ಐಪಿಎಲ್ ಆಟಗಾರ, ಪಂತ್​ ಪಾಲಿಗೆ ಮೋಸಗಾರ: ಕೊನೆಗೂ ಮಾಜಿ ಕ್ರಿಕೆಟಿಗ ಅರೆಸ್ಟ್​..!

Mrinank Singh: ಕಳೆದ ಒಂದು ವರ್ಷದಿಂದ ಮೃಣಾಂಕ್ ಸಿಂಗ್‌ಗೆ ಪೊಲೀಸರು ಹಲವು ಬಾರಿ ನೋಟಿಸ್ ಕಳುಹಿಸಿದ್ದರೂ ಆತ ಪ್ರತಿಕ್ರಿಯಿಸಲಿಲ್ಲ. ಹೀಗಾಗಿಯೇ ಆತನ ವಿರುದ್ಧ ಲುಕ್‌ಔಟ್ ನೋಟಿಸ್ ಜಾರಿ ಮಾಡಲಾಗಿತ್ತು. ಇದರ ಬೆನ್ನಲ್ಲೇ ಮೃಣಾಂಕ್ ಸಿಂಗ್ ಭಾರತದಿಂದ ಪರಾರಿಯಾಗಲು ಪ್ಲ್ಯಾನ್ ರೂಪಿಸಿದ್ದನು.

ಐಪಿಎಲ್ ಆಟಗಾರ, ಪಂತ್​ ಪಾಲಿಗೆ ಮೋಸಗಾರ: ಕೊನೆಗೂ ಮಾಜಿ ಕ್ರಿಕೆಟಿಗ ಅರೆಸ್ಟ್​..!
Mrinank Singh
Follow us
TV9 Web
| Updated By: ಝಾಹಿರ್ ಯೂಸುಫ್

Updated on:Dec 28, 2023 | 1:15 PM

ನಾನು ಕ್ರಿಕೆಟಿಗ….ನಾನು ಐಪಿಎಸ್​ ಅಧಿಕಾರಿ…ನಾನು ಮುಂಬೈ ಇಂಡಿಯನ್ಸ್ (Mumbai Indians) ಆಟಗಾರ…ಹೀಗೆ ಪ್ರತಿ ಬಾರಿ ತನ್ನ ಗುರುತನ್ನು ಬದಲಿಸಿ ವಂಚಿಸುತ್ತಿದ್ದ 25 ವರ್ಷದ ಹರಿಯಾಣದ ಕ್ರಿಕೆಟಿಗ ಮೃಣಾಂಕ್ ಸಿಂಗ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಅದು ಕೂಡ ವಂಚನೆಯೊಂದಿಗೆ ಭಾರತದಿಂದ ಪರಾರಿಯಾಗುವ ವೇಳೆ ಎಂಬುದು ವಿಶೇಷ.

ಮೃಣಾಂಕ್ ಸಿಂಗ್ ಹೆಸರು ಮೊದಲ ಬಾರಿಗೆ ಕೇಳಿ ಬಂದಿದ್ದು 2022 ರಲ್ಲಿ. ಮುಂಬೈ ಮೂಲದ ಉದ್ಯಮಿಯೊಬ್ಬರಿಗೆ ಅಗ್ಗದ ದರದಲ್ಲಿ ದುಬಾರಿ ವಾಚ್ ಮತ್ತು ಮೊಬೈಲ್ ಫೋನ್​ಗಳನ್ನು ಕೊಡಿಸುವುದಾಗಿ ಹೇಳಿ ವಂಚಿಸಿದ್ದ ಮೃಣಾಂಕ್​ರನ್ನು ಪೊಲೀಸರು ಬಂಧಿಸಿದ್ದರು.

ಈ ಬಂಧನದ ವೇಳೆ ಇದೇ ಮೃಣಾಂಕ್ ಟೀಮ್ ಇಂಡಿಯಾ ಆಟಗಾರ ರಿಷಭ್ ಪಂತ್ ತುಂಬಾ ಆಪ್ತ ಎಂಬುದು ತಿಳಿದು ಬಂದಿತ್ತು. ಆದರೆ ಈ ಆಪ್ತನಿಂದಲೇ ಪಂತ್ ಕೂಡ ವಂಚನೆಗೊಳಗಾಗಿರುವುದು ಆಮೇಲೆ ಗೊತ್ತಾಯಿತು. ಅಂದರೆ ರಿಷಭ್​ಗೂ ಕಡಿಮೆ ಬೆಲೆಗೆ ದುಬಾರಿ ವಾಚ್ ಕೊಡಿಸುವುದಾಗಿ ಮೃಣಾಂಕ್ ಸಿಂಗ್ ಬರೋಬ್ಬರಿ 1.63 ಲಕ್ಷ ರೂ. ವಂಚಿಸಿದ್ದ.

ಹೀಗೆ ವಂಚನೆಯನ್ನೇ ತನ್ನ ಬಂಡವಾಳವಾಗಿಸಿಕೊಂಡಿದ್ದ ಮೃಣಾಂಕ್ ಸಿಂಗ್ ಕ್ರಿಕೆಟ್​ಗಿಂತ ಮೋಸದಲ್ಲೇ ಬ್ಯುಸಿಯಾಗಿದ್ದ. ಅಂದರೆ 25 ವರ್ಷದ ಮೃಣಾಂಕ್ ನಿಜಕ್ಕೂ ಹರ್ಯಾಣದ ಕ್ರಿಕೆಟಿಗ. ಆದರೆ ಸುದ್ದಿಯಾಗಿದ್ದು ಮಾತ್ರ ವಂಚನೆಯಿಂದ.

ಐಷಾರಾಮಿ ಜೀವನಶೈಲಿಯ ವ್ಯಾಮೋಹವನ್ನು ಹೊಂದಿದ್ದ ಮೃಣಾಂಕ್ ಸಿಂಗ್ ವಂಚನೆಯನ್ನೇ ಬಂಡವಾಳ ಮಾಡಿಕೊಂಡಿದ್ದನು. ಹೀಗೆ ಉದ್ಯಮಿಗಳಿಗೆ, ಕ್ರಿಕೆಟಿಗರಿಗೆ ವಂಚಿಸುತ್ತಾ ಸಂಪಾದಿಸುತ್ತಿದ್ದ ಹಣದಿಂದ ಐಷಾರಾಮಿ ಲೈಫ್ ಸ್ಟೈಲ್​ನಲ್ಲಿ ಬದುಕುತ್ತಿದ್ದ.

ದುಬಾರಿ ರೆಸ್ಟೋರೆಂಟ್‌ಗಳಲ್ಲಿ ಮತ್ತು ಪಂಚತಾರಾ ಹೋಟೆಲ್‌ಗಳಲ್ಲಿ ಕಾಲ ಕಳೆಯುತ್ತಿದ್ದ ಮೃಣಾಂಕ್ ಐಪಿಎಲ್ ಆಟಗಾರ ಎಂದು ಪರಿಚಯಿಸಿಕೊಳ್ಳುತ್ತಿದ್ದರು. ಅಲ್ಲದೆ ಇಂಡಿಯನ್ಸ್ ತಂಡದ ಕ್ರಿಕೆಟಿಗನೆಂದು ಮಹಿಳೆಯರನ್ನು ಸೆಳೆಯುತ್ತಿದ್ದ. ಅಷ್ಟೇ ಅಲ್ಲದೆ ಐಪಿಎಲ್ ಆಟಗಾರ ಎಂಬ ಟ್ಯಾಗ್​ನೊಂದಿಗೆ ಅಂತಾರಾಷ್ಟ್ರೀಯ ಬ್ರಾಂಡ್‌ಗಳು ಕ್ರೀಡಾ ಕಂಪೆನಿಗಳೊಂದಿಗೆ ವ್ಯವಹರಿಸುತ್ತಿದ್ದ  ವಿಚಾರ ಇದೀಗ ಬೆಳಕಿಗೆ ಬಂದಿದೆ.

2022 ರಲ್ಲಿ ದೆಹಲಿಯ ತಾಜ್ ಪ್ಯಾಲೇಸ್ ಹೋಟೆಲ್‌ನಲ್ಲಿ ಒಂದು ವಾರ ತಂಗಿದ್ದ ಮೃಣಾಂಕ್ 5.53 ಲಕ್ಷ ಬಿಲ್ ಮಾಡಿದ್ದ. ಅಂದು ನನ್ನ ಪ್ರಾಯೋಜಕರಾದ ಅಡಿಡಾಸ್ ಕಂಪೆನಿಯು ಬಿಲ್ ಅನ್ನು ಪಾವತಿಸಲಿದೆ ಎಂದು ಹೊಟೇಲ್ ಸಿಬ್ಬಂದಿಗಳನ್ನು ನಂಬಿಸಿದ್ದ ಮೃಣಾಂಕ್, ಚೆಕ್ ಔಟ್ ಮಾಡಿದ್ದನು. ಆದರೆ ಇದಾದ ಬಳಿಕ ಆತ ನೀಡಿದ ಬ್ಯಾಂಕ್ ಖಾತೆ ಸಂಖ್ಯೆಗಳು ಮತ್ತು ಕಾರ್ಡ್ ವಿವರಗಳು ನಕಲಿ ಎಂಬುದು ತಿಳಿದುಬಂದಿತ್ತು.

ಇದಾದ ಬಳಿಕ ಬಾಕಿ ಪಾವತಿಸಲು ಹೋಟೆಲ್ ಸಿಬ್ಬಂದಿಗಳು ಹಲವಾರು ಬಾರಿ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದರು. ಆದರೆ ಮೃಣಾಂಕ್ ತನ್ನ ಫೋನ್​ ಅನ್ನು ಸ್ವಿಚ್ ಆಫ್ ಮಾಡಿಕೊಂಡಿದ್ದ. ಇನ್ನು ಕೆಲ ಹೋಟೆಲ್‌ಗಳಲ್ಲಿ, ಮೃಣಾಂಕ್ ಕರ್ನಾಟಕದ ಹಿರಿಯ ಪೊಲೀಸ್ ಅಧಿಕಾರಿಯಾಗಿ ಪೋಸ್ ನೀಡಿದರೆ, ಇತರರಲ್ಲಿ ಯಶಸ್ವಿ ಕ್ರಿಕೆಟಿಗ ಎಂದು ಪರಿಚಯಿಸಿಕೊಳ್ಳುತ್ತಿದ್ದನು.

ವಿಶೇಷ ಎಂದರೆ ಎಲ್ಲರಿಗೂ ಹೀಗೆ ವಂಚಿಸುತ್ತಾ ಸಾಗುತ್ತಿದ್ದ ಮೃಣಾಂಕ್​ಗೆ ಪೊಲೀಸರು ತನ್ನನ್ನು ಹಿಂಬಾಲಿಸುತ್ತಿದ್ದಾರೆ ಎಂಬುದು ತಿಳಿದಿತ್ತು. ಹೀಗಾಗಿಯೇ ತಾನೆಲ್ಲಿದ್ದೇನೆ ಎಂಬುದನ್ನು ಯಾರಿಗೂ ತಿಳಿಸುತ್ತಿರಲಿಲ್ಲ. ತಾನು ದುಬೈನಲ್ಲಿ ನೆಲೆಸಿದ್ದೇನೆ ಎಂದು ಪರಿಚಯಸ್ಥರನ್ನೂ ಕೂಡ ನಂಬಿಸಿದ್ದ. ಹೀಗಾಗಿಯೇ ಮೃಣಾಂಕ್ ಎಲ್ಲಿದ್ದಾನೆ ಎಂಬುದರ ಮಾಹಿತಿ ಪೊಲೀಸರಿಗೆ ಸಿಗುತ್ತಿರಲಿಲ್ಲ.

ಕಳೆದ ಒಂದು ವರ್ಷದಿಂದ ಮೃಣಾಂಕ್ ಸಿಂಗ್‌ಗೆ ಪೊಲೀಸರು ಹಲವು ಬಾರಿ ನೋಟಿಸ್ ಕಳುಹಿಸಿದ್ದರೂ ಆತ ಪ್ರತಿಕ್ರಿಯಿಸಲಿಲ್ಲ. ಹೀಗಾಗಿಯೇ ಆತನ ವಿರುದ್ಧ ಲುಕ್‌ಔಟ್ ನೋಟಿಸ್ ಜಾರಿ ಮಾಡಲಾಗಿತ್ತು. ಇದರ ಬೆನ್ನಲ್ಲೇ ಮೃಣಾಂಕ್ ಸಿಂಗ್ ಭಾರತದಿಂದ ಪರಾರಿಯಾಗಲು ಪ್ಲ್ಯಾನ್ ರೂಪಿಸಿದ್ದನು.

ಡಿಸೆಂಬರ್ 25 ರಂದು ಹಾಂಗ್ ಕಾಂಗ್‌ಗೆ ಪರಾರಿಯಾಗಲು ಯತ್ನಿಸುತ್ತಿದ್ದ ಮೃಣಾಂಕ್​ ಸಿಂಗ್​ರನ್ನು ದೆಹಲಿ ವಿಮಾನ ನಿಲ್ದಾಣದ ಇಮಿಗ್ರೇಷನ್ ಕಚೇರಿಯಲ್ಲಿ ಬಂಧಿಸಲಾಗಿದೆ. ಈ ಬಂಧನದ ಬೆನ್ನಲ್ಲೇ ಕರ್ನಾಟಕದಿಂದ ಐಪಿಎಸ್ ಅಧಿಕಾರಿಯಾಗಿ ತನ್ನ ಬ್ಯಾಕ್‌ಅಪ್ ಗುರುತನ್ನು ಬಳಸಿಕೊಂಡ ಮೃಣಾಂಕ್ ಇಮಿಗ್ರೇಷನ್ ಆಫೀಸರ್​ಗಳನ್ನು ವಂಚಿಸುವ ಪ್ರಯತ್ನ ಮಾಡಿದ್ದ.

ಅಲ್ಲದೆ ಬಂಧನದಿಂದ ತಪ್ಪಿಸಿಕೊಳ್ಳಲು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಕರೆ ಮಾಡುವ ನಾಟಕ ಮಾಡಿದ್ದ. ಆದರೆ ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ಅಧಿಕಾರಿಗಳು ಆತನನ್ನು ಬಂಧಿಸಿ ವಿಚಾರಿಸಿದ್ದಾರೆ. ಈ ವೇಳೆ ಕ್ರಿಕೆಟಿಗನ ವಂಚನೆ ವಿಚಾರಗಳು ಬೆಳಕಿಗೆ ಬಂದಿವೆ.

ಅಂದಹಾಗೆ ಮೃಣಾಂಕ್ ಸಿಂಗ್ ದೆಹಲಿ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಯಾಗಿದ್ದು, ನಂತರ ರಾಜಸ್ಥಾನದ ಕಾಲೇಜಿನಲ್ಲಿ ಎಂಬಿಎ ವ್ಯಾಸಂಗ ಮಾಡಿದ್ದಾರೆ ಎಂದು ತನಿಖಾಧಿಕಾರಿಗಳು ಬಹಿರಂಗಪಡಿಸಿದ್ದಾರೆ. ಮೃಣಾಂಕ್ ಅಂಡರ್-19 ಕ್ರಿಕೆಟ್​ನಲ್ಲಿ ಹರಿಯಾಣ ಪರ  ಆಡಿದ್ದಾರೆ.

ಇದನ್ನೂ ಓದಿ: IPL 2024: ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಸುರೇಶ್ ರೈನಾ..?

ಇನ್ನು 2014 ರಿಂದ 2018 ರವರೆಗೆ ಮುಂಬೈ ಇಂಡಿಯನ್ಸ್ ಪರ ಆಡಿದ್ದೇನೆ ಎಂದು ತಿಳಿಸಿದ್ದಾನೆ. ಆದರೆ ಐಪಿಎಲ್ ಆಟಗಾರರ ಪಟ್ಟಿಯಲ್ಲಿ ಎಲ್ಲೂ ಮೃಣಾಂಕ್ ಸಿಂಗ್ ಹೆಸರು ಕಾಣಿಸಿಕೊಂಡಿಲ್ಲ. ಇದಾಗ್ಯೂ ಆತನ ಎಲ್ಲಾ ಮಾಹಿತಿಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಒಟ್ಟಿನಲ್ಲಿ ಕ್ರಿಕೆಟ್​ ಮೂಲಕ ಹೆಸರು ಮಾಡಲು ಹೊರಟಿದ್ದ 25 ವರ್ಷದ ಆಟಗಾರ ವಂಚನೆಯಿಂದಲೇ ಸಖತ್ ಸುದ್ದಿಯಾಗಿದ್ದು ಮಾತ್ರ ವಿಪರ್ಯಾಸ.

Published On - 1:11 pm, Thu, 28 December 23

‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ