Patanjali: ಸೋರಿಯಾಸಿಸ್ ಗುಣಪಡಿಸಲು ಅಲೋಪತಿ ವಿಧಾನದಿಂದ ಯಾಕೆ ಸಾಧ್ಯವಾಗಿಲ್ಲ? ಪತಂಜಲಿ ಚಿಕಿತ್ಸಾ ಕ್ರಮ ಹೇಗೆ ಪರಿಣಾಮಕಾರಿ?
Patanjali Solutions for Psoriasis disease: ಈ ಲೇಖನವು ಸೋರಿಯಾಸಿಸ್‌ನ ಅಲೋಪತಿ ಚಿಕಿತ್ಸೆಯ ಸೀಮಿತತೆಗಳನ್ನು ಮತ್ತು ಪತಂಜಲಿ ಆಯುರ್ವೇದದಲ್ಲಿ ಲಭ್ಯವಿರುವ ನೈಸರ್ಗಿಕ ಪರಿಹಾರಗಳನ್ನು ಚರ್ಚಿಸುತ್ತದೆ. ದೇಹದ ಶುದ್ಧೀಕರಣ, ಆಯುರ್ವೇದಿಕ ಗಿಡಮೂಲಿಕೆಗಳ ಬಳಕೆ, ಮತ್ತು ಆಹಾರ ಪದ್ಧತಿಯ ಬದಲಾವಣೆಗಳ ಮೂಲಕ ಸೋರಿಯಾಸಿಸ್ ಅನ್ನು ನಿರ್ವಹಿಸುವುದು ಹೇಗೆ ಎಂದು ವಿವರಿಸಲಾಗಿದೆ. ಪಂಚಕರ್ಮ ಮತ್ತು ಯೋಗದ ಪಾತ್ರವನ್ನು ಸಹ ಒತ್ತಿಹೇಳಲಾಗಿದೆ.

ಸೋರಿಯಾಸಿಸ್ (Psoriasis) ಚರ್ಮಕ್ಕೆ ಸಂಬಂಧಿಸಿದ ಕಾಯಿಲೆಯಾಗಿದ್ದು, ಇದು ದೇಹಕ್ಕೆ ಹಾನಿ ಮಾಡುವುದಲ್ಲದೆ, ಮಾನಸಿಕ ಒತ್ತಡವನ್ನೂ ಉಂಟುಮಾಡುತ್ತದೆ. ಈ ರೋಗದಲ್ಲಿ, ಚರ್ಮದ ಮೇಲೆ ದದ್ದುಗಳು, ಊತ, ತುರಿಕೆ ಮತ್ತು ಸಿಪ್ಪೆಯಂತಹ ಪದರಗಳು ರೂಪುಗೊಳ್ಳುತ್ತವೆ. ಅಲೋಪತಿಯಲ್ಲಿ ಇದನ್ನು ಸಂಪೂರ್ಣವಾಗಿ ಗುಣಪಡಿಸುವುದು ಇನ್ನೂ ಒಂದು ಸವಾಲಾಗಿಯೇ ಉಳಿದಿದೆ. ಈ ರೋಗವನ್ನು ಅಲೋಪತಿ ಔಷಧಿಗಳಿಂದ ನಿಯಂತ್ರಿಸಬಹುದು ಅಷ್ಟೇ, ಹೊರತು ಅದನ್ನು ನಿರ್ಮೂಲನೆ ಮಾಡಲು ಸಾಧ್ಯವಿಲ್ಲ. ಆದರೆ ಆಯುರ್ವೇದ, ವಿಶೇಷವಾಗಿ ಪತಂಜಲಿ ಆಯುರ್ವೇದ (Patanjali Ayurveda), ಈ ರೋಗವನ್ನು ತಮ್ಮ ಔಷಧಿಗಳಿಂದ ಗುಣಪಡಿಸಬಹುದು ಎಂಬುದು ಸಂಶೋಧನೆಯಿಂದ ದೃಢಪಟ್ಟಿದೆ.
ಪತಂಜಲಿ ಔಷಧಿಗಳ ಮೂಲಕ ಸೋರಿಯಾಸಿಸ್‌ಗೆ ನೈಸರ್ಗಿಕ ಪರಿಹಾರ ಸಿಗುತ್ತದೆ ಹೇಳಲಾಗುತ್ತಿರುವುದು ಜನರಲ್ಲಿ ಹೊಸ ಭರವಸೆಯನ್ನು ಮೂಡಿಸಿದೆ. ಈ ಕಾಯಿಲೆಗೆ ಅಲೋಪತಿಯಲ್ಲಿ ಇನ್ನೂ ಏಕೆ ಪರಿಣಾಮಕಾರಿ ಚಿಕಿತ್ಸೆ ಲಭ್ಯವಾಗಿಲ್ಲ? ಪತಂಜಲಿ ಆಯುರ್ವೇದದಲ್ಲಿ ಇದಕ್ಕೆ ಚಿಕಿತ್ಸೆ ಹೇಗೆ ಕಂಡುಹಿಡಿಯಲಾಯಿತು? ಇದರ ವಿವರ ಮುಂದಿದೆ.
ಸೋರಿಯಾಸಿಸ್‌ಗೆ ಅಲೋಪತಿಯಲ್ಲಿ ಚಿಕಿತ್ಸೆ ಏಕೆ ಇಲ್ಲ?
ಸೋರಿಯಾಸಿಸ್ ಅನ್ನು ಸ್ವಯಂ ನಿರೋಧಕ ಕಾಯಿಲೆ ಎಂದು ಪರಿಗಣಿಸಲಾಗುತ್ತದೆ. ಅಂದರೆ, ನಮ್ಮದೇ ಆದ ರೋಗನಿರೋಧಕ ವ್ಯವಸ್ಥೆಯು ಚರ್ಮದ ಕೋಶಗಳ ಮೇಲೆ ದಾಳಿ ಮಾಡಲು ಪ್ರಾರಂಭಿಸುತ್ತದೆ. ತುರಿಕೆ ನಿಲ್ಲಿಸಲು ಕ್ರೀಮ್‌ಗಳು ಅಥವಾ ಊತವನ್ನು ಕಡಿಮೆ ಮಾಡಲು ಸ್ಟೀರಾಯ್ಡ್‌ಗಳಂತೆ ರೋಗಲಕ್ಷಣಗಳನ್ನು ನಿಗ್ರಹಿಸುವುದಕ್ಕೆ ಮಾತ್ರ ಆಲೋಪತಿ ಚಿಕಿತ್ಸೆ ಸೀಮಿತವಾಗಿದೆ. ಆದರೆ ಔಷಧ ನಿಲ್ಲಿಸಿದ ತಕ್ಷಣ, ರೋಗಲಕ್ಷಣಗಳು ಮತ್ತೆ ಕಾಣಿಸಿಕೊಳ್ಳುತ್ತವೆ.
ಇದನ್ನೂ ಓದಿ: ಸೋರಿಯಾಸಿಸ್ ಕಾಯಿಲೆ ಹೇಗೆ ಬರುತ್ತೆ? ಪತಂಜಲಿ ಔಷಧಿಗಳಿಂದ ಸೈಡ್ ಎಫೆಕ್ಟ್ಸ್ ಇಲ್ಲದೇ ಚಿಕಿತ್ಸೆ
ಅಲೋಪತಿ ಚಿಕಿತ್ಸೆಯಲ್ಲಿನ ಕೆಲವು ಔಷಧಿಗಳು ಯಕೃತ್ತು ಮತ್ತು ಮೂತ್ರಪಿಂಡಗಳ ಮೇಲೂ ಪರಿಣಾಮ ಬೀರಬಹುದು. ಅದೇ ಸಮಯದಲ್ಲಿ, ಸ್ಟೀರಾಯ್ಡ್‌ಗಳ ದೀರ್ಘಕಾಲೀನ ಬಳಕೆಯು ಚರ್ಮವನ್ನು ತೆಳ್ಳಗೆ ಮಾಡುತ್ತದೆ ಮತ್ತು ದೇಹದ ರೋಗನಿರೋಧಕ ಸಾಮರ್ಥ್ಯದ ಮೇಲೂ ಪರಿಣಾಮ ಬೀರುತ್ತದೆ. ಅದಕ್ಕಾಗಿಯೇ ಸ್ವತಃ ವೈದ್ಯರು ಇದನ್ನು ಮ್ಯಾನೇಜ್ಮೆಂಟ್ ಟ್ರೀಟ್ಮೆಂಟ್ ಎಂದು ಕರೆಯುತ್ತಾರೆ. ಅಂದರೆ, ರೋಗವನ್ನು ನಿವಾರಿಸುವುದಲ್ಲ, ಅದನ್ನು ನಿಯಂತ್ರಿಸುವುದಕ್ಕೆ ಆಲೋಪತಿ ಔಷಧಗಳು ಸೀಮಿತವಾಗಿರುತ್ತವೆ.
ಪತಂಜಲಿ ಆಯುರ್ವೇದದಲ್ಲಿ ಟ್ರೀಟ್ಮೆಂಟ್ ಹೇಗೆ?
ಪತಂಜಲಿ ಆಯುರ್ವೇದದ ಪ್ರಕಾರ, ಸೋರಿಯಾಸಿಸ್‌ಗೆ ಮುಖ್ಯ ಕಾರಣ ದೇಹದಲ್ಲಿ ಇರುವ ವಿಷಕಾರಿ ಅಂಶಗಳು ಮತ್ತು ಕಳಪೆ ಜೀರ್ಣಾಂಗ ವ್ಯವಸ್ಥೆ. ಆಯುರ್ವೇದದಲ್ಲಿ ಇದನ್ನು ಕುಷ್ಠರೋಗ ಎಂದು ವರ್ಗೀಕರಿಸಲಾಗಿದೆ. ಆಯುರ್ವೇದದ ತತ್ವದ ಅನುಸಾರ ದೇಹವನ್ನು ಒಳಗಿನಿಂದ ಶುದ್ಧೀಕರಿಸುವ ವಿಶೇಷ ಚಿಕಿತ್ಸಾ ವಿಧಾನವನ್ನು ಪತಂಜಲಿ ಸಂಸ್ಥೆಯವರು ಅಭಿವೃದ್ಧಿಪಡಿಸಿದ್ದಾರೆ.
ಪತಂಜಲಿಯಿಂದ ಡಿಟಾಕ್ಸ್ ಟ್ರೀಟ್ಮೆಂಟ್
ಪತಂಜಲಿ ಆಯುರ್ವೇದದಲ್ಲಿ ದೇಹವನ್ನು ಶುದ್ಧೀಕರಿಸುವುದಕ್ಕೆ ಮೊದಲ ಒತ್ತು ನೀಡಲಾಗುತ್ತದೆ. ಇದಕ್ಕಾಗಿ ತ್ರಿಫಲ ಪುಡಿ, ಗಿಲೋಯ್, ಹರ್ರಾದ್, ಬಹೇದ ಮುಂತಾದ ಗಿಡಮೂಲಿಕೆಗಳನ್ನು ಬಳಸಲಾಗುತ್ತದೆ. ಇದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ದೇಹದಿಂದ ವಿಷಕಾರಿ ಅಂಶಗಳನ್ನು ತೆಗೆದುಹಾಕುತ್ತದೆ.
ಪತಂಜಲಿಯಿಂದ ಸೋರಿಯಾಸಿಸ್ ಚಕಿತ್ಸೆಯಲ್ಲಿ ಚರ್ಮದ ಆರೈಕೆ
ಸೋರಿಯಾಸಿಸ್‌ಗೆ ಔಷಧಿಗಳಲ್ಲಿ ಬೇವು, ಅರಿಶಿನ, ಮಂಜಿಷ್ಠ, ಖಾದಿರ್, ಅಲೋವೆರಾ ಮತ್ತು ಶುದ್ಧ ಹಸುವಿನ ತುಪ್ಪವನ್ನು ಬೆರೆಸಿ ತಯಾರಿಸಿದ ಎಣ್ಣೆ ಮತ್ತು ಪೇಸ್ಟ್ ಅನ್ನು ಬಳಸಲಾಗುತ್ತದೆ. ಇವು ಚರ್ಮವನ್ನು ತಂಪಾಗಿಸಿ ಆಂತರಿಕ ಉರಿಯೂತವನ್ನು ಕಡಿಮೆ ಮಾಡುತ್ತವೆ.
ಇದನ್ನೂ ಓದಿ: ವಿದೇಶೀ ಹೂಡಿಕೆಗಳಿಲ್ಲ, ಖಾಸಗಿ ಜೆಟ್ಗಳಿಲ್ಲ… ರಾಷ್ಟ್ರೀಯತೆಯ ಮಂತ್ರದೊಂದಿಗೆ ಪತಂಜಲಿ ಕಟ್ಟಿದ ಬಾಬಾ ರಾಮದೇವ್
ಪತಂಜಲಿಯಲ್ಲಿ ಪಂಚಕರ್ಮ ಚಿಕಿತ್ಸೆ
ಪತಂಜಲಿ ಆಯುರ್ವೇದ ಕೇಂದ್ರಗಳಲ್ಲಿ ಪಂಚಕರ್ಮದ ಮೂಲಕ ದೇಹವನ್ನು ಶುದ್ಧೀಕರಿಸಲಾಗುತ್ತದೆ. ಈ ವಿಧಾನವು ದೇಹದಿಂದ ವಿಷವನ್ನು ತೆಗೆದುಹಾಕುವುದಲ್ಲದೆ, ರೋಗನಿರೋಧಕ ಶಕ್ತಿಯನ್ನು ಸಮತೋಲನಗೊಳಿಸುತ್ತದೆ.
ಆಹಾರ ಪದ್ಧತಿ ಮತ್ತು ದಿನಚರಿಗೆ ಪತಂಜಲಿ ಒತ್ತು
ಪತಂಜಲಿ ಚಿಕಿತ್ಸಾ ಕ್ರಮಗಳಲ್ಲಿ ರೋಗಿಗೆ ವಿಶೇಷ ಆಹಾರವನ್ನು ನೀಡಲಾಗುತ್ತದೆ. ಇದರಲ್ಲಿ ಮೆಣಸಿನಕಾಯಿ ಬೆರೆಸಿದ ಮಸಾಲೆಗಳು, ಎಣ್ಣೆಯುಕ್ತ ವಸ್ತುಗಳು ಮತ್ತು ಜಂಕ್ ಫುಡ್ ಅನ್ನು ಸಂಪೂರ್ಣವಾಗಿ ನಿಲ್ಲಿಸಲಾಗುತ್ತದೆ. ಅಲ್ಲದೆ, ಮಾನಸಿಕ ಒತ್ತಡವನ್ನು ಕಡಿಮೆ ಮಾಡಲು ಯೋಗ, ಪ್ರಾಣಾಯಾಮ ಮತ್ತು ಧ್ಯಾನವನ್ನು ಶಿಫಾರಸು ಮಾಡಲಾಗುತ್ತದೆ.
ಇನ್ನಷ್ಟು ಆರೋಗ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ