GDP Growth: 2023-24ರಲ್ಲಿ ಭಾರತದ ಜಿಡಿಪಿ ಬೆಳವಣಿಗೆ ಸಾಧ್ಯತೆ ಶೇ. 6.2 ಅಲ್ಲ ಶೇ. 6.7; ಇಂಡಿಯಾ ರೇಟಿಂಗ್ಸ್ ನಿರೀಕ್ಷೆ ಹೆಚ್ಚಳ

Indian Economy: ಭಾರತದ ಆರ್ಥಿಕತೆ 2023-24ರ ಹಣಕಾಸು ವರ್ಷದಲ್ಲಿ ಶೇ. 6.7ರಷ್ಟು ಬೆಳೆಯಬಹುದು ಎಂದು ಇಂಡಿಯಾ ರೇಟಿಂಗ್ಸ್ ಅಂಡ್ ರಿಸರ್ಚ್ ಸಂಸ್ಥೆ ಅಭಿಪ್ರಾಯಪಟ್ಟಿದೆ. ಭಾರತದ ಜಿಡಿಪಿ ಶೇ 6.2ರಷ್ಟು ಹೆಚ್ಚಬಹುದು ಎಂದು ಇಂಡಿಯಾ ರೇಟಿಂಗ್ಸ್ ಈ ಹಿಂದೆ ಅಂದಾಜು ಮಾಡಿತ್ತು. ಈ ಹಣಕಾಸು ವರ್ಷದ ಎರಡನೇ ಕ್ವಾರ್ಟರ್​ನಲ್ಲಿ ಆರ್ಥಿಕತೆ ಎಲ್ಲರ ನಿರೀಕ್ಷೆ ತಲೆಕೆಳಗಾಗುವಂತೆ ಶೇ. 7.6ರಷ್ಟು ಬೆಳೆದಿತ್ತು.

GDP Growth: 2023-24ರಲ್ಲಿ ಭಾರತದ ಜಿಡಿಪಿ ಬೆಳವಣಿಗೆ ಸಾಧ್ಯತೆ ಶೇ. 6.2 ಅಲ್ಲ ಶೇ. 6.7; ಇಂಡಿಯಾ ರೇಟಿಂಗ್ಸ್ ನಿರೀಕ್ಷೆ ಹೆಚ್ಚಳ
ಜಿಡಿಪಿ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jan 03, 2024 | 5:48 PM

ನವದೆಹಲಿ, ಜನವರಿ 3: ಈ ಹಣಕಾಸು ವರ್ಷದ ಎರಡನೇ ಕ್ವಾರ್ಟರ್​ನಲ್ಲಿ (24FYQ2) ಭಾರತದ ಜಿಡಿಪಿ ನಿರೀಕ್ಷೆಮೀರಿ ಹೆಚ್ಚಾದ ಬಳಿಕ ಬಹಳಷ್ಟು ರೇಟಿಂಗ್ಸ್ ಸಂಸ್ಥೆಗಳು ತಮ್ಮ ಅಂದಾಜನ್ನು ಬದಲಿಸಿಕೊಳ್ಳುತ್ತಿವೆ. ಈ ಸಾಲಿಗೆ ಇಂಡಿಯಾ ರೇಟಿಂಗ್ಸ್ ಅಂಡ್ ರಿಸರ್ಚ್ (India Ratings and Research) ಸೇರಿದೆ. 2023-24ರ ಹಣಕಾಸು ವರ್ಷಕ್ಕೆ ಭಾರತದ ಆರ್ಥಿಕತೆ ಶೇ. 6.2ರಷ್ಟು ಬೆಳೆಯಬಹುದು ಎಂದು ಈ ಹಿಂದೆ ಅಂದಾಜು ಮಾಡಿದ್ದ ಇಂಡಿಯಾ ರೇಟಿಂಗ್ಸ್, ಇದೀಗ ಆ ದರವನ್ನು ಶೇ. 6.7ಕ್ಕೆ ಹೆಚ್ಚಿಸಿದೆ. ಸರ್ಕಾರದಿಂದ ಆಗುತ್ತಿರುವ ಬಂಡವಾಳ ವೆಚ್ಚ, ಸಾಫ್ಟ್​ವೇರ್ ರಫ್ತಿನಲ್ಲಿ ಹೆಚ್ಚಳ ಇತ್ಯಾದಿ ಅಂಶಗಳು ಭಾರತದ ಆರ್ಥಿಕ ಬೆಳವಣಿಗೆಗೆ ಸಹಾಯಕವಾಗುತ್ತವೆ ಎಂಬುದು ಸಂಸ್ಥೆಯ ಅನಿಸಿಕೆ.

ಭಾರತದ ಜಿಡಿಪಿ ಹೆಚ್ಚಳಕ್ಕೆ 5 ಕಾರಣ ಬಿಚ್ಚಿಟ್ಟ ಇಂಡಿಯಾ ರೇಟಿಂಗ್ಸ್

ಇಂಡಿಯಾ ರೇಟಿಂಗ್ಸ್ ಅಂಡ್ ರಿಸರ್ಚ್ ಸಂಸ್ಥೆ ಭಾರತದ ಜಿಡಿಪಿ ವೃದ್ಧಿ ಬಗ್ಗೆ ತಮಗೆ ಹೆಚ್ಚು ನಿರೀಕ್ಷೆ ಬರಲು ಹಲವು ಅಂಶಗಳು ಕಣ್ಮುಂದಿವೆ ಎಂದು ಹೇಳಿದ್ದು, ಅದರಲ್ಲಿ ಈ ಐದು ಅಂಶಗಳನ್ನು ಉಲ್ಲೇಖಿಸಿದೆ:

  1. ಭಾರತದ ಆರ್ಥಿಕತೆಯ ಕ್ಷಮತೆ ಒಂದು ಕಾರಣ. 2023-23ರ ಹಣಕಾಸು ವರ್ಷದ ಎರಡನೇ ಕ್ವಾರ್ಟರ್​ನಲ್ಲಿ ಎಲ್ಲರ ಲೆಕ್ಕಾಚಾರ ಮೀರಿಸಿ ಶೇ. 7.6ರಷ್ಟು ಬೆಳೆದಿದೆ.
  2. ಸರ್ಕಾರದಿಂದ ನಿರಂತರ ಆಗುತ್ತಿರುವ ಬಂಡವಾಳ ವೆಚ್ಚ.
  3. ಕಾರ್ಪೊರೇಟ್ ಮತ್ತು ಬ್ಯಾಂಕಿಂಗ್ ಸೆಕ್ಟರ್​ನಲ್ಲಿ ಸಾಲದ ಪ್ರಮಾಣ ಕಡಿಮೆ ಆಗಿರುವುದು.
  4. ಹೊಸ ಖಾಸಗಿ ಕಾರ್ಪೊರೇಟ್ ಬಂಡವಾಳ ವೆಚ್ಚದ ಚಕ್ರ ಶುರುವಾಗುವ ನಿರೀಕ್ಷೆ.
  5. ವ್ಯವಹಾರ ಮತ್ತು ಸಾಫ್ಟ್​ವೇರ್ ಸರ್ವಿಸ್ ರಫ್ತು ಹೆಚ್ಚಾಗಬಹುದು. ಹೊರದೇಶಗಳಿಂದ ಭಾರತೀಯರು ತಮ್ಮ ದೇಶಕ್ಕೆ ಹಣ ವರ್ಗಾವಣೆ ಮಾಡುವುದು ಹೆಚ್ಚಾಗಬಹುದು.

ಇದನ್ನೂ ಓದಿ: Gold: ಕಳೆದ ಎರಡು ವರ್ಷ ಶೇ. 14ಕ್ಕಿಂತಲೂ ಹೆಚ್ಚು ದರದಲ್ಲಿ ಬೆಳೆದಿರುವ ಚಿನ್ನದ ಬೆಲೆ ಈ ವರ್ಷ ಎಷ್ಟಾಗಬಹುದು?

ಭಾರತದ ಆರ್ಥಿಕತೆ ಬೆಳವಣಿಗೆಯ ಹಾದಿಯಲ್ಲಿ ತೊಡರುಗಳಿವೆ…

ಇಂಡಿಯಾ ರೇಟಿಂಗ್ಸ್ ಸಂಸ್ಥೆ ಭಾರತದ ಆರ್ಥಿಕತೆ ಬಗ್ಗೆ ಸಕಾರಾತ್ಮಕ ಅಂಶಗಳ ಜೊತೆಗೆ ಎದುರಾಗಬಹುದಾದ ಸವಾಲುಗಳ ಬಗ್ಗೆಯೂ ಬೆಳಕು ಚೆಲ್ಲಿದೆ. ಅದರಲ್ಲಿ ಪ್ರಮುಖವಾದುದು ಜಾಗತಿಕ ಆರ್ಥಿಕ ಹಿನ್ನಡೆಯ ಸಾಧ್ಯತೆ. 2023ರಲ್ಲಿ ಜಾಗತಿಕ ಸರಕು ವ್ಯಾಪಾರ ಪ್ರಮಾಣ ಶೇ. 1.7ರಷ್ಟು ಹೆಚ್ಚುವ ನಿರೀಕ್ಷೆ ಇತ್ತು. ಅದು ಶೇ. 0.8ರಷ್ಟು ಮಾತ್ರ ಹೆಚ್ಚುವ ಸಾಧ್ಯತೆ ಇದೆ. ಈ ಅಂಶವು ಭಾರತದ ಬೆಳವಣಿಗೆಯ ಮೇಲೆ ಪರಿಣಾಮ ಬೀರಬಹುದು ಎಂಬುದು ಇಂಡಿಯಾ ರೇಟಿಂಗ್ಸ್ ಅಂಡ್ ರಿಸರ್ಚ್​ನ ಕಳವಳ.

ಮೊದಲೆರಡು ಕ್ವಾರ್ಟರ್​ನಲ್ಲಿ ಶೇ. 7ಕ್ಕಿಂತಲೂ ಹೆಚ್ಚು ಬೆಳೆದಿರುವ ಭಾರತದ ಆರ್ಥಿಕತೆ ಕೊನೆಯ ಎರಡು ಕ್ವಾರ್ಟರ್​ನಲ್ಲಿ ಶೇ. 6ಕ್ಕಿಂತಲೂ ಕಡಿಮೆ ದರದಲ್ಲಿ ಬೆಳೆಯುವ ಸಾಧ್ಯತೆ ಇದೆ. ಆರ್​ಬಿಐ ಕೂಡ ಈ ಇಳಿಮುಖವನ್ನು ತನ್ನ ಅಂದಾಜಿನಲ್ಲಿ ವ್ಯಕ್ತಪಡಿಸಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಕಾರ್ತಿಕ ಮಾಸದ ಕೊನೆ ಸೋಮವಾರ ಶಿವನ ಆರಾಧನೆ ಹೇಗೆ ಮಾಡುವುದು? ತಿಳಿಯಿರಿ
ಕಾರ್ತಿಕ ಮಾಸದ ಕೊನೆ ಸೋಮವಾರ ಶಿವನ ಆರಾಧನೆ ಹೇಗೆ ಮಾಡುವುದು? ತಿಳಿಯಿರಿ
Daily Horoscope: ಕಾರ್ತಿಕ ಮಾಸದ ಕೊನೆ ಸೋಮವಾರ ದಿನ ಭವಿಷ್ಯ ತಿಳಿಯಿರಿ
Daily Horoscope: ಕಾರ್ತಿಕ ಮಾಸದ ಕೊನೆ ಸೋಮವಾರ ದಿನ ಭವಿಷ್ಯ ತಿಳಿಯಿರಿ
ಭೈರತಿ ರಣಗಲ್: ಶಿವಮೊಗ್ಗದಲ್ಲಿ ಫ್ಯಾನ್ಸ್ ಜತೆ ಸಂಭ್ರಮಿಸಿದ ಶಿವರಾಜ್​ಕುಮಾರ್
ಭೈರತಿ ರಣಗಲ್: ಶಿವಮೊಗ್ಗದಲ್ಲಿ ಫ್ಯಾನ್ಸ್ ಜತೆ ಸಂಭ್ರಮಿಸಿದ ಶಿವರಾಜ್​ಕುಮಾರ್
ಬಿಜೆಪಿ ಸೋಲಿಗೆ ಯತ್ನಾಳ್​ನ ಹರಕು ಬಾಯಿ ಕಾರಣ: ರೇಣುಕಾಚಾರ್ಯ ವಾಗ್ದಾಳಿ
ಬಿಜೆಪಿ ಸೋಲಿಗೆ ಯತ್ನಾಳ್​ನ ಹರಕು ಬಾಯಿ ಕಾರಣ: ರೇಣುಕಾಚಾರ್ಯ ವಾಗ್ದಾಳಿ
ಸುದೀಪ್​ ಹೇಳಿದ ಒಂದೇ ಮಾತಿಗೆ ಉಗ್ರಂ ಮಂಜು, ಗೌತಮಿ ನಡುವಿನ ಸ್ನೇಹ ಕಟ್
ಸುದೀಪ್​ ಹೇಳಿದ ಒಂದೇ ಮಾತಿಗೆ ಉಗ್ರಂ ಮಂಜು, ಗೌತಮಿ ನಡುವಿನ ಸ್ನೇಹ ಕಟ್
ಅಂಬರೀಶ್ ಪುಣ್ಯಸ್ಮರಣೆ, ಸಮಾಧಿಗೆ ಪೂಜೆ ಮಾಡಿದ ಸುಮಲತಾ ಅಂಬರೀಶ್
ಅಂಬರೀಶ್ ಪುಣ್ಯಸ್ಮರಣೆ, ಸಮಾಧಿಗೆ ಪೂಜೆ ಮಾಡಿದ ಸುಮಲತಾ ಅಂಬರೀಶ್
ಮೊಮ್ಮಗ ನಿಖಿಲ್ ಸೋಲಿನ ಬಗ್ಗೆ ದೇವೇಗೌಡರ ಮೊದಲ ಪ್ರತಿಕ್ರಿಯೆ ಹೇಗಿತ್ತು ನೋಡಿ
ಮೊಮ್ಮಗ ನಿಖಿಲ್ ಸೋಲಿನ ಬಗ್ಗೆ ದೇವೇಗೌಡರ ಮೊದಲ ಪ್ರತಿಕ್ರಿಯೆ ಹೇಗಿತ್ತು ನೋಡಿ
ಸಮುದ್ರಕ್ಕೆ ಹಾರಿದ ಯುವತಿ, ರೋಚಕ ರಕ್ಷಣಾ ಕಾರ್ಯಾಚರಣೆ ಹೀಗಿತ್ತು ನೋಡಿ
ಸಮುದ್ರಕ್ಕೆ ಹಾರಿದ ಯುವತಿ, ರೋಚಕ ರಕ್ಷಣಾ ಕಾರ್ಯಾಚರಣೆ ಹೀಗಿತ್ತು ನೋಡಿ
ನಾಥನ್ ಲಿಯಾನ್ ಹೆಣೆದ ಬಲೆಗೆ ಬಿದ್ದ ರಿಷಭ್ ಪಂತ್
ನಾಥನ್ ಲಿಯಾನ್ ಹೆಣೆದ ಬಲೆಗೆ ಬಿದ್ದ ರಿಷಭ್ ಪಂತ್
ಆಸ್ಟ್ರೇಲಿಯಾ ಪಾಲಿಗೆ ದುಬಾರಿಯಾದ ಖ್ವಾಜಾ ಕೈಬಿಟ್ಟ ಕ್ಯಾಚ್
ಆಸ್ಟ್ರೇಲಿಯಾ ಪಾಲಿಗೆ ದುಬಾರಿಯಾದ ಖ್ವಾಜಾ ಕೈಬಿಟ್ಟ ಕ್ಯಾಚ್