Viral Video: ಗುಜರಾತ್​; ಜಾಯಿಂಟ್​ ವೀಲ್​ನಲ್ಲಿ ಯುವತಿಯ ಕೂದಲು ಸಿಕ್ಕಿಹಾಕಿಕೊಂಡಾಗ

Joint Wheel: ಜಾತ್ರೆ, ಉತ್ಸವ ಎಂದರೆ ಎಲ್ಲಿಲ್ಲದ ಉತ್ಸಾಹ ಮೈದುಂಬಿಬಿಡುತ್ತದೆ. ಏಕೆಂದರೆ ಅಲ್ಲಿ ಖುಷಿಗೆ, ಉತ್ಸಾಹಕ್ಕೆ, ಸಾಹಸಕ್ಕೆ ಸಾಕಷ್ಟು ಸರಕಿರುತ್ತದೆ. ಆದರೆ ಎಲ್ಲವೂ ಸುರಳಿತವಾಗಿ ಸಾಗಿದರೆ ಛಂದ. ಇಲ್ಲವಾದಲ್ಲಿ? ಇದೀಗ ವೈರಲ್ ಆಗಿರುವ ಈ ವಿಡಿಯೋ ನೋಡಿ, ಹುಡುಗಿಯೊಬ್ಬಳ ಕೂದಲು ಜಾಯಿಂಟ್​ ವೀಲ್​ನಲ್ಲಿ ಸಿಕ್ಕಿಹಾಕಿಕೊಂಡಿದೆ. ಅದನ್ನು ಬಿಡಿಸುವವರು ಒಂದೆಡೆ, ನೋಡುವವರು ಇನ್ನೊಂದೆಡೆ.

Viral Video: ಗುಜರಾತ್​; ಜಾಯಿಂಟ್​ ವೀಲ್​ನಲ್ಲಿ ಯುವತಿಯ ಕೂದಲು ಸಿಕ್ಕಿಹಾಕಿಕೊಂಡಾಗ
ಜಾಯಿಂಟ್​ ವೀಲ್​ನಲ್ಲಿ ಸಿಕ್ಕಿಹಾಕಿಕೊಂಡಿರುವ ಹುಡುಗಿಯ ಕೂದಲನ್ನು ಬಿಡಿಸುತ್ತಿರುವುದು
Follow us
ಶ್ರೀದೇವಿ ಕಳಸದ
|

Updated on: Oct 03, 2023 | 2:53 PM

Gujrat: ಗುಜರಾತ್​ನ ಖಂಭಾಲಿಯಾದಲ್ಲಿ ನಡೆಯುತ್ತಿರುವ ಲೋಕಮೇಳದಲ್ಲಿಈ ಘಟನೆ ನಡೆದಿದೆ. ಜಾಯಿಂಟ್​ ವೀಲ್ (Joint Wheel)​ ತಿರುಗುತ್ತಿದ್ದಾಗ ಅಕಸ್ಮಾತ್ ಆಗಿ ಹುಡುಗಿಯೊಬ್ಬಳ ಕೂದಲು ಸಿಕ್ಕಿಹಾಕಿಕೊಂಡಿದೆ. ಯುವಕನೊಬ್ಬ ಆಕೆಯ ತಲೆಯನ್ನು ಹಿಡಿದುಕೊಂಡಿದ್ದಾನೆ. ಇನ್ನುಳಿದ ಇಬ್ಬರು ಅವಳ ಕೂದಲನ್ನು ಕತ್ತರಿಸುತ್ತ ಬಿಡಿಸಲು ಪ್ರಯತ್ನಿಸುತ್ತಿದ್ದಾರೆ. ನೂರಾರು ಜನರು ಕೆಳಗೆ ನಿಂತು ಈ ದೃಶ್ಯವನ್ನು ಗಾಬರಿಯಂದ ನೋಡುತ್ತಿದ್ದಾರೆ. ಇನ್​ಸ್ಟಾಗ್ರಾಂನಲ್ಲಿ ಈ ವಿಡಿಯೋವನ್ನು @amazingdwarka ಎನ್ನುವ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಇದನ್ನೂ ಓದಿ : Viral Video: ನೀರು ಕುಡಿದ ನಂತರ ನಲ್ಲಿ ಬಂದ್ ಮಾಡುವ ನಾಯಿ; ಇದು ಮನುಷ್ಯರಿಗಿಂತ ಜವಾಬ್ದಾರಿಯುತ

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಸೆ. 21 ರಂದು ಇದನ್ನು ಪೋಸ್ಟ್ ಮಾಡಲಾಗಿದೆ. ಈತನಕ ಸುಮಾರು 26 ಮಿಲಿಯನ್​ ಜನರು ನೋಡಿದ್ದಾರೆ. 7.4 ಲಕ್ಷ ಜನರು ಈ ವಿಡಿಯೋಗೆ ಪ್ರತಿಕ್ರಿಯಿಸಿದ್ದಾರೆ. ಅದೃಷ್ಟವಶಾತ್ ಆಕೆಗೆ ಏನೂ ಆಗಿಲ್ಲವಲ್ಲ ಎಂದು ನಿಟ್ಟುಸಿರು ಬಿಟ್ಟಿದ್ದಾರೆ ಅನೇಕರು.

ಜಾಯಿಂಟ್​ ವೀಲ್​ನಿಂದ ಹುಡುಗಿಯ ಕೂದಲನ್ನು ಬಿಡಿಸುತ್ತಿರುವುದು

ಎಷ್ಟು ಜಾಗರೂಕತೆಯಿಂದ ಇದ್ದರೂ ಸಾಲದು ಇಂಥ ಸಂದರ್ಭಗಳಲ್ಲಿ. ಯಾವಾಗ ಏನಾಗುತ್ತದೆಯೋ ಹೇಳಲಾಗದು ಎಂದು ಆತಂಕ ವ್ಯಕ್ತಪಡಿಸಿದ್ಧಾರೆ ಒಬ್ಬರು. ಸವಾರಿ ಮಾಡುವಾಗ ಕೈಕಾಲುಗಳನ್ನು ಕ್ಯಾಬಿನ್​ ಒಳಗಿಟ್ಟುಕೊಳ್ಳಬೇಕು ಎನ್ನುವುದು ಗೊತ್ತಿತ್ತು ಆದರೆ ಇದೀಗ ಕೂದಲನ್ನೂ… ಎಂದಿದ್ಧಾರೆ ಇನ್ನೊಬ್ಬರು. ಈ ಆಟ ಆಡುವಾಗ ಎಂದಿಗೂ ಕೂದಲನ್ನು ಬಿಟ್ಟುಕೊಂಡು ಕುಳಿತುಕೊಳ್ಳಬೇಡಿ, ಇದು ಹೊಸ ಅಪಾಯ! ಎಂದಿದ್ಧಾರೆ ಮತ್ತೊಬ್ಬರು.

ಇದನ್ನೂ ಓದಿ : Viral Video: ಮಗಳ ಹುಟ್ಟುಹಬ್ಬಕ್ಕೆ ಕೊಳಕುನೀರಿನ ಬಾಟಲಿಯನ್ನು ಗಿಫ್ಟ್ ಕೊಟ್ಟ ತಂದೆ

ಇಂಥ ಆಟಗಳು ನಿಜಕ್ಕೂ ಅಪಾಯಕಾರಿ, ಇಲ್ಲಿ ಯಾವುದೇ ರೀತಿಯ ಸುರಕ್ಷತೆ ಇರುವುದಿಲ್ಲ, ಯಾವಾಗ ಬೇಕಾದರೂ ಏನೂ ಆಗಬಹುದು ಎಂದಿದ್ದಾರೆ ಒಬ್ಬರು. ಕೆಳಗೆ ನಿಂತು ನೋಡುತ್ತಿರುವ ಜನರನ್ನು ನೋಡುತ್ತಿದ್ದರೆ ಗಾಬರಿಯಾಗುತ್ತಿದೆ ಎಂದಿದ್ಧಾರೆ ಇನ್ನೊಬ್ಬರು. ನಾನಂತೂ ಜನ್ಮದಲ್ಲಿ ಇಂಥ ಆಟಗಳನ್ನು ಆಡಿಲ್ಲ, ಆಡುವುದೂ ಇಲ್ಲ ಎಂದಿದ್ದಾರೆ ಮತ್ತೊಬ್ಬರು. ಮಕ್ಕಳನ್ನು ಮಾತ್ರ ಇಂಥ ಆಟಗಳಿಗೆ ಕರೆದೊಯ್ಯಬೇಡಿ ಎಂದಿದ್ದಾರೆ ಇನ್ನೊಬ್ಬರು. ಒಟ್ಟಿನಲ್ಲಿ ಎಷ್ಟು ಜಾಗರೂಕತೆಯಿಂದ ಇದ್ದರೂ ಸಾಲದು ಎಂದಿದ್ದಾರೆ ಮಗದೊಬ್ಬರು.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ