ಮೋಸ ಮಾಡಿದ ಪ್ರಿಯಕರನ ಮೇಲೆ ಸೇಡು ತೀರಿಸಿಕೊಂಡ ಯುವತಿ; ಸರ್ಕಾರದಿಂದ ಸಿಕ್ತು ಬಂಪರ್ ಆಫರ್

ತನಗೆ ಮೋಸ ಮಾಡಿದ ಪ್ರಿಯಕರನ ಮೇಲೆ ಸೇಡು ತೀರಿಸಿಕೊಳ್ಳಲು ಯುವತಿಯೊಬ್ಬಳು ಮಾಸ್ಟರ್​​​ ಪ್ಲಾನ್​​ ಮಾಡಿದ್ದಾಳೆ. ಈ ಮೂಲಕ ಆಕೆಗೆ ಸರ್ಕಾರದಿಂದ ಬಂಪರ್ ಆಫರ್ ಸಿಕ್ಕಿದೆ. ಅಷ್ಟಕ್ಕೂ ಆಕೆ ಮಾಡಿದ್ದೇನು ಗೊತ್ತಾ?

ಮೋಸ ಮಾಡಿದ ಪ್ರಿಯಕರನ ಮೇಲೆ ಸೇಡು ತೀರಿಸಿಕೊಂಡ ಯುವತಿ; ಸರ್ಕಾರದಿಂದ ಸಿಕ್ತು ಬಂಪರ್ ಆಫರ್
ಸಾಂದರ್ಭಿಕ ಚಿತ್ರImage Credit source: Pinterest
Follow us
|

Updated on:Jan 06, 2024 | 10:41 AM

ಸಾಮಾನ್ಯವಾಗಿ ಪ್ರೀತಿಯಲ್ಲಿ ಮೋಸ ಮಾಡುವುದು ಹುಡುಗಿಯರು ಎಂಬ ಭಾವನೆ ಸಾಕಷ್ಟು ಜನರಲ್ಲಿದೆ. ಆದರೆ ಇಂದಿನ ದಿನಗಳಲ್ಲಿ ಹುಡುಗರು ಕೂಡ ಹುಡುಗಿಯರಿಗೆ ಮೋಸ ಮಾಡಿ ಹೋಗುತ್ತಾರೆ. ಆದರೆ ಮೋಸ ಹೋದಾಗ ಅತ್ತು ಕರೆದು ಎಲ್ಲಾ ಮರೆತು ಹೊಸ ಜೀವನ ಶುರು ಮಾಡುವವರು ಒಂದೆಡೆಯಾದರೆ, ಇನ್ನೊಂದೆಡೆ ಮೋಸ ಮಾಡಿದ ಪ್ರೇಮಿಯ ಮೇಲೆ ಸೇಡು ತೀರಿಸಿಕೊಳ್ಳುವವರೂ ಇದ್ದಾರೆ. ಇದೀಗಾ ಅಂತದ್ದೇ ಘಟನೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸುದ್ದಿಯಲ್ಲಿದೆ. ಅಮೆರಿಕಾದ ಇವಾ ಲುಯಿ ಎಂಬ ಯುವತಿಯೊಬ್ಬಳು ತಾನು ಪ್ರೀತಿ ಮಾಡಿದ ಹುಡುಗನಿಂದ ಮೋಸ ಹೋಗಿದ್ದಾಳೆ. ವರ್ಷಗಳಿಂದ ಪ್ರೀತಿಸುತ್ತಿದ್ದು,ಇದೀಗಾ ಆಕೆಯ ಪ್ರಿಯತಮ ಬೇರೆ ಹುಡುಗಿಯೊಂದಿಗಿರುವುದು ತಿಳಿದು, ತನಗೆ ಮೋಸ ಮಾಡಿದ ಪ್ರಿಯಕರನ ಮೇಲೆ ಸೇಡು ತೀರಿಸಿಕೊಳ್ಳಲು ಮಾಸ್ಟರ್​​​ ಪ್ಲಾನ್​​ ಮಾಡಿದ್ದಾಳೆ. ಈ ಮೂಲಕ ಆಕೆಗೆ ಸರ್ಕಾರದಿಂದ ಬಂಪರ್ ಆಫರ್ ಸಿಕ್ಕಿದೆ.

ಯುವತಿ ಇವಾ ಲುಯಿ ಸೋಶಿಯಲ್​​ ಮೀಡಿಯಾಗಳಲ್ಲಿ ಸಖತ್​​ ಆಕ್ಟೀವ್​​ ಆಗಿದ್ದು, ಹಿಂದಿನಿಂದಲೂ ತನ್ನ ಪ್ರೀತಿ ಹಾಗೂ ಪ್ರಿಯಕರನ ಬಗ್ಗೆ ಸಾಕಷ್ಟು ವಿಷಯಗಳನ್ನು ಸೋಶಿಯಲ್​​ ಮೀಡಿಯಾಗಳಲ್ಲಿ ಹಂಚಿಕೊಳ್ಳುತ್ತಿದ್ದಳು. ತನ್ನ ಬಾಯ್ ಫ್ರೆಂಡ್ ಅನ್ಯೋನ್ಯವಾಗಿದ್ದಾಗ ಸಿಕ್ಕ ರಹಸ್ಯ ಸಂಗತಿಗಳನ್ನು ಹೇಳುತ್ತಾ ಬಂದಿದ್ದಾಳೆ. ಇತ್ತೀಚೆಗಷ್ಟೇ ತನಗೆ ತನ್ನ ಹುಡುಗನಿಂದ ಮೋಸ ಆಗಿರುವ ವಿಷಯವನ್ನು ಹೇಳಿಕೊಂಡಿದ್ದಾಳೆ. ಇದಲ್ಲದೇ ಆತನ ಮೇಲೆ ಸೇಡು ತೀರಿಸಿಕೊಳ್ಳಲು ತನ್ನ ಪ್ರೇಮಿ ಸರ್ಕಾರಕ್ಕೆ ತೆರಿಗೆ ಪಾವತಿಸದೆ ಹೇಗೆ ತಪ್ಪಿಸಿಕೊಂಡಿದ್ದ ಎಂಬುದರ ಕುರಿತು ವಿಡಿಯೋ ಹಂಚಿಕೊಂಡಿದ್ದಾಳೆ. ಇದಲ್ಲದೇ ತೆರಿಗೆ ವಂಚನೆ ಮಾಡಿರುವ ಬಗ್ಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಗೂ ತಿಳಿಸಿದ್ದಾಳೆ. ತನಿಖೆಯ ನಂತರ ಯುವತಿ ಹೇಳಿರುವುದು ನಿಜ ಎಂದು ತಿಳಿದಿದೆ. ಇಂತಹ ಸುಳಿವು ನೀಡಿದ್ದಕ್ಕೆ ಸರ್ಕಾರ ರೂ. 83 ಲಕ್ಷ ರೂ ನಗದನ್ನು ಯುವತಿಗೆ ಬಹುಮಾನವಾಗಿ ನೀಡಿದ್ದಾರೆ.

ಇದನ್ನೂ ಓದಿ: ಎಲ್ಲರ ಸಮ್ಮುಖದಲ್ಲೇ ನ್ಯಾಯಾಧೀಶರನ್ನು ಥಳಿಸಿದ ಆರೋಪಿ; ವಿಡಿಯೋ ವೈರಲ್​​

ಅಮೆರಿಕಾದ ಕಾನೂನಿನ ಅಡಿಯಲ್ಲಿ, ತೆರಿಗೆ ವಂಚಕರ ವಿವರಗಳನ್ನು ಬಹಿರಂಗಪಡಿಸುವವರಿಗೆ ಸರ್ಕಾರವು ಭಾರಿ ಬಹುಮಾನಗಳನ್ನು ನೀಡುತ್ತದೆ. ಆದಾಗ್ಯೂ, ತೆರಿಗೆ ವಂಚನೆ ಎರಡು ಮಿಲಿಯನ್ ಡಾಲರ್‌ಗಳಿಗಿಂತ ಹೆಚ್ಚಿದ್ದರೆ ಮಾತ್ರ ವಿವರಗಳನ್ನು ನೀಡಿದವರಿಗೆ ಇಂತಹ ಬಂಪರ್ ಆಫರ್ ಗಳು ಸಿಗುತ್ತವೆ. ತೆರಿಗೆ ವಂಚಕರಿಂದ ವಸೂಲಿಯಾಗುವ ಮೊತ್ತದ ಶೇ.15ರಿಂದ 30ರಷ್ಟು ಹಣವನ್ನು ಮಾಹಿತಿದಾರರಿಗೆ ನೀಡಲಾಗುತ್ತದೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 10:36 am, Sat, 6 January 24

ತಾಜಾ ಸುದ್ದಿ
ಕಾಶಪ್ಪನವರ್ ಸಿಎಂ ಆಗಬೇಕೆಂದ ನಂದವಾಡಗಿ ವೀರಶೈವ ಲಿಂಗಾಯತ ಮಠದ ಸ್ವಾಮೀಜಿ
ಕಾಶಪ್ಪನವರ್ ಸಿಎಂ ಆಗಬೇಕೆಂದ ನಂದವಾಡಗಿ ವೀರಶೈವ ಲಿಂಗಾಯತ ಮಠದ ಸ್ವಾಮೀಜಿ
ಹಾವೇರಿ ಉಪ ಚುನಾವಣೆಗಾಗಿ ಈಗಿಂದಲೇ ಕೆಲಸ ಶುರುಮಾಡಿದ್ದೇವೆ:ಸತೀಶ್ ಜಾರಕಿಹೊಳಿ
ಹಾವೇರಿ ಉಪ ಚುನಾವಣೆಗಾಗಿ ಈಗಿಂದಲೇ ಕೆಲಸ ಶುರುಮಾಡಿದ್ದೇವೆ:ಸತೀಶ್ ಜಾರಕಿಹೊಳಿ
ಈ ನಟಿಯರು ಇಷ್ಟು ದಿನ ಯಾಕೆ ಸುಮ್ಮನಿದ್ರು? ರೇಣುಕಾ ಸ್ವಾಮಿ ತಂದೆ ಪ್ರಶ್ನೆ
ಈ ನಟಿಯರು ಇಷ್ಟು ದಿನ ಯಾಕೆ ಸುಮ್ಮನಿದ್ರು? ರೇಣುಕಾ ಸ್ವಾಮಿ ತಂದೆ ಪ್ರಶ್ನೆ
ದರ್ಶನ್ ₹22 ಕೋಟಿ ಸಂಭಾವನೆ ಪಡೆಯೋದು ಕೇಳಿ ಶಾಕ್ ಆಯ್ತು: ಸರಿಗಮ ವಿಜಿ
ದರ್ಶನ್ ₹22 ಕೋಟಿ ಸಂಭಾವನೆ ಪಡೆಯೋದು ಕೇಳಿ ಶಾಕ್ ಆಯ್ತು: ಸರಿಗಮ ವಿಜಿ
ಕುಡುಕ ಆಟೋರಿಕ್ಷಾ ಸೆಲ್ಫೀ ತೆಗೆಸಿಕೊಂಡ ಬಳಿಕ ಈಶ್ವರಪ್ಪ ಕುಡಿತ ಬಿಡು ಅಂದರು
ಕುಡುಕ ಆಟೋರಿಕ್ಷಾ ಸೆಲ್ಫೀ ತೆಗೆಸಿಕೊಂಡ ಬಳಿಕ ಈಶ್ವರಪ್ಪ ಕುಡಿತ ಬಿಡು ಅಂದರು
ಮಗನನ್ನು ನೋಡಲು ಜೈಲಿಗೆ ಬಂದ ರೇವಣ್ಣ ಮಾಧ್ಯಮದವರನ್ನು ಕಂಡು ಸಿಡುಕಿದರು!
ಮಗನನ್ನು ನೋಡಲು ಜೈಲಿಗೆ ಬಂದ ರೇವಣ್ಣ ಮಾಧ್ಯಮದವರನ್ನು ಕಂಡು ಸಿಡುಕಿದರು!
ಭೂಕುಸಿತದಲ್ಲಿ ಸಿಲುಕಿರುವ ಕಾರ್ಮಿಕನ ಕೈ ಗೋಚರ: ಸುರಂಗದ ಮೂಲಕ ಚಿಕಿತ್ಸೆ
ಭೂಕುಸಿತದಲ್ಲಿ ಸಿಲುಕಿರುವ ಕಾರ್ಮಿಕನ ಕೈ ಗೋಚರ: ಸುರಂಗದ ಮೂಲಕ ಚಿಕಿತ್ಸೆ
ಮುಡಾ ಹಗರಣ ಸಿಬಿಐ ತನಿಖೆಗೆ ನೀಡಬೇಕೆನ್ನುವ ನೈತಿಕತೆ ಬಿಜೆಪಿಗಿದೆಯಾ? ಸಿಎಂ
ಮುಡಾ ಹಗರಣ ಸಿಬಿಐ ತನಿಖೆಗೆ ನೀಡಬೇಕೆನ್ನುವ ನೈತಿಕತೆ ಬಿಜೆಪಿಗಿದೆಯಾ? ಸಿಎಂ
ವಿದ್ಯಾರ್ಥಿಗೆ ಬಾಸುಂಡೆ ಬರುವಂತೆ ಹೊಡೆದ ಶಿಕ್ಷಕಿ! ಪೋಷಕರಿಂದ ಶಾಲೆಗೆ ಬೀಗ
ವಿದ್ಯಾರ್ಥಿಗೆ ಬಾಸುಂಡೆ ಬರುವಂತೆ ಹೊಡೆದ ಶಿಕ್ಷಕಿ! ಪೋಷಕರಿಂದ ಶಾಲೆಗೆ ಬೀಗ
 ಪವಿತ್ರಾ ಗೌಡರನ್ನು ನೋಡಲು ಬುತ್ತಿಯೊಂದಿಗೆ ಜೈಲಿಗೆ ಬಂದ ತಂದೆ-ತಾಯಿ, ಸಹೋದರ
 ಪವಿತ್ರಾ ಗೌಡರನ್ನು ನೋಡಲು ಬುತ್ತಿಯೊಂದಿಗೆ ಜೈಲಿಗೆ ಬಂದ ತಂದೆ-ತಾಯಿ, ಸಹೋದರ