Viral Video: ‘9 ವರ್ಷದವಳಿದ್ದಾಗ ಅತ್ಯಾಚಾರಕ್ಕೆ ಒಳಗಾದೆ, ಮೊದಲ ಸಲ ಹುಡುಗ ಎರಡನೇ ಸಲ…’

Rape : 'ಎರಡು ಬಾರಿ ಅತ್ಯಾಚಾರಕ್ಕೆ ಒಳಗಾಗಿದ್ದನ್ನು ಹೇಳಿದಾಗ ನನ್ನ ಪೋಷಕರು ನನ್ನದೇ ತಪ್ಪು ಎಂದರು, ಹೊಡೆದರು. ದಾರಿಗಾಣದೆ ನಾನು ಅನಾಥಾಶ್ರಮಕ್ಕೆ ಹೋದೆ. ಅಲ್ಲಿಯೂ ಪೋಷಕರು ಬೆನ್ನಟ್ಟಿದರು. ಹದಿನೈದು ವರ್ಷಕ್ಕೆ ಮದುವೆ ಮಾಡಿದರು. ಎಳವೆಯಲ್ಲಿಯೇ ಮುರುಟಿದ ಸಸಿಗೆ ನಿತ್ಯವೂ ಬೀಳುವ ಬಿರುಮಳೆಯನ್ನು ಎದುರಿಸುವ ಶಕ್ತಿ ಹೊಮ್ಮುವುದೇ? ಗಂಡ ದಿನವೂ ದೈಹಿಕ ದೌರ್ಜನ್ಯ ಎಸಗುತ್ತಿದ್ದ.' ಮುಂದೆ?

Viral Video: '9 ವರ್ಷದವಳಿದ್ದಾಗ ಅತ್ಯಾಚಾರಕ್ಕೆ ಒಳಗಾದೆ, ಮೊದಲ ಸಲ ಹುಡುಗ ಎರಡನೇ ಸಲ...'
ಮಾಹೀ ಸಂಧು ತನ್ನ ಮಕ್ಕಳೊಂದಿಗೆ
Follow us
ಶ್ರೀದೇವಿ ಕಳಸದ
|

Updated on:Oct 06, 2023 | 12:15 PM

Rape Victim: ನಾನು 9 ವರ್ಷದವಳಿದ್ದೆ. ನಮ್ಮ ಮನೆಯ ಟೆರೇಸ್‌ನಲ್ಲಿ ಕುಳಿತು ಓದುತ್ತಿದ್ದಾಗ ನನ್ನ ಟ್ಯೂಷನ್​ಗೆ ಬರುತ್ತಿದ್ದ ಇಬ್ಬರು ಹುಡುಗರು ನನ್ನನ್ನು ಮತ್ತೊಂದು ಕೋಣೆಗೆ ಎಳೆದೊಯ್ದರು. ನಂತರ ಒಬ್ಬ ಹುಡುಗ ನನ್ನ ಮೇಲೆ ಅತ್ಯಾಚಾರವೆಸಗಿದನು (Rape). ನನಗೆ ಏನಾಗುತ್ತಿದೆ ಎಂದು ತಿಳಿಯಲೇ ಇಲ್ಲ. ಆದರೆ ನನ್ನ ಅಪ್ಪ ಅಮ್ಮ ನನ್ನನ್ನೇ ಬೈದರು. ಮುಂದೆ ನನ್ನ ಅಂಕಲ್​ನಿಂದ ಅತ್ಯಾಚಾರಕ್ಕೆ ಒಳಗಾದೆ, ಸಾಕಷ್ಟು ಬಾರಿ ಒಳಗಾಗುತ್ತಲೇ ಹೋದೆ. ಅಮ್ಮನ ಬಳಿ ಹೇಳಿಕೊಂಡಾಗ, ಅವರು ನಿನ್ನದೇ ತಪ್ಪು ಎಂದು ಕೆನ್ನೆಗೆ ಹೊಡೆದರು. ಏನು ಮಾಡಬೇಕೆಂದು ತೋಚಲಿಲ್ಲ.’

ಇದನ್ನೂ ಓದಿ : Viral Video: ಉತ್ತರ ಪ್ರದೇಶ; ಕಾರ್ಮಿಕನೀಗ ಏಷ್ಯನ್ ಗೇಮ್ಸ್ ಪದಕ ವಿಜೇತ; ರಾಮ್ ಬಾಬೂ ಸ್ಫೂರ್ತಿಪಯಣ

’14 ವರ್ಷದವಳಿದ್ದಾಗ ಮನೆಬಿಟ್ಟು ಹೋಗಿ ಅನಾಥಾಶ್ರಮ ಸೇರಿದೆ. ನನ್ನ ಅಪ್ಪ ಅಮ್ಮ ನನ್ನನ್ನು ಹೇಗೋ ಪತ್ತೆ ಹಚ್ಚಿ ಮನೆಗೆ ಕರೆದುಕೊಂಡು ಬಂದರು. ಆ ದಿನ ಅಪ್ಪ ನನ್ನನ್ನು ಹಾಗೆ ನಿಷ್ಕರುಣೆಯಿಂದ ಹೊಡೆಯಬಹುದು ಎಂದು ಎಣಿಸಿರಲಿಲ್ಲ. ಅದೃಷ್ಟವಶಾತ್ ನನ್ನ ಅಜ್ಜಿ ನನ್ನನ್ನು ರಕ್ಷಿಸಿದರು. ಆದರೆ ನನಗಿಂತ 10 ವರ್ಷ ದೊಡ್ಡವನಾದವನೊಂದಿಗೆ ಮದುವೆ ಮಾಡಿದರು. ಅವನಿಂದ ದೈಹಿಕವಾಗಿ ಸತತ ದೌರ್ಜನ್ಯಕ್ಕೆ ಒಳಗಾದೆ. ಈ ಎಲ್ಲದರ ಮಧ್ಯೆ ಎರಡು ಮಕ್ಕಳ ತಾಯಿಯಾದೆ. ಆದರೆ ನನ್ನ ಮಕ್ಕಳು ಈ ಅನಾಚಾರಕ್ಕೆ ಸಾಕ್ಷಿಯಾಗಬಾರದು ಎಂದು ನಾನು ಮಕ್ಕಳೊಂದಿಗೆ ಮನೆಯನ್ನು ತೊರೆದೆ. ವಿಚ್ಛೇದನ ಪಡೆದೆ. ಸ್ವಾವಲಂಬಿಯಾಗಿ ಬದುಕಬೇಕೆಂದು ನಿರ್ಧರಿಸಿದೆ. ಈಗ ಬ್ಯೂಟಿ ಪಾರ್ಲರ್ ಕೋರ್ಸ್ ಮಾಡುತ್ತಿದ್ದೇನೆ.’ ಮಾಹೀ ಸಂಧು

ಮಾಹಿ ಸಂಧು ಪ್ರಯಾಣ ಇಲ್ಲಿದೆ

officialpeopleofindia ಎಂಬ ಇನ್​ಸ್ಟಾಗ್ರಾಂ ಪುಟದಲ್ಲಿ ಈ ವಿಡಿಯೋ ಪೋಸ್ಟ್ ಮಾಡಲಾಗಿದೆ. 40 ನಿಮಿಷಗಳ ಹಿಂದೆ ಪೋಸ್ಟ್ ಮಾಡಲಾದ ಈ ವಿಡಿಯೋ ಅನ್ನು ಈತನಕ ಸುಮಾರು 34,000 ಜನರು ಲೈಕ್ ಮಾಡಿದ್ದಾರೆ. ನೂರಾರು ಜನರು ಮಾಹೀಯವರ ನಿರ್ಧಾರವನ್ನು ಮತ್ತು ಧೈರ್ಯವನ್ನು ಬೆಂಬಲಿಸಿದ್ದಾರೆ. ದೌರ್ಜನ್ಯಕ್ಕೆ ಒಳಗಾಗುತ್ತ ಗಂಡನೊಂದಿಗೆ ಇರಬೇಕಾದ ದರ್ದು ಏನೂ ಇಲ್ಲ. ಸ್ವತಂತ್ರವಾಗಿ ಜೀವನ ಸಾಗಿಸಲು ಪ್ರಪಂಚ ವಿಶಾಲವಾಗಿದೆ ಎಂದಿದ್ದಾರೆ ಅನೇಕರು. ತಮ್ಮ ಸ್ವಂತ ಮಕ್ಕಳನ್ನು ಅಪ್ಪ ಅಮ್ಮ ಅರ್ಥ ಮಾಡಿಕೊಳ್ಳುವುದೇ ಇಲ್ಲವಲ್ಲ ಎಂದಿದ್ದಾರೆ ಕೆಲವರು. ಏನೇ ಆಗಲಿ ನಿಮಗೆ ಮತ್ತಷ್ಟು ಶಕ್ತಿ ಮತ್ತು ಪ್ರೀತಿ ನಮ್ಮ ಕಡೆಯಿಂದ ಎಂದಿದ್ದಾರೆ ಅನೇಕರು.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 12:12 pm, Fri, 6 October 23

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ