AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Brain teaser: ನೀವು ಒಗಟು ಬಿಡಿಸುವುದರಲ್ಲಿ ಜಾಣರಾದ್ರೆ ಇದಕ್ಕೆ ಉತ್ತರ ಹುಡುಕಿ ನೋಡೋಣ!

ಫೇಸ್ ಬುಕ್ ಖಾತೆಯೊಂದರಲ್ಲಿ, ಒಗಟೊಂದನ್ನು ಹಂಚಿಕೊಳ್ಳಲಾಗಿದ್ದು, ಇದು ನೀವು ನೋಡಿದಷ್ಟು ಸುಲಭವಾಗಿಲ್ಲ. ಅದರಲ್ಲಿಯೂ ಇತ್ತೀಚಿನ ವೇಗದ ಯುಗದಲ್ಲಿ ಸ್ವಲ್ಪ ಸಮಯ ಸಿಕ್ಕಾಗ ತಮ್ಮ ಜಾಣ್ಮೆಯನ್ನು ಪರೀಕ್ಷಿಸಿಕೊಳ್ಳಲು ಬಯಸುವವರಿಗೆ ಇಂತಹ ಒಗಟುಗಳು ತುಂಬಾ ಸಹಾಯ ಮಾಡುತ್ತದೆ. ಆದರೆ ನಾವು ಅಂದುಕೊಂಡಿರುವ ಉತ್ತರಗಳು ನಿಜವಾಗಿಯೂ ಸರಿಯಾಗಿ ಇರುವುದಿಲ್ಲ. ಹಾಗಾಗಿ ಬಹಳ ಯೋಚಿಸಿ, ಒಗಟು ಬಿಡಿಸಬೇಕಾಗುತ್ತದೆ. ಅಂತಹದ್ದೇ ಒಂದು ಒಗಟು ನಿಮಗಾಗಿ. ಬಿಡಿಸಿ ಉತ್ತರ ಹೇಳಿ.

Brain teaser: ನೀವು ಒಗಟು ಬಿಡಿಸುವುದರಲ್ಲಿ ಜಾಣರಾದ್ರೆ ಇದಕ್ಕೆ ಉತ್ತರ ಹುಡುಕಿ ನೋಡೋಣ!
Puzzel
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​

Updated on: Apr 21, 2025 | 5:17 PM

ಇಂದಿನ ಡಿಜಿಟಲ್ ಯುಗದಲ್ಲಿ ಯಾರಿಗೂ ಸಮಯವಿಲ್ಲ. ಎಲ್ಲರೂ ಕಾಲಿಗೆ ಚಕ್ರ ಕಟ್ಟಿಕೊಂಡು ಓಡುತ್ತಿರುತ್ತಾರೆ. ಇಂತಹ ಸಂದರ್ಭಗಳಲ್ಲಿ ನಿಮ್ಮ ಮೆದುಳಿಗೆ ಕೆಲಸ ಕೊಡುವುದು ತುಂಬಾ ಅನಿವಾರ್ಯ. ಸ್ವಲ್ಪ ಸಮಯ ಸಿಕ್ಕಾಗ ನಿಮ್ಮ ಜಾಣ್ಮೆಯನ್ನು (Cleverness) ಪರೀಕ್ಷಿಸಿಕೊಳ್ಳಲು, ಬುದ್ದಿಯನ್ನು ತೀಕ್ಷ್ಣಗೊಳಿಸಲು ಅಥವಾ ದಿನಚರಿಯಿಂದ (Daily routine) ವಿರಾಮ ತೆಗೆದುಕೊಳ್ಳಲು ಬಯಸುವವರಿಗೆ ಅಥವಾ ಒತ್ತಡದಿಂದ ಹೊರಬರಲು ಮೆದುಳಿಗೆ ಕೆಲಸ ಕೊಡುವ ಒಗಟಿದೆ (Puzzle). ಇದು ನಿಮಗೆ ಮನರಂಜನೆ ನೀಡುವುದಲ್ಲದೆ ಜಾಣ್ಮೆ ಪರೀಕ್ಷಿಸಿಕೊಳ್ಳಲು ಇರುವ ಕೈಗನ್ನಡಿಯಾಗಿದೆ. ಇದನ್ನು ನೀವು ಕೂಡ ಟ್ರೈ ಮಾಡಬಹುದು.

ಈ ಬ್ರೈನ್ ಟೀಸರ್ ಅನ್ನು ಇತ್ತೀಚೆಗೆ ಮಿನಿಯನ್ ಕೋಟ್ಸ್ (Minion Quotes) ಎಂಬ ಫೇಸ್ ಬುಕ್ ಪುಟವು ಹಂಚಿಕೊಂಡಿದೆ. ಅಲ್ಲಿ ಹೇಳಿರುವ ಪ್ರಕಾರ, “ಒಬ್ಬ ರೈತನ ಬಳಿ 3 ಕುದುರೆಗಳು, 2 ಬಾತುಕೋಳಿಗಳು, 1 ಹಂದಿ ಇದ್ದರೆ, ಅವನ ಜಮೀನಿನಲ್ಲಿ ಎಷ್ಟು ಪಾದಗಳಿದ್ದಂತಾಗುತ್ತದೆ?” ಮೊದಲ ನೋಡುವಾಗ ಈ ಒಗಟು ಬಹಳ ಸರಳವಾಗಿ ಕಂಡರೂ ಕೂಡ, ಇದನ್ನು ಎಣಿಸಿ ನೋಡಿದಾಗ ನಿಮಗೆ ಅರ್ಥವಾಗುತ್ತದೆ. ಹಾಗಾದರೆ ಇದನ್ನು ನೀವು ಮಾಡಿ ನೋಡಿ.

ಒಗಟು ಇಲ್ಲಿದೆ ನೋಡಿ:

ಇದನ್ನೂ ಓದಿ
Image
ಭಾರತೀಯರು ಡೋಲೋ 650ಯನ್ನು ಕ್ಯಾಡ್ಬರಿ ಜೆಮ್ಸ್ ನಂತೆ ಸೇವಿಸುತ್ತಿದ್ದಾರಾ?
Image
ನಿಮ್ಮ ಮೆದುಳು ವೇಗವಾಗಿ ಕೆಲಸ ಮಾಡಬೇಕೆಂದರೆ ಈ ಆಹಾರಗಳ ಸೇವನೆ ಮಾಡಿ
Image
ಅವಲಕ್ಕಿ ಈ ರೀತಿ ಬಳಸಿದರೆ ಆರೋಗ್ಯ ಸಮಸ್ಯೆಯೇ ಬರಲ್ಲ
Image
ಶುಂಠಿ ಚಹಾ ಇಷ್ಟನಾ? ಮೇ ಮುಗಿಯುವ ತನಕ ಕುಡಿಯಲೇಬೇಡಿ!

ಒಂದು ಕುದುರೆಗೆ 4 ಪಾದಗಳಿವೆ, ಆದ್ದರಿಂದ 3 ಕುದುರೆಗಳ ಪಾದಗಳು ಸೇರಿದಾಗ 12 ಆಗುತ್ತದೆ.

ಬಾತುಕೋಳಿಗೆ 2 ಪಾದಗಳಿವೆ, ಆದ್ದರಿಂದ 2 ಬಾತುಕೋಳಿಗಳ 4 ಪಾದಗಳನ್ನು ಸೇರಿಸಬೇಕಾಗುತ್ತದೆ.

ಒಂದು ಹಂದಿಗೆ 4 ಕಾಲುಗಳಿವೆ, ಆದ್ದರಿಂದ ಇದು ಕೂಡ 4 ಆಗುತ್ತದೆ.

ಅಂದರೆ 12 + 4 + 4 = 20 ಪಾದಗಳು

ಇದನ್ನೂ ಓದಿ: ಭಾರತೀಯರು ಡೋಲೋ 650ಯನ್ನು ಕ್ಯಾಡ್ಬರಿ ಜೆಮ್ಸ್ ನಂತೆ ಸೇವಿಸುತ್ತಾರೆ! ವೈದ್ಯರ ಪೋಸ್ಟ್ ವೈರಲ್

ನಿಮ್ಮ ಉತ್ತರವೂ 20 ಎಂದಾದರೆ ನಿಮ್ಮ ಉತ್ತರ ತಪ್ಪು. ನೀವು ಈ ಪ್ರಶ್ನೆಯನ್ನು ಸರಿಯಾಗಿ ಗಮನಿಸಿಲ್ಲ ಎಂದಾಯಿತು. ಜಮೀನಿನಲ್ಲಿ ಪ್ರಾಣಿಗಳು ಮಾತ್ರವಲ್ಲ, ರೈತನೂ ಇದ್ದಾನೆ ಎಂಬುದನ್ನು ಹಲವರು ಮರೆಯುತ್ತಾರೆ. ಹಾಗಾಗಿ ಉತ್ತರ ತಪ್ಪಾಗುತ್ತದೆ. ಪ್ರಾಣಿಗಳ ಪಾದಗಳು 20 ಅದರ ಜೊತೆಗೆ ರೈತನ ಪಾದಗಳನ್ನು ಸೇರಿಸಿದರೆ ಒಟ್ಟು 22 ಪಾದಗಳಾಗುತ್ತದೆ. ಹಾಗಾಗಿ ಈ ಪ್ರಶ್ನೆಯ ಸರಿಯಾದ ಉತ್ತರ 22.

ಈ ಪೋಸ್ಟ್ ವೈರಲ್ ಆಗಲು ಕಾರಣವೇನು?

ಈ ರೀತಿಯ ಒಗಟುಗಳು ವೈರಲ್ ಆಗುವುದಕ್ಕೆ ಜನರಲ್ಲಿರುವಂತಹ ಸ್ಪರ್ಧಾತ್ಮಕ ಸ್ವಭಾವ ಮತ್ತು ಬುದ್ಧಿವಂತಿಕೆಯೇ ಕಾರಣ. ಇದು ಗಣಿತದ ಲೆಕ್ಕವಲ್ಲ. ಇದೊಂದು ಬುದ್ದಿ ಉಪಯೋಗಿಸಿ ಆಡುವ ಆಟವಾಗಿದೆ. ನೀವು ಕೂಡ ಈ ರೀತಿಯ ಒಗಟುಗಳನ್ನು ಬಿಡಿಸುವುದಕ್ಕೆ ಇಷ್ಟ ಪಡುತ್ತಿದ್ದರೆ ಇದನ್ನು ಬಿಡಿಸಿ ಜೊತೆಗೆ ನಿಮ್ಮ ಸ್ನೇಹಿತರ ಬಳಿ ಇದನ್ನು ಮಾಡಲು ಹೇಳಿ. ಇದರಿಂದ ಕೇವಲ ನಿಮ್ಮ ಬುದ್ದಿ ಚುರುಕಾಗುವುದು ಮಾತ್ರವಲ್ಲ ನಿಮ್ಮ ಆರೋಗ್ಯವೂ ಚೆನ್ನಾಗಿರುತ್ತದೆ. ಮಾನಸಿಕ ಒತ್ತಡ ಕೂಡ ಕಡಿಮೆಯಾಗುತ್ತದೆ.

ಜೀವನ ಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಯುದ್ಧ ಬೇಕಾ ಬೇಡ್ವಾ ಅಂತ ಕೇಂದ್ರ ಸರ್ಕಾರ ನಿರ್ಧರಿಸುತ್ತದೆ: ಹೆಗ್ಡೆ
ಯುದ್ಧ ಬೇಕಾ ಬೇಡ್ವಾ ಅಂತ ಕೇಂದ್ರ ಸರ್ಕಾರ ನಿರ್ಧರಿಸುತ್ತದೆ: ಹೆಗ್ಡೆ
ಕೇಂದ್ರ ಸರ್ಕಾರ ಜೊತೆ ನಿಲ್ಲಲು ನಿರ್ಧರಿಸಿದ ಕೋಲಾರ ರೈತರು
ಕೇಂದ್ರ ಸರ್ಕಾರ ಜೊತೆ ನಿಲ್ಲಲು ನಿರ್ಧರಿಸಿದ ಕೋಲಾರ ರೈತರು
ಭಾರತದ ಮುಂದೆ ತಪ್ಪೊಪ್ಪಿಕೊಳ್ಳದಿದ್ದರೆ ಪಾಕ್​ಗೆ ಉಳಿಗಾಲವಿಲ್ಲ: ವಾಟಾಳ್
ಭಾರತದ ಮುಂದೆ ತಪ್ಪೊಪ್ಪಿಕೊಳ್ಳದಿದ್ದರೆ ಪಾಕ್​ಗೆ ಉಳಿಗಾಲವಿಲ್ಲ: ವಾಟಾಳ್
ಅಲ್ಲು ಅರ್ಜುನ್ ಜೊತೆ ಎಕ್ಸ್​ಕ್ಲೂಸೀವ್ ಸಂದರ್ಶನ; ಇಲ್ಲಿದೆ ಲೈವ್ ವಿಡಿಯೋ
ಅಲ್ಲು ಅರ್ಜುನ್ ಜೊತೆ ಎಕ್ಸ್​ಕ್ಲೂಸೀವ್ ಸಂದರ್ಶನ; ಇಲ್ಲಿದೆ ಲೈವ್ ವಿಡಿಯೋ
ಪದಗಳನ್ನು ಎಚ್ಚರಿಕೆಯಿಂದ ಬಳಸಬೇಕೆಂದು ಲಾಡ್​ಗೆ ಗೊತ್ತಿಲ್ಲವೇ? ರೇಣುಕಾಚಾರ್ಯ
ಪದಗಳನ್ನು ಎಚ್ಚರಿಕೆಯಿಂದ ಬಳಸಬೇಕೆಂದು ಲಾಡ್​ಗೆ ಗೊತ್ತಿಲ್ಲವೇ? ರೇಣುಕಾಚಾರ್ಯ
ಪದ್ಮಭೂಷಣ ಶೇಖರ್ ಕಪೂರ್ ಜತೆ ವಿಶೇಷ ಸಂದರ್ಶನ; ಲೈವ್ ವಿಡಿಯೋ ಇಲ್ಲಿದೆ ನೋಡಿ
ಪದ್ಮಭೂಷಣ ಶೇಖರ್ ಕಪೂರ್ ಜತೆ ವಿಶೇಷ ಸಂದರ್ಶನ; ಲೈವ್ ವಿಡಿಯೋ ಇಲ್ಲಿದೆ ನೋಡಿ
ಮುಳ್ಳು ಬೇಲಿ ಮತ್ತು ಜಾಲಿಮರದ ಕೊಂಬೆಗಳನ್ನು ರಸ್ತೆಗೆ ಅಡ್ಡಹಾಕಿ ಬಂದ್
ಮುಳ್ಳು ಬೇಲಿ ಮತ್ತು ಜಾಲಿಮರದ ಕೊಂಬೆಗಳನ್ನು ರಸ್ತೆಗೆ ಅಡ್ಡಹಾಕಿ ಬಂದ್
ದೇವಸ್ಥಾನದಲ್ಲಿ ಮಚ್ಚಿಗೆ ಪೂಜೆ ಮಾಡಿಸಿದ ವ್ಯಕ್ತಿ, ವಿಡಿಯೋ ವೈರಲ್​
ದೇವಸ್ಥಾನದಲ್ಲಿ ಮಚ್ಚಿಗೆ ಪೂಜೆ ಮಾಡಿಸಿದ ವ್ಯಕ್ತಿ, ವಿಡಿಯೋ ವೈರಲ್​
ಪ್ರಧಾನಿ ಮೋದಿ ಸಮೀಕ್ಷೆ ಮಾಡಿಸುತ್ತೇನೆಂದಾಗ ಕಾಂಗ್ರೆಸ್ ಷರತ್ತುಗಳು: ಅಶೋಕ
ಪ್ರಧಾನಿ ಮೋದಿ ಸಮೀಕ್ಷೆ ಮಾಡಿಸುತ್ತೇನೆಂದಾಗ ಕಾಂಗ್ರೆಸ್ ಷರತ್ತುಗಳು: ಅಶೋಕ
ಚಾಮರಾಜನಗರ: ಪಾಲಾರ್ ಗ್ರಾಮದಲ್ಲಿ ಕಾಡಾನೆಗಳ ಜಲಕ್ರೀಡೆ
ಚಾಮರಾಜನಗರ: ಪಾಲಾರ್ ಗ್ರಾಮದಲ್ಲಿ ಕಾಡಾನೆಗಳ ಜಲಕ್ರೀಡೆ