ಒಂದೇ ತಿಂಗಳಲ್ಲಿ ಜಿಯೋಗೆ 31 ಲಕ್ಷ ಹೊಸ ಗ್ರಾಹಕರ ಸೇರ್ಪಡೆ; 20 ಲಕ್ಷ ಗ್ರಾಹಕರನ್ನು ಕಳೆದುಕೊಂಡ ವೊಡಾಫೋನ್
Reliance Jio Tops: 2023ರ ಅಕ್ಟೋಬರ್ ತಿಂಗಳಲ್ಲಿ ರಿಲಾಯನ್ಸ್ ಜಿಯೋಗೆ 31.59 ಲಕ್ಷ ಮೊಬೈಲ್ ಬಳಕೆದಾರರು ಸೇರ್ಪಡೆಯಾಗಿದ್ದಾರೆ. ಏರ್ಟೆಲ್ಗೆ 3.52 ಲಕ್ಷ ಹೊಸ ಗ್ರಾಹಕರು ಸಿಕ್ಕಿದ್ದಾರೆ. ವೊಡಾಫೋನ್ ಐಡಿಯಾ ಸಂಸ್ಥೆ ಇದೇ ಅವಧಿಯಲ್ಲಿ 20.44 ಲಕ್ಷ ಬಳಕೆದಾರರನ್ನು ಕಳೆದುಕೊಂಡಿದೆ. ಜಿಯೋದಲ್ಲಿ 45.23 ಕೋಟಿ, ಏರ್ಟೆಲ್ನಲ್ಲಿ 37.81 ಕೋಟಿ, ವೊಡಾಫೋನ್ನಲ್ಲಿ 22.54 ಕೋಟಿ ವೈರ್ಲೆಸ್ ಸೇವೆ ಪಡೆಯುವ ಗ್ರಾಹಕರಿದ್ದಾರೆ.
ನವದೆಹಲಿ, ಜನವರಿ 4: ಭಾರತದ ಟೆಲಿಕಾಂ ಕಂಪನಿಗಳು (telecom companies) ಹೊಸ ಗ್ರಾಹಕರನ್ನು ಸೆಳೆಯಲು ಕಸರತ್ತು ನಡೆಸುವುದು ಮುಂದುವರಿದಿದೆ. ಈ ಕಾರ್ಯದಲ್ಲಿ ಜಿಯೋ ಅತಿಹೆಚ್ಚು ಗ್ರಾಹಕರನ್ನು ಸೆಳೆದಿದೆ. ವೊಡಾಫೋನ್ ಐಡಿಯಾ ಅತಿಹೆಚ್ಚು ಗ್ರಾಹಕರನ್ನು ಕಳೆದುಕೊಂಡದೆ. ಟ್ರಾಯ್ ಬಿಡುಗಡೆ ಮಾಡಿದ ಅಕ್ಟೋಬರ್ ತಿಂಗಳ ಸಬ್ಸ್ಕ್ರೈಬರ್ ಮಾಹಿತಿ ಪ್ರಕಾರ ರಿಲಾಯನ್ಸ್ ಜಿಯೋ ಆ ಒಂದು ತಿಂಗಳಲ್ಲಿ 31.59 ಲಕ್ಷ ಮೊಬೈಲ್ ಬಳಕೆದಾರರನ್ನು ಹೊಸದಾಗಿ ಗಳಿಸಿದೆ. ಭಾರ್ತಿ ಏರ್ಟೆಲ್ ಸಂಸ್ಥೆ ಗಳಿಸಿದ ಗ್ರಾಹಕ ಸಂಖ್ಯೆ ಕೇವಲ 3.52 ಲಕ್ಷ ಮಾತ್ರ. ಇದೇ ವೇಳೆ, ಅಕ್ಟೋಬರ್ ತಿಂಗಳಲ್ಲಿ ವೊಡಾಫೋನ್ ಐಡಿಯಾ ಸಂಸ್ಥೆ 20.44 ಲಕ್ಷ ಮೊಬೈಲ್ ಗ್ರಾಹಕರನ್ನು ಕಳೆದುಕೊಂಡಿದೆ.
ಈ ಬೆಳವಣಿಗೆ ಬಳಿಕ ರಿಲಾಯನ್ಸ್ ಜಿಯೋ ದೇಶದ ಅತಿದೊಡ್ಡ ಟೆಲಿಕಾಂ ಆಪರೇಟರ್ ಎಂಬ ಸ್ಥಾನವನ್ನು ಭದ್ರ ಮಾಡಿಕೊಂಡಿದೆ. ಸೆಪ್ಟೆಂಬರ್ನಲ್ಲಿ 44.92 ಕೋಟಿ ಇದ್ದ ಜಿಯೋ ವೈರ್ಲೆಸ್ ಬಳಕೆದಾರರ ಸಂಖ್ಯೆ ಅಕ್ಟೋಬರ್ ಅಂತ್ಯದಲ್ಲಿ 45.23 ಕೋಟಿಗೆ ಏರಿದೆ.
ಇನ್ನು, ಭಾರ್ತಿ ಏರ್ಟೆಲ್ನ ಮೊಬೈಲ್ ಸಬ್ಸ್ಕ್ರೈಬರ್ಗಳ ಸಂಖ್ಯೆ ಅಕ್ಟೋಬರ್ನಲ್ಲಿ 37.81 ಕೋಟಿಗೆ ಹೆಚ್ಚಾಗಿದೆ.
ಬಂಡವಾಳದ ಕೊರತೆ ಎದುರಿಸುತ್ತಿರುವ ವೊಡಾಫೋನ್ ಐಡಿಯಾ ಸಂಸ್ಥೆಯ ವೈರ್ಲೆಸ್ ಸಬ್ಸ್ಕ್ರೈಬರ್ಗಳ ಸಂಖ್ಯೆ 22.54 ಕೋಟಿಗೆ ಇಳಿಮುಖವಾಗಿದೆ.
ಇದನ್ನೂ ಓದಿ: Flight Tickets: ಫುಯಲ್ ಚಾರ್ಜ್ ಹಿಂಪಡೆದ ಇಂಡಿಗೋ ಏರ್ಲೈನ್; ಇಳಿಕೆಯಾಗಲಿದೆ ವಿಮಾನ ಟಿಕೆಟ್ ಬೆಲೆ
ಅಕ್ಟೋಬರ್ 2023ರಲ್ಲಿ ಟೆಲಿಕಾಂ ಸಬ್ಸ್ಕ್ರೈಬರ್ಗಳ ಸಂಖ್ಯೆ…
- ರಿಲಾಯನ್ಸ್ ಜಿಯೋ: 45.23 ಕೋಟಿ
- ಭಾರ್ತಿ ಏರ್ಟೆಲ್: 37.81 ಕೋಟಿ
- ವೊಡಾಫೋನ್ ಐಡಿಯಾ: 22.54 ಕೋಟಿ
ವೊಡಾಫೋನ್ ಐಡಿಯಾ ಸೆಟಿಲೈಟ್ ಸೇವೆಗೆ ಇಲಾನ್ ಮಸ್ಕ್ ಅವರ ಸ್ಟಾರ್ಲಿಂಕ್ ಜೊತೆ ಒಪ್ಪಂದ ಮಾಡಿಕೊಳ್ಳುತ್ತಿದೆ ಎಂಬ ಸುದ್ದಿ ಇತ್ತು. ಇದಾದ ಬಳಿಕ ವೊಡಾಫೋನ್ನ ಷೇರುಬೆಲೆ ಏರತೊಡಗಿತು. ಆದರೆ, ವಿಐಎಲ್ ಈ ಸುದ್ದಿಯನ್ನು ನಿರಾಕರಿಸುತ್ತಿರುವಂತೆಯೇ ಅದರ ಷೇರುಬೆಲೆ ಕುಸಿಯತೊಡಗಿದೆ.
ಇನ್ನು, ವೊಡಾಫೋನ್ ಐಡಿಯಾ ಸಂಸ್ಥೆಯಲ್ಲಿ ಇತ್ತೀಚೆಗೆ ಇಬ್ಬರು ಹಿರಿಯ ಎಕ್ಸಿಕ್ಯೂಟಿವ್ಗಳು ರಾಜೀನಾಮೆ ನೀಡಿರುವುದೂ ಕೂಡ ಸಂಸ್ಥೆಗೆ ಹಿನ್ನಡೆ ತಂದಿದೆ. ಸಿಇಒ ಮತ್ತು ಸಿಆರ್ಒಗಳು ಕಂಪನಿ ತೊರೆದಿದ್ದಾರೆ.
ಇದನ್ನೂ ಓದಿ: Cyber Criminals: ಎರಡೂವರೆ ವರ್ಷದಲ್ಲಿ ಭಾರತದಿಂದ 10,300 ಕೋಟಿ ರೂ ಲಪಟಾಯಿಸಿದ್ದಾರೆ ಸೈಬರ್ ಕ್ರಿಮಿನಲ್ಗಳು
ಅತ್ತ, ಭಾರತದ ನಂಬರ್ ಒನ್ ಟೆಲಿಕಾಂ ಆಪರೇಟರ್ ಆಗಿರುವ ರಿಲಾಯನ್ಸ್ ಜಿಯೋದಲ್ಲಿ ನಾಯಕತ್ವದಲ್ಲಿ ಸರಾಗ ಬದಲಾವಣೆ ಆಗಿದೆ. ಜಿಯೋ ಛರ್ಮನ್ ಆಗಿದ್ದ ಮುಕೇಶ್ ಅಂಬಾನಿ ಕೆಳಗಿಳಿದಿದ್ದಾರೆ. ಆ ಸ್ಥಾನಕ್ಕೆ ಮಗ ಆಕಾಶ್ ಅಂಬಾನಿ ಏರಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ