AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Teething in Babies: ಮಗುವಿಗೆ ಹಲ್ಲು ಬರುವಾಗ ಈ ಲಕ್ಷಣಗಳು ಕಂಡುಬರುತ್ತೆ

ಮಗು ಹುಟ್ಟಿ ಆರು ತಿಂಗಳುಗಳ ನಂತರ ಮಕ್ಕಳಲ್ಲಿ ಹಲ್ಲು ಮೂಡುವುದಕ್ಕೆ ಆರಂಭವಾಗುತ್ತದೆ. ಈ ಸಮಯದಲ್ಲಿ ಪೋಷಕರಿಗೆ ಮಗುವಿಗೆ ಯಾವಾಗ ಹಲ್ಲುಗಳು ಬರುತ್ತದೆ ಎನ್ನುವ ಕೌತುಕ ಬಹಳ ಹೆಚ್ಚಾಗಿಯೇ ಇರುತ್ತದೆ. ಆದರೆ ಮಗುವಿನಲ್ಲಿ ಹಲ್ಲು ಬರುವ ಮೊದಲು ಕೆಲವು ಲಕ್ಷಣಗಳು ಕಾಣಿಸಿಕೊಳ್ಳುತ್ತದೆ. ಅಂತಹ ಸಮಯದಲ್ಲಿ ಪಾಲಕರು ಮಗುವಿನ ಬಗ್ಗೆ ಹೆಚ್ಚಾಗಿ ಕಾಳಜಿ ವಹಿಸಬೇಕಾಗುತ್ತದೆ ಏಕೆಂದರೆ ಈ ಸಮಯದಲ್ಲಿ ಮಗುವಿನ ದೇಹದಲ್ಲಿ ಅನೇಕ ರೀತಿಯ ಬದಲಾವಣೆಗಳಾಗುತ್ತದೆ. ಹಾಗಾಗಿ ಈ ಬಗ್ಗೆ ಕೆಲವು ಮಾಹಿತಿಗಳನ್ನು ಇಲ್ಲಿ ಹಂಚಿಕೊಳ್ಳಲಾಗಿದ್ದು ಇವು ನಿಮಗೂ ಸಹಾಯಕಾರಿಯಾಗಬಹುದು.

Teething in Babies: ಮಗುವಿಗೆ ಹಲ್ಲು ಬರುವಾಗ ಈ ಲಕ್ಷಣಗಳು ಕಂಡುಬರುತ್ತೆ
Baby TeethingImage Credit source: Getty Images
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​

Updated on: Apr 24, 2025 | 7:17 PM

ಮಗು (Toddler) ಹುಟ್ಟಿದ ನಂತರ ಒಂದೊಂದೇ ರೀತಿಯಲ್ಲಿ ದೈಹಿಕ ಬದಲಾವಣೆಗಳಾಗುವುದು ಬಹಳ ಸಹಜವಾದ ಪ್ರಕ್ರಿಯೆ. ಅದರಲ್ಲೂ ಮಗುವಿಗೆ ಐದು ತಿಂಗಳುಗಳ ನಂತರ ಕೆಲವರಲ್ಲಿ ಆರು ತಿಂಗಳ ಬಳಿಕ ಹಲ್ಲು (Tooth) ಮೂಡುವುದಕ್ಕೆ ಆರಂಭವಾಗುತ್ತದೆ. ಇದು ಮಕ್ಕಳಲ್ಲಿ ಮೂಡುವ ಮೊದಲ ಹಲ್ಲುಗಳು. ಅಂದರೆ ಇವುಗಳನ್ನು ನಾವು ಹಾಲು ಹಲ್ಲುಗಳು (baby teeth) ಎಂದು ಕರೆಯುತ್ತೇವೆ. ಈ ಸಮಯದಲ್ಲಿ ಪೋಷಕರು ಬಹಳ ಎಚ್ಚರಿಕೆಯಿಂದ ಇರಬೇಕಾಗುತ್ತದೆ ಏಕೆಂದರೆ ಇಂತಹ ಸಂದರ್ಭಗಳಲ್ಲಿ ಮಕ್ಕಳ ಒಸಡುಗಳಲ್ಲಿ ನೋವು (Pain in the gums), ಕಿರಿಕಿರಿ ಕಂಡು ಬರುವುದರಿಂದ ಮಕ್ಕಳು ಹಠ ಮಾಡುವುದಕ್ಕೆ ಪ್ರಾಂಭಿಸುತ್ತಾರೆ. ಹಾಗಾಗಿ ಮಕ್ಕಳಿಗೆ ಹಲ್ಲು ಬರುವಾಗ ಯಾವ ರೀತಿಯ ಲಕ್ಷಣಗಳು ಕಂಡುಬರುತ್ತದೆ? ಆಗ ನೀವು ಯಾವ ರೀತಿಯ ಸಲಹೆಗಳನ್ನು ಅನುಸರಿಸಬೇಕು ಎಂಬುದನ್ನು ನೀವು ತಿಳಿದುಕೊಂಡಿರಬೇಕಾಗುತ್ತದೆ. ಈ ವಿಷಯದ ಕುರಿತು ಮತ್ತಷ್ಟು ಮಾಹಿತಿ ಇಲ್ಲಿದೆ.

ಹಲ್ಲು ಬರಬೇಕಾದರೆ ಮಗು ಏನೆಲ್ಲಾ ಮಾಡುತ್ತದೆ ಎಂಬುದರ ಬಗ್ಗೆ RK Gallary ಎಂಬ ಇನ್ಸ್ಟಾ ಖಾತೆಯಲ್ಲಿ ಕೆಲವು ಮಾಹಿತಿಗಳನ್ನು ಹಂಚಿಕೊಳ್ಳಲಾಗಿದ್ದು ಅಲ್ಲಿ ತಿಳಿಸಿರುವ ಕೆಲವು ಮಾಹಿತಿ ಇಲ್ಲಿದೆ.

  • ಸಾಮಾನ್ಯವಾಗಿ ಮಗುವಿಗೆ ಹಲ್ಲು ಬರುವ ಸಮಯದಲ್ಲಿ ಮಗು ಬಾಯಲ್ಲಿ ಜೊಲ್ಲು ಸುರಿಸಲು ಆರಂಭ ಮಾಡುತ್ತದೆ.
  • ಕೈಯಲ್ಲಿ ಯಾವುದೇ ರೀತಿಯ ವಸ್ತು ಸಿಕ್ಕರೂ ಅದನ್ನು ತೆಗೆದುಕೊಂಡು ಬಾಯಲ್ಲಿ ಇಟ್ಟುಕೊಂಡು ಕಡಿಯುತ್ತದೆ ಅಥವಾ ಜಗಿಯುತ್ತದೆ, ಬಟ್ಟೆಯನ್ನು ಬಾಯಿಯಲ್ಲಿ ಹಾಕಿ ತುರುಕಲು ಆರಂಭ ಮಾಡುತ್ತದೆ.
  • ಬಾಯಿಯಲ್ಲಿ ಕಂಡು ಬರುವ ನೋವನ್ನು ತಡೆಯುವುದಕ್ಕೆ ಈ ರೀತಿ ಮಾಡುತ್ತದೆ. ಇಂತಹ ಸಮಯದಲ್ಲಿ ಮಗು ಕಾರಣಗಳಿಲ್ಲದೆ ಅಳುವುದು, ಸಿಟ್ಟು ಮಾಡಿಕೊಳ್ಳಲು ಆರಂಭ ಮಾಡುತ್ತದೆ.
  • ಹಲ್ಲು ಬರುವಾಗ ಕೆಲವು ಶಿಶುಗಳಲ್ಲಿ ಒಸಡುಗಳು ಊದಿಕೊಳ್ಳುತ್ತದೆ ಕೆಲವು ಮಕ್ಕಳಲ್ಲಿ ಬಾಯಿ ಕೆಂಪಗಾಗುತ್ತದೆ. ಈ ರೀತಿಯಾದಾಗ ಮಕ್ಕಳು ನೋವಿನಿಂದ ಯಾವುದೇ ರೀತಿಯ ಆಹಾರವನ್ನಾಗಲಿ ಅಥವಾ ಹಾಲು ಕುಡಿಯುವುದಕ್ಕೆ ಆಸಕ್ತಿ ತೋರಿಸುವುದಿಲ್ಲ.
  • ಮಕ್ಕಳಿಗೆ ಹಲ್ಲು ಬರುವ ಸಮಯದಲ್ಲಿ ಜ್ವರ ಬರುತ್ತದೆ ಅಥವಾ ಕೆಲವರಿಗೆ ವಾಂತಿಯಾಗಿ, ದೇಹದ ತುಂಬಾ ಅಲರ್ಜಿಯಾಗುತ್ತದೆ ಈ ರೀತಿಯಾದಾಗ ತಕ್ಷಣ ವೈದ್ಯರನ್ನು ಸಂಪರ್ಕಿಸಿ.

ಆದರೆ ಈ ಲಕ್ಷಣಗಳು ಪ್ರತಿ ಮಕ್ಕಳಿಗೂ ಭಿನ್ನವಾಗಿರಬಹುದು. ಒಬ್ಬರಿಗೆ ಕಂಡು ಬಂದ ಲಕ್ಷಣಗಳು ಮತ್ತೊಂದು ಮಗುವಿನಲ್ಲಿಯೂ ಕಂಡು ಬರುವುದಿಲ್ಲ. ಹಾಗಾಗಿ ನಿಮ್ಮ ಮಕ್ಕಳಿಗೆ ಯಾವ ರೀತಿ ಲಕ್ಷಣ ಕಂಡು ಬರುತ್ತದೆ ಎಂಬುದನ್ನು ಗಮನಿಸಿ ಅದಕ್ಕೆ ಪರಿಹಾರ ಕಂಡುಕೊಳ್ಳಿ.

ಇದನ್ನೂ ಓದಿ
Image
ಗೋಡಂಬಿ ತಿಂದರೆ ದಪ್ಪಾ ಆಗ್ತಾರಾ? ಯಾವ ಸಮಯದಲ್ಲಿ ತಿನ್ನಬೇಕು
Image
ಅಂಗೈನಲ್ಲಿ ತುರಿಕೆ ಕಂಡು ಬಂದರೆ ದುಡ್ಡು ಬರಲ್ಲ ರೋಗ ಬರುತ್ತೆ!
Image
ಸೂರ್ಯಾಸ್ತ ಆಗುವುದರೊಳಗೆ ರಾತ್ರಿಯ ಊಟ ಮಾಡುವ ಅಭ್ಯಾಸ ಒಳ್ಳೆಯದೇ?
Image
ಎಷ್ಟು ಮಾಡಿದರೂ ಸಣ್ಣ ಆಗುತ್ತಿಲ್ಲವಾ? ಚಿಂತೆ ಬೇಡ ಈ ರೀತಿ ಮಾಡಿ

ಇದನ್ನೂ ಓದಿ: Natural sleep remedies: ರಾತ್ರಿ ಬಾಳೆಹಣ್ಣು ತಿಂದರೆ ನಿದ್ದೆ ಚೆನ್ನಾಗಿ ಬರುತ್ತದೆ ಎಂಬುದು ನಿಜವೇ?

ಬಾಯಿಯ ಊತ ಕಡಿಮೆ ಮಾಡಲು ಇಲ್ಲಿವೆ ನೈಸರ್ಗಿಕ ಪರಿಹಾರ:

  1. ಶುಂಠಿಯಲ್ಲಿ ಉರಿಯೂತ ಶಮನಕಾರಿ ಗುಣವಿದೆ ಎಂಬುದು ತಿಳಿದಿರುವ ವಿಚಾರ. ಈ ಅಂಶ ಮಗುವಿನ ಹಲ್ಲುಗಳಲ್ಲಿ ಕಂಡು ಬರುವಂತಹ ನೋವನ್ನು ಕಡಿಮೆ ಮಾಡಲು ಸಹಕಾರಿ. ಹಾಗಾಗಿ ಒಂದು ತುಂಡು ಶುಂಠಿಯ ಸಿಪ್ಪೆ ತೆಗೆದು ಅದನ್ನು ಮಗುವಿನ ಒಸಡಿಗೆ 2- 3 ನಿಮಿಷಗಳ ಕಾಲ ಮಸಾಜ್ ಮಾಡಿ. ಇದರಿಂದ ಮಕ್ಕಳ ಒಸಡುಗಳಲ್ಲಿ ಕಂಡು ಬರುವ ಊತ ಕಡಿಮೆಯಾಗುತ್ತದೆ.
  2. ಇನ್ನು ಮಗು ಪ್ರತಿಯೊಂದು ವಸ್ತುವನ್ನು ಕಡಿಯಲು ಪ್ರಾರಂಭಿಸಿದಾಗ ಅದಕ್ಕೆ ಮರದಿಂದ ಮಾಡಿದಂತಹ ಸಣ್ಣ ಚಮಚ ಅಥವಾ ಆಟಿಕೆ ನೀಡಿ ಇದು ಒಸಡುಗಳಿಗೆ ನೈಸರ್ಗಿಕ ಒತ್ತಡ ಹಾಕುವುದಕ್ಕೆ ಸಹಾಯ ಮಾಡುತ್ತದೆ. ಆದರೆ ಪ್ಲಾಸ್ಟಿಕ್ ಆಟಿಕೆಗಳನ್ನು ತಪ್ಪಿಯೂ ನೀಡಬೇಡಿ.

ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಯಾವುದೇ ರೀತಿಯಲ್ಲಿ ಅರ್ಹ ವೈದ್ಯಕೀಯ ಸಲಹೆಗೆ ಪರ್ಯಾಯವಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞರನ್ನು ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸುವುದನ್ನು ಮರೆಯಬೇಡಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಕೇಂದ್ರ ಸರ್ಕಾರ ಜೊತೆ ನಿಲ್ಲಲು ನಿರ್ಧರಿಸಿದ ಕೋಲಾರ ರೈತರು
ಕೇಂದ್ರ ಸರ್ಕಾರ ಜೊತೆ ನಿಲ್ಲಲು ನಿರ್ಧರಿಸಿದ ಕೋಲಾರ ರೈತರು
ಭಾರತದ ಮುಂದೆ ತಪ್ಪೊಪ್ಪಿಕೊಳ್ಳದಿದ್ದರೆ ಪಾಕ್​ಗೆ ಉಳಿಗಾಲವಿಲ್ಲ: ವಾಟಾಳ್
ಭಾರತದ ಮುಂದೆ ತಪ್ಪೊಪ್ಪಿಕೊಳ್ಳದಿದ್ದರೆ ಪಾಕ್​ಗೆ ಉಳಿಗಾಲವಿಲ್ಲ: ವಾಟಾಳ್
ಅಲ್ಲು ಅರ್ಜುನ್ ಜೊತೆ ಎಕ್ಸ್​ಕ್ಲೂಸೀವ್ ಸಂದರ್ಶನ; ಇಲ್ಲಿದೆ ಲೈವ್ ವಿಡಿಯೋ
ಅಲ್ಲು ಅರ್ಜುನ್ ಜೊತೆ ಎಕ್ಸ್​ಕ್ಲೂಸೀವ್ ಸಂದರ್ಶನ; ಇಲ್ಲಿದೆ ಲೈವ್ ವಿಡಿಯೋ
ಪದಗಳನ್ನು ಎಚ್ಚರಿಕೆಯಿಂದ ಬಳಸಬೇಕೆಂದು ಲಾಡ್​ಗೆ ಗೊತ್ತಿಲ್ಲವೇ? ರೇಣುಕಾಚಾರ್ಯ
ಪದಗಳನ್ನು ಎಚ್ಚರಿಕೆಯಿಂದ ಬಳಸಬೇಕೆಂದು ಲಾಡ್​ಗೆ ಗೊತ್ತಿಲ್ಲವೇ? ರೇಣುಕಾಚಾರ್ಯ
ಪದ್ಮಭೂಷಣ ಶೇಖರ್ ಕಪೂರ್ ಜತೆ ವಿಶೇಷ ಸಂದರ್ಶನ; ಲೈವ್ ವಿಡಿಯೋ ಇಲ್ಲಿದೆ ನೋಡಿ
ಪದ್ಮಭೂಷಣ ಶೇಖರ್ ಕಪೂರ್ ಜತೆ ವಿಶೇಷ ಸಂದರ್ಶನ; ಲೈವ್ ವಿಡಿಯೋ ಇಲ್ಲಿದೆ ನೋಡಿ
ಮುಳ್ಳು ಬೇಲಿ ಮತ್ತು ಜಾಲಿಮರದ ಕೊಂಬೆಗಳನ್ನು ರಸ್ತೆಗೆ ಅಡ್ಡಹಾಕಿ ಬಂದ್
ಮುಳ್ಳು ಬೇಲಿ ಮತ್ತು ಜಾಲಿಮರದ ಕೊಂಬೆಗಳನ್ನು ರಸ್ತೆಗೆ ಅಡ್ಡಹಾಕಿ ಬಂದ್
ದೇವಸ್ಥಾನದಲ್ಲಿ ಮಚ್ಚಿಗೆ ಪೂಜೆ ಮಾಡಿಸಿದ ವ್ಯಕ್ತಿ, ವಿಡಿಯೋ ವೈರಲ್​
ದೇವಸ್ಥಾನದಲ್ಲಿ ಮಚ್ಚಿಗೆ ಪೂಜೆ ಮಾಡಿಸಿದ ವ್ಯಕ್ತಿ, ವಿಡಿಯೋ ವೈರಲ್​
ಪ್ರಧಾನಿ ಮೋದಿ ಸಮೀಕ್ಷೆ ಮಾಡಿಸುತ್ತೇನೆಂದಾಗ ಕಾಂಗ್ರೆಸ್ ಷರತ್ತುಗಳು: ಅಶೋಕ
ಪ್ರಧಾನಿ ಮೋದಿ ಸಮೀಕ್ಷೆ ಮಾಡಿಸುತ್ತೇನೆಂದಾಗ ಕಾಂಗ್ರೆಸ್ ಷರತ್ತುಗಳು: ಅಶೋಕ
ಚಾಮರಾಜನಗರ: ಪಾಲಾರ್ ಗ್ರಾಮದಲ್ಲಿ ಕಾಡಾನೆಗಳ ಜಲಕ್ರೀಡೆ
ಚಾಮರಾಜನಗರ: ಪಾಲಾರ್ ಗ್ರಾಮದಲ್ಲಿ ಕಾಡಾನೆಗಳ ಜಲಕ್ರೀಡೆ
ಖರ್ಗೆ ಗದರಿದ ಬಳಿಕ ಕಾಂಗ್ರೆಸ್ಸಿಗರಿಗೆ ಬುದ್ಧಿ ಬಂದಂತಿದೆ: ವಿಜಯೇಂದ್ರ
ಖರ್ಗೆ ಗದರಿದ ಬಳಿಕ ಕಾಂಗ್ರೆಸ್ಸಿಗರಿಗೆ ಬುದ್ಧಿ ಬಂದಂತಿದೆ: ವಿಜಯೇಂದ್ರ