Cyber Criminals: ಎರಡೂವರೆ ವರ್ಷದಲ್ಲಿ ಭಾರತದಿಂದ 10,300 ಕೋಟಿ ರೂ ಲಪಟಾಯಿಸಿದ್ದಾರೆ ಸೈಬರ್ ಕ್ರಿಮಿನಲ್​ಗಳು

Gangs of Cyber World: 2021ರ ಏಪ್ರಿಲ್ 1ರಿಂದ ಈಚೆಗೆ ಭಾರತದಿಂದ 10,300 ಕೋಟಿ ರೂ ಮೊತ್ತದ ಹಣವನ್ನು ಸೈಬರ್ ಕ್ರಿಮಿನಲ್​ಗಳು ಲಪಟಾಯಿಸಿದ್ದಾರೆ. ಎನ್​ಸಿಆರ್​ಪಿ ಪೋರ್ಟಲ್​ನಲ್ಲಿ ಸಲ್ಲಿಕೆಯಾಗಿರುವ 5,000ಕ್ಕೂ ಹೆಚ್ಚು ಸೈಬರ್ ಕ್ರೈಮ್ ದೂರುಗಳ ಪೈಕಿ ಹೆಚ್ಚಿನ ಪ್ರಕರಣಗಳಲ್ಲಿ ಚೀನೀ ಗ್ಯಾಂಗ್​ಗಳು ಶಾಮೀಲಾಗಿವೆ. ನೀವು ಸೈಬರ್ ಕ್ರೈಮ್ ದಾಳಿಗೆ ಒಳಗಾದರೆ ಒಂದು ಗಂಟೆಯೊಳಗೆ 1930ಕ್ಕೆ ದೂರು ಕೊಟ್ಟರೆ ಹಣ ವರ್ಗಾವಣೆ ಆಗುವುದನ್ನು ತಡೆಯಬಹುದು.

Cyber Criminals: ಎರಡೂವರೆ ವರ್ಷದಲ್ಲಿ ಭಾರತದಿಂದ 10,300 ಕೋಟಿ ರೂ ಲಪಟಾಯಿಸಿದ್ದಾರೆ ಸೈಬರ್ ಕ್ರಿಮಿನಲ್​ಗಳು
ಸೈಬರ್ ಕ್ರಿಮಿನಲ್​
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jan 04, 2024 | 11:28 AM

ನವದೆಹಲಿ, ಜನವರಿ 4: ಕಳೆದ ಎರಡೂವರೆ ವರ್ಷದಲ್ಲಿ ಅಂತಾರಾಷ್ಟ್ರೀಯ ಸೈಬರ್ ಅಪರಾಧಿಗಳು ಭಾರತದಿಂದ ಸಾವಿರಾರು ಕೋಟಿ ರೂ ಹಣವನ್ನು ಲಪಟಾಯಿಸಿದ್ದಾರೆ ಎನ್ನುವ ಮಾಹಿತಿ ಸಿಕ್ಕಿದೆ. ಇಂಡಿಯನ್ ಸೈಬರ್ ಕ್ರೈಮ್ ಕೋ ಆರ್ಡಿನೇಶನ್ ಸೆಂಟರ್ (I4C) ನೀಡಿದ ಮಾಹಿತಿ ಪ್ರಕಾರ 2021ರ ಏಪ್ರಿಲ್ 1ರಿಂದ ಇಲ್ಲಿಯವರೆಗೆ 10,300 ಕೋಟಿ ರೂ ಮೊತ್ತದಷ್ಟು ಹಣವನ್ನು ಸೈಬರ್ ಕ್ರಿಮಿನಲ್​ಗಳು (Gangs of Cyber world) ಭಾರತದಿಂದ ಕದ್ದು ತೆಗೆದಿದ್ದಾರೆ. ಅದೇ ವೇಳೆ ಸುಮಾರು 1,127 ಕೋಟಿ ರೂ ಹಣವನ್ನು ಸೈಬರ್ ಅಪರಾಧಿಗಳಿಂದ ರಕ್ಷಿಸಲಾಗಿದೆ.

ಭಾರತದಲ್ಲಿ ಅಪರಾಧ ಎಸಗುತ್ತಿರುವ ಅರ್ಧದಷ್ಟು ಸೈಬರ್ ಕ್ರಿಮಿನಲ್​ಗಳು ಚೀನಾ, ಕಾಂಬೋಡಿಯಾ, ಮಯನ್ಮಾರ್​ನ ಗ್ಯಾಂಗ್​ಗಳು ಎಂದು ಹೇಳಲಾಗಿದೆ. ಐ4ಸಿ ಸಿಇಒ ರಾಜೇಶ್ ಕುಮಾರ್ ನೀಡಿರುವ ಮಾಹಿತಿ ಪ್ರಕಾರ ನ್ಯಾಷನಲ್ ಸೈಬರ್ ಕ್ರೈಮ್ ರಿಪೋರ್ಟಿಂಗ್ ಪೋರ್ಟಲ್​ನಲ್ಲಿ (ಎನ್​ಸಿಆರ್​ಪಿ) 5,000ಕ್ಕೂ ಹೆಚ್ಚು ಸೈಬರ್ ಕ್ರೈಮ್ ದೂರುಗಳು ಸಲ್ಲಿಕೆ ಆಗಿವೆ. ಚೀನಾದಿಂದ ನಿರ್ವಹಿಸುವ ಗ್ಯಾಂಗ್​ಗಳಿಂದ ಹೆಚ್ಚಿನ ಅಪರಾಧಗಳಾಗಿವೆ. ಕಾಂಬೋಡಿಯಾ ಹಾಗೂ ಮಯನ್ಮಾರ್​ನ ಕ್ರಿಮಿನಲ್ ಗ್ಯಾಂಗ್​ಗಳೂ ಇದರಲ್ಲಿ ಭಾಗಿಯಾಗಿವೆ. ಒಟ್ಟಾರೆ, ಐದು ಸಾವಿರ ದೂರುಗಳಲ್ಲಿ ಶೇ. 40-50ರಷ್ಟು ಪ್ರಕರಣಗಳಲ್ಲಿ ಅಪರಾಧಿಗಳು ಈ ಮೂರು ದೇಶಗಳ ಸೈಬರ್ ಕ್ರಿಮಿನಲ್ ಗ್ಯಾಂಗ್​ನವರೇ (cyber crime gangs) ಆಗಿದ್ದಾರೆ.

ಇದನ್ನೂ ಓದಿ: ಶ್ರೀಮಂತಿಕೆಯಲ್ಲಿ ಅಂಬಾನಿ ಫ್ಯಾಮಿಲಿ ಹಿಂದಿಕ್ಕಿದ ಅದಾನಿ ಫ್ಯಾಮಿಲಿ; ಸಂಪತ್ತು ಹೆಚ್ಚಳಕ್ಕೆ ಸುಪ್ರೀಂ ತೀರ್ಪು ಪುಷ್ಟಿ

ಆದರೆ, ಈ ರೀತಿಯ ಸೈಬರ್ ಅಪರಾಧ ಕೃತ್ಯದಲ್ಲಿ ಬೇರೆ ದೇಶಗಳ ಸರ್ಕಾರಗಳ ಕುಮ್ಮಕ್ಕು ಇದೆ ಎಂದು ಹೇಳಲಾಗುವುದಿಲ್ಲ. ಆದರೆ, ಆ ದೇಶಗಳಿಂದ ನಿರ್ವಹಿಸುತ್ತಿರುವ ಗುಂಪುಗಳು ಈ ಅಪರಾಧ ಎಸಗುತ್ತಿದ್ಧಾರೆ ಎಂದು ರಾಜೇಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.

ಐ4ಸಿ ಯಾವುದು?

ಇಂಡಿಯನ್ ಸೈಬರ್ ಕ್ರೈಮ್ ಕೋ ಆರ್ಡಿನೇಶನ್ ಸೆಂಟರ್ ಅನ್ನು ಸಂಕ್ಷಿಪ್ತವಾಗಿ ಐ4ಸಿ ಎನ್ನುವುದು. ಐ4ಸಿ ಗೃಹ ಇಲಾಖೆಯಿಂದ ರಚಿಸಲಾಗಿರುವ ಒಂದು ಸಂಸ್ಥೆ. ಸೈಬರ್ ಅಪರಾಧವನ್ನು ಎದುರಿಸಲು ಕಾನೂನು ಜಾರಿ ಸಂಸ್ಥೆಗಳಿಗೆ ಅಗತ್ಯ ಬಲ ಒದಗಿಸಲೆಂದು ಇದನ್ನು ಸ್ಥಾಪಿಸಲಾಗಿದೆ.

ನೀವು ಸೈಬರ್ ಕ್ರಿಮಿನಲ್​ಗಳ ದಾಳಿಗೆ ಒಳಗಾದರೆ ಹೀಗೆ ಮಾಡಿ…

ಬ್ಯಾಂಕ್ ಖಾತೆಯಿಂದ ಹಣ ಕದಿಯುವುದು, ನಕಲಿ ಲಿಂಕ್ ಕಳುಹಿಸಿ ಹ್ಯಾಕ್ ಮಾಡಿ ಹಣ ಕದಿಯುವುದು ಇತ್ಯಾದಿ ಪ್ರಕರಣಗಳು ಸೈಬರ್ ಅಪರಾಧವಾಗುತ್ತದೆ. ಇಂಥವಕ್ಕೆ ನೀವು ಬಲಿಯಾಗಿದ್ದರೆ 1930 ನಂಬರ್​​ಗೆ ಕರೆ ಮಾಡಿ ದೂರು ಸಲ್ಲಿಸಬಹುದು.

ಇದನ್ನೂ ಓದಿ: Super App: ಭಾರತೀಯ ರೈಲ್ವೆಯಿಂದ ಶೀಘ್ರದಲ್ಲೇ ಬಿಡುಗಡೆ ಆಗಲಿದೆ ಸೂಪರ್ ಆ್ಯಪ್; ಏನಿದರ ವಿಶೇಷತೆ ಗೊತ್ತಾ?

ನೀವು ವಂಚನೆಯಾದ ಒಂದು ಗಂಟೆಯ ಒಳಗಾಗಿ ದೂರು ಸಲ್ಲಿಸಿದರೆ ಬ್ಯಾಂಕುಗಳು ನಿಮ್ಮ ಹಣ ವರ್ಗಾವಣೆ ಆಗದಂತೆ ತಡೆಯಲು ಸಾಧ್ಯವಾಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ