Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಎಸಿಡ್​ ದಾಳಿ; ‘ಅವರು ಕಣ್ಣಿಟ್ಟಿದ್ದು ನನ್ನ ಸ್ನೇಹಿತೆಯ ಮೇಲೆ, ಗುರಿಯಾಗಿದ್ದು ನಾನು’

Acid Attack Victim: 'ಇಂಥವಳನ್ನು ಇನ್ನು ಯಾರು ಮದುವೆಯಾಗುತ್ತಾರೆ, ಇವಳ ಬದುಕು ಮುಂದೆ ಹೇಗಿರುತ್ತದೆಯೋ... ಅಂತೆಲ್ಲ ನನ್ನ ಸಂಬಂಧಿಕರು ಮಾತನಾಡಿಕೊಂಡರು. ಆದರೆ ನಾನು ಧೃತಿಗೆಡಲಿಲ್ಲ. ಮಾಸ್ಟರ್ಸ್​ ಓದಿ ಸಪ್ಲೈ ಚೈನ್​ ಅನಲಿಸ್ಟ್ ಆಗಿ ಕೆಲಸ ಮಾಡುತ್ತಿದ್ದೇನೆ. ಜೀವನದಲ್ಲಿ ಏನೂ ಆಗಬಹುದು, ಆದರೆ ಎಂದೂ ಧೃತಿಗೆಡಬಾರದು. ಆತ್ಮವಿಶ್ವಾಸವೊಂದೇ ಜೀವದ್ರವ್ಯ.'

Viral Video: ಎಸಿಡ್​ ದಾಳಿ; 'ಅವರು ಕಣ್ಣಿಟ್ಟಿದ್ದು ನನ್ನ ಸ್ನೇಹಿತೆಯ ಮೇಲೆ, ಗುರಿಯಾಗಿದ್ದು ನಾನು'
ಎಸಿಡ್ ದಾಳಿಗೆ ತುತ್ತಾದ ಪ್ರೇರಣಾ ಗಾಂಧೀ
Follow us
ಶ್ರೀದೇವಿ ಕಳಸದ
|

Updated on: Oct 05, 2023 | 4:22 PM

Acid Attack: ‘ನನಗಾಗ 13 ವರ್ಷ. ಒಂದು ದಿನ ಟ್ಯೂಷನ್​ ಮುಗಿಸಿ ನನ್ನ ಸ್ನೇಹಿತೆಯೊಂದಿಗೆ ಮನೆಗೆ ಮರಳುತ್ತಿದ್ದೆ. ಇದ್ದಕ್ಕಿದ್ದಂತೆ ಬಂದ ದುಷ್ಕರ್ಮಿಗಳು ನನ್ನ ಮೇಲೆ ಎಸಿಡ್ ದಾಳಿ ನಡೆಸಿದರು. ಹಾಗೆ ನೋಡಿದರೆ ಅವರು ಕಣ್ಣಿಟ್ಟದ್ದು ನನ್ನ ಸ್ನೇಹಿತೆಯ ಮೇಲೆ ಆದರೆ ಗುರಿಯಾಗಿದ್ದು ನಾನು. ನನ್ನ ಅರ್ಧದೇಹ ಸುಟ್ಟು ಉರಿಯತೊಡಗಿತು. ತಕ್ಷಣವೇ ಆಸ್ಪತ್ರೆಗೆ ಸೇರಿಸಲಾಯಿತು. ಶೇ. 70 ರಷ್ಟು ದೇಹ ಸುಟ್ಟುಹೋಗಿತ್ತು. ಒಂದು ವಾರದ ನಂತರ ನನ್ನ ಮುಖವನ್ನು ಕನ್ನಡಿಯಲ್ಲಿ ನೋಡಿಕೊಂಡು ನನಗೇ ಭಯವಾಯಿತು. ಮುಖ ದೇಹದ ತುಂಬಾ 50ರಿಂದ 55 ಸರ್ಜರಿಗಳಾದವು. ಶಾಲೆಗೆ ಹೋಗಲು ಅಸಹ್ಯವೆನ್ನಿಸಿತು. ಆದರೆ ನನ್ನ ಪೋಷಕರ, ಸ್ನೇಹಿತರ ಬೆಂಬಲದಿಂದ (Support) ಶಾಲೆಗೆ ಹೋದೆ. ದೇವರೇ ನನಗೇ ಯಾಕೆ ಇದೆಲ್ಲ? ಎಂದು ಕೇಳಿದೆ.’

ಇದನ್ನೂ ಓದಿ : Viral Video: ಸ್ಪೇಸ್ ಕಾಫಿ; ಬಾಹ್ಯಾಕಾಶದಲ್ಲಿ ವಿಶೇಷ ಕಪ್​ನಲ್ಲಿ ಕಾಫಿ ಕುಡಿದ ಗಗನಯಾತ್ರಿ

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

‘ಎಸಿಡ್ ದಾಳಿ ನಡೆಸಿದ ದುಷ್ಕರ್ಮಿಯನ್ನು ಎರಡು ವರ್ಷಗಳ ನಂತರ ಪೊಲೀಸರು ಬಂಧಿಸಿದರು. ಇದೆಲ್ಲ ನಡೆದು ಇದೀಗ ಹತ್ತು ವರ್ಷಗಳು ಕಳೆದವು. ಮಾಸ್ಟರ್ಸ್​ ಮುಗಿಸಿ ಸಪ್ಲೈ ಚೈನ್​ ಅನಲಿಸ್ಟ್ ಆಗಿ ಕೆಲಸ ಮಾಡುತ್ತಿದ್ದೇನೆ. ಇಂಥವಳನ್ನು ಯಾರು ಮದುವೆಯಾಗುತ್ತಾರೆ? ಎಂದು ಅಂದಿನಿಂದ ಇಂದಿನವರೆಗೂ ಅಂದವರ ಮಾತುಗಳೆಲ್ಲ ನೆನಪಿನಲ್ಲಿವೆ. ಆದರೆ ಒಂದು ಮಾತ್ರ ನಿಜ. ಯಾವಾಗ ಬೇಕಾದರೂ ಬದುಕಿನಲ್ಲಿ ಏನೂ ಆಗಬಹುದು. ಬದುಕುವ ಛಲ, ಆತ್ಮವಿಶ್ವಾಸ ಕಳೆದುಕೊಳ್ಳಬಾರದು.’ ಪ್ರೇರಣಾ ಗಾಂಧಿ

ಪ್ರೇರಣಾ ಗಾಂಧಿ ಪ್ರಯಾಣ

ಈ ವಿಡಿಯೋ ಅನ್ನು officialpeopleofindia ಎಂಬ ಇನ್​ಸ್ಟಾಗ್ರಾಂ ಪುಟದಲ್ಲಿ ಪೋಸ್ಟ್ ಮಾಡಲಾಗಿದೆ. ಅನೇಕರು ಈ ವಿಡಿಯೋಗೆ ಪ್ರತಿಕ್ರಿಯಿಸಿದ್ದಾರೆ. ಹೇಯ್ ಹುಡುಗಿ ನೀವು ಈಗ ಹೇಗಿದ್ದೀರೋ ಹಾಗೆ ನೋಡಲು ಕೂಡ ಖುಷಿ ಎನ್ನಿಸುತ್ತಿದೆ. ನಿಮ್ಮ ಮುಖದಲ್ಲಿ ಹೆಚ್ಚು ಆತ್ಮವಿಶ್ವಾಸವಿದೆ, ನಿಮ್ಮ ಭವಿಷ್ಯ ಉಜ್ವಲವಾಗಿದೆ ಎಂದಿದ್ದಾರೆ ಒಬ್ಬರು. ಸೌಂದರ್ಯ ಎನ್ನುವುದು ಅಂತರಿಕ, ಅದು ನಿಮ್ಮ ಹೋರಾಟದ ಹೆಜ್ಜೆಗಳಲ್ಲಿ ವೃದ್ಧಿಸುತ್ತಾ ಹೋಗುತ್ತದೆ. ನಿಮ್ಮ ಮುಖದ ಮೇಲೆ ಅದು ಪ್ರಜ್ವಲಿಸುತ್ತಿದೆ ಎಂದಿದ್ದಾರೆ ಮತ್ತೊಬ್ಬರು.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

ಕೇಕ್ ಕಟ್ ಮಾಡಿ ಮೊದಲ ಪೀಸನ್ನು ಶಿವಕುಮಾರ್​ಗೆ ನೀಡಿದ ಸಿದ್ದರಾಮಯ್ಯ
ಕೇಕ್ ಕಟ್ ಮಾಡಿ ಮೊದಲ ಪೀಸನ್ನು ಶಿವಕುಮಾರ್​ಗೆ ನೀಡಿದ ಸಿದ್ದರಾಮಯ್ಯ
ಮ್ಯಾಜಿಸ್ಟ್ರೇಟ್ 50,000 ರೂ. ಲಂಚ ಕೇಳಿದ್ದಕ್ಕೆ ಮರ ಹತ್ತಿದ ವೃದ್ಧೆ!
ಮ್ಯಾಜಿಸ್ಟ್ರೇಟ್ 50,000 ರೂ. ಲಂಚ ಕೇಳಿದ್ದಕ್ಕೆ ಮರ ಹತ್ತಿದ ವೃದ್ಧೆ!
ಮತ್ತೆ ಜೈಲಿಗೆ ಹೋದ ರಜತ್ ಬಗ್ಗೆ ಕೇಳಿದ್ದಕ್ಕೆ ವಿನಯ್ ಗೌಡ ಹೇಳಿದ್ದೇನು?
ಮತ್ತೆ ಜೈಲಿಗೆ ಹೋದ ರಜತ್ ಬಗ್ಗೆ ಕೇಳಿದ್ದಕ್ಕೆ ವಿನಯ್ ಗೌಡ ಹೇಳಿದ್ದೇನು?
ಸಂಪುಟ ಪುನಾರಚನೆ ಹೈಕಮಾಂಡ್ ವಿವೇಚನೆಗೆ ಬಿಟ್ಟ ವಿಷಯವಾಗಿದೆ: ಸಚಿವ
ಸಂಪುಟ ಪುನಾರಚನೆ ಹೈಕಮಾಂಡ್ ವಿವೇಚನೆಗೆ ಬಿಟ್ಟ ವಿಷಯವಾಗಿದೆ: ಸಚಿವ
ಮನೋಹರ್, ಹನುಮಂತರಾಯಪ್ಪ, ವೆಂಕಟೇಶ್ ನೇತೃತ್ವದಲ್ಲಿ ಪ್ರತಿಭಟನೆ
ಮನೋಹರ್, ಹನುಮಂತರಾಯಪ್ಪ, ವೆಂಕಟೇಶ್ ನೇತೃತ್ವದಲ್ಲಿ ಪ್ರತಿಭಟನೆ
ಪೋಷಕರಲ್ಲಿ ನಿರಾಳತೆ ಉಂಟು ಮಾಡಿದ ಸರ್ಕಾರದ ನಿರ್ಧಾರ
ಪೋಷಕರಲ್ಲಿ ನಿರಾಳತೆ ಉಂಟು ಮಾಡಿದ ಸರ್ಕಾರದ ನಿರ್ಧಾರ
ಆಟೋಗ್ರಾಫ್ ಕೇಳುವವರೆ ಇರಲಿಲ್ಲ.. ಈಗ ಕ್ಯೂ ನಿಲ್ಲುತ್ತಿದ್ದಾರೆ; ಜಿತೇಶ್
ಆಟೋಗ್ರಾಫ್ ಕೇಳುವವರೆ ಇರಲಿಲ್ಲ.. ಈಗ ಕ್ಯೂ ನಿಲ್ಲುತ್ತಿದ್ದಾರೆ; ಜಿತೇಶ್
ಸರ್ಕಾರಗಳು ನಮ್ಮ ಬವಣೆಯನ್ನು ಅರ್ಥಮಾಡಿಕೊಳ್ಳಬೇಕು: ಲಾರಿ ಮಾಲೀಕ
ಸರ್ಕಾರಗಳು ನಮ್ಮ ಬವಣೆಯನ್ನು ಅರ್ಥಮಾಡಿಕೊಳ್ಳಬೇಕು: ಲಾರಿ ಮಾಲೀಕ
ವರದಿಯಲ್ಲಿರುವ ಶಿಫಾರಸ್ಸುಗಳನ್ನು ಸರ್ಕಾರ ತಿರಸ್ಕರಿಸಬಹುದಾಗಿದೆ: ಖರ್ಗೆ
ವರದಿಯಲ್ಲಿರುವ ಶಿಫಾರಸ್ಸುಗಳನ್ನು ಸರ್ಕಾರ ತಿರಸ್ಕರಿಸಬಹುದಾಗಿದೆ: ಖರ್ಗೆ
Video: ವೇಗವಾಗಿ ಬಂದು ವಾಹನಗಳ ಮೇಲೆ ಹರಿದ ಬಸ್, ಮೂವರು ಸಾವು
Video: ವೇಗವಾಗಿ ಬಂದು ವಾಹನಗಳ ಮೇಲೆ ಹರಿದ ಬಸ್, ಮೂವರು ಸಾವು