Viral Video: ಮುಂಬೈ ಲೋಕಲ್​ ಟ್ರೇನ್​; ಸ್ವಯಂಚಾಲಿತ ಬಾಗಿಲು ತೆರೆಯುವ ಮೊದಲೇ ನುಗ್ಗಿದ ಪ್ರಯಾಣಿಕರು

Local Train: ಸ್ವಯಂಚಾಲಿತ ಬಾಗಿಲುಗಳನ್ನು ಹೀಗೆ ಆಕ್ರಮಣಕಾರಿಯಾಗಿ ತೆರೆದು ಒಳನುಗ್ಗುತ್ತಿರುವ ಮುಂಬೈಕರ್ ದೃಶ್ಯ ನಿಜಕ್ಕೂ ಭಯ ತರಿಸುವಂತಿದೆ ಎಂದಿದ್ದಾರೆ ನೆಟ್ಟಿಗರಲ್ಲಿ ಕೆಲವರು. ನಿತ್ಯವೂ ನಾವೂ ಹೀಗೆಯೇ ಪ್ರಯಾಣಿಸುವುದು ಗತ್ಯಂತರವಿಲ್ಲ. ನಮ್ಮ ಕೈಕಾಲು ಹೊಟ್ಟೆ ಬೆನ್ನು ಬಿದ್ದು ಹೋಗುತ್ತವೆ ಎಂದಿದ್ದಾರೆ ಕೆಲ ಮುಂಬೈಕರ್​ಗಳು. ಈ ವಿಡಿಯೋ ನೋಡಿದ ನೀವೇನಂತೀರಿ?

Viral Video: ಮುಂಬೈ ಲೋಕಲ್​ ಟ್ರೇನ್​; ಸ್ವಯಂಚಾಲಿತ ಬಾಗಿಲು ತೆರೆಯುವ ಮೊದಲೇ ನುಗ್ಗಿದ ಪ್ರಯಾಣಿಕರು
ಸ್ವಯಂಚಾಲಿತ ಬಾಗಿಲು ತೆರೆಯುವ ಮೊದಲೇ ಮುಂಬೈ ಲೋಕಲ್ ಟ್ರೇನಿನಲ್ಲಿ ಒಳನುಗ್ಗುತ್ತಿರುವ ಪ್ರಯಾಣಿಕರು
Follow us
ಶ್ರೀದೇವಿ ಕಳಸದ
|

Updated on: Oct 09, 2023 | 5:09 PM

Mumbai: ಮುಂಬೈ ಲೋಕಲ್​ ಟ್ರೇನಿನಲ್ಲಿ (Local Train) ಒಂದರ ಮೇಲೊಂದು ಘಟನೆಗಳು ನಡೆಯುತ್ತಲೇ ಇರುತ್ತವೆ. ಸೀಟಿಗಾಗಿ ಜಗಳಾಡುವುದು, ಹೊಡೆದಾಡುವುದಂತೂ ತೀರಾ ಸಾಮಾನ್ಯ. ಇದೀಗ ವೈರಲ್ ಆಗಿರುವ ಈ ವಿಡಿಯೋ ನೋಡಿದರೆ ನಿಮಗೆ ಕಿರಿಕಿರಿಯಾಗುವುದು ಗ್ಯಾರಂಟಿ. ಏಕೆಂದರೆ ಮುಂಬೈ ಲೋಕಲ್ ಟ್ರೇನಿನ ಸ್ವಯಂಚಾಲಿತ ಬಾಗಿಲು ತೆರೆಯುವ ಮೊದಲೇ ಪ್ರಯಾಣಿಕರು ಒಳಪ್ರವೇಶಿಸಲು ಅಪಾರ ಸಾಹಸ ಮೆರೆದಿದ್ದಾರೆ. ವಿಡಿಯೋ ವೈರಲ್ ಆಗುತ್ತಿದ್ದು ನೆಟ್ಟಿಗರು ಈ ಬಗ್ಗೆ ಗಂಭೀರವಾದ ಚರ್ಚೆ ನಡೆಸುತ್ತಿದ್ದಾರೆ.

ಇದನ್ನೂ ಓದಿ : Viral Video: ಶಿಲ್ಪಾ ಶೆಟ್ಟಿಯ ಈ ಫಿಟ್​ನೆಸ್​ ಸವಾಲಿಗೆ ನೀವು ಸಿದ್ಧರೇ?

ರೈಲು ನಿಲ್ದಾಣದಲ್ಲಿ ನಿಲ್ಲುತ್ತಿದ್ದಂತೆ ಜನರು ರೈಲಿನ ಬಾಗಿಲನ್ನು ಬಡಿಯತೊಡಗುತ್ತಾರೆ. ಸ್ವಲ್ಪೇ ತೆಗೆದ ಬಾಗಿಲಿನೊಳಗೆ ಕೈ ಹಾಕಿ ಬಲಪ್ರಯೋಗ ಮಾಡಿ ಪೂರ್ತಿ ತೆರೆದು ಅದರೊಳಗೆ ನುಗ್ಗಲು ನೋಡುತ್ತಾರೆ. ಮುಂಬೈಕರ್​​ಗಳು ಯಾವಾಗಲೂ ಇಂಥ ಅಪಾಯಕಾರಿ ಸಾಹಸಗಳನ್ನು ಮಾಡುತ್ತಲೇ ಇರುತ್ತಾರೆ ಎನ್ನುವುದನ್ನು ಈ ವಿಡಿಯೋ ಸೂಚಿಸುತ್ತಿದೆ. ಈತನಕ ಸುಮಾರು 20,000 ಜನರು ಈ ವಿಡಿಯೋ ಲೈಕ್ ಮಾಡಿದ್ದಾರೆ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಮುಂಬೈಕರ್ ಸಾಹಸ ದೃಶ್ಯ

Automatic door in Mumbai trains byu/Novel_Swimmer_8284 inDamnthatsinteresting

ಈ ವಿಡಿಯೋ ನೋಡಿದ ನೆಟ್ಟಿಗರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ರೈಲಿಗೆ ಹೀಗೆ ನುಗ್ಗುವುದನ್ನು ಬಿಟ್ಟು ಬೇರೆ ದಾರಿ ಇಲ್ಲ ಎಂದು ಕೆಲವರು. ಇದು ಬಹಳ ಅಪಾಯಕಾರಿ, ರೈಲ್ವೆ ಇಲಾಖೆ ಈ ಬಗ್ಗೆ ಗಮನ ಹರಿಸಬೇಕು ಎಂದು ಇನ್ನೂ ಕೆಲವರು. ಕೆಲಸಕ್ಕೆ ಹೋಗಲು, ಶಾಲಾಕಾಲೇಜಿಗೆ ಹೋಗಲು ಎಲ್ಲದಕ್ಕೂ ಇದೇ ರೈಲು ಏನು ಮಾಡುವುದು ಎಂದಿದ್ದಾರೆ ಮತ್ತಷ್ಟು ಜನ.

ಇದನ್ನೂ ಓದಿ : Viral Video: ಸಾಬೂನು ತಿನ್ನುತ್ತಿರುವ ಯುವತಿ; ಹೊಟ್ಟೆಯಲ್ಲಿ ನೊರೆಗುಳ್ಳೆಗಳೆದ್ದವೋ? ಎಂದ ನೆಟ್ಟಿಗರು

ಪ್ರತೀ ದಿನ ನಾನು ಹೀಗೆಯೇ ಪ್ರಯಾಣಿಸುತ್ತೇನೆ. ರಾತ್ರಿಯಾಗುತ್ತಿದ್ದಂತೆ ನನ್ನ ಕೈಕಾಲುಗಳು ಬಿದ್ದು ಹೋಗುತ್ತವೆ. ಹಿಂದೆ ಮುಂದೆ ಆತುಕೊಂಡು ನಿಲ್ಲುವವರಿಂದಾಗಿ ಬೆನ್ನು ಮತ್ತು ಹೊಟ್ಟೆ ನೊಯುತ್ತದೆ ಎಂದಿದ್ದಾರೆ ಒಬ್ಬರು. ಮುಂಬೈನಲ್ಲಿ ಇದು ಎಂದಿಗೂ ಬಗೆಹರಿಯದ ಸಮಸ್ಯೆಯಾಗಿದೆ. ಅಲ್ಲಿಯ ಸರ್ಕಾರ ಇದಕ್ಕೆ ಯಾಕೆ ಸರಿಯಾದ ಮಾರ್ಗ ಕಂಡುಕೊಳ್ಳುತ್ತಿಲ್ಲವೋ ಕಾಣೆ ಎಂದಿದ್ದಾರೆ ಅನೇಕರು.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ