಗೊಂದಲಕ್ಕೆ ಬಿದ್ಧಾಗಲೂ ಹೀಗೆಯೇ ಆಗುತ್ತದೆ. ಆದರೆ ಆ ಬಾಟಲಿಯನ್ನು ಸ್ವಲ್ಪ ಹೊತ್ತು ಸುಮ್ಮನೇ ಇಟ್ಟರೆ ಕಲ್ಮಷವೆಲ್ಲ ತಳ ಸೇರಿ ಮೇಲೆ ತಿಳಿನೀರು ತೇಲುತ್ತದೆ. ಹಾಗೆಯೇ ಮನಸ್ಸೂ ಕೂಡ. ನಮ್ಮ ಜೀವನದೃಷ್ಟಿಯನ್ನು ಹೀಗೆ ಕಾಪಾಡಿಕೊಳ್ಳಬೇಕು’ ಎಂದಿದ್ದಾಳೆ ಮೌ.

ಇದನ್ನೂ ಓದಿ : Viral Video: ಮರುಜನ್ಮ; 20 ವರ್ಷದ ಮಗನಿಗೆ ಕಿಡ್ನಿ ದಾನ ಮಾಡಿದ ಅಪ್ಪ

‘ವಾರಾಂತ್ಯಕ್ಕೆ ನಾನು ಈ ಬಾಟಲಿಯನ್ನು ತೆಗೆದುಕೊಂಡು ಹೋಗಿ ವಾಪಾಸು ಸಮುದ್ರಕ್ಕೆ ಸುರಿದೆ. ನೀನು ಸಮುದ್ರದೊಳಗಿನ ಒಂದು ಹನಿ ಅಲ್ಲ. ಹನಿಯೊಳಗಿರುವ ಸಮುದ್ರ ನೀನು ಎಂದು ಅಪ್ಪನಿಗೆ ಹೇಳಿದೆ. ನಾನು ಅವನ ಮಗು ತಾನೇ?’ ಎಂದಿದ್ದಾಳೆ ಮೌ. ಅಕ್ಟೋಬರ್ 2 ರಂದು ಪೋಸ್ಟ್ ಅನ್ನು ಆಕೆ X ನಲ್ಲಿ ಹಂಚಿಕೊಂಡಿದ್ದಾಳೆ. ಈತನಕ ಸುಮಾರು 2.9 ಮಿಲಿಯನ್​ ಜನರು ನೋಡಿದ್ದಾರೆ. 20,000ಕ್ಕೂ ಹೆಚ್ಚು ಜನರು ಲೈಕ್ ಮಾಡಿದ್ದಾರೆ. ಸಾವಿರಾರು ಜನರು ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ : Viral Video: ರಸ್ತೆಬದಿ ತರಕಾರಿ ಮಾರಲು ಔಡಿ ಎ4 ಕಾರಿನಲ್ಲಿ ಬರುವ ಕೇರಳದ ರೈತ

ಇದು ತುಂಬಾ ಮುದ್ದಾದ ಉಡುಗೊರೆ. ನಿಜಕ್ಕೂ ಇದು ಜೀವನಪಾಠ. ನಿಮಗೆ ಹುಟ್ಟುಹಬ್ಬದ ಶುಭಾಶಯಗಳು ಎಂದು ಅನೇಕರು ಹೇಳಿದ್ದಾರೆ. ಮಕ್ಕಳನ್ನು ಹೀಗೆ ಬೆಳೆಸಬೇಕು, ಇಂಥ ಉಡುಗೊರೆಗಳನ್ನು ಕೊಡಬೇಕು ಎಂದು ಅನೇಕರು ಅನುಮೋದಿಸಿದ್ಧಾರೆ.

ಇದನ್ನು ಓದಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 12:10 pm, Tue, 3 October 23