AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video Viral: ಎಲ್ಲರ ಸಮ್ಮುಖದಲ್ಲೇ ನ್ಯಾಯಾಧೀಶರನ್ನು ಥಳಿಸಿದ ಆರೋಪಿ; ವಿಡಿಯೋ ವೈರಲ್​​

ನ್ಯಾಯಾಧೀಶರು ಆರೋಪಿಯನ್ನು ತಪ್ಪಿತಸ್ಥನೆಂದು ಘೋಷಿಸಿ ಜೈಲು ಶಿಕ್ಷೆಯ ತೀರ್ಪು ನೀಡುತ್ತಿದ್ದಂತೆ ಕೋಪಗೊಂಡ ಆರೋಪಿ ಮೇಜಿನ ಮೇಲಿಂದ ಜಿಗಿದು ನೇರವಾಗಿ ಹೋಗಿ ನ್ಯಾಯಾಧೀಶರಿಗೆ ಥಳಿಸಿದ್ದಾನೆ. ಈ ಆಘಾತಕಾರಿ ಘಟನೆಯ ವಿಡಿಯೋ ಇದೀಗಾ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.

Video Viral: ಎಲ್ಲರ ಸಮ್ಮುಖದಲ್ಲೇ ನ್ಯಾಯಾಧೀಶರನ್ನು ಥಳಿಸಿದ ಆರೋಪಿ; ವಿಡಿಯೋ ವೈರಲ್​​
Man Attacks His JudgeImage Credit source: Twitter
ಅಕ್ಷತಾ ವರ್ಕಾಡಿ
|

Updated on: Jan 05, 2024 | 3:01 PM

Share

ಅಮೆರಿಕದ ನೆವಾಡಾದ ನ್ಯಾಯಾಲಯದಲ್ಲಿ ನಡೆದ ಘಟನೆಯೊಂದು ಅಂತರ್ಜಾಲದಲ್ಲಿ ಭಾರೀ ವೈರಲ್ ಆಗುತ್ತಿದೆ. ನ್ಯಾಯಾಧೀಶರು ಆರೋಪಿಯನ್ನು ತಪ್ಪಿತಸ್ಥನೆಂದು ಘೋಷಿಸಿ ಜೈಲು ಶಿಕ್ಷೆಯ ತೀರ್ಪು ನೀಡುತ್ತಿದ್ದಂತೆ ಕೋಪಗೊಂಡ ಆರೋಪಿ ಮೇಜಿನ ಮೇಲಿಂದ ಜಿಗಿದು ನೇರವಾಗಿ ಹೋಗಿ ನ್ಯಾಯಾಧೀಶರಿಗೆ ಥಳಿಸಿದ್ದಾನೆ. ಎಲ್ಲರ ಸಮ್ಮುಖದಲ್ಲೇ ನ್ಯಾಯಾಧೀಶರ ಮೇಲೆ ಹಲ್ಲೆ ನಡೆಸಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ನ್ಯಾಯಾಧೀಶರನ್ನು ರಕ್ಷಿಸಲು ಯತ್ನಿಸಿದ ಭದ್ರತಾ ಸಿಬ್ಬಂದಿಗಳು ಗಾಯಗೊಂಡಿದ್ದಾರೆ.

ತೀರ್ಪು ನೀಡಿದ ನ್ಯಾಯಾಧೀಶರ ಮೇಲೆ ಹುಲಿಯಂತೆ ಎಗರಿಬಿದ್ದ ಆರೋಪಿ ವಿಡಿಯೋ ಇಲ್ಲಿದೆ ನೋಡಿ:

ಇದನ್ನೂ ಓದಿ: ಲಾಟರಿಯಲ್ಲಿ ಕೋಟಿ ದುಡ್ಡು ಗೆದ್ದ ಖುಷಿಗೆ ವೇದಿಕೆಯ ಮೇಲೆ ಕುಸಿದು ಬಿದ್ದ ಮಹಿಳೆ

ಮಾಧ್ಯಮ ವರದಿಗಳ ಪ್ರಕಾರ, 30 ವರ್ಷದ ದೇವ್ಬ್ರಾ ರೆಡಾನ್ ಎಂಬಾತನ ಮೇಲೆ ಮೂರು ಬಾರಿ ಬ್ಯಾಟರಿ ಕಳ್ಳತನದ ಆರೋಪದಡಿಯಲ್ಲಿ ಕೇಸು ದಾಖಲಾಗಿತ್ತು. ಕಳೆದ ಬುಧವಾರ ಕ್ಲಾರ್ಕ್ ಕೌಂಟಿ ಜಿಲ್ಲಾ ನ್ಯಾಯಾಲಯದಲ್ಲಿ ನ್ಯಾಯಾಧೀಶರಾದ ಮೇರಿ ಕೇ ಹೋಲ್ತಸ್ ಅವರ ಮುಂದೆ ಅಂತಿಮ ತೀರ್ಪಿಗಾಗಿ ಹಾಜರಾಗಿದ್ದ. ವಕೀಲರ ವಾದದ ನಂತರ, ನ್ಯಾಯಾಧೀಶರು ದೇವ್ಬ್ರಾ ಅವರನ್ನು ತಪ್ಪಿತಸ್ಥರೆಂದು ಘೋಷಿಸಿ, ಜೈಲು ಶಿಕ್ಷೆಗೆ ಆದೇಶಿಸಿದರು. ಇದರಿಂದ ಕೋಪಗೊಂಡ ಆರೋಪಿ ಮೇಜಿನ ಮೇಲಿಂದ ಜಿಗಿದು ನೇರವಾಗಿ ನ್ಯಾಯಾಧೀಶರ ಮೇಲೆ ದಾಳಿ ಮಾಡಿದ್ದಾನೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ