Viral Video: ಪಂಜಾಬಿ ಹಾಡಿಗೆ ವಧುವಿನ ಡ್ಯಾನ್ಸ್; ಧಮಾಕೇದಾರ್ ಎಂದ ನೆಟ್ಟಿಗರು
Indian Marriage: ಪಂಜಾಬಿ ಹಾಡಿಗೆ ವಧುವೊಬ್ಬಳು ತನ್ನ ಅತ್ತಿಗೆಯೊಂದಿಗೆ ಡ್ಯಾನ್ಸ್ ಮಾಡಿದ್ದಾಳೆ. ನೆಟ್ಟಿಗರು ಈ ಡ್ಯಾನ್ಸ್ ಅನ್ನು ಬಹುವಾಗಿ ಮೆಚ್ಚಿಕೊಂಡಿದ್ದಾರೆ. ಎಲ್ಲ ಸರಿ, ಆದರೆ ಇಲ್ಲಿ ವಧು ಯಾರು ಎನ್ನುವುದೇ ಗೊತ್ತಾಗುತ್ತಿಲ್ಲ ಎಂದಿದ್ದಾರೆ. ಏನೇ ಆಗಲಿ ಇವರೆಲ್ಲರ ನೃತ್ಯ ಭರ್ಜರಿಯಾಗಿದೆ. ಈ ಉತ್ಸಾಹ ಹೀಗೇ ಇರಲಿ ಎಂದಿದ್ದಾರೆ. ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?
Dance: ಭಾರತೀಯ ಮದುವೆಗಳು ವಿವಿಧ ರೀತಿಯ ಸಾಂಸ್ಕೃತಿಕ ಹಿನ್ನೆಲೆಯಿಂದ ಕೂಡಿವೆ. ಮದುವೆಯಲ್ಲಿ ವಧುವರರ ಪರಸ್ಪರರ ಕುಟುಂಬಗಳು ಬೆರೆಯಲು, ಸಂತೋಷದಿಂದ ಪಾಲ್ಗೊಳ್ಳಲು ಪೂರಕವಾಗುವಂಥ ಆಚರಣೆಗಳಿಂದ ಒಳಗೊಂಡಿವೆ. ಇದೀಗ ವೈರಲ್ ಆಗುತ್ತಿರುವ ಈ ವಿಡಿಯೋ ನೋಡಿ, ಪಂಜಾಬಿ ಹಾಡಿಗೆ ವಧುವೊಬ್ಬಳು ಅತ್ಯಂತ ಉತ್ಸಾಹದಿಂದ ಡ್ಯಾನ್ಸ್ ಮಾಡಿದ್ದಾಳೆ. ತನ್ನ ಅತ್ತಿಗೆಯೊಂದಿಗೆ ಈಕೆ ನರ್ತಿಸಿರುವ ರೀತಿ ನೆಟ್ಟಿಗರ ಮನಸೂರೆಗೊಂಡಿದೆ. ‘ಬಲ್ಲೆ ಬಲ್ಲೆ ಜೆ ಸೋನಿಯಾ ದೇ ರಂಗ್ ದೇಖ್ಲೋ’ ಹಾಡಿಗೆ ವಧು ನರ್ತಿಸಿದ ರೀತಿ ನೆಟ್ಟಿಗರನ್ನು ಶ್ಲಾಘಿಸಲು ಹುರಿದುಂಬಿಸಿದೆ.
ಇದನ್ನೂ ಓದಿ :Viral Video: ಎಸಿಡ್ ದಾಳಿ; ‘ಅವರು ಕಣ್ಣಿಟ್ಟಿದ್ದು ನನ್ನ ಸ್ನೇಹಿತೆಯ ಮೇಲೆ, ಗುರಿಯಾಗಿದ್ದು ನಾನು’
ಇನ್ಸ್ಟಾಗ್ರಾಂನ @dollysharma6092 ಖಾತೆಯಲ್ಲಿ ಈ ವಿಡಿಯೋ ಪೋಸ್ಟ್ ಮಾಡಲಾಗಿದೆ. ಈತನಕ ಸುಮಾರು 6 ಮಿಲಿಯನ್ ಜನರು ಈ ವಿಡಿಯೋ ನೋಡಿದ್ದಾರೆ. ಅನೇಕರು ತಮ್ಮ ಅನಿಸಿಕೆಗಳನ್ನು ತಿಳಿಸಿದ್ದಾರೆ. ಈ ವಿಡಿಯೋ ನನ್ನ ಮೂಡ್ ಫ್ರೆಷ್ ಮಾಡಿತು ಎಂದು ಅನೇಕರು ಹೇಳಿದ್ದಾರೆ.
ಅತ್ತಿಗೆಯೊಂದಿಗೆ ವಧು ಡ್ಯಾನ್ಸ್
View this post on Instagram
ನಿಜಕ್ಕೂ ನೀವು ಅದ್ಭುತವಾಗಿ ನರ್ತಿಸಿದ್ದೀರಿ ಎಂದು ಒಬ್ಬರು. ನೀವು ನಿಮ್ಮ ಮದುವೆ ಎನ್ನುವುದನ್ನು ಮರೆತು ನರ್ತಿಸಿದ್ದೀರಿ ಎಂದು ಇನ್ನೊಬ್ಬರು. ನೃತ್ಯವೆಂದರೆ ಹೀಗೆ ಎಲ್ಲ ಸಂಕೋಚವನ್ನೂ ಮರೆಸುತ್ತದೆ ಎಂದು ಮತ್ತೊಬ್ಬರು. ನನಗೂ ಈಗ ನಿಮ್ಮ ನರ್ತಿಸಬೇಕು ಎನ್ನಿಸುತ್ತಿದೆ ಎಂದು ಮಗದೊಬ್ಬರು. ನನ್ನ ಮದುವೆಯಲ್ಲಿ ನಾನು ಕೂಡ ಹೀಗೇ ಕುಣಿದಿದ್ದೆ ಎಂದು ಇನ್ನೂ ಒಬ್ಬರು. ಖಂಡಿರ ನಾ ಕೂಡ ನನ್ನ ಮದುವೆಯಲ್ಲಿ ಹೀಗೆಯೇ ಡ್ಯಾನ್ಸ್ ಮಾಡುತ್ತೇನೆ ಎಂದು ಮತ್ತೊಬ್ಬರು ಹೇಳಿದ್ದಾರೆ.
ಇದನ್ನೂ ಓದಿ : Viral Video: ಸ್ಪೇಸ್ ಕಾಫಿ; ಬಾಹ್ಯಾಕಾಶದಲ್ಲಿ ವಿಶೇಷ ಕಪ್ನಲ್ಲಿ ಕಾಫಿ ಕುಡಿದ ಗಗನಯಾತ್ರಿ
ಇಲ್ಲಿ ವಧು ಯಾರೆಂದೇ ತಿಳಿಯುತ್ತಿಲ್ಲ ಎಂದಿದ್ದಾರೆ ಒಬ್ಬರು. ಹೌದು, ಎಲ್ಲರೂ ಸುಂದರವಾಗಿ ಕಾಣುತ್ತಿದ್ದಾರೆ, ನಡುವೆ ಬಂದು ಹೋಗುವ ಯುವತಿಯೇ ವಧು ಇರಬೇಕು ಎಂದು ಮತ್ತೊಬ್ಬರು ಹೇಳಿದ್ದಾರೆ. ಅಂತೂ ಎಲ್ಲರೂ ತಾರುಣ್ಯದಿಂದ ಕಂಗೊಳಿಸುತ್ತಿದ್ದಾರೆ. ವಯಸ್ಸನ್ನು ಮರೆತು ನರ್ತಿಸುತ್ತಿದ್ದಾರೆ ಎಂದು ಅನೇಕರು ಹೇಳಿದ್ಧಾರೆ.
ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ