Super App: ಭಾರತೀಯ ರೈಲ್ವೆಯಿಂದ ಶೀಘ್ರದಲ್ಲೇ ಬಿಡುಗಡೆ ಆಗಲಿದೆ ಸೂಪರ್ ಆ್ಯಪ್; ಏನಿದರ ವಿಶೇಷತೆ ಗೊತ್ತಾ?

Indian Railways: ಭಾರತೀಯ ರೈಲ್ವೆ ಇಲಾಖೆಯಿಂದ ಸೂಪರ್ ಆ್ಯಪ್ ತಯಾರಾಗುತ್ತಿದೆ. ಎಲ್ಲಾ ರೈಲ್ವೆ ಸೇವೆಗಳು ಒಂದೇ ಪ್ಲಾಟ್​ಫಾರ್ಮ್​ನಲ್ಲಿ ಸಿಗುತ್ತವೆ. ಸದ್ಯ ರೈಲ್ವೆಯ ವಿವಿಧ ಸೇವೆಗಳಿಗೆ ವಿವಿಧ ಆ್ಯಪ್​ಗಳಿವೆ. ಐಆರ್​ಸಿಟಿಸಿ ರೈಲ್ ಕನೆಕ್ಟ್, ರೈಲ್ ಮದದ್ ಇತ್ಯಾದಿ ಆ್ಯಪ್​ಗಳಿವೆ. ರೈಲ್ವೆ ಗ್ರಾಹಕರು ಅಥವಾ ಪ್ರಯಾಣಿಕರು ವಿವಿಧ ಆ್ಯಪ್​ಗಳನ್ನು ಡೌನ್​ಲೋಡ್ ಮಾಡುವ ಬದಲು ಒಂದೇ ಏಕೀಕೃತ ಆ್ಯಪ್ ಬಳಸಬಹುದು.

Super App: ಭಾರತೀಯ ರೈಲ್ವೆಯಿಂದ ಶೀಘ್ರದಲ್ಲೇ ಬಿಡುಗಡೆ ಆಗಲಿದೆ ಸೂಪರ್ ಆ್ಯಪ್; ಏನಿದರ ವಿಶೇಷತೆ ಗೊತ್ತಾ?
ಭಾರತೀಯ ರೈಲ್ವೆ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jan 03, 2024 | 6:24 PM

ನವದೆಹಲಿ, ಜನವರಿ 3: ರೈಲ್ವೆಯ ವಿವಿಧ ಸೇವೆಗಳಿಗೆ ವಿವಿಧ ಆ್ಯಪ್​ಗಳ ಸೇವೆ ಪಡೆಯಬೇಕು. ಅದರ ಬದಲು ಒಂದೇ ಆ್ಯಪ್​ನಲ್ಲಿ ಎಲ್ಲಾ ಸೇವೆಯೂ ಸಿಕ್ಕುವಂತಿದ್ದರೆ ಹೇಗೆ? ಭಾರತೀಯ ರೈಲ್ವೆ ಇಲಾಖೆ (Indian Railways) ಇದಕ್ಕೆ ಪರಿಹಾರ ಕೊಡಲು ಹೊರಟಿದೆ. ಎಲ್ಲಾ ರೈಲ್ವೆ ಸೇವೆಗಳು ಒಂದೇ ಪ್ಲಾಟ್​ಫಾರ್ಮ್​ನಲ್ಲಿ ಲಭ್ಯವಾಗಿಸುವ ಒಂದು ಸೂಪರ್ ಆ್ಯಪ್ (super app) ಅನ್ನು ರೂಪಿಸಲಾಗುತ್ತಿದೆ. ಜನರಿಗೆ ಸುಲಭ ಬಳಕೆ ಆಗುವ ನಿಟ್ಟಿನಲ್ಲಿ ಈ ಆ್ಯಪ್ ಸಹಾಯವಾಗಲಿದೆ. ಈ ಸೂಪರ್ ಆ್ಯಪ್​ನಲ್ಲಿ ರೈಲ್ವೆ ಟಿಕೆಟ್ ಬುಕ್ ಮಾಡಬಹುದು, ಪಿಎನ್​ಆರ್ ಸ್ಟೇಟಸ್ ಪರಿಶೀಲಿಸಬಹುದು, ಟ್ರೈನ್ ಟ್ರ್ಯಾಕ್ ಮಾಡಬಹುದು, ಇನ್ನೂ ಹಲವು ಕಾರ್ಯಗಳನ್ನು ಒಂದೇ ಆ್ಯಪ್​ನಲ್ಲಿ ಮಾಡಬಹುದು.

ಸದ್ಯ ರೈಲ್ವೆ ಇಲಾಖೆಯಿಂದ ಹಲವು ಅ್ಯಪ್​ಗಳಿವೆ. ಐಆರ್​ಸಿಟಿಸಿ ರೈಲ್ ಕನೆಕ್ಟ್, ಯುಟಿಎಸ್ (ಅನ್​ರಿಸರ್ವ್ಡ್ ಟಿಕೆಟಿಂಗ್ ಸಿಸ್ಟಂ), ರೈಲ್ ಮದದ್ (ರೈಲ್ ಹೆಲ್ಪ್), ನ್ಯಾಷನಲ್ ಟ್ರೈನ್ ಎನ್​ಕ್ವೇರಿ ಸಿಸ್ಟಂ ಮೊದಲಾದ ಆ್ಯಪ್​ಗಳ ಪ್ರಮುಖ ಫೀಚರ್​ಗಳು ಸೂಪರ್ ಆ್ಯಪ್​ನಲ್ಲಿ ಲಭ್ಯ ಇರುತ್ತವೆ. ರೈಲ್ವೆ ಗ್ರಾಹಕರು ಸೂಪರ್ ಆ್ಯಪ್​ವೊಂದನ್ನೇ ಬಳಸಿ ಎಲ್ಲಾ ಸೇವೆ ಪಡೆದುಕೊಳ್ಳಬಹುದು. ಸುಖಾಸುಮ್ಮನೆ ಹೆಚ್ಚು ಆ್ಯಪ್​ಗಳನ್ನು ಡೌನ್​ಲೋಡ್ ಮಾಡಿ ಬಳಸುವುದು ತಪ್ಪುತ್ತದೆ.

ಇದನ್ನೂ ಓದಿ: GDP Growth: 2023-24ರಲ್ಲಿ ಭಾರತದ ಜಿಡಿಪಿ ಬೆಳವಣಿಗೆ ಸಾಧ್ಯತೆ ಶೇ. 6.2 ಅಲ್ಲ ಶೇ. 6.7; ಇಂಡಿಯಾ ರೇಟಿಂಗ್ಸ್ ನಿರೀಕ್ಷೆ ಹೆಚ್ಚಳ

ಭಾರತೀಯ ರೈಲ್ವೆಯ ಸ್ವಾಯತ್ತ ಸಂಸ್ಥೆಯಾದ ಸೆಂಟರ್ ಫಾರ್ ರೈಲ್ವೆ ಇನ್ಫಾರ್ಮೇಶನ್ ಸಿಸ್ಟಮ್ಸ್ (ಸಿಆರ್​ಐಎಸ್) ಮಾರ್ಗದರ್ಶನದಲ್ಲಿ ಸೂಪರ್ ಆ್ಯಪ್ ಅಭಿವೃದ್ದಿಪಡಿಸಲಾಗುತ್ತಿದೆ. ರೈಲ್ವೆ ಇಲಾಖೆ ಈ ಯೋಜನೆಗೆ 90 ಕೋಟಿ ವಿನಿಯೋಗಿಸುತ್ತಿದೆ.

ರೈಲ್ವೆ ಇಲಾಖೆಯ ವಿವಿಧ ಆ್ಯಪ್​ಗಳ ಪೈಕಿ ಹೆಚ್ಚು ಬಳಕೆಯಲ್ಲಿರುವುದು ಐಆರ್​ಸಿಟಿಸಿ ರೈಲ್ ಕನೆಕ್ಟ್. ಇದು 10 ಕೋಟಿಗೂ ಹೆಚ್ಚು ಡೌನ್​ಲೋಡ್ ಆಗಿದೆ. ರೈಲ್ ಮದದ್, ಯುಟಿಎಸ್, ಸತರ್ಕ್, ಟಿಎಂಎಸ್ ನಿರೀಕ್ಷಣ್, ಐಆರ್​ಸಿಟಿಸಿ ಏರ್, ಪೋರ್ಟ್​ರೀಡ್ ಮೊದಲಾದ ಆ್ಯಪ್​ಗಳೂ ಜನಪ್ರಿಯವಾಗಿವೆ. ಸೂಪರ್ ಆ್ಯಪ್ ಬಂದ ಬಳಿಕ ಈ ಆ್ಯಪ್​ಗಳ ಅವಶ್ಯಕತೆ ಬರುವುದಿಲ್ಲ. ಇದರಿಂದ ರೈಲ್ವೆ ಗ್ರಾಹಕರಿಗೆ ಏಕೀಕೃತವಾದ ಒಂದು ಆ್ಯಪ್ ಮಾತ್ರವೇ ಸಾಕಾಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಕಾರ್ತಿಕ ಮಾಸದ ಕೊನೆ ಸೋಮವಾರ ಶಿವನ ಆರಾಧನೆ ಹೇಗೆ ಮಾಡುವುದು? ತಿಳಿಯಿರಿ
ಕಾರ್ತಿಕ ಮಾಸದ ಕೊನೆ ಸೋಮವಾರ ಶಿವನ ಆರಾಧನೆ ಹೇಗೆ ಮಾಡುವುದು? ತಿಳಿಯಿರಿ
Daily Horoscope: ಕಾರ್ತಿಕ ಮಾಸದ ಕೊನೆ ಸೋಮವಾರ ದಿನ ಭವಿಷ್ಯ ತಿಳಿಯಿರಿ
Daily Horoscope: ಕಾರ್ತಿಕ ಮಾಸದ ಕೊನೆ ಸೋಮವಾರ ದಿನ ಭವಿಷ್ಯ ತಿಳಿಯಿರಿ
ಭೈರತಿ ರಣಗಲ್: ಶಿವಮೊಗ್ಗದಲ್ಲಿ ಫ್ಯಾನ್ಸ್ ಜತೆ ಸಂಭ್ರಮಿಸಿದ ಶಿವರಾಜ್​ಕುಮಾರ್
ಭೈರತಿ ರಣಗಲ್: ಶಿವಮೊಗ್ಗದಲ್ಲಿ ಫ್ಯಾನ್ಸ್ ಜತೆ ಸಂಭ್ರಮಿಸಿದ ಶಿವರಾಜ್​ಕುಮಾರ್
ಬಿಜೆಪಿ ಸೋಲಿಗೆ ಯತ್ನಾಳ್​ನ ಹರಕು ಬಾಯಿ ಕಾರಣ: ರೇಣುಕಾಚಾರ್ಯ ವಾಗ್ದಾಳಿ
ಬಿಜೆಪಿ ಸೋಲಿಗೆ ಯತ್ನಾಳ್​ನ ಹರಕು ಬಾಯಿ ಕಾರಣ: ರೇಣುಕಾಚಾರ್ಯ ವಾಗ್ದಾಳಿ
ಸುದೀಪ್​ ಹೇಳಿದ ಒಂದೇ ಮಾತಿಗೆ ಉಗ್ರಂ ಮಂಜು, ಗೌತಮಿ ನಡುವಿನ ಸ್ನೇಹ ಕಟ್
ಸುದೀಪ್​ ಹೇಳಿದ ಒಂದೇ ಮಾತಿಗೆ ಉಗ್ರಂ ಮಂಜು, ಗೌತಮಿ ನಡುವಿನ ಸ್ನೇಹ ಕಟ್
ಅಂಬರೀಶ್ ಪುಣ್ಯಸ್ಮರಣೆ, ಸಮಾಧಿಗೆ ಪೂಜೆ ಮಾಡಿದ ಸುಮಲತಾ ಅಂಬರೀಶ್
ಅಂಬರೀಶ್ ಪುಣ್ಯಸ್ಮರಣೆ, ಸಮಾಧಿಗೆ ಪೂಜೆ ಮಾಡಿದ ಸುಮಲತಾ ಅಂಬರೀಶ್
ಮೊಮ್ಮಗ ನಿಖಿಲ್ ಸೋಲಿನ ಬಗ್ಗೆ ದೇವೇಗೌಡರ ಮೊದಲ ಪ್ರತಿಕ್ರಿಯೆ ಹೇಗಿತ್ತು ನೋಡಿ
ಮೊಮ್ಮಗ ನಿಖಿಲ್ ಸೋಲಿನ ಬಗ್ಗೆ ದೇವೇಗೌಡರ ಮೊದಲ ಪ್ರತಿಕ್ರಿಯೆ ಹೇಗಿತ್ತು ನೋಡಿ
ಸಮುದ್ರಕ್ಕೆ ಹಾರಿದ ಯುವತಿ, ರೋಚಕ ರಕ್ಷಣಾ ಕಾರ್ಯಾಚರಣೆ ಹೀಗಿತ್ತು ನೋಡಿ
ಸಮುದ್ರಕ್ಕೆ ಹಾರಿದ ಯುವತಿ, ರೋಚಕ ರಕ್ಷಣಾ ಕಾರ್ಯಾಚರಣೆ ಹೀಗಿತ್ತು ನೋಡಿ
ನಾಥನ್ ಲಿಯಾನ್ ಹೆಣೆದ ಬಲೆಗೆ ಬಿದ್ದ ರಿಷಭ್ ಪಂತ್
ನಾಥನ್ ಲಿಯಾನ್ ಹೆಣೆದ ಬಲೆಗೆ ಬಿದ್ದ ರಿಷಭ್ ಪಂತ್
ಆಸ್ಟ್ರೇಲಿಯಾ ಪಾಲಿಗೆ ದುಬಾರಿಯಾದ ಖ್ವಾಜಾ ಕೈಬಿಟ್ಟ ಕ್ಯಾಚ್
ಆಸ್ಟ್ರೇಲಿಯಾ ಪಾಲಿಗೆ ದುಬಾರಿಯಾದ ಖ್ವಾಜಾ ಕೈಬಿಟ್ಟ ಕ್ಯಾಚ್