ಹಾವನ್ನು ರಕ್ಷಿಸಿದ್ದು ಉತ್ತಮ ಕೆಲಸವೇ ಆದರೆ ಅದನ್ನು ಅರಣ್ಯ ಇಲಾಖೆಗೆ ತೆಗೆದುಕೊಂಡ ರೀತಿ ಮಾತ್ರ ದಿಗಿಲು ಮೂಡಿಸುವಂಥದ್ದು!
ಲಭ್ಯವಿರುವ ಮಾಹಿತಿಯ ಪ್ರಕಾರ ಹಾವನ್ನು ಭರೂಚ್ ಪಟ್ಟಣದ ಸ್ಟೇಶನ್ ರಸ್ತೆಯಲ್ಲಿರುವ ಶಾಪಿಂಗ್ ಮಾಲೊಂದರ ಬಳಿ ಉರಗ ತಜ್ಞನಾಗಿರುವ ಯುವಕ ರಕ್ಷಿಸಿ ಅದನ್ನು ಅರಣ್ಯ ಇಲಾಖೆಯವರಿಗೆ ಒಪ್ಪಿಸಲು ಹೀಗೆ ಸ್ಕೂಟರ್ ಮೇಲೆ ತೆಗೆದುಕೊಂಡು ಹೋಗುತ್ತಿದ್ದಾನೆ. ಜೀವಂತ ಹಾವು ಹಾಗೆ ಹೊಯ್ದಾಡುವುದನ್ನು ನೋಡಿ ರಸ್ತೆಯಲ್ಲಿದ್ದ ಜನ ಹೆದರದಿರುತ್ತಾರೆಯೇ?
ಭರೂಚ್: ಇದು ಹುಚ್ಚುತನಲ್ಲದೆ ಮತ್ತೇನು ಸ್ವಾಮಿ? ಗುಜರಾತಿನ ಭರೂಚ್ ನಗರದ (Bharuch city) ಪುರಸಭೆ ವ್ಯಾಪ್ತಿಯಲ್ಲಿ ದ್ವಿಚಕ್ರವಾಹನವೊಂದರ ಮೇಲೆ ಪಿಲಿಯನ್ ರೈಡರ್ (pillion rider) ಯುವಕನೊಬ್ಬ ತನ್ನ ಬಲಗೈಯಲ್ಲಿ ಹಾವು ಹಿಡಿದುಕೊಂಡು ಹೋಗುತ್ತಿರುವ ದೃಶ್ಯ ವೈರಲ್ ಆಗಿದೆ ಮಾರಾಯ್ರೇ. ಕೈಯಲ್ಲಿ ಹಾವನ್ನು ಹಿಡಿದಿರುವ ಯುವಕ ಉರಗ ತಜ್ಞನೇ (snake expert) ಆಗಿರಬಹುದು, ಅದರೆ ದಾರಿಹೋಕರು ಮತ್ತು ಆ ರಸ್ತೆಯಲ್ಲಿ ಸಂಚರಿಸುತ್ತಿದ್ದ ವಾಹನ ಚಾಲಕರಲ್ಲಿ ಈ ದೃಶ್ಯ ಬೆನ್ನಹುರಿಯಲ್ಲಿ ನಡುಕ ಸೃಷ್ಟಿಸಿದ್ದು ಸುಳ್ಳಲ್ಲ. ಅವನು ಹಾವು ಹಿಡಿದಿರುವ ರೀತಿ ನೋಡಿದರೆ, ಅವನಿಗೆ ಮತ್ತು ಸ್ಕೂಟರ್ ಓಡಿಸುತ್ತಿದ್ದವನಿಗೂ ಅಪಾಯ ಎದುರಾಗಬಹುದಾದ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.
ಭರೂಚ್ ನಗರದ ಪ್ರಾಣಿದಯಾ ಸಂಘದ ಸದಸ್ಯ ಆಶಿಷ್ ಶರ್ಮ ಹೇಳುವ ಪ್ರಕಾರ ಮಳೆಗಾಲದ ಸೀಸನಲ್ಲಿ ಹಾವುಗಳು ಚರಂಡಿಗಳ ನೀರಿನಲ್ಲಿ ಹರಿದು ಬಂದು ಜನವಸತಿ ಪ್ರದೇಶಗಳನ್ನು ಪ್ರವೇಶಿಸುತ್ತವೆ. ಹಾಗೆ ಬರುವ ಹಾವುಗಳಲ್ಲಿ ಹೆಚ್ಚಿನವು ರ‍್ಯಾಟಲ್ ಪ್ರಭೇದಕ್ಕೆ ಸೇರಿದ ಹಾವುಗಳಾಗಿರುತ್ತವೆ ಎಂದು ಶರ್ಮ ಹೇಳುತ್ತಾರೆ. ಉರಗ ತಜ್ಞರು ಅವುಗಳನ್ನು ಹಿಡಿದು ಅರಣ್ಯ ಇಲಾಖೆ ಸಿಬ್ಬಂದಿಗೆ ಒಪ್ಪಿಸುತ್ತಾರೆ ಇಲ್ಲವೇ ಹಾವು ಮತ್ತು ಮಾನವರಿಗೆ ಇಬ್ಬರಿಗೂ ಸುರಕ್ಷಿತವಾಗಿರುವ ಅರಣ್ಯಪ್ರದೇಶಗಳಲ್ಲಿ ಬಿಡುತ್ತಾರೆ.
ಆದರೆ ಸರೀಸೃಪವನ್ನು ಹೀಗೆ ಓಪನ್ನಾಗಿ ದ್ವಿಚಕ್ರ ವಾಹನದ ಮೇಲೆ ತೆಗೆದುಕೊಂಡು ಹೋಗುವುದು ಖಂಡನೀಯ. ನಮಗೆ ಲಭ್ಯವಿರುವ ಮಾಹಿತಿಯ ಪ್ರಕಾರ ಹಾವನ್ನು ಭರೂಚ್ ಪಟ್ಟಣದ ಸ್ಟೇಶನ್ ರಸ್ತೆಯಲ್ಲಿರುವ ಶಾಪಿಂಗ್ ಮಾಲೊಂದರ ಬಳಿ ಉರಗ ತಜ್ಞನಾಗಿರುವ ಯುವಕ ರಕ್ಷಿಸಿ ಅದನ್ನು ಅರಣ್ಯ ಇಲಾಖೆಯವರಿಗೆ ಒಪ್ಪಿಸಲು ಹೀಗೆ ಸ್ಕೂಟರ್ ಮೇಲೆ ತೆಗೆದುಕೊಂಡು ಹೋಗುತ್ತಿದ್ದಾನೆ. ಜೀವಂತ ಹಾವು ಹಾಗೆ ಹೊಯ್ದಾಡುವುದನ್ನು ನೋಡಿ ರಸ್ತೆಯಲ್ಲಿದ್ದ ಜನ ಹೆದರದಿರುತ್ತಾರೆಯೇ?
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಕಾರಿಗೆ ಲಾರಿ ಡಿಕ್ಕಿ, ವಿಡಿಯೋ ನೋಡಿ

ಉತ್ತರ ಕರ್ನಾಟಕದ ಹುಲಿಗೆ ಜೈ: ಹಂಪಿ ಉತ್ಸವದಲ್ಲಿ ಹನುಮಂತನಿಗೆ ಜೈಕಾರ

ಶಿವಕುಮಾರ್ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾದರೇನು ತಪ್ಪು? ಜಾರಕಿಹೊಳಿ

ಜಮೀರ್ ಅಹ್ಮದ್ ಆಡುವ ಮಾತಿಗೆ ಯಾವುದೇ ಬೆಲೆ ಇಲ್ಲ: ಜಗದೀಶ್ ಶೆಟ್ಟರ್
