AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯಜ್ಞದಿಂದ ರೋಗ ನಿವಾರಣೆ ಸಾಧ್ಯವಾ? ಹೌದೆನ್ನುತ್ತಿದೆ ಪತಂಜಲಿ ಸಂಶೋಧನೆ

Patanjali Yagya therapy: ಪತಂಜಲಿ ಸಂಶೋಧನೆಯು ಯಜ್ಞ ಚಿಕಿತ್ಸೆಯು ಮಧುಮೇಹ, ಕ್ಯಾನ್ಸರ್ ಮತ್ತು ಹೃದಯರೋಗಗಳ ಲಕ್ಷಣಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ ಎಂದು ತೋರಿಸಿದೆ. ಒಂಬತ್ತು ರೋಗಿಗಳ ಮೇಲೆ ನಡೆಸಿದ ಅಧ್ಯಯನದಲ್ಲಿ ಧನಾತ್ಮಕ ಫಲಿತಾಂಶಗಳು ಕಂಡುಬಂದಿವೆ. ಯಜ್ಞದಲ್ಲಿ ಬಳಸುವ ಗಿಡಮೂಲಿಕೆಗಳು ದೇಹದ ಮೇಲೆ ಉತ್ತಮ ಪರಿಣಾಮ ಬೀರುತ್ತವೆ ಎಂದು ಸಂಶೋಧನೆ ಸೂಚಿಸುತ್ತದೆ. ಈ ಚಿಕಿತ್ಸೆಯು ಜೀವನದ ಗುಣಮಟ್ಟವನ್ನು ಸುಧಾರಿಸುತ್ತದೆ.

ಯಜ್ಞದಿಂದ ರೋಗ ನಿವಾರಣೆ ಸಾಧ್ಯವಾ? ಹೌದೆನ್ನುತ್ತಿದೆ ಪತಂಜಲಿ ಸಂಶೋಧನೆ
ಪತಂಜಲಿ ಯಜ್ಞ ಚಿಕಿತ್ಸೆ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Apr 23, 2025 | 5:57 PM

ಭಾರತದಲ್ಲಿ ಪ್ರಾಚೀನ ಕಾಲದಿಂದಲೂ ಯಜ್ಞ, ಯಾಗ, ಹೋಮ ಹವನಗಳಿಗೆ ಧಾರ್ಮಿಕ ಮತ್ತು ಆಧ್ಯಾತ್ಮಿಕ ಮಹತ್ವ ಮಹತ್ವ ಇದೆ. ಈ ಯಜ್ಞದ ಸಹಾಯದಿಂದ ಅನೇಕ ರೋಗಗಳನ್ನು ಸಹ ನಿಯಂತ್ರಿಸಬಹುದು ಎಂದು ಹೇಳಲಾಗುತ್ತದೆ. ಯಜ್ಞದಲ್ಲಿ ವಿಶೇಷ ರೀತಿಯ ಗಿಡಮೂಲಿಕೆಗಳನ್ನು ಬಳಸುವುದರಿಂದ ರೋಗಗಳ ಲಕ್ಷಣಗಳನ್ನು ಕಡಿಮೆ ಮಾಡಬಹುದು. ಇದನ್ನು ಯಜ್ಞ ಚಿಕಿತ್ಸೆ (Yagya Therapy) ಎಂದು ಕರೆಯಲಾಗುತ್ತದೆ. ಯಜ್ಞ ಚಿಕಿತ್ಸೆಯಿಂದ ಮಧುಮೇಹ, ಕ್ಯಾನ್ಸರ್ ಮತ್ತು ಹೃದ್ರೋಗಗಳನ್ನು ನಿಯಂತ್ರಿಸಬಹುದು ಮತ್ತು ಅವುಗಳ ಲಕ್ಷಣಗಳನ್ನು ಸಹ ಕಡಿಮೆ ಮಾಡಬಹುದು. ಹರಿದ್ವಾರದ ಪತಂಜಲಿ ಸಂಶೋಧನಾ ಸಂಸ್ಥೆಯ (Patanjali Research) ಪತಂಜಲಿ ಹರ್ಬಲ್ ರಿಸರ್ಚ್ ವಿಭಾಗದ ಸಂಶೋಧನೆಯಲ್ಲಿ ಈ ಮಾಹಿತಿ ಬೆಳಕಿಗೆ ಬಂದಿದೆ. ಈ ಸಂಶೋಧನೆಯು ವಿಶ್ವಪ್ರಸಿದ್ಧ ಇಂಟರ್ನ್ಯಾಷನಲ್ ಜರ್ನಲ್ ಆಫ್ ಎಮರ್ಜಿಂಗ್ ಟೆಕ್ನಾಲಜೀಸ್ (IJEET) ನಲ್ಲಿಯೂ ಪ್ರಕಟವಾಗಿದೆ ಎಂದು ಹೇಳಲಾಗಿದೆ.

ಯಜ್ಞ ಚಿಕಿತ್ಸೆಯು ಸಾಂಪ್ರದಾಯಿಕ ಭಾರತೀಯ ವೈದ್ಯಕೀಯ ಪದ್ಧತಿಯಾಗಿದ್ದು, ಇದರಲ್ಲಿ ಹವನ ಮತ್ತು ಮಂತ್ರಗಳನ್ನು ಪಠಿಸುವ ಮೂಲಕ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಸುಧಾರಿಸಲು ಪ್ರಯತ್ನಿಸಲಾಗುತ್ತದೆ. ಪತಂಜಲಿಯ ಸಂಶೋಧಕರು ಯಜ್ಞ ಚಿಕಿತ್ಸೆಯನ್ನು ಪೂರಕ ಆರೈಕೆಯಾಗಿ ಬಳಸಲು ಪ್ರಯತ್ನಿಸಿದ್ದಾರೆ. ಸಂಶೋಧನೆಯ ಪ್ರಕಾರ, ಪತಂಜಲಿಯ ದಿವ್ಯ ಫಾರ್ಮಸಿಯ ವಿಶೇಷ ಔಷಧೀಯ ಗಿಡಮೂಲಿಕೆಗಳನ್ನು ಬಳಸಿಕೊಂಡು ಯಜ್ಞ ಚಿಕಿತ್ಸೆಯ ಮೂಲಕ ಮಧುಮೇಹವನ್ನು ಗುಣಪಡಿಸಲು ಬಳಸಬಹುದು. ಈ ವಿಧಾನದಿಂದ ಕ್ಯಾನ್ಸರ್ ಮತ್ತು ಹೃದಯ ಕಾಯಿಲೆಗಳನ್ನು ನಿಯಂತ್ರಿಸಲಾಗಿದೆ. ಈ ಚಿಕಿತ್ಸೆಯು ಪರಿಸರವನ್ನು ಶುದ್ಧೀಕರಿಸುವಲ್ಲಿಯೂ ಸಹಾಯ ಮಾಡುತ್ತದೆ ಎಂದು ಪತಂಜಲಿ ಸಂಸ್ಥೆ ಹೇಳುತ್ತದೆ.

ಇದನ್ನೂ ಓದಿ: ಸನ್​​ಬರ್ನ್​ನಿಂದಾಗುವ ಆರೋಗ್ಯ ಸಮಸ್ಯೆಗಳಿಗೆ ಆಯುರ್ವೇದದಲ್ಲಿ ಚಿಕಿತ್ಸೆ: ಪತಂಜಲಿ ಸಂಶೋಧನೆ ಬೆಳಕು

ಇದನ್ನೂ ಓದಿ
Image
ಸನ್​ಬರ್ನ್​​ಗೆ ಆಯುರ್ವೇದದಲ್ಲಿ ಪರಿಹಾರ: ಪತಂಜಲಿ
Image
ಸೋರಿಯಾಸಿಸ್ ಕಾಯಿಲೆಗೆ ಪತಂಜಲಿ ಔಷಧಿ
Image
ಗುಲಾಬ್ ಶರ್ಬತ್; ಪತಂಜಲಿಗೆ ಲಾಭಕ್ಕಿಂತ ಜನರ ಆರೋಗ್ಯ ಕಾಳಜಿ
Image
ಪಾನೀಯ ಉದ್ಯಮದಲ್ಲಿ ಸಂಚಲನ ಸೃಷ್ಟಿಸಿದ ಪತಂಜಲಿ ಗುಲಾಬ್ ಶರ್ಬತ್

ಯಜ್ಞ ಚಿಕಿತ್ಸೆಯಲ್ಲಿ ಬಳಸಲಾಗುವ ವಸ್ತುಗಳು ಔಷಧೀಯ ಗುಣಗಳನ್ನು ಹೊಂದಿರುವ ಗಿಡಮೂಲಿಕೆಗಳ ಮಿಶ್ರಣವನ್ನು ಒಳಗೊಂಡಿರುತ್ತವೆ. ಇದು ದೈಹಿಕ ಮತ್ತು ಮಾನಸಿಕ ಒತ್ತಡದಿಂದ ಪರಿಹಾರವನ್ನು ನೀಡುತ್ತದೆ. ರೋಗಗಳನ್ನು ನಿಯಂತ್ರಿಸುವುದರ ಜೊತೆಗೆ, ಯಜ್ಞ ಚಿಕಿತ್ಸೆಯು ನಿದ್ರೆಯ ಗುಣಮಟ್ಟವನ್ನು ಸಹ ಸುಧಾರಿಸುತ್ತದೆ. ಇದು ಚಯಾಪಚಯ ಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ಕ್ಯಾನ್ಸರ್ ರೋಗಿಗಳಲ್ಲಿ ನೋವು ಮತ್ತು ದೌರ್ಬಲ್ಯವನ್ನು ಕಡಿಮೆ ಮಾಡುತ್ತದೆ.

ರೋಗಿಗಳ ಮೇಲೆ ಸಂಶೋಧನೆ ನಡೆಸಿದ್ದು ಹೀಗೆ

ಈ ಸಂಶೋಧನೆಯಲ್ಲಿ 9 ರೋಗಿಗಳನ್ನು ಪ್ರಯೋಗಕ್ಕೆ ಬಳಸಿಕೊಳ್ಳಲಾಗಿದೆ. ಈ ಒಂಬತ್ತು ಮಂದಿಯ ಪೈಕಿ 3 ಜನರು ಕ್ಯಾನ್ಸರ್​​ನಿಂದ ಬಳಲುತ್ತಿದ್ದರು, 3 ಜನರು ಮಧುಮೇಹದಿಂದ ಬಳಲುತ್ತಿದ್ದರು, ಮತ್ತು 3 ಜನರು ಹೃದ್ರೋಗದಿಂದ ಬಳಲುತ್ತಿದ್ದರು. ಯಜ್ಞ ಚಿಕಿತ್ಸೆಯು ಈ ರೋಗಿಗಳ ಜೀವನದ ಗುಣಮಟ್ಟವನ್ನು ಸುಧಾರಿಸಬಹುದಾ, ಇದರಿಂದ ರೋಗಿಗಳಿಗೆ ಏನು ಪ್ರಯೋಜನ ಎಂದು ನೋಡುವುದು ಸಂಶೋಧನೆಯ ಉದ್ದೇಶವಾಗಿತ್ತು.

ಸಂಶೋಧನೆಯ ಸಮಯದಲ್ಲಿ, ರೋಗಿಗಳಿಗೆ ನೀಡಿದ ಯಜ್ಞ ಚಿಕಿತ್ಸೆಯಲ್ಲಿ ನಿರ್ದಿಷ್ಟ ಹವನ ವಸ್ತುಗಳನ್ನು ಬಳಸಲಾಯಿತು. ಪತಂಜಲಿಯ ದಿವ್ಯ ಫಾರ್ಮಸಿಯಿಂದ ಹವನ ಸಾಮಗ್ರಿಗಳನ್ನು ತರಿಸಲಾಗಿತ್ತು. ಈ ವಸ್ತುವು ಗಿಲೋಯ್, ಶತಾವರಿ, ಬೇವು ಮತ್ತು ದಾಲ್ಚಿನ್ನಿ ಮುಂತಾದ ಗಿಡಮೂಲಿಕೆಗಳನ್ನು ಒಳಗೊಂಡಿತ್ತು. ಸಂಶೋಧನೆಯ ಸಮಯದಲ್ಲಿ ರೋಗಿಗಳಿಗೆ ಯೋಗ ಮಾಡುವಂತೆಯೂ ಹೇಳಲಾಯಿತು.

ಇದನ್ನೂ ಓದಿ: ಪತಂಜಲಿ ಗುಲಾಬ್ ಶರ್ಬತ್; ಲಾಭಕ್ಕಿಂತ ಜನರ ಆರೋಗ್ಯ ಕಾಳಜಿಯ ಗುರಿ ಇಟ್ಟ ಬಾಬಾ ರಾಮದೇವ್

ಸಂಶೋಧನೆಯ ನಂತರ ಬಂದ ಈ ಫಲಿತಾಂಶಗಳು ಇವು

ಪ್ರಯೋಗದ ಅವಧಿಯಲ್ಲಿ ರೋಗಿಗಳ ತೂಕ ಇಳಿಕೆ, ಬಳಲಿಕೆ ಮಟ್ಟ, ಹಸಿವಿನ ಕೊರತೆ ಮಲಬದ್ಧತೆ, ತಿನ್ನುವಲ್ಲಿ ತೊಂದರೆ, ನಿದ್ರೆಯ ತೊಂದರೆಗಳು, ದೇಹದ ನೋವು, ಉಸಿರಾಟದ ತೊಂದರೆ ಮುಂತಾದ ಹಲವಾರು ಮಾಪನಗಳನ್ನು ಗಮನಿಸಲಾಯಿತು. ಹಲವು ದಿನಗಳ ಕಾಲ ಅಧ್ಯಯನ ಮಾಡಿದ ನಂತರ, ಮಧುಮೇಹ ರೋಗಿಗಳಲ್ಲಿ ಯಜ್ಞ ಚಿಕಿತ್ಸೆಯಿಂದ ಡಯಾಬಿಟಿಸ್ ನಿಯಂತ್ರಿತವಾಗಿದೆ ಎಂಬುದು ಕಂಡುಬಂದಿದೆ. ಹೃದಯ ರೋಗಿಗಳಿಗೂ ಪರಿಹಾರ ಸಿಕ್ಕಿದೆ. ಅತ್ಯಂತ ಆಶ್ಚರ್ಯಕರ ಸಂಗತಿಯೆಂದರೆ, ಮೂವರು ಕ್ಯಾನ್ಸರ್ ರೋಗಿಗಳು ಈ ಚಿಕಿತ್ಸೆಯಿಂದ ಪಾಸಿಟಿವ್ ಪರಿಣಾಮ ಪಡೆದಿದ್ದಾರೆ ಎಂದು ಪತಂಜಲಿ ಸಂಸ್ಥೆ ತಿಳಿಸಿದೆ.

ಕ್ಯಾನ್ಸರ್ ಗೆಡ್ಡೆಯ ಗಾತ್ರ ಇಳಿಕೆ

ಗಂಟಲು ಕ್ಯಾನ್ಸರ್​​​ನಿಂದ ಬಳಲುತ್ತಿದ್ದ ಮತ್ತು ತಿನ್ನಲು ಮತ್ತು ನುಂಗಲು ಕಷ್ಟಪಡುತ್ತಿದ್ದ ರೋಗಿಯೊಬ್ಬರಿಗೆ ಯಜ್ಞ ಚಿಕಿತ್ಸೆಯ ನಂತರ ಗಂಟಲಿನ ಗೆಡ್ಡೆಯ ಗಾತ್ರ ಕಡಿಮೆಯಾಗಿದೆ ಎಂದು ಸಂಶೋಧನೆಯು ಬಹಿರಂಗಪಡಿಸಿದೆ. ಅಂಡಾಶಯದ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ರೋಗಿಯು ಈ ಹಿಂದೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಆದಾಗ್ಯೂ, ಶಸ್ತ್ರಚಿಕಿತ್ಸೆಯ ನಂತರವೂ ಅವರು ಹೊಟ್ಟೆ ನೋವು ಮತ್ತು ಇತರ ಲಕ್ಷಣಗಳನ್ನು ಅನುಭವಿಸುತ್ತಲೇ ಇದ್ದರು. ಯಜ್ಞ ಚಿಕಿತ್ಸೆಯ ನಂತರ, ರೋಗಿಯು ತನ್ನ ಹೊಟ್ಟೆ ನೋವು, ಮಲಬದ್ಧತೆ ಮತ್ತು ದೌರ್ಬಲ್ಯದಿಂದ ಪರಿಹಾರ ಪಡೆದರೆನ್ನಲಾಗಿದೆ.

ಯಜ್ಞ ಚಿಕಿತ್ಸೆಯ ಸಹಾಯದಿಂದ ಮಧುಮೇಹ ಮತ್ತು ಹೃದ್ರೋಗಗಳನ್ನು ಮಾತ್ರವಲ್ಲದೆ ಕ್ಯಾನ್ಸರ್ ಲಕ್ಷಣಗಳನ್ನು ಸಹ ಕಡಿಮೆ ಮಾಡಬಹುದು ಎಂಬುದನ್ನು ಇದು ತೋರಿಸುತ್ತದೆ.

ಇನ್ನಷ್ಟು ಆರೋಗ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಉಪನ್ಯಾಸಕ ಕನ್ನಡದಲ್ಲಿ ಮಾತನಾಡಿದ್ದಕ್ಕೆ ಕೆಲಸದಿಂದ ತೆಗೆದ RV ಕಾಲೇಜು ಮಂಡಳಿ
ಉಪನ್ಯಾಸಕ ಕನ್ನಡದಲ್ಲಿ ಮಾತನಾಡಿದ್ದಕ್ಕೆ ಕೆಲಸದಿಂದ ತೆಗೆದ RV ಕಾಲೇಜು ಮಂಡಳಿ
ವಿಶ್ವಾಸ್ ಕುಮಾರ್ ರಮೇಶ್​ ಆರೋಗ್ಯವನ್ನೂ ವಿಚಾರಿಸಿದ ಕಾಂಗ್ರೆಸ್ ನಾಯಕರು
ವಿಶ್ವಾಸ್ ಕುಮಾರ್ ರಮೇಶ್​ ಆರೋಗ್ಯವನ್ನೂ ವಿಚಾರಿಸಿದ ಕಾಂಗ್ರೆಸ್ ನಾಯಕರು
ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಿದಾಗ ಗ್ರಾಮಸ್ಥರಿಂದ ಶಾಸಕನಿಗೆ ತರಾಟೆ
ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಿದಾಗ ಗ್ರಾಮಸ್ಥರಿಂದ ಶಾಸಕನಿಗೆ ತರಾಟೆ
ವಿಮಾನದ ಕರ್ಕಶ ಶಬ್ದ ಕೇಳಿ ಪತನ ನಿಶ್ಚಿತ ಅಂದುಕೊಂಡಿದ್ದೆ: ಮತ್ತೊಬ್ಬ ಮಹಿಳೆ
ವಿಮಾನದ ಕರ್ಕಶ ಶಬ್ದ ಕೇಳಿ ಪತನ ನಿಶ್ಚಿತ ಅಂದುಕೊಂಡಿದ್ದೆ: ಮತ್ತೊಬ್ಬ ಮಹಿಳೆ
ಭಾರೀ ಮಳೆ: ಮುಳ್ಳಯ್ಯನಗಿರಿ ತಪ್ಪಲಿನಲ್ಲಿ ಕುಸಿಯುತ್ತಿರುವ ಗುಡ್ಡ!
ಭಾರೀ ಮಳೆ: ಮುಳ್ಳಯ್ಯನಗಿರಿ ತಪ್ಪಲಿನಲ್ಲಿ ಕುಸಿಯುತ್ತಿರುವ ಗುಡ್ಡ!
ಅಸಹನೆಯಿಂದ ಬಿಸಿನೀರು ಕೊಡುವಂತೆ ಅಂಗರಕ್ಷನಿಗೆ ಹೇಳಿದ ಮಲ್ಲಿಕಾರ್ಜುನ ಖರ್ಗೆ
ಅಸಹನೆಯಿಂದ ಬಿಸಿನೀರು ಕೊಡುವಂತೆ ಅಂಗರಕ್ಷನಿಗೆ ಹೇಳಿದ ಮಲ್ಲಿಕಾರ್ಜುನ ಖರ್ಗೆ
ಸಿದ್ದರಾಮಯ್ಯ ಅಪ್ರಮಾಣಿಕ ಮುಖ್ಯಮಂತ್ರಿಯಾಗಿ ಉಳಿದುಬಿಡುತ್ತಾರೆ: ವಿಶ್ವನಾಥ್
ಸಿದ್ದರಾಮಯ್ಯ ಅಪ್ರಮಾಣಿಕ ಮುಖ್ಯಮಂತ್ರಿಯಾಗಿ ಉಳಿದುಬಿಡುತ್ತಾರೆ: ವಿಶ್ವನಾಥ್
ಮೂರು-ಪರೀಕ್ಷೆ ನೀತಿಯಿಂದ ಸಹಸ್ರಾರು ವಿದ್ಯಾರ್ಥಿಗಳಿಗೆ ಪ್ರಯೋಜನ: ಮಧು
ಮೂರು-ಪರೀಕ್ಷೆ ನೀತಿಯಿಂದ ಸಹಸ್ರಾರು ವಿದ್ಯಾರ್ಥಿಗಳಿಗೆ ಪ್ರಯೋಜನ: ಮಧು
ನಿರಂತರ ಮಳೆಗೆ ದೇವಿಮನೆ ಘಟ್ಟ ಭಾಗದ ಗುಡ್ಡ ಕುಸಿತ: ಹೆದ್ದಾರಿ ತುಂಬಾ ಮಣ್ಣು
ನಿರಂತರ ಮಳೆಗೆ ದೇವಿಮನೆ ಘಟ್ಟ ಭಾಗದ ಗುಡ್ಡ ಕುಸಿತ: ಹೆದ್ದಾರಿ ತುಂಬಾ ಮಣ್ಣು
ಕೋಮು ನಿಗ್ರಹ ದಳ ರಚಿಸಿರುವುದು ಯಾಕೆ ಅಂತ ಗೊತ್ತಿದೆ: ವಿಜಯೇಂದ್ರ
ಕೋಮು ನಿಗ್ರಹ ದಳ ರಚಿಸಿರುವುದು ಯಾಕೆ ಅಂತ ಗೊತ್ತಿದೆ: ವಿಜಯೇಂದ್ರ