AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ನಾಗಾಲ್ಯಾಂಡ್ ಸಚಿವರು ವಡಾ ಪಾವ್​ ಮಾಡಿದ ವಿಡಿಯೋ ವೈರಲ್

Vada Pav: ನಾಗಾಲ್ಯಾಂಡ್​ ಸಚಿವ ತೆಮ್ಜೆನ್​ ತಯಾರಿಸಿದ ವಡಾ ಪಾವ್ ವಿಡಿಯೋ ನೋಡಿ ನೆಟ್ಟಿಗರು ಹುರುಪುಗೊಂಡಿದ್ದಾರೆ. ಮುಂದಿನ ಸಲ ಬೆಂಗಾಲಿ ಖಾದ್ಯ ತಯಾರಿಸಿ, ಮಿಸಳ್​ ಪಾವ್ ತಯಾರಿಸಿ ಎಂದು ಫರಮಾಯಿಷ್​ ಹೊರಡಿಸುತ್ತಿದ್ದಾರೆ ನೆಟ್ಟಿಗರು. ಈ ವಿಡಿಯೋ ನೋಡಿದ ನೀವು ಖಂಡಿತ ಅಡುಗೆಮನೆಗೆ ಓಡುತ್ತೀರಿ ಇಲ್ಲವೇ ಆನ್​ಲೈನ್ ಆರ್ಡರ್ ಮಾಡುತ್ತೀರಿ!

Viral Video: ನಾಗಾಲ್ಯಾಂಡ್ ಸಚಿವರು ವಡಾ ಪಾವ್​ ಮಾಡಿದ ವಿಡಿಯೋ ವೈರಲ್
ನಾಗಾಲ್ಯಾಂಡ್ ಸಚಿವ ತೆಮ್ಜೆನ್​ ವಡಾ ಪಾವ್ ತಯಾರಿಸುತ್ತಿರುವುದು
ಶ್ರೀದೇವಿ ಕಳಸದ
|

Updated on: Oct 11, 2023 | 4:54 PM

Share

Nagaland: ನಾಗಾಲ್ಯಾಂಡ್ ಸಚಿವ ತೆಮ್ಜೆನ್ ಇಮ್ನಾ ಅಲಾಂಗ್ (Temjen Imna Along) ಸಾಮಾಜಿಕ ಜಾಲತಾಣದಲ್ಲಿ ಒಂದಿಲ್ಲಾ ಒಂದು ಚಟುವಟಿಕೆಯಿಂದ ತಮ್ಮ ಫಾಲೋವರ್​ಗಳ ಗಮನ ಸೆಳೆಯುತ್ತಿರುತ್ತಾರೆ.  ವಿನೋದಮಯ ಪ್ರವೃತ್ತಿಯಿಂದ ಎಲ್ಲರೆಲ್ಲರೂ ಉತ್ಸಾಹದಿಂದ ತಮ್ಮ ಪೋಸ್ಟ್​ನೆಡೆ ಪ್ರತಿಕ್ರಿಯಿಸುವಂತೆ ಮಾಡುತ್ತಿರುತ್ತಾರೆ. ಇದೀಗ ತೆಮ್ಜೆನ್​ ವಡಾ ಪಾವ್ (Vada Pav) ಮಾಡುವ ಮೂಲಕ ಸುದ್ದಿಯಲ್ಲಿದ್ದಾರೆ. ಈ ವಿಡಿಯೋ ನೋಡಿದವರೆಲ್ಲರಿಗೂ ಖಂಡಿತ ಬಾಯಲ್ಲಿ ನೀರೂರುವುದು ಗ್ಯಾರಂಟೀ, ಅಷ್ಟೊಂದು ಅಚ್ಚುಕಟ್ಟಾಗಿ ವಡಾ ಪಾವ್ ತಯಾರಿಸಿದ್ದಾರೆ. Xನಲ್ಲಿ ಅ.9ರಂದು ಈ ವಿಡಿಯೋ ಹಂಚಿಕೊಂಡಿದ್ದಾರೆ. ನೀವು ಪ್ರತಿಭಾವಂತರು, ಸಕಲಕಲಾವಲ್ಲಭರು ಅಂತೆಲ್ಲ ನೆಟ್ಟಿಗರು ಶ್ಲಾಘಿಸುತ್ತಿದ್ದಾರೆ.

ಇದನ್ನೂ ಓದಿ : Viral Video: ಇಂಡಿಯನ್ ಐಡಲ್; ಆಡಿಷನ್​ನಲ್ಲಿ ಶ್ರೇಯಾ ಘೋಷಾಲ್ ಅತ್ತಿದ್ದು ಈ ಕಾರಣಕ್ಕೆ 

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಸಚಿವರು ಈರುಳ್ಳಿ, ಮೆಣಸಿನಕಾಯಿ, ಬೆಳ್ಳುಳ್ಳಿ ಕತ್ತರಿಸುತ್ತಾರೆ. ಬೇಯಿಸಿದ ಆಲೂಗಡ್ಡೆಯನ್ನು ಹಿಸುಕುತ್ತಾರೆ. ನಂತರ ಕಡಲೆಹಿಟ್ಟಿನಲ್ಲಿ ಆಲೂಗಡ್ಡೆ ಉಂಡೆಯನ್ನು ಅದ್ದಿ ಕರಿಯುತ್ತಾರೆ. ಪಾವ್​ನ ಮಧ್ಯೆ ಇಟ್ಟು ಸವಿಯುತ್ತಾರೆ ಮತ್ತು ಅಲ್ಲಿದ್ದವರಿಗೆ ಸವಿಯಲು ಹೇಳುತ್ತಾರೆ.

ತೆಮ್ಜೆನ್​ ವಡಾ ಪಾವ್ ಮಾಡಿದ ವಿಡಿಯೋ

ಈತನಕ 37,000 ಜನರು ಈ ವಿಡಿಯೋ ನೋಡಿದ್ದಾರೆ. ಸುಮಾರು 2,000ಕ್ಕಿಂತಲೂ ಹೆಚ್ಚು ಜನ ಲೈಕ್ ಮಾಡಿದ್ದಾರೆ. 177 ಜನರು ರೀಪೊಸ್ಟ್ ಮಾಡಿದ್ದಾರೆ. ಅನೇಕರು ಪ್ರತಿಕ್ರಿಯಿಸಿದ್ದಾರೆ. ಇದು ಒಳ್ಳೆಯ ಸ್ಟಾರ್ಟರ್​, ಹಾಗಿದ್ದರೆ ಊಟಕ್ಕೇನು ನಮಗೆ? ಎಂದು ಕೇಳಿದ್ದಾರೆ ಒಬ್ಬರು. ನೀವು ಅತ್ಯಂತ ಪ್ರತಿಭಾವಂತರು, ಮುಂದಿನ ಸಲ ದಯವಿಟ್ಟು ಬಂಗಾಳಿ ಖಾದ್ಯ ತಯಾರಿಸಿದ್ದಾರೆ ಇನ್ನೊಬ್ಬರು. ಲವ್​ ಫ್ರಂ ಮಹಾರಾಷ್ಟ್ರ, ಮಿಸಳ್ ಪಾವ್ ತಯಾರಿಸಿ ಎಂದಿದ್ದಾರೆ ಮತ್ತೊಬ್ಬರು.

ಇದನ್ನೂ ಓದಿ : Viral Video: ದೆಹಲಿ; ಮೆಟ್ರೋದಲ್ಲಿ ಉಗಿಯುವ ಆಟ, ಅವನ ಬಾಯಿಯಲ್ಲಿ ಈಕೆ, ಇವಳ ಬಾಯಿಯಲ್ಲಿ ಅವನು 

ಮಹಾರಾಷ್ಟ್ರದ ಈ ಖಾದ್ಯ ಆಹಾ, ಬಹಳ ರುಚಿಯಾಗಿರುವಂತೆ ಕಾಣುತ್ತಿದೆ ಎಂದಿದ್ದಾರೆ ಒಬ್ಬರು. ಅದ್ಭುತ ಸರ್, ಬಾಯಿಯಲ್ಲಿ ನೀರೂರುತ್ತಿದೆ ಎಂದಿದ್ದಾರೆ ಇನ್ನೊಬ್ಬರು. ಸರ್ ನೀವು ರಾಜಕೀಯ ಬಿಟ್ಟು ಪೂರ್ಣಪ್ರಮಾಣದಲ್ಲಿ ಇದೇ ವೃತ್ತಿಯಲ್ಲಿ ತೊಡಗಿಕೊಳ್ಳಿ, ಇದು ನಿಮಗೆ ಸರಿಹೊಂದುತ್ತದೆ ಎಂದಿದ್ದಾರೆ ಮತ್ತೊಬ್ಬರು.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

ಕಾಡು ಹಂದಿಗೆ ಹಾಕಿದ್ದ ಉರುಳಿಗೆ ಚಿರತೆ ಬಲಿ
ಕಾಡು ಹಂದಿಗೆ ಹಾಕಿದ್ದ ಉರುಳಿಗೆ ಚಿರತೆ ಬಲಿ
ಅಶ್ವಿನಿ ಗೌಡ ಎದುರಲ್ಲೇ ಧ್ರುವಂತ್ ಓವರ್ ಆ್ಯಕ್ಟಿಂಗ್; ವಿಡಿಯೋ ನೋಡಿ
ಅಶ್ವಿನಿ ಗೌಡ ಎದುರಲ್ಲೇ ಧ್ರುವಂತ್ ಓವರ್ ಆ್ಯಕ್ಟಿಂಗ್; ವಿಡಿಯೋ ನೋಡಿ
ಮಹಿಳೆಯರಿಗೆ ಬೆಂಗಳೂರು ಫುಲ್ ಸೇಫ್: ಸಿಲಿಕಾನ್ ಸಿಟಿಯನ್ನ ಕೊಂಡಾಡಿದ ಯುವತಿ
ಮಹಿಳೆಯರಿಗೆ ಬೆಂಗಳೂರು ಫುಲ್ ಸೇಫ್: ಸಿಲಿಕಾನ್ ಸಿಟಿಯನ್ನ ಕೊಂಡಾಡಿದ ಯುವತಿ
ಕೆಎಸ್‌ ಈಶ್ವರಪ್ಪಗೆ ವಿದೇಶದಿಂದ ಜೀವ ಬೆದರಿಕೆ , ದೂರು ದಾಖಲು!
ಕೆಎಸ್‌ ಈಶ್ವರಪ್ಪಗೆ ವಿದೇಶದಿಂದ ಜೀವ ಬೆದರಿಕೆ , ದೂರು ದಾಖಲು!
ಬಾವಿಗೆ ಬಿದ್ದು ಒದ್ದಾಡುತ್ತಿದ್ದ ಚಿರತೆ ರಕ್ಷಣೆ, ವಿಡಿಯೋ ನೋಡಿ
ಬಾವಿಗೆ ಬಿದ್ದು ಒದ್ದಾಡುತ್ತಿದ್ದ ಚಿರತೆ ರಕ್ಷಣೆ, ವಿಡಿಯೋ ನೋಡಿ
‘ಜನ ನಾಯಗನ್’ಗೆ ಹೈಕೋರ್ಟ್ ಶಾಕ್: ಬೆಳಿಗ್ಗೆ ನೀಡಿದ ಆದೇಶಕ್ಕೆ ಮಧ್ಯಾಹ್ನ ತಡೆ
‘ಜನ ನಾಯಗನ್’ಗೆ ಹೈಕೋರ್ಟ್ ಶಾಕ್: ಬೆಳಿಗ್ಗೆ ನೀಡಿದ ಆದೇಶಕ್ಕೆ ಮಧ್ಯಾಹ್ನ ತಡೆ
ಆಸ್ತಿ ವಿವಾದ: ಕೆಸರು ಗದ್ದೆಯಲ್ಲೇ ನಡೀತು ಫಿಲ್ಮಿ ಸ್ಟೈಲ್​​ ಫೈಟ್​​
ಆಸ್ತಿ ವಿವಾದ: ಕೆಸರು ಗದ್ದೆಯಲ್ಲೇ ನಡೀತು ಫಿಲ್ಮಿ ಸ್ಟೈಲ್​​ ಫೈಟ್​​
ಕಳಪೆ ಕೊಟ್ಟ ರಾಶಿಕಾ ಮೇಲೆ ಉರಿದು ಬಿದ್ದ ರಕ್ಷಿತಾ, ನಕ್ಕ ಧ್ರುವಂತ್
ಕಳಪೆ ಕೊಟ್ಟ ರಾಶಿಕಾ ಮೇಲೆ ಉರಿದು ಬಿದ್ದ ರಕ್ಷಿತಾ, ನಕ್ಕ ಧ್ರುವಂತ್
ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ: ಉಪನ್ಯಾಸಕನ ವಿರುದ್ಧ ತಾಯಿ ಗಂಭೀರ ಆರೋಪ
ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ: ಉಪನ್ಯಾಸಕನ ವಿರುದ್ಧ ತಾಯಿ ಗಂಭೀರ ಆರೋಪ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಸತೀಶ್ ಜಾರಕಿಹೊಳಿ ಸ್ಫೋಟಕ ಹೇಳಿಕೆ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಸತೀಶ್ ಜಾರಕಿಹೊಳಿ ಸ್ಫೋಟಕ ಹೇಳಿಕೆ