AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪತಂಜಲಿಯಿಂದ ನ್ಯಾನೋಟೆಕ್ನಾಲಜಿ ಮತ್ತು ಕೋವಿಡ್ ಬಗ್ಗೆ ಸಂಶೋಧನೆ; ಅಚ್ಚರಿ ಫಲಿತಾಂಶ ಬಹಿರಂಗ

Patanjali research on Covid-19 and nanotechnology: 2020ರಲ್ಲಿ ವಕ್ಕರಿಸಿದ ಕೋವಿಡ್ ಸಾಂಕ್ರಾಮಿಕ ರೋಗದಿಂದ ಇಡೀ ವಿಶ್ವ ಬಾಧಿತವಾಗಿತ್ತು. ಆದರೆ, ಸಮರೋಪಾದಿಯಲ್ಲಿ ಲಸಿಕೆಗಳನ್ನು ತಯಾರಿಸಿದ ನಂತರ ರೋಗ ನಿಯಂತ್ರಣಕ್ಕೆ ಬಂತು. ಈಗ ಕೋವಿಡ್​​ನಂತಹ ಅಪಾಯಕಾರಿ ವೈರಾಣು ರೋಗಗಳನ್ನು ಗುರುತಿಸಲು ಮತ್ತು ಲಸಿಕೆ ತಯಾರಿಸಲು ನ್ಯಾನೊಟೆಕ್ನಾಲಜಿ ಸಹಾಯವಾಗುತ್ತದೆ ಎಂದು ಪತಂಜಲಿ ರಿಸರ್ಚ್​​ನಿಂದ ಬೆಳಕಿಗೆ ಬಂದಿದೆ.

ಪತಂಜಲಿಯಿಂದ ನ್ಯಾನೋಟೆಕ್ನಾಲಜಿ ಮತ್ತು ಕೋವಿಡ್ ಬಗ್ಗೆ ಸಂಶೋಧನೆ; ಅಚ್ಚರಿ ಫಲಿತಾಂಶ ಬಹಿರಂಗ
ಪತಂಜಲಿ ರಿಸರ್ಚ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Apr 28, 2025 | 7:15 PM

Share

ಎಲ್ಲಾ ರೀತಿಯಲ್ಲಿ ಇಡೀ ಜಗತ್ತನ್ನು ಬೆಚ್ಚಿಬೀಳಿಸಿದ್ದ ಕೊರೋನಾ ಸಾಂಕ್ರಾಮಿಕ ರೋಗ (Covid-19) ಈಗಲೂ ಅಲ್ಲಲ್ಲಿ ಬಾಧಿಸುತ್ತಿದೆ. ಕೋವಿಡ್​​ನ ವಿವಿಧ ರೂಪಾಂತರಿ ವೈರಸ್​​ಗಳು ಕಾಣಿಸುತ್ತಿವೆ. ಇವನ್ನು ಗುರುತಿಸಲು ಮತ್ತು ಚಿಕಿತ್ಸೆ ನೀಡಲು ಅನೇಕ ಹೊಸ ತಂತ್ರಜ್ಞಾನಗಳು ಮತ್ತು ಲಸಿಕೆಗಳನ್ನು ಅಭಿವೃದ್ಧಿಪಡಿಸಲಾಗಿದೆ. ಕೋವಿಡ್ ವೈರಸ್ ಅನ್ನು ಗುರುತಿಸುವಲ್ಲಿ ನ್ಯಾನೊತಂತ್ರಜ್ಞಾನ ಆಧಾರಿತ ರೋಗನಿರ್ಣಯ ತಂತ್ರಗಳು (nanotechnology) ಬಹಳ ಪ್ರಯೋಜನಕಾರಿಯಾಗಬಹುದು. ಪತಂಜಲಿ ರಿಸರ್ಚ್ ಸಂಸ್ಥೆಯ ಸಂಶೋಧನೆಯಲ್ಲಿ ಈ ಮಾಹಿತಿ ಬೆಳಕಿಗೆ ಬಂದಿದೆ.

ನ್ಯಾನೊತಂತ್ರಜ್ಞಾನ ಆಧಾರಿತವಾಗಿರುವ ವೈರಸ್ ತರಹದ ಕಣಗಳನ್ನು (Virus like particles) ಒಳಗೊಂಡಿರುವ ಲಸಿಕೆಗಳು COVID-19 ವಿರುದ್ಧ ಪರಿಣಾಮಕಾರಿಯಾಗಬಹುದು ಎಂದು ಸಂಶೋಧನೆ ತೋರಿಸಿದೆ. ನ್ಯಾನೊಪರ್ಟಿಕಲ್ಸ್ ನಿರ್ದಿಷ್ಟ ಜೀವಕೋಶಗಳು ಅಥವಾ ಅಂಗಾಂಶಗಳನ್ನು ಗುರಿಯಾಗಿಸಬಹುದು. ಕೋವಿಡ್ ಲಸಿಕೆ ಅಭಿವೃದ್ಧಿ ಮತ್ತು ಅದರ ಗುರುತಿಸುವಿಕೆಯಲ್ಲಿ ನ್ಯಾನೊತಂತ್ರಜ್ಞಾನವು ಹೆಚ್ಚು ಪರಿಣಾಮಕಾರಿ ಎಂದು ಸಂಶೋಧನೆಯು ಕಂಡುಹಿಡಿದಿದೆ.

ನ್ಯಾನೊತಂತ್ರಜ್ಞಾನವು COVID-19 ಅನ್ನು ಸಮಯಕ್ಕೆ ಸರಿಯಾಗಿ ಗುರುತಿಸಬಹುದು. ಇದು ಲಸಿಕೆ ಉತ್ಪಾದನೆಯಲ್ಲೂ ಸಹಾಯ ಮಾಡುತ್ತದೆ. ನ್ಯಾನೊಟೆಕ್ನಾಲಜಿಯು ಹಲವು ರೀತಿಯ ವೈರಲ್ ಸೋಂಕುಗಳನ್ನು ತಡೆಗಟ್ಟಲು ಸಹಾಯ ಮಾಡುತ್ತದೆ. ಇದು ಸಾಕಷ್ಟು ಸುರಕ್ಷಿತವೂ ಆಗಿದೆ. ನ್ಯಾನೊತಂತ್ರಜ್ಞಾನವು ಅಣು ಮತ್ತು ಪರಮಾಣುಗಳನ್ನು ಕುಶಲತೆಯಿಂದ ನಿರ್ವಹಿಸಬಲ್ಲುದು. ಕೋವಿಡ್ ಸಾಂಕ್ರಾಮಿಕ ರೋಗ ಬಂದ ಬಳಿಕ ನ್ಯಾನೋಟೆಕ್ನಾಲಜಿಯ ಮಹತ್ವದ ಬಗ್ಗೆ ಚರ್ಚೆ ನಡೆಯಿತು. ಅದಾದ ನಂತರ, ಪತಂಜಲಿ ಸಂಸ್ಥೆಯು ಈ ಹೊಸ ತಂತ್ರಜ್ಞಾನದ ಪರಿಣಾಮದ ಬಗ್ಗೆ ಸಂಶೋಧನೆ ಕೈಗೊಂಡು ಒಳ್ಳೆಯ ರಿಸಲ್ಟ್ ಪಡೆದಿದೆ.

ಇದನ್ನೂ ಓದಿ
Image
ಘಮಘಮ ಮಲ್ಲಿಗೆಯಲ್ಲಿದೆ ಅಪೂರ್ವ ಔಷಧ ಗುಣ: ಪತಂಜಲಿ
Image
Sepsisಗೆ ಆಯುರ್ವೇದಲ್ಲಿ ಚಿಕಿತ್ಸೆ: ಪತಂಜಲಿ ರಿಸರ್ಚ್
Image
ಈ ಸಸ್ಯದಲ್ಲಿದೆ ಉರಿಯೂತ ತಗ್ಗಿಸುವ ಗುಣ: ಪತಂಜಲಿ
Image
ಸನ್​ಬರ್ನ್​​ಗೆ ಆಯುರ್ವೇದದಲ್ಲಿ ಪರಿಹಾರ: ಪತಂಜಲಿ

ಇದನ್ನೂ ಓದಿ: ಮಲ್ಲಿಗೆ ಹೂವೇ ನಿನ್ನ ಔಷಧದ ಗುಣ ಎಂಥ ಚೆನ್ನ..! ಪತಂಜಲಿ ಸಂಶೋಧನೆಯಲ್ಲಿ ಅಚ್ಚರಿ ಫಲಿತಾಂಶ

ಕೊರೋನಾ ಪತ್ತೆಗೆ ನ್ಯಾನೊತಂತ್ರಜ್ಞಾನ ಹೇಗೆ ಸಹಾಯಕ?

ನ್ಯಾನೊತಂತ್ರಜ್ಞಾನ ಆಧಾರಿತ ಬಯೋಸೆನ್ಸರ್‌ಗಳು ಕೊರೋನಾ ವೈರಸ್ ಅನ್ನು ಗುರುತಿಸಲು ಸಹಾಯ ಮಾಡುತ್ತವೆ. ಈ ವೈರಸ್ ಅನ್ನು ತ್ವರಿತವಾಗಿ ಮತ್ತು ನಿಖರವಾಗಿ ಪತ್ತೆ ಮಾಡಬಹುದು. ನ್ಯಾನೊತಂತ್ರಜ್ಞಾನ ಆಧಾರಿತ ರೋಗನಿರ್ಣಯ ತಂತ್ರಗಳು ಹೆಚ್ಚು ಸೂಕ್ಷ್ಮವಾಗಿವೆ. ವೈರಸ್ ಅನ್ನು ಗುರುತಿಸುವಲ್ಲಿ ನಿಖರವಾದ ಫಲಿತಾಂಶಗಳನ್ನು ಪಡೆಯುವ ಸಾಧ್ಯತೆಯಿದೆ. ಕೊರೊನಾ ಲಸಿಕೆಯಲ್ಲಿ ನ್ಯಾನೊತಂತ್ರಜ್ಞಾನವು ಸಹಾಯಕವಾಗಬಹುದು. ಇದರಿಂದ ತಯಾರಿಸಲಾದ ವ್ಯಾಕ್ಸಿನ್ ಡೆಲಿವರಿ ಸಿಸ್ಟಂ ಲಸಿಕೆಯನ್ನು ಸ್ಪೆಷಲ್ ಸೆಲ್ಸ್​​ಗೆ ತಲುಪಿಸಲು ಸಹಾಯ ಮಾಡುತ್ತದೆ. ಲಸಿಕೆಗಳ ಪರಿಣಾಮಕಾರಿತ್ವವನ್ನು ಹೆಚ್ಚಿಸಲು ನ್ಯಾನೊತಂತ್ರಜ್ಞಾನವು ಸಹಾಯ ಮಾಡುತ್ತದೆ. ಇದು ವೈರಸ್ ಅನ್ನು ಸರಿಯಾಗಿ ಗುರುತಿಸಲು ಮತ್ತು ಅದನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ.

ಟ್ರಯಲ್ ವೇಳೆ ಈ ರೋಗಗಳ ವಿರುದ್ಧವೂ ಪರಿಣಾಮಕಾರಿ

ನ್ಯಾನೊತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರೀ-ಕ್ಲಿನಿಕಲ್ ಟ್ರಯಲ್​​ಗಳಲ್ಲಿ, ನ್ಯಾನೊತಂತ್ರಜ್ಞಾನ ಆಧಾರಿತ ಸಾಧನಗಳು ಉಸಿರಾಟ ಸಂಬಂಧಿತ ವೈರಸ್‌ಗಳು, ಹರ್ಪಿಸ್ ವೈರಸ್‌ಗಳು, ಹ್ಯೂಮನ್ ಪ್ಯಾಪಿಲೋಮವೈರಸ್ ಮತ್ತು ಎಚ್‌ಐವಿ ಸೇರಿದಂತೆ ಹಲವಾರು ರೋಗಗಳ ವಿರುದ್ಧ ಪರಿಣಾಮಕಾರಿ ಎಂದು ಸಾಬೀತಾಗಿದೆ.

ಇದನ್ನೂ ಓದಿ: ಯಜ್ಞದಿಂದ ರೋಗ ನಿವಾರಣೆ ಸಾಧ್ಯವಾ? ಹೌದೆನ್ನುತ್ತಿದೆ ಪತಂಜಲಿ ಸಂಶೋಧನೆ

ಪಾಲಿಮರಿಕ್, ಅಜೈವಿಕ (Acarbonic) ಮತ್ತು ಕಾರ್ಬನಿಕ್ ನ್ಯಾನೊಕಣಗಳು (10−9) ಜೈವಿಕ ಏಜೆಂಟ್‌ಗಳಾಗಿದ್ದು, ಅವುಗಳನ್ನು ಭರವಸೆಯ ಸಾಧನಗಳನ್ನಾಗಿ ಮಾಡುತ್ತವೆ. ಇದು ಈ ರೋಗಗಳನ್ನು ಸರಿಯಾಗಿ ಗುರುತಿಸಲು ಮತ್ತು ಚಿಕಿತ್ಸೆ ನೀಡಲು ಸಹಾಯ ಮಾಡುತ್ತದೆ.

ಇನ್ನಷ್ಟು ಆರೋಗ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ