AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಪರೂಪದ ಅರ್ಧ ಹೆಣ್ಣು, ಅರ್ಧ ಗಂಡು ಹಕ್ಕಿ ಕ್ಯಾಮರಾದಲ್ಲಿ ಸೆರೆ; 100 ವರ್ಷಗಳಲ್ಲಿ ಎರಡನೇ ಆವಿಷ್ಕಾರ

ಸಾಮಾನ್ಯವಾಗಿ ಮನುಷ್ಯರಲ್ಲಿ ಅರ್ಧ ಗಂಡು ಮತ್ತು ಅರ್ಧ ಹೆಣ್ಣಿನ ಗುಣಲಕ್ಷಣಗಳನ್ನು ಇರುವುದನ್ನು ನೋಡಿರುತ್ತೇವೆ. ಆದರೆ ಪ್ರಕ್ಷಿಗಳಲ್ಲಿಯೂ ಕೂಡ ಈರೀತಿಯ ಲಕ್ಷಣ ಕಂಡುಬಂದಿದ್ದು, ಇದೀಗಾ ವಿಜ್ಞಾನ ಲೋಕದಲ್ಲಿ ಅಚ್ಚರಿಯನ್ನುಂಟು ಮಾಡಿದೆ. ಸದ್ಯ ಕೊಲಂಬಿಯಾದಲ್ಲಿ ಕ್ಯಾಮೆರಾ ಕಣ್ಣಿಗೆ ಸೆರೆಯಾದ ಅಪರೂಪದ ಪಕ್ಷಿಯ ಪೋಟೋ ಸೋಶಿಯಲ್​​​ ವೀಡಿಯಾಗಳಲ್ಲಿ ಭಾರೀ ವೈರಲ್​​ ಆಗಿದೆ.

ಅಪರೂಪದ ಅರ್ಧ ಹೆಣ್ಣು, ಅರ್ಧ ಗಂಡು ಹಕ್ಕಿ ಕ್ಯಾಮರಾದಲ್ಲಿ ಸೆರೆ; 100 ವರ್ಷಗಳಲ್ಲಿ ಎರಡನೇ ಆವಿಷ್ಕಾರ
Half-Female, Half-Male Bird Image Credit source: John Murillo
ಅಕ್ಷತಾ ವರ್ಕಾಡಿ
|

Updated on: Jan 05, 2024 | 10:48 AM

Share

ಕೊಲಂಬಿಯಾದಲ್ಲಿ ಅತ್ಯಂತ ಅಪರೂಪದ ‘ಅರ್ಧ-ಹೆಣ್ಣು, ಅರ್ಧ-ಗಂಡು’ ಪಕ್ಷಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದು 100 ವರ್ಷಗಳ ಹಿಂದೆ ಈ ಜಾತಿಯಲ್ಲಿ ಒಮ್ಮೆ ಮಾತ್ರ ಕ್ಯಾಮೆರಾ ಕಣ್ಣಿನಲ್ಲಿ ಸೆರೆಯಾಗಿತ್ತು. ಇಂಡಿಪೆಂಡೆಂಟ್ ವರದಿಯ ಪ್ರಕಾರ , ಅಪರೂಪದ ಹಕ್ಕಿ ತನ್ನ ದೇಹದ ಅರ್ಧಭಾಗದಲ್ಲಿ ಪುರುಷ ಬಣ್ಣಗಳನ್ನು ಹೊಂದಿದ್ದು, ಇನ್ನೊಂದು ಅರ್ಧಭಾಗದಲ್ಲಿ ಹೆಣ್ಣು ಗರಿಗಳನ್ನು ಹೊಂದಿರುತ್ತದೆ. ಸಾಮಾನ್ಯವಾಗಿ ಮನುಷ್ಯರಲ್ಲಿ ಅರ್ಧ ಗಂಡು ಮತ್ತು ಅರ್ಧ ಹೆಣ್ಣಿನ ಗುಣಲಕ್ಷಣಗಳನ್ನು ಇರುವುದನ್ನು ನೋಡಿರುತ್ತೇವೆ. ಆದರೆ ಪ್ರಕ್ಷಿಗಳಲ್ಲಿಯೂ ಕೂಡ ಈರೀತಿಯ ಲಕ್ಷಣ ಕಂಡುಬಂದಿದ್ದು, ಇದೀಗಾ ವಿಜ್ಞಾನ ಲೋಕದಲ್ಲಿ ಅಚ್ಚರಿಯನ್ನುಂಟು ಮಾಡಿದೆ. ಸದ್ಯ ಕೊಲಂಬಿಯಾದಲ್ಲಿ ಕ್ಯಾಮೆರಾ ಕಣ್ಣಿಗೆ ಸೆರೆಯಾದ ಅಪರೂಪದ ಪಕ್ಷಿಯ ಪೋಟೋ ಸೋಶಿಯಲ್​​​ ವೀಡಿಯಾಗಳಲ್ಲಿ ಭಾರೀ ವೈರಲ್​​ ಆಗಿದೆ.

ಈ ಪಕ್ಷಿಯಲ್ಲಿ ದೇಹದ ಒಂದು ಭಾಗವು ಗಂಡು ಪುಕ್ಕಗಳು ಮತ್ತು ಸಂತಾನೋತ್ಪತ್ತಿ ಅಂಗಗಳೊಂದಿಗೆ ಕಾಣಿಸಿಕೊಂಡಿದೆ. ಇನ್ನೊಂದು ಬದಿಯಲ್ಲಿ ಸ್ತ್ರೀ ಪುಕ್ಕ ಮತ್ತು ಸಂತಾನೋತ್ಪತ್ತಿ ಅಂಗಗಳೊಂದಿಗೆ ಫಿನೋಟೈಪಿಕ್ ಸ್ತ್ರೀಯಾಗಿ ಕಂಡುಬಂದಿದ್ದು ವಿಜ್ಞಾನ ಲೋಕದಲ್ಲಿ ಬೆರಗು ಮೂಡಿಸಿದೆ.

ಇದನ್ನೂ ಓದಿ: ಶ್ರೀಮಂತನಾಗುವುದು ಹೇಗೆಂದು ಪುಸ್ತಕ ಬರೆದ ಲೇಖಕನ ಬಳಿ 10,000 ಕೋಟಿ ರೂ ಸಾಲ; ಆದರೆ, ಬೇರೆ ಇದೆ ಟ್ವಿಸ್ಟ್

ಕೊಲಂಬಿಯಾದ ಮನಿಜೆಲ್ಸ್ ಬಳಿಯ ನಿಸರ್ಗ ಮೀಸಲು ಪ್ರದೇಶದಲ್ಲಿನ ಒಂದು ಸಣ್ಣ ಜಮೀನಿನಲ್ಲಿ ಗಮನಾರ್ಹವಾದ ವೈಜ್ಞಾನಿಕ ಆವಿಷ್ಕಾರದಲ್ಲಿ ಸಂಶೋಧಕರ ತಂಡದ ಭಾಗವಾಗಿದ್ದ ಹವ್ಯಾಸಿ ಪಕ್ಷಿಶಾಸ್ತ್ರಜ್ಞ ಜಾನ್ ಮುರಿಲ್ಲೊ ಅವರು ಹಸಿರು ಹನಿಕ್ರೀಪರ್ ಪಕ್ಷಿ ಎಂದು ಗುರುತಿಸಲಾದ ಈ ಪಕ್ಷಿಯನ್ನು ಮೊದಲು ಗುರುತಿಸಿದರು. ಒಟಾಗೋ ಯೂನಿವರ್ಸಿಟಿ ಅಪರೂಪದ ಪಕ್ಷಿಯ ವಿಡಿಯೋವನ್ನು ಶೇರ್​ ಮಾಡಿಕೊಂಡಿದೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
Akshatha Vorkady
Akshatha Vorkady

ಅಕ್ಷತಾ ವರ್ಕಾಡಿ- ಹುಟ್ಟೂರು ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿ. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವೀಧರೆ. ಕಳೆದ ಮೂರು ವರ್ಷಗಳಿಂದ ‘ಉತ್ತಮ ಸಮಾಜಕ್ಕಾಗಿ’ ಟಿವಿ9 ಡಿಜಿಟಲ್​ನಲ್ಲಿ ಕೆಲಸ ಮಾಡುತ್ತಿದ್ದೇನೆ. ವೈರಲ್ ಸುದ್ದಿಗಳು, ಆಧ್ಯಾತ್ಮ, ಉದ್ಯೋಗವಕಾಶ, ಶಿಕ್ಷಣ, ಆರೋಗ್ಯ ಮತ್ತು ಪ್ರಯಾಣದ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.

Read More
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ