AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: 406 ಚಿತ್ರಗಳು 26 ದಿನಗಳು; 65 ಮಿಲಿಯನ್​ ಜನರು ನೋಡಿದ ಚಮ್ಮಕ್ ಚಲ್ಲೋ ಡ್ಯಾನ್ಸ್​

Chammak Challo: ಅಭಿರಾಮ ಎಂಬ ಕಲಾವಿದರು 26 ದಿನಗಳಲ್ಲಿ 406 ಫ್ರೇಮ್​​ಗಳಲ್ಲಿ ಈ ಬೆಡಗಿಯನ್ನು ಹಿಡಿದಿಟ್ಟಿದ್ದಾರೆ. ನಂತರ ಚಮ್ಮಕ್​ ಚಲ್ಲೋ ಡ್ಯಾನ್ಸ್​ಗೆ ಈಕೆಯಿಂದ ಹೆಜ್ಜೆ ಹಾಕಿಸಿದ್ದಾರೆ. ಹತ್ತು ಮಿಲಿಯನ್​ ಜನರು ಈ ವಿಡಿಯೋ ಲೈಕ್ ಮಾಡಿದ್ದು ಲಕ್ಷಾಂತರ ಜನರು ಕಲಾವಿದರ ಶ್ರಮ, ತಾಳ್ಮೆಯನ್ನು ಅಪಾರವಾಗಿ ಶ್ಲಾಘಿಸಿದ್ದಾರೆ. ಈ ವಿಡಿಯೋ ನೋಡಿದ ನೀವು ಏನಂತೀರಿ?

Viral Video: 406 ಚಿತ್ರಗಳು 26 ದಿನಗಳು; 65 ಮಿಲಿಯನ್​ ಜನರು ನೋಡಿದ ಚಮ್ಮಕ್ ಚಲ್ಲೋ ಡ್ಯಾನ್ಸ್​
ಚಿತ್ರಕಲಾವಿದ ಅಭಿರಾಮರ ಚಮ್ಮಕ ಚಲ್ಲೋ ಡ್ಯಾನ್ಸ್​ ವರ್ಷನ್​
ಶ್ರೀದೇವಿ ಕಳಸದ
|

Updated on: Oct 09, 2023 | 1:37 PM

Share

Art: ಈ ಹಾಡು ಕೇಳಿದ ಮೇಲೆ ಮತ್ತು ಈ ಕಲೆಯನ್ನು ನೋಡಿದ ಮೇಲೆ ನಿಮ್ಮಷ್ಟಕ್ಕೆ ನೀವು ಗಂಭೀರವಾಗಿರಲು ಸಾಧ್ಯವೇ ಇಲ್ಲ ಎಂದಿದ್ಧಾರೆ ಈ ವಿಡಿಯೋ ನೋಡಿದ ನೆಟ್ಟಿಗರೊಬ್ಬರು. ಕಲಾವಿದರೊಬ್ಬರು 406 ಫ್ರೇಮ್​ಗಳನ್ನು 26 ದಿನಗಳ ಕಾಲ ರಚಿಸಿ ಚಿತ್ರದೊಳಗಿನ ಬೆಡಗಿ ಚಮ್ಮಕ್​ ಚಲ್ಲೋ ಟ್ರ್ಯಾಕ್​ಗೆ (Chammak Challo Track) ಡ್ಯಾನ್ಸ್ ಮಾಡುವಂತೆ ಮಾಡಿದ್ದಾರೆ. ಇದೀಗ ವೈರಲ್ ಆಗುತ್ತಿರುವ ಈ ವಿಡಿಯೋ ನೋಡಿದ ನೆಟ್ಟಿಗರು ಕಲಾವಿದನ ಜಾಣ್ಮೆಯನ್ನು ಶ್ಲಾಘಿಸುತ್ತಿದ್ದಾರೆ. ಚಮ್ಮಕ್ ಚಲ್ಲೋ ಹಾಡು ರಾ ಒನ್​ ಸಿನೆಮಾದ್ದು. ಶಾರುಖ್ ಖಾನ್ ಮತ್ತು ಕರೀನಾ ಕಪೂರ್ ಈ ಚಿತ್ರದಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ : Viral Video: ನ್ಯೂಯಾರ್ಕ್​; ಜಗತ್ತಿನ ಅತ್ಯಂತ ಶಕ್ತಿಶಾಲಿ ಕುತ್ತಿಗೆ ಹೊಂದಿದ ವ್ಯಕ್ತಿ ಇಲ್ಲಿದ್ದಾನೆ!

ಈ ವಿಡಿಯೋ ಅನ್ನು ಸೆ. 30ರಂದು ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್​ ಮಾಡಲಾಗಿದ್ದು, ಈ ತನಕ 65 ಮಿಲಿಯನ್​ ಜನರು ನೋಡಿದ್ದಾರೆ. 10 ಮಿಲಿಯನ್​ ಜನರು ಲೈಕ್ ಮಾಡಿದ್ದಾರೆ. ಲಕ್ಷಾಂತರ ಜನರು ಕಲಾವಿದನ ಪ್ರತಿಭೆಗೆ ಶಭಾಷ್​ ಹೇಳಿದ್ದಾರೆ. ಇದು ಶ್ರಮದಿಂದ ಮಾಡಿದ ಕಲೆ, ಕಲಾವಿದನ ತಾಳ್ಮೆಗೆ ಶರಣು ಎಂದಿದ್ದಾರೆ ಅನೇಕರು.

ಚಮ್ಮಕ ಚಲ್ಲೋ ಬೆಡಗಿಯನ್ನು ನೋಡಿ

View this post on Instagram

A post shared by Abhiram (@_.abhiramm._)

ಕಲಾವಿದ ಅಭಿರಾಮ್ ಇನ್‌ಸ್ಟಾಗ್ರಾಮ್‌ನಲ್ಲಿ ಈ ವಿಡಿಯೋ ಹಂಚಿಕೊಂಡು, ‘ಚಮ್ಮಕ್ ಚಲ್ಲೋ ಆರ್ಟಿಸ್ಟ್ ವರ್ಷನ್​’ ಎಂಬ ಒಕ್ಕಣೆ ಬರೆದಿದ್ದಾರೆ. 406 ಫ್ರೇಮ್‌ಗಳನ್ನು 26 ದಿನಗಳಲ್ಲಿ ಮುಗಿಸಿ ನಂತರ ಈ ಸ್ಥಿರ ಚಿತ್ರಗಳಿಗೆ ಚಲನೆ ಒದಗಿಸಲಾಗಿದೆ. ಈ ವಿಡಿಯೋ ಅನ್ನು ಸೆ. 30 ರಂದು Instagram ನಲ್ಲಿ ಹಂಚಿಕೊಳ್ಳಲಾಗಿದೆ. ಅದ್ಭುತವಾದ ಕಲೆ ಇದು ಎಂದಿದ್ದಾರೆ ಒಬ್ಬರು. ಇಂದಿನ ಪ್ರಭಾವಿ ಕಲಾವಿದರ ಕಲೆಗಿಂತ ನಿಮ್ಮ ಕಲೆ ಬಹಳ ಚೆನ್ನಾಗಿದೆ ಎಂದಿದ್ದಾರೆ ಇನ್ನೊಬ್ಬರು.

ಇದನ್ನೂ ಓದಿ : Viral Video: ಸಾಬೂನು ತಿನ್ನುತ್ತಿರುವ ಯುವತಿ; ಹೊಟ್ಟೆಯಲ್ಲಿ ನೊರೆಗುಳ್ಳೆಗಳೆದ್ದವೋ? ಎಂದ ನೆಟ್ಟಿಗರು

ನನ್ನ ಕಣ್ಣು ನೋಯುವಷ್ಟು ಸಲ ನಾನು ಈ ವಿಡಿಯೋ ನೋಡಿದ್ದೇನೆ ಎಂದಿದ್ದಾರೆ ಮತ್ತೊಬ್ಬರು. ಎಂಥಾ ಪ್ರತಿಭೆ ಸಹೋದರ ಎಂದಿದ್ದಾರೆ ಇನ್ನೊಬ್ಬರು. ನಿಜಕ್ಕೂ ಈ ಕಲೆಯನ್ನು ನೋಡಿ ನನ್ನ ದಿನ ಸಾರ್ಥಕವಾಯಿತು ಎಂದಿದ್ದಾರೆ ಇನ್ನೂ ಒಬ್ಬರು.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Follow Us
ಶ್ರೀನಂದಾ ಸಾವು ಕಾಲು ಜಾರಿ ಬಿದ್ದಿದ್ದಾ ಅಥವಾ ಕೊಲೆಯೇ?
ಶ್ರೀನಂದಾ ಸಾವು ಕಾಲು ಜಾರಿ ಬಿದ್ದಿದ್ದಾ ಅಥವಾ ಕೊಲೆಯೇ?
ರಾಜ್ಯಸಭಾ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಿದ ಬಿಹಾರ ಸಿಎಂ ನಿತೀಶ್ ಕುಮಾರ್
ರಾಜ್ಯಸಭಾ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಿದ ಬಿಹಾರ ಸಿಎಂ ನಿತೀಶ್ ಕುಮಾರ್
ಪಡಿಕ್ಕಲ್, ಕೊಹ್ಲಿ ಬಾಲ್ಯದಲ್ಲಿ ಹೇಗಿದ್ರು ನೋಡಿ
ಪಡಿಕ್ಕಲ್, ಕೊಹ್ಲಿ ಬಾಲ್ಯದಲ್ಲಿ ಹೇಗಿದ್ರು ನೋಡಿ
ತೆಂಗಿನಕಾಯಿ ಬೆಳೆಗಾರರಿಗೆ ಜಾಕ್​​ಪಾಟ್​​: ದಾಖಲೆ ಬರೆದ ಕೊಬ್ಬರಿ ಬೆಲೆ
ತೆಂಗಿನಕಾಯಿ ಬೆಳೆಗಾರರಿಗೆ ಜಾಕ್​​ಪಾಟ್​​: ದಾಖಲೆ ಬರೆದ ಕೊಬ್ಬರಿ ಬೆಲೆ
'ಝೋಂಬಿ ಡ್ರಗ್ಸ್​ ಎನ್ನುವುದು ಏನೂ ಇಲ್ಲ': ಗೃಹ ಸಚಿವ ಪರಮೇಶ್ವರ್
'ಝೋಂಬಿ ಡ್ರಗ್ಸ್​ ಎನ್ನುವುದು ಏನೂ ಇಲ್ಲ': ಗೃಹ ಸಚಿವ ಪರಮೇಶ್ವರ್
ನಾಪತ್ತೆಯಾದ ಬಾಲಕಿಯ ಕಿಡ್ನ್ಯಾಪ್ ಶಂಕೆ ವ್ಯಕ್ತಪಡಿಸಿದ ಜಿ. ಪರಮೇಶ್ವರ್!
ನಾಪತ್ತೆಯಾದ ಬಾಲಕಿಯ ಕಿಡ್ನ್ಯಾಪ್ ಶಂಕೆ ವ್ಯಕ್ತಪಡಿಸಿದ ಜಿ. ಪರಮೇಶ್ವರ್!
ದೇವರಿಗೆ ಕೈ ಮುಗಿದು, ಕುಂಕುಮ ಹಚ್ಚಿಕೊಂಡು ಹುಂಡಿ ಹಣ ಕದ್ದ ಕಳ್ಳ!
ದೇವರಿಗೆ ಕೈ ಮುಗಿದು, ಕುಂಕುಮ ಹಚ್ಚಿಕೊಂಡು ಹುಂಡಿ ಹಣ ಕದ್ದ ಕಳ್ಳ!
ಎಲೆಕ್ಟ್ರಾನಿಕ್ ಸಿಟಿಯ ನೀಲಾದ್ರಿ ರಸ್ತೆಯಲ್ಲಿ ಸಂಚರಿಸುವುದು ನರಕಯಾತನೆ
ಎಲೆಕ್ಟ್ರಾನಿಕ್ ಸಿಟಿಯ ನೀಲಾದ್ರಿ ರಸ್ತೆಯಲ್ಲಿ ಸಂಚರಿಸುವುದು ನರಕಯಾತನೆ
ಚಿಕ್ಕಮಗಳೂರಲ್ಲಿ ಬಾಲಕಿ ನಾಪತ್ತೆ ಕೇಸ್​: 3 ದಿನ ಕಳೆದರೂ ಸಿಕ್ಕಿಲ್ಲ ಸುಳಿವು
ಚಿಕ್ಕಮಗಳೂರಲ್ಲಿ ಬಾಲಕಿ ನಾಪತ್ತೆ ಕೇಸ್​: 3 ದಿನ ಕಳೆದರೂ ಸಿಕ್ಕಿಲ್ಲ ಸುಳಿವು
ಫಾಸ್ಟ್‌ಟ್ಯಾಗಲ್ಲಿ ಹಣವಿಲ್ಲದ್ದಕ್ಕೆ ಹಿಗ್ಗಾಮುಗ್ಗಾ ಥಳಿತ! ವಿಡಿಯೋ ವೈರಲ್
ಫಾಸ್ಟ್‌ಟ್ಯಾಗಲ್ಲಿ ಹಣವಿಲ್ಲದ್ದಕ್ಕೆ ಹಿಗ್ಗಾಮುಗ್ಗಾ ಥಳಿತ! ವಿಡಿಯೋ ವೈರಲ್