Viral Video: ಸಿಡ್ನಿ; ಹಾಸ್ಟೆಲ್​ನಲ್ಲಿ ಎಲೆಕ್ಟ್ರಿಕ್​ ಬೈಕ್​ ಬ್ಯಾಟರಿ ಸ್ಫೋಟ, ಪಾರಾದ ಪ್ರವಾಸಿಗರು

Sydney: ಸಿಡ್ನಿಯ 70ಕ್ಕೂ ಹೆಚ್ಚು ಪ್ರವಾಸಿಗರು ಇದ್ದ ಪ್ರವಾಸಿ ಹಾಸ್ಟೆಲ್​ನಲ್ಲಿ ಎಲೆಕ್ಟ್ರಿಕ್ ಬೈಕ್ ಸ್ಫೋಟಗೊಂಡಿದೆ. ಅದೃಷ್ಟವಶಾತ್​ ಇಬ್ಬರು ಪ್ರವಾಸಿಗರು ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ವಿಡಿಯೋ ನೋಡಿದ ನೆಟ್ಟಿಗರು ಇ ಬೈಕ್​ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ. ಅನೇಕರು ಭಯಗೊಂಡಿದ್ದಾರೆ. ಪೆಟ್ರೋಲ್ ಉಳಿಸಲು ಹೋಗಿ ಪ್ರಾಣಾಪಾಯ ತಂದುಕೊಳ್ಳುವುದೇ ಎನ್ನುತ್ತಿದ್ದಾರೆ.

Viral Video: ಸಿಡ್ನಿ; ಹಾಸ್ಟೆಲ್​ನಲ್ಲಿ ಎಲೆಕ್ಟ್ರಿಕ್​ ಬೈಕ್​ ಬ್ಯಾಟರಿ ಸ್ಫೋಟ, ಪಾರಾದ ಪ್ರವಾಸಿಗರು
ಸಿಡ್ನಿಯ ಪ್ರವಾಸಿ ಹಾಸ್ಟೆಲ್​ ಒಂದರಲ್ಲಿ ಇ-ಬೈಕ್ ಸ್ಫೋಟಗೊಂಡ ಕ್ಷಣ
Follow us
ಶ್ರೀದೇವಿ ಕಳಸದ
|

Updated on:Oct 06, 2023 | 2:21 PM

Electric Bike: ಇದೀಗ ವೈರಲ್ ಆಗಿರುವ ಈ ವಿಡಿಯೋ ಸಿಡ್ನಿ (Sydney) ಮೂಲದ್ದು. ಇಲ್ಲಿಯ ಪ್ರವಾಸಿ ಹಾಸ್ಟೆಲ್​ ಒಂದರಲ್ಲಿ ಎಲೆಕ್ಟ್ರಿಕ್​ ಬೈಕ್​ನ ಬ್ಯಾಟರಿ ಸ್ಫೋಟಗೊಂಡಿದೆ. ಬೆಂಕಿಯು ಅತಿವೇಗದಲ್ಲಿ ಬಹುಮಹಡಿಯನ್ನು ಆವರಿಸಿದೆ. ಅದೃಷ್ಟವಶಾತ್​ ಇಬ್ಬರು ಪ್ರವಾಸಿಗರು (Backpackers) ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಕಟ್ಟಡದಲ್ಲಿ ವಾಸವಾಗೊದ್ದ 70ಕ್ಕೂ ಹೆಚ್ಚು ಪ್ರವಾಸಿಗರನ್ನು ತಕ್ಷಣವೇ ಬೇರೆಡೆ ಸ್ಥಳಾಂತರಿಸಲಾಗಿದೆ. ಈ ಆಘಾತಕಾರಿ ದೃಶ್ಯವು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ನೋಡಿದ ನೆಟ್ಟಿಗರು ಭಯಗೊಂಡಿದ್ದಾರೆ, ಎಲೆಕ್ಟ್ರಿಕ್​ ಬೈಕ್​ ಬಗ್ಗೆ ಅವರು ಚರ್ಚೆ ನಡೆಸುತ್ತಿದ್ದಾರೆ.

ಇದನ್ನೂ ಓದಿ : Viral Video: ‘9 ವರ್ಷದವಳಿದ್ದಾಗ ಅತ್ಯಾಚಾರಕ್ಕೆ ಒಳಗಾದೆ, ಮೊದಲ ಸಲ ಹುಡುಗ ಎರಡನೇ ಸಲ’ 

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಮ್ಯಾಡ್ ಮಂಕಿ ಡೌನ್‌ಟೌನ್ ಬ್ಯಾಕ್‌ಪ್ಯಾಕರ್ಸ್ ಹಾಸ್ಟೆಲ್‌ನಲ್ಲಿ ಇಬ್ಬರು ಪ್ರವಾಸಿಗರು ತಮ್ಮ ಕೋಣೆಗಳಿಂದ ಹೊರಬರುತ್ತಿದ್ದಾಗ ಇ -ಬೈಕ್‌ನ ಲಿಥಿಯಂ-ಐಯಾನ್ ಬ್ಯಾಟರಿ ಸ್ಫೋಟಗೊಂಡಿದೆ. ಸ್ವಲ್ಪದರಲ್ಲಿಯೇ ಈ ಇಬ್ಬರೂ  ಅಲ್ಲಿಂದ ಓಟಕಿತ್ತಿದ್ದಾರೆ. ತಕ್ಷಣವೇ ಇಬ್ಬರೂ ಓಡಿ ಬಂದು ಕಿಂಗ್ಸ್​ ಕ್ರಾಸ್ ಪೊಲೀಸ್​ ಠಾಣೆಗೆ ಧಾವಿಸಿ ನೆರವು ಕೇಳಿದ್ದಾರೆ. ಈ ಇಬ್ಬರ ಪೈಕಿ ಇಪ್ಪತ್ತರ ಹರೆಯದವನ ಕಾಲು ಸುಟ್ಟ ಗಾಯಗಳಾಗಿವೆ. ಹೆಚ್ಚಿನ ಚಿಕಿತ್ಸೆಗಾಗಿ ವಿನ್ಸೆಂಟ್ ಆಸ್ಪತ್ರೆಗೆ ಸೇರಿಸಲಾಗಿದೆ.

ಎಲೆಕ್ಟ್ರಿಕ್ ಬೈಕ್​ ಸ್ಫೋಟ್​ಗೊಂಡಾಗ…

ತಕ್ಷಣವೇ ಸೌತ್ ವೇಲ್ಸ್​ನ ಅಗ್ನಿಶಾಮಕದಳದ 22 ಸದಸ್ಯರು ಡಾರ್ಲಿಂಗ್‌ಹರ್ಸ್ಟ್ ರಸ್ತೆಗೆ ಬಂದು ಅಗ್ನಿಶಾಮಕ ಬೆಂಕಿಯನ್ನು ಯಶಸ್ವಿಯಾಗಿ ನಂದಿಸಿದ್ದಾರೆ. ಆದರೆ ಕಟ್ಟಡ ಮಾತ್ರ ಸಾಕಷ್ಟು ಹಾನಿಗೊಳಗಾಗಿದೆ. ಈ ಘಟನೆಯ ಕುರಿತು ಪೊಲೀಸರು ತನಿಖೆ ನಡೆಸಿದಾಗ, ಇ-ಬೈಕ್​ನ ದೋಷಪೂರಿತ ಬ್ಯಾಟರಿಯೇ ಕಾರಣ ಎನ್ನುವುದು ತಿಳಿದುಬಂದಿದೆ.

ಇದನ್ನೂ ಓದಿ : Viral Video: ಎಸಿಡ್​ ದಾಳಿ; ‘ಅವರು ಕಣ್ಣಿಟ್ಟಿದ್ದು ನನ್ನ ಸ್ನೇಹಿತೆಯ ಮೇಲೆ, ಗುರಿಯಾಗಿದ್ದು ನಾನು’

ಈ ವಿಡಿಯೋ ನೋಡಿದ ನೆಟ್ಟಿಗರು, ಹಾಸ್ಟೆಲ್​ನ ಒಳಗೆ ಯಾಕೆ ಈ ಬೈಕ್​ ಇಡಲಾಗಿತ್ತು. ಪೆಟ್ರೋಲ್​ ಹಣ ಉಳಿಸಲು ಹೋದರೆ ಹೀಗೇ.. ಇದು ಯಾವ ಬೈಕ್​, ದಯವಿಟ್ಟು ಹೇಳಿ. ಇದರಿಂದ ಉಂಟಾಗುವ ಅಪಘಾತವನ್ನು ತಪ್ಪಿಸಲು ಅನುಕೂಲವಾಗುತ್ತದೆ… ಅಂತೆಲ್ಲ ಪ್ರತಿಕ್ರಿಯಿಸಿದ್ದಾರೆ.

ಇದನ್ನು ಓದಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 2:17 pm, Fri, 6 October 23

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ