Anti-inflammation: ಉರಿಯೂತ ತಗ್ಗಿಸಲು ಈ ಸಸ್ಯ ಪ್ರಯೋಜನಕಾರಿ: ಪತಂಜಲಿ ಸಂಶೋಧನೆ
Patanjali research on Arctigenin: ಬರ್ಡಾಕ್ ಸಸ್ಯದಲ್ಲಿರುವ ಅರ್ಕ್ಟಿಜೆನಿನ್ ಎಂಬ ಸಂಯುಕ್ತವು ಉರಿಯೂತ ನಿವಾರಕ ಗುಣಗಳನ್ನು ಹೊಂದಿದೆ ಎಂದು ಪತಂಜಲಿ ಸಂಶೋಧನೆಯಿಂದ ತಿಳಿದುಬಂದಿದೆ. ಇದು NF-κB ಅನ್ನು ಪ್ರತಿಬಂಧಿಸುವ ಮೂಲಕ ಉರಿಯೂತವನ್ನು ಕಡಿಮೆ ಮಾಡುತ್ತದೆ. ಆದರೂ, ಇದು ಇನ್ನೂ ಪ್ರಾಥಮಿಕ ಸಂಶೋಧನೆಯಾಗಿದ್ದು, ಮಾನವರ ಮೇಲೆ ಹೆಚ್ಚಿನ ಸಂಶೋಧನೆ ಅಗತ್ಯವಿದೆ. ಈ ಸಂಶೋಧನೆಯು ಗ್‍ಯಾವಿನ್ ಪಬ್ಲಿಷರ್ಸ್ ಜರ್ನಲ್‌ನಲ್ಲಿ ಪ್ರಕಟವಾಗಿದೆ.

ಉರಿಯೂತವು (Inflammation) ದೇಹದಲ್ಲಿ ನಡೆಯುವ ಸಾಮಾನ್ಯ ಪ್ರಕ್ರಿಯೆಯಾಗಿದೆ. ಇದು ದೇಹದಲ್ಲಿ ಗಾಯ, ಸೋಂಕು ಅಥವಾ ಇತರ ಹಾನಿಗೆ ಪ್ರತಿಕ್ರಿಯೆಯಾಗಿ ಸಂಭವಿಸುತ್ತದೆ. ಆದರೆ ಉರಿಯೂತ ದೀರ್ಘಕಾಲದವರೆಗೆ ಮುಂದುವರಿದರೆ, ಅದು ಅಪಾಯಕಾರಿ. ಇದು ಹೃದಯ ಕಾಯಿಲೆಯಿಂದ ಹಿಡಿದು ಸಂಧಿವಾತದವರೆಗೆ ಅಪಾಯವನ್ನುಂಟುಮಾಡುತ್ತದೆ. ಅಲೋಪತಿಯಲ್ಲಿ ಉರಿಯೂತವನ್ನು ಕಡಿಮೆ ಮಾಡಲು ಔಷಧಿಗಳನ್ನು ನೀಡಲಾಗುತ್ತದೆ. ಆದಾಗ್ಯೂ, ಇವುಗಳು ಅನೇಕ ಅಡ್ಡಪರಿಣಾಮಗಳನ್ನು ಸಹ ಉಂಟುಮಾಡಬಹುದು. ಆದರೆ ಬರ್ಡಾಕ್ (Burdock) ಸಸ್ಯದಲ್ಲಿ ಕಂಡುಬರುವ ಆರ್ಕ್ಟಿಜೆನಿನ್ (Arctigenin) ದೇಹದಿಂದ ಉರಿಯೂತವನ್ನು ಕಡಿಮೆ ಮಾಡುತ್ತದೆ ಎಂದೆನ್ನಲಾಗುತ್ತದೆ. ಈ ಸಸ್ಯವು ದೇಶದ ಹಲವು ಪ್ರದೇಶಗಳಲ್ಲಿ ಸುಲಭವಾಗಿ ಕಂಡುಬರುತ್ತದೆ. ಇದು ಉರಿಯೂತದಿಂದ ಉಂಟಾಗುವ ಯಾವುದೇ ರೋಗವನ್ನು ನಿಯಂತ್ರಿಸಬಲ್ಲುದು. ಈ ಮಾಹಿತಿಯು ಹರಿದ್ವಾರದ ಪತಂಜಲಿ ಸಂಶೋಧನಾ ಸಂಸ್ಥೆಯ ಪತಂಜಲಿ ಹರ್ಬಲ್ ರಿಸರ್ಚ್ ವಿಭಾಗದ ಸಂಶೋಧನೆಯಿಂದ ಬಂದಿದೆ.
ಈ ಸಂಶೋಧನೆಯು ಗ್‍ಯಾವಿನ್ ಪಬ್ಲಿಷರ್ಸ್ ಜರ್ನಲ್‌ನಲ್ಲಿ (Gavin Publishing) ಪ್ರಕಟವಾಗಿದೆ. ಈ ಸಂಶೋಧನೆಯ ಪ್ರಮುಖ ಸಂಶೋಧಕರು ಪತಂಜಲಿಯ ಆಚಾರ್ಯ ಬಾಲಕೃಷ್ಣ. ಆರ್ಕ್ಟಿಜೆನಿನ್ ಅನೇಕ ಸಸ್ಯಗಳಲ್ಲಿ, ಅದರಲ್ಲೂ ವಿಶೇಷವಾಗಿ ಬರ್ಡಾಕ್ (ಆರ್ಕ್ಟಿಯಮ್ ಲಪ್ಪಾ) ನಲ್ಲಿ ಕಂಡುಬರುವ ನೈಸರ್ಗಿಕ ಲಿಗ್ನಿನ್ ಸಂಯುಕ್ತವಾಗಿದೆ ಎಂದು ಸಂಶೋಧನೆ ತೋರಿಸಿದೆ. ಇದಲ್ಲದೆ, ಇದು ಸೌಸುರಿಯಾ ಇನ್ವೊಲುಕ್ರಾಟಾದಂತಹ ಸಸ್ಯಗಳಲ್ಲಿಯೂ ಕಂಡುಬರುತ್ತದೆ. ಆರ್ಕ್ಟಿಜೆನಿನ್ ಉರಿಯೂತ ನಿವಾರಕ, ಆ್ಯಂಟಿ-ವೈರಲ್ ಗುಣಗಳನ್ನು ಹೊಂದಿದೆ. ಇದು ಆ್ಯಂಟಿ ಆಕ್ಸಿಡೆಂಟ್ಸ್ ಗುಣವನ್ನೂ ಹೊಂದಿರುತ್ತದೆ. ಇದರಿಂದ ದೇಹದಲ್ಲಿ ಇರುವ ಸ್ವತಂತ್ರ ರಾಡಿಕಲ್‌ಗಳನ್ನು ತಟಸ್ಥಗೊಳಿಸುತ್ತದೆ ಮತ್ತು ದೇಹದಲ್ಲಿ ಜೀವಕೋಶಗಳು ವೇಗವಾಗಿ ಬೆಳೆಯುವುದನ್ನು ತಡೆಯುತ್ತದೆ.
ಇದನ್ನೂ ಓದಿ: ಯಜ್ಞದಿಂದ ರೋಗ ನಿವಾರಣೆ ಸಾಧ್ಯವಾ? ಹೌದೆನ್ನುತ್ತಿದೆ ಪತಂಜಲಿ ಸಂಶೋಧನೆ
ದೇಹಕ್ಕೆ ಇನ್ಫ್ಲಮೇಶನ್ ಹೇಗೆ ಅಪಾಯಕಾರಿ?
ದೇಹದಲ್ಲಿ ಉರಿಯೂತ ದೀರ್ಘಕಾಲದವರೆಗೆ ಮುಂದುವರಿದರೆ, ಅದು ಸಂಧಿವಾತ, ಆಲ್ಝೈಮರ್, ಪಾರ್ಕಿನ್ಸನ್, ಹೃದ್ರೋಗ ಮತ್ತು ನರ-ಕ್ಷೀಣಗೊಳ್ಳುವ ಅಸ್ವಸ್ಥತೆಗಳಿಗೆ ಕಾರಣವಾಗಬಹುದು. ಆರ್ಕ್ಟಿಜೆನಿನ್ ದೇಹದಲ್ಲಿ NF-κB ಅನ್ನು ಪ್ರತಿಬಂಧಿಸುತ್ತದೆ ಮತ್ತು ಉರಿಯೂತವನ್ನು ಕಡಿಮೆ ಮಾಡುತ್ತದೆ ಎಂದು ಸಂಶೋಧನೆ ತೋರಿಸಿದೆ. ಆರ್ಕ್ಟಿಜೆನಿನ್ ಉರಿಯೂತ-ಪ್ರೊ-ಸೈಟೊಕಿನ್‌ಗಳನ್ನು ಸಹ ಕಡಿಮೆ ಮಾಡುತ್ತದೆ. ಇದು ಆಕ್ಸಿಡೇಟಿವ್ ಒತ್ತಡವನ್ನು ಸಹ ಕಡಿಮೆ ಮಾಡುತ್ತದೆ. ಇದು ಹಲವು ರೀತಿಯ ಕಿಣ್ವಗಳನ್ನು ಸಹ ನಿಯಂತ್ರಿಸುತ್ತದೆ. ಇದು ದೇಹದಲ್ಲಿನ ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದರ ಪರಿಣಾಮವಾಗಿ ಕೀಲು ನೋವು ಕೂಡ ಶಮನಗೊಳ್ಳುತ್ತದೆ ಮತ್ತು ನರ-ಕ್ಷೀಣಗೊಳ್ಳುವ ಅಪಾಯವನ್ನು ಕಡಿಮೆ ಮಾಡುತ್ತದೆ.
ಸಂಶೋಧನೆಯಲ್ಲಿ ಇದು ಇನ್ನೂ ಆರಂಭಿಕ ಫಲಿತಾಂಶವೇ ಮಾತ್ರವಾಗಿದೆ. ಪ್ರಸ್ತುತ ಈ ಸಂಶೋಧನೆಯನ್ನು ಇಲಿಗಳ ಮೇಲೆ ಮಾಡಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ, ಆರ್ಕ್ಟಿಜೆನಿನ್‌ನ ಪ್ರಯೋಜನಗಳ ಬಗ್ಗೆ ದೊಡ್ಡ ಪ್ರಮಾಣದ ಕ್ಲಿನಿಕಲ್ ಪ್ರಯೋಗಗಳನ್ನು ನಡೆಸುವ ಅವಶ್ಯಕತೆಯಿದೆ. ಆರ್ಕ್ಟಿಜೆನಿನ್‌ನ ಫಾರ್ಮಾಕೊಕಿನೆಟಿಕ್ಸ್ ಬಗ್ಗೆ ಹೆಚ್ಚಿನ ಸಂಶೋಧನೆ ಅಗತ್ಯವಿದೆ. ಇದರ ಸೇಫ್ಟಿ ಪ್ರೊಫೈಲ್ ಮತ್ತು ಮಾನವರಲ್ಲಿ ಅದರ ಪರಿಣಾಮಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳುವ ಅಗತ್ಯ ಇದೆ.
ಇನ್ನಷ್ಟು ಆರೋಗ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ