ಅಡುಗೆಯಲ್ಲಿ ಎಣ್ಣೆ ಬಳಕೆಯನ್ನು ಕಡಿಮೆ ಮಾಡಿದರೆ ಬೇಡ ಎಂದರೂ ತೆಳ್ಳಗಾಗುತ್ತೀರಿ
ಅಡುಗೆ ಮಾಡುವಾಗ ಎಣ್ಣೆ ಬಳಸುವುದನ್ನು ಕಡಿಮೆ ಮಾಡಿದರೆ ಆರೋಗ್ಯ ಚೆನ್ನಾಗಿರುತ್ತದೆ. ಆದರೆ ಕೆಲವರಿಗೆ ಅಡುಗೆಗೆ ಯಾವ ರೀತಿ ಎಣ್ಣೆಯನ್ನು ಆಯ್ಕೆ ಮಾಡಬೇಕು ಎಂಬುದು ತಿಳಿದಿರುವುದಿಲ್ಲ. ಇದರಿಂದ ನಮ್ಮ ಆರೋಗ್ಯ ನಮಗೆ ತಿಳಿಯದಂತೆ ಹಾಳಾಗುತ್ತಿರುತ್ತದೆ. ಹಾಗಾದರೆ ಅಡುಗೆಗೆ ಯಾವ ಎಣ್ಣೆಯ ಬಳಕೆ ಒಳ್ಳೆಯದು? ಎಣ್ಣೆಯನ್ನು ಕಡಿಮೆ ಪ್ರಮಾಣದಲ್ಲಿ ಉಪಯೋಗ ಮಾಡುವುದರಿಂದ ಯಾವ ರೀತಿಯ ಲಾಭಗಳಾಗುತ್ತವೆ ಎಂಬುದನ್ನು ತಿಳಿದುಕೊಳ್ಳಿ. ಈ ಬಗ್ಗೆ ಮಾಹಿತಿ ಇಲ್ಲಿದೆ.

ನಾವು ಸೇವನೆ ಮಾಡುವ ಆಹಾರ (Food) ಆರೋಗ್ಯಕರವಾಗಿರಬೇಕು. ಆಗ ಮಾತ್ರ ನಮ್ಮ ದೇಹ ಅನಾರೋಗ್ಯದಿಂದ ದೂರವಿರಲು ಸಾಧ್ಯ. ಆದರೆ ಇತ್ತೀಚಿಗೆ ಹೆಚ್ಚುತ್ತಿರುವ ಬೊಜ್ಜಿನಿಂದಾಗಿ ನಮ್ಮ ದೇಹ ನಾನಾ ರೀತಿಯ ಸಮಸ್ಯೆಗಳನ್ನು ಎದುರಿಸುವಂತಹ ಪರಿಸ್ಥಿತಿ ಬಂದಿದೆ. ಹಾಗಾಗಿ ಈ ಸಮಸ್ಯೆಯಿಂದ ಮುಕ್ತಿ ಪಡೆಯಲು ಅಂದರೆ ಬೊಜ್ಜು (Obesity) ಕಡಿಮೆಯಾಗಲು ನಾವು ಬಳಕೆ ಮಾಡುವ ಅಡುಗೆ ಎಣ್ಣೆ (Cooking oil) ಬದಲಾಗಬೇಕು ಜೊತೆಗೆ ಅದರ ಬಳಕೆಯೂ ಕಡಿಮೆಯಾಗಬೇಕು. ಆದರೆ ಕೆಲವರಿಗೆ ಅಡಿಗೆಗೆ ಉಪಯೋಗ ಮಾಡುವ ತೈಲ ಮತ್ತು ಬೊಜ್ಜಿಗೆ ಸಂಬಂಧವಿದೆಯೇ ಎಂಬ ಪ್ರಶ್ನೆ ಮೂಡುತ್ತದೆ. ಹೌದು. ಇವೆರಡಕ್ಕೂ ಸಂಬಂಧವಿದೆ. ಏಕೆಂದರೆ ನಾವು ಉಪಯೋಗಿಸುವ ಅಡುಗೆ ಎಣ್ಣೆ ನಮ್ಮ ಆರೋಗ್ಯದಲ್ಲಿ ನಾನಾ ರೀತಿಯ ಪರಿಣಾಮ ಬೀರಬಹುದು. ಹಾಗಾದರೆ ಯಾವ ಎಣ್ಣೆಯ ಬಳಕೆ ಒಳ್ಳೆಯದು? ಅಡುಗೆಯಲ್ಲಿ ಎಣ್ಣೆಯನ್ನು ಕಡಿಮೆ ಪ್ರಮಾಣದಲ್ಲಿ ಉಪಯೋಗ ಮಾಡುವುದರಿಂದ ಯಾವ ರೀತಿಯ ಲಾಭಗಳಾಗುತ್ತವೆ ಎಂಬುದನ್ನು ತಿಳಿದುಕೊಳ್ಳಿ.
ಆಹಾರಗಳಲ್ಲಿ ತೈಲ ಕಡಿಮೆ ಮಾಡಲು ಸಲಹೆಗಳು;
ಅಡುಗೆ ಎಣ್ಣೆಯಲ್ಲಿ ಕ್ಯಾಲೊರಿ ಮತ್ತು ಕೊಬ್ಬಿನ ಅಂಶ ಹೆಚ್ಚಾಗಿದ್ದು, ಅಂತಹ ಎಣ್ಣೆಯ ಸೇವನೆ ಮಾಡಿದಾಗ ತೂಕ ಹೆಚ್ಚಳ ಮತ್ತು ಬೊಜ್ಜಿಗೆ ಕಾರಣವಾಗಬಹುದು. ಅದಲ್ಲದೆ ಅತಿಯಾದ ಎಣ್ಣೆ ಸೇವನೆ ಮಾಡಿದರೆ ಅದರಲ್ಲಿರುವ ಸ್ಯಾಚುರೇಟೆಡ್ ಮತ್ತು ಟ್ರಾನ್ಸ್ ಕೊಬ್ಬುಗಳಿಂದ, ದೇಹದ ಕೊಬ್ಬು ಕೂಡ ಹೆಚ್ಚಾಗಬಹುದು. ಹಾಗಾಗಿ ನೀವು ತಯಾರಿಸುವ ಆಹಾರಗಳಲ್ಲಿ ಆಲಿವ್, ಆವಕಾಡೊ ಅಥವಾ ದ್ರಾಕ್ಷಿಬೀಜಗಳಿಂದ ತಯಾರಿಸಿದ ಎಣ್ಣೆಯನ್ನು ಸೇರಿಸಿಕೊಳ್ಳಿ ಇಲ್ಲವಾದಲ್ಲಿ ತೆಂಗಿನ ಎಣ್ಣೆಯ ಬಳಕೆ ಮಾಡಿ. ಸಾಧ್ಯವಾದಷ್ಟು ಎಣ್ಣೆಯನ್ನು ಮಿತವಾಗಿ ಬಳಸಿ. ಜೊತೆಗೆ ಹುರಿಯುವ ಬದಲು ಬೇಕಿಂಗ್, ಗ್ರಿಲಿಂಗ್ ಅಥವಾ ಸ್ಟೀಮಿಂಗ್ ಅನ್ನು ಆರಿಸಿಕೊಳ್ಳಿ. ಅಡುಗೆ ಎಣ್ಣೆಗಳನ್ನು ಖರೀದಿಸುವಾಗ ಅವುಗಳ ಮೇಲಿರುವ ಲೇಬಲ್ ಗಳನ್ನು ಓದಿ, ಅನಾರೋಗ್ಯಕರ ಉತ್ಪನ್ನಗಳ ಬಳಕೆಯಾಗಿರುವ ಎಣ್ಣೆಗಳನ್ನು ಖರೀದಿಸಬೇಡಿ.
ಅಡುಗೆಯಲ್ಲಿ ಎಣ್ಣೆಯ ಪ್ರಮಾಣ ಕಡಿಮೆಯಾದರೆ ಏನಾಗುತ್ತೆ?
ತೂಕ ನಷ್ಟ: ನೀವು ಸೇವನೆ ಮಾಡುವ ಆಹಾರದಲ್ಲಿ ಎಣ್ಣೆ ಕಡಿಮೆ ಪ್ರಮಾಣದಲ್ಲಿ ಇದ್ದರೆ ನಿಮ್ಮ ತೂಕ ಆರೋಗ್ಯಕರವಾಗಿ ಇಳಿಯುತ್ತದೆ. ಬೊಜ್ಜಿನ ಅಪಾಯವೂ ಇರುವುದಿಲ್ಲ.
ಸುಧಾರಿತ ಹೃದಯದ ಆರೋಗ್ಯ: ನಾವು ಪ್ರತಿನಿತ್ಯ ತಯಾರಿಸುವ ಅಡುಗೆಯಲ್ಲಿ ಎಣ್ಣೆ ಪ್ರಮಾಣ ಕಡಿಮೆ ಇದ್ದರೆ ನಮ್ಮ ಹೃದಯದ ಆರೋಗ್ಯವೂ ಕೂಡ ಚೆನ್ನಾಗಿರುತ್ತದೆ.
ದೀರ್ಘಕಾಲದ ಕಾಯಿಲೆಗಳ ಅಪಾಯ ಕಡಿಮೆಯಾಗುತ್ತದೆ: ಅಡುಗೆ ಎಣ್ಣೆಯ ಬಳಕೆ ಕಡಿಮೆಯಾದರೆ ಸಾಮಾನ್ಯವಾಗಿ ದೊಡ್ಡ ದೊಡ್ಡ ಕಾಯಿಲೆ ಗಳು ಕೂಡ ಕಡಿಮೆಯಾಗುತ್ತದೆ.
ಇದನ್ನೂ ಓದಿ: ನೀವು ಈ ಆಹಾರ ಸೇವಿಸಿದರೆ, ನಿಮ್ಮ ಮೆದುಳು ಸೂಪರ್ ಫಾಸ್ಟ್ ಆಗಿ ಕೆಲಸ ಮಾಡುತ್ತೆ
ಒಳ್ಳೆಯ ಅಡುಗೆ ಎಣ್ಣೆಗಳು ಯಾವವು?
- ಆಲಿವ್ ಎಣ್ಣೆ: ಇದು ಉತ್ಕರ್ಷಣ ನಿರೋಧಕಗಳು, ಆರೋಗ್ಯಕರ ಮೊನೊಸ್ಯಾಚುರೇಟೆಡ್ ಕೊಬ್ಬುಗಳಿಂದ ಸಮೃದ್ಧವಾಗಿದೆ. ಕಡಿಮೆ ಉರಿಯಲ್ಲಿ ಹೆಚ್ಚು ಹೊತ್ತು ಅಡುಗೆ ಮಾಡಬೇಕು ಎಂದಾಗ ಈ ಎಣ್ಣೆ ಉತ್ತಮ.
- ಆವಕಾಡೊ ಎಣ್ಣೆ: ಇದು ಸೌಮ್ಯ ಪರಿಮಳ ಹೊಂದಿದ್ದು ಹೃದಯ ಆರೋಗ್ಯಕಕ್ಕೆ ಅಗತ್ಯವಾಗಿರುವ ಮೊನೊಸ್ಯಾಚುರೇಟೆಡ್ ಕೊಬ್ಬುಗಳಿಂದ ಸಮೃದ್ಧವಾಗಿದೆ. ದೊಡ್ಡ ಬೆಂಕಿಯಲ್ಲಿ ಬೇಗ ಅಡುಗೆ ಮಾಡುವಾಗ ಈ ಎಣ್ಣೆಯ ಬಳಕೆ ಉತ್ತಮ.
ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಯಾವುದೇ ರೀತಿಯಲ್ಲಿ ಅರ್ಹ ವೈದ್ಯಕೀಯ ಸಲಹೆಗೆ ಪರ್ಯಾಯವಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞರನ್ನು ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸುವುದನ್ನು ಮರೆಯಬೇಡಿ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ