Robert Kiyosaki: ಶ್ರೀಮಂತನಾಗುವುದು ಹೇಗೆಂದು ಪುಸ್ತಕ ಬರೆದ ಲೇಖಕನ ಬಳಿ 10,000 ಕೋಟಿ ರೂ ಸಾಲ; ಆದರೆ, ಬೇರೆ ಇದೆ ಟ್ವಿಸ್ಟ್

Best Selling Rich Dad Poor Dad's Author: ರಿಚ್ ಡ್ಯಾಡ್ ಪೂರ್ ಡ್ಯಾಡ್ ಪುಸ್ತಕದ ಕರ್ತೃ ರಾಬರ್ಟ್ ಕಿಯೋಸಾಕಿ ತನಗೆ 1.2 ಬಿಲಿಯನ್ ಡಾಲರ್ (10,000 ಕೋಟಿ ರೂ) ಸಾಲ ಇದೆ ಎಂದು ಹೇಳಿಕೊಂಡಿದ್ದಾರೆ. ಇವರು ಬ್ಯಾಂಕ್​ನಲ್ಲಿ ಇಷ್ಟು ಸಾಲ ಮಾಡಿದ್ದಾರೆ. ತಾನು ತೊಂದರೆ ಸಿಕ್ಕರೆ ಬ್ಯಾಂಕ್ ಕೂಡ ತೊಂದರೆಗೆ ಸಿಲುಕುತ್ತದೆ ಎನ್ನುತ್ತಾರೆ ಇವರು. ಸಾಲ ಮಾಡಿ ಅದನ್ನು ಒಳ್ಳೆಯ ಆದಾಯ ತರುವ ಉದ್ದಿಮೆ ಅಥವಾ ರಿಯಲ್ ಎಸ್ಟೇಟ್​ಗೆ ಹೂಡಿಕೆ ಮಾಡಿದರೆ ಅದು ಒಳ್ಳೆಯ ಸಾಲ ಎನ್ನುವುದು ಇವರ ಅನಿಸಿಕೆ.

Robert Kiyosaki: ಶ್ರೀಮಂತನಾಗುವುದು ಹೇಗೆಂದು ಪುಸ್ತಕ ಬರೆದ ಲೇಖಕನ ಬಳಿ 10,000 ಕೋಟಿ ರೂ ಸಾಲ; ಆದರೆ, ಬೇರೆ ಇದೆ ಟ್ವಿಸ್ಟ್
ರಾಬರ್ಟ್ ಕಿಯೋಸಾಕಿ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jan 04, 2024 | 7:00 PM

‘ರಿಚ್ ಡ್ಯಾಡ್, ಪೂರ್ ಡ್ಯಾಡ್’ (Rich Dad Poor Dad) ಎಂಬ ಬೆಸ್ಟ್ ಸೆಲ್ಲಿಂಗ್ ಬುಕ್ ಹೆಸರು ನಿಮಗೆ ಗೊತ್ತಿರಬಹುದು. ರಾಬರ್ಟ್ ಕಿಯೋಸಾಕಿ (Robert Kiyosaki) ಇದರ ಲೇಖಕರು. ಸಂಪತ್ತು ಶೇಖರಿಸುವ ಸಾಂಪ್ರದಾಯಿಕ ವಿಧಾನವನ್ನು ಬದಿಗೊತ್ತಿ, ಹೊಸ ಆಲೋಚನೆಯನ್ನು ಇವರು ತಮ್ಮ ಪುಸ್ತಕದಲ್ಲಿ ಹುಟ್ಟು ಹಾಕಿದವರು. ಹಣ ಸಂಪಾದನೆಯೇ ಸಂಪತ್ತು ಸಂಪಾದನೆಗೆ ಏಕೈಕ ದಾರಿ ಅಲ್ಲ. ಸಂಪತ್ತನ್ನು ಹೀಗೂ ಗಳಿಸಬಹುದು ಎಂದು ತಮ್ಮ ಪುಸ್ತಕದಲ್ಲಿ ಅವರು ತೋರಿಸಿಕೊಟ್ಟವರು. ಇದೀಗ ಇದೇ ರಾಬರ್ಟ್ ಕಿಯೋಸಾಕಿ 1.2 ಬಿಲಿಯನ್ ಡಾಲರ್​ನಷ್ಟು ಸಾಲದಲ್ಲಿ ಇದ್ದಾರೆ. ಅಂದರೆ ಸುಮಾರು 10,000 ಕೋಟಿ ರೂ ಸಾಲ ಹೊಂದಿದ್ದಾರೆ. ಈ ವಿಚಾರವನ್ನು ಅವರೇ ಬಹಿರಂಗಗೊಳಿಸಿದ್ದಾರೆ. ತಾನು ದಿವಾಳಿ ಎದ್ದರೆ ತನಗೆ ಸಾಲ ಕೊಟ್ಟ ಬ್ಯಾಂಕ್ ಕೂಡ ತೊಂದರೆಗೆ ಸಿಲುಕಬೇಕಾಗುತ್ತದೆ ಎಂದು ಇವರು ಕೆಲ ವಾರಗಳ ಹಿಂದಿನ ಇನ್ಸ್​ಟಾಗ್ರಾಮ್ ರೀಲ್​ವೊಂದರಲ್ಲಿ ತಿಳಿಸಿದ್ದಾರೆ.

‘ನಾನು ತೊಂದರೆ ಸಿಕ್ಕರೆ ಬ್ಯಾಂಕ್ ಕೂಡ ತೊಂದರೆಗೆ ಸಿಕ್ಕುತ್ತದೆ. ಅದು ನನ್ನ ಸಮಸ್ಯೆ ಅಲ್ಲ’ ಎನ್ನುವ ರಾಬರ್ಟ್ ಕಿಯೋಸಾಕಿ ಅವರ ಹೇಳಿಕೆ ದಾರ್ಷ್ಟ್ಯತನದ್ದು ಎಂದು ಅನಿಸಬಹುದು. ಆದರೆ, ತಮ್ಮ ಮಾತುಗಳಿಗೆ ಅವರು ಒಂದಷ್ಟು ಲಾಜಿಕ್​ಗಳನ್ನು ನೀಡಿದ್ದಾರೆ.

ಇದನ್ನೂ ಓದಿ: ಚೆನ್ನೈ: ತನ್ನ 50 ಉದ್ಯೋಗಿಗಳಿಗೆ ಕಾರನ್ನು ಉಡುಗೊರೆಯಾಗಿ ನೀಡಿದ ಐಟಿ ಕಂಪನಿ

ರಾಬರ್ಟ್ ಕಿಯೋಸಾಕಿ ಅವರು ತಮ್ಮ ಸಂಪಾದನೆಯ ಹಣವನ್ನು ಕರೆನ್ಸಿ ಆಸ್ತಿಗಳಲ್ಲಿ ತೊಡಗಿಸಿಕೊಂಡಿಲ್ಲ. ಚಿನ್ನ, ಬೆಳ್ಳಿಯನ್ನು ಖರೀದಿಸಿದ್ದಾರೆ. ನಗದು ಹಣ ಅಥವಾ ಕರೆನ್ಸಿ ಹಣವನ್ನು ಇಟ್ಟುಕೊಳ್ಳಲು ತನಗೆ ಇಚ್ಛೆ ಇಲ್ಲ ಎನ್ನುವ ಅವರು 1971ರ ಅಮೆರಿಕಾ ಡಾಲರ್ ಕುಸಿತದ ನಿದರ್ಶನ ಉಲ್ಲೇಖಿಸಿದ್ದಾರೆ.

ರಾಬರ್ಟ್ ಕಿಯೋಸಾಕಿ ತಮ್ಮ ಹೆಚ್ಚಿನ ಆಸ್ತಿಯನ್ನು ಚಿನ್ನ ಮತ್ತು ಬೆಳ್ಳಿಯಾಗಿ ಪರಿವರ್ತಿಸಿದ್ದಾರೆ. ಆದರೆ, ಬ್ಯಾಂಕ್​ನಲ್ಲಿ ಅಷ್ಟೊಂದು ಸಾಲ ಹೇಗೆ ಮಾಡಿದರು ಎಂಬುದು ಅಚ್ಚರಿ. ಆದರೆ, ಕಿಯೋಸಾಕಿ ಬಳಿ ಇದಕ್ಕೆ ಉತ್ತರ ಇದೆ. ಅವರು ಸಾಲವನ್ನು ಒಳ್ಳೆಯ ಸಾಲ, ಕೆಟ್ಟ ಸಾಲ ಎಂದು ವರ್ಗೀಕರಿಸುತ್ತಾರೆ. ಉತ್ತಮ ಆದಾಯ ತರಲು ಸಾಲ ಬಳಸಿದರೆ ಅದು ಉತ್ತಮ ಸಾಲ ಎಂಬುದು ಅವರ ಅನಿಸಿಕೆ.

ಸಾಲ ಮಾಡಿ ರಿಯಲ್ ಎಸ್ಟೇಟ್​ನಲ್ಲಿ ಹಣ ಹೂಡಿಕೆ ಮಾಡಬಹುದು. ಲಾಭದಾಯಕ ಉದ್ದಿಮೆಗಳನ್ನು ಆರಂಭಿಸಬಹುದು ಎಂದು ಅವರು ಟಿಪ್ಸ್ ನೀಡುತ್ತಾರೆ. ಅವರು ತಮ್ಮ ‘ರಿಚ್ ಡ್ಯಾಡ್ ಪೂರ್ ಡ್ಯಾಡ್’ ಪುಸ್ತಕದಲ್ಲಿ ಇಂಥ ಕೆಲ ಅಸಾಂಪ್ರಾಯಿಕ ವಿಧಾನಗಳ ಬಗ್ಗೆ ಬರೆದಿದ್ದಾರೆ.

ಇದನ್ನೂ ಓದಿ: ಶ್ರೀಮಂತಿಕೆಯಲ್ಲಿ ಅಂಬಾನಿ ಫ್ಯಾಮಿಲಿ ಹಿಂದಿಕ್ಕಿದ ಅದಾನಿ ಫ್ಯಾಮಿಲಿ; ಸಂಪತ್ತು ಹೆಚ್ಚಳಕ್ಕೆ ಸುಪ್ರೀಂ ತೀರ್ಪು ಪುಷ್ಟಿ

ಈಗ ಹೆಚ್ಚಿನ ಯಶಸ್ವಿ ಉದ್ಯಮಿಗಳು ಬಹಳ ದೊಡ್ಡ ಪ್ರಮಾಣದ ಸಾಲ ಹೊಂದಿರುವುದನ್ನು ಗಮನಿಸಿರಬಹುದು. ಮುಕೇಶ್ ಅಂಬಾನಿ, ಗೌತಮ್ ಅದಾನಿ ಮೊದಲಾದವರು ಬಹಳ ಅಧಿಕ ಪ್ರಮಾಣದ ಸಾಲ ಹೊಂದಿದ್ದಾರೆ. ಸಾಲವನ್ನು ಬಳಸಿ ತಮ್ಮ ಉದ್ದಿಮೆಯನ್ನು ಲಾಭದಾಯಕವಾಗಿ ಮಾಡುವ ತಂತ್ರಗಾರಿಕೆ ಅವರಿಗೆ ಗೊತ್ತಿದೆ. ಸರಿಯಾಗಿ ಹಣ ವಿನಿಯೋಗಿಸಿದರೆ ಆದಾಯ ಹೆಚ್ಚಿಸಬಹುದು. ರಾಬರ್ಟ್ ಕಿಯೋಸಾಕಿ ಈ ವಿಚಾರವನ್ನು ಒತ್ತಿ ಹೇಳುತ್ತಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ