AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Sleep Talking: ನಿಮ್ಗೂ ನಿದ್ರೆಯಲ್ಲಿ ಮಾತನಾಡುವ ಅಭ್ಯಾಸ ಇದ್ಯಾ? ಇದು ಯಾವುದಾದರೂ ರೋಗದ ಲಕ್ಷಣವೇ ತಿಳಿಯಿರಿ

ರಾತ್ರಿ ಮಲಗಿರುವ ವೇಳೆಯಲ್ಲಿ ಕೆಲವರು ತಮ್ಮಷ್ಟಕ್ಕೆ ತಾವೇ ಮಾತನಾಡುತ್ತಾ ಏನೇನು ಗೊಣಗುತ್ತಾ ಇರುವುದನ್ನು ನೀವು ಕೂಡಾ ನೋಡಿರಬಹುದಲ್ವಾ. ಅಥವಾ ನೀವು ಕೂಡಾ ಈ ರೀತಿ ನಿದ್ದೆಯಲ್ಲಿ ಮಾತನಾಡಿರಬಹುದಲ್ವಾ. ಹೀಗೆ ನಿದ್ದೆಯಲ್ಲಿ ಕನವರಿಸುವುದು ಯಾವುದಾದರೂ ಗಂಭೀರ ಕಾಯಿಲೆಯ ಲಕ್ಷಣವೇ? ಇದಕ್ಕೆ ಕಾರಣಗಳೇನು? ನಿದ್ರೆಯಲ್ಲಿ ಮಾತನಾಡುವ ಈ ಅಭ್ಯಾಸವನ್ನು ತಡೆಗಟ್ಟುವುದು ಹೇಗೆ ಈ ಕುರಿತ ಸಂಪೂರ್ಣ ಮಾಹಿತಿಯನ್ನು ತಿಳಿಯಿರಿ.

Sleep Talking: ನಿಮ್ಗೂ ನಿದ್ರೆಯಲ್ಲಿ ಮಾತನಾಡುವ ಅಭ್ಯಾಸ ಇದ್ಯಾ? ಇದು ಯಾವುದಾದರೂ ರೋಗದ ಲಕ್ಷಣವೇ ತಿಳಿಯಿರಿ
Sleep TalkingImage Credit source: Getty Images
ಮಾಲಾಶ್ರೀ ಅಂಚನ್​
| Edited By: |

Updated on: Apr 24, 2025 | 10:15 AM

Share

ಕೆಲವರಿಗೆ ನಿದ್ರೆಯಲ್ಲಿ (Sleep) ನಡೆದಾಡುವ ಅಭ್ಯಾಸ ಇದ್ರೆ ಇನ್ನೂ ಕೆಲವರಿಗೆ ನಿದ್ರೆಯಲ್ಲಿ ಮಾತನಾಡುವ (Sleep Talking) ಅಭ್ಯಾಸ ಇರುತ್ತದೆ. ಹೀಗೆ ಗಾಢ ನಿದ್ದೆಯಲ್ಲಿ ಏನೇನೋ ಗೊಣಗುವುದನ್ನು ನೀವು ಕೂಡಾ ನೋಡಿರುತ್ತೀರಿ ಅಲ್ವಾ. ಹೀಗೆ ಯಾರಾದ್ರೂ ನಿದ್ರೆಯಲ್ಲಿ ಮಾತನಾಡಿದರೆ ಇದು ಕನಸಿನಲ್ಲಿ ಮಾತನಾಡುವುದು ಎಂದು ಹಲವರು ಹೇಳುತ್ತಾರೆ. ನಿದ್ರೆಯಲ್ಲಿ ಮಾತನಾಡುವ ಈ ಅಭ್ಯಾಸವನ್ನು ವೈದ್ಯಕೀಯ ಭಾಷೆಯಲ್ಲಿ ಪ್ಯಾರಾಸೋಮ್ನಿಯಾ (Parasomnia) ಎಂದು ಕರೆಯುತ್ತಾರೆ. ಪ್ಯಾರಾಸೋಮ್ನೀಯಾ ಎನ್ನುವಂತಹದ್ದು ಏನಾದರೂ ಗಂಭೀರ ಕಾಯಿಲೆಯ ಲಕ್ಷಣವೇ? ಯಾವ ಕಾರಣದಿಂದ ಜನ ಹೀಗೆ ನಿದ್ರೆಯಲ್ಲಿ ಮಾತನಾಡುತ್ತಾರೆ. ಈ ಅಭ್ಯಾಸ ಮರುಕಳಿಸದಂತೆ ತಡೆಗಟ್ಟುವುದು ಹೇಗೆ? ಈ ಎಲ್ಲದರ ಸಂಪೂರ್ಣ ಮಾಹಿತಿ ಇಲ್ಲಿದೆ.

ರಾತ್ರಿ ನಿದ್ರೆಯಲ್ಲಿ ಗೊಣಗುವುದು ಗಂಭೀರ ಕಾಯಿಲೆಯೇ?

ನಿದ್ರೆಯಲ್ಲಿ ಮಾತನಾಡುವ ಅಭ್ಯಾಸವನ್ನು ವೈದ್ಯಕೀಯ ಭಾಷೆಯಲ್ಲಿ ಪ್ಯಾರಾಸೋಮ್ನಿಯಾ ಎಂದು ಕರೆಯಲಾಗುತ್ತದೆ. ಇದು ನಿದ್ರೆಯ ಸಮಯದಲ್ಲಿ ಮಾತ್ರ ಸಂಭವಿಸುವ ನಡವಳಿಕೆಯಾಗಿದ್ದು, ಇದರಿಂದ ಯಾವುದೇ ಹಾನಿಯಿಲ್ಲ ಜೊತೆಗೆ ಇದು ಯಾವುದೇ ಮಾನಸಿಕ ಅಥವಾ ಆರೋಗ್ಯ ಸಮಸ್ಯೆ ಅಲ್ಲ ಎಂದು ತಜ್ಞರು ಹೇಳುತ್ತಾರೆ. ಅದೇ ರೀತಿ ಇದನ್ನು ಸಾಮಾನ್ಯ ಎಂದು ಬಿಂಬಿಸಲು ಕೂಡಾ ಸಾಧ್ಯವಿಲ್ಲ.  ಹೆಚ್ಚಾಗಿ ಮೂರರಿಂದ ಹತ್ತು ವರ್ಷದೊಳಗಿಗೆ ಮಕ್ಕಳು ಹೀಗೆ ನಿದ್ರೆಯಲ್ಲಿ ಮಾತನಾಡುತ್ತಾರೆ. ದೊಡ್ಡವರು ಕೂಡಾ ಹೀಗೆ ನಿದ್ರೆಯಲ್ಲಿ ಗೊಣಗುವುದುಂಟು. ಕೆಲವೊಮ್ಮೆ ಈ ಸಮಸ್ಯೆ ಅನುವಂಶಿಕವಾಗಿಯೂ ಬರುತ್ತದೆ.

ಇದಕ್ಕೆ ಕಾರಣಗಳೇನು?

ನಿದ್ರೆಯಲ್ಲಿ ಮಾತನಾಡುವ ಅಭ್ಯಾಸಕ್ಕೆ ನಿಖರವಾದ ಕಾರಣ ಏನು ಎಂಬುದನ್ನು ಇನ್ನೂ ಕಂಡು ಹಿಡಿಯಲಾಗಿಲ್ಲ. ಆದರೆ ನಿದ್ರೆಯಲ್ಲಿ ಮಾತನಾಡಲು ಮುಖ್ಯ ಕಾರಣ ಒತ್ತಡ, ನಿದ್ರೆಯ ಕೊರತೆ, ಅತಿಯಾದ ಮದ್ಯಪಾನ ಸೇವನೆ, ಮಾನಸಿಕ  ಅಸ್ವಸ್ಥತೆಗಳು, ನಿರಂತರವಾಗಿ ಔಷಧಿಗಳನ್ನು ತೆಗೆದುಕೊಳ್ಳುವ ಅಭ್ಯಾಸ ಎನ್ನುತ್ತಾರೆ ತಜ್ಞರು. ಹೀಗೆ ನಿದ್ರೆಯಲ್ಲಿ ಕೆಲವು ಸೆಕೆಂಡುಗಳ ಕಾಲ ಮಾತನಾಡುವುದು ದೊಡ್ಡ ಸಮಸ್ಯೆಯಲ್ಲ. ಆದರೆ ಯಾರಾದರೂ ಹೀಗೆ ದೀರ್ಘಕಾಲದವರೆಗೆ ಮಾತನಾಡುತ್ತ ಇದ್ರೆ ಅಥವಾ ಕಿರುಚಾಟಗಳು ಹೆಚ್ಚಾದರೆ ಇದರಿಂದ ಪಕ್ಕದಲ್ಲಿ ಮಲಗಿರುವವರ ನಿದ್ದೆ ಕೆಡುವ ಸಾಧ್ಯತೆ ಇರುತ್ತದೆ. ಇಂತಹ ಸಂದರ್ಭದಲ್ಲಿ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.

ಇದನ್ನೂ ಓದಿ
Image
ಬಿಳಿ ಚಾಕೊಲೇಟ್ ನಿಜವಾದ ಚಾಕೊಲೇಟಾ?
Image
ಬೇಸಿಗೆಯಲ್ಲಿ ಪ್ರತಿದಿನ 1 ಲೋಟ ಸೋಂಪು ನೀರನ್ನು ಕುಡಿಯಬೇಕಂತೆ
Image
ಬರಿಗಣ್ಣಿಗೆ ಕಾಣದ ಹೊಚ್ಚ ಹೊಸ ಬಣ್ಣವನ್ನು ಕಂಡು ಹಿಡಿದ ವಿಜ್ಞಾನಿಗಳು

ಇದನ್ನೂ ಓದಿ: ಬೇಸಿಗೆಯಲ್ಲಿ ಪ್ರತಿದಿನ 1 ಲೋಟ ಸೋಂಪು ನೀರನ್ನು ಕುಡಿಯಿರಿ, ಹಲವು ಪ್ರಯೋಜನಗಳನ್ನು ಪಡೆಯಿರಿ

ನಿದ್ರೆಯಲ್ಲಿ ಮಾತನಾಡುವುದನ್ನು ಕಡಿಮೆ ಮಾಡುವುದು ಹೇಗೆ?

  • ನಿದ್ರೆಯಲ್ಲಿ ಮಾತನಾಡುವುದನ್ನು ಕಡಿಮೆ ಮಾಡಲು ಸ್ಥಿರವಾದ ವೇಳಾಪಟ್ಟಿಯನ್ನು ಅನುಸರಿಸಿ, ಹೀಗೆ ಪ್ರತಿನಿತ್ಯ ಒಂದೇ ಸಮಯಕ್ಕೆ ಮಲಗುವ ಅಭ್ಯಾಸವನ್ನು ರೂಢಿಸಿಕೊಳ್ಳುವ ಮೂಲಕ ನಿದ್ರೆಯಲ್ಲಿ ಮಾತನಾಡುವುದನ್ನು ಕಡಿಮೆ ಮಾಡಬಹುದು.
  • ಒತ್ತಡವನ್ನು ಕಡಿಮೆ ಮಾಡುವ ಮೂಲಕ ನಿದ್ರೆ ನಿರ್ವಹಣೆಯ ತಂತ್ರವನ್ನು ಕಲಿಯಿರಿ. ಈ ಮೂಲಕ ನೀವು ನಿದ್ರೆಯಲ್ಲಿ ಮಾತನಾಡುವುದನ್ನು ತಪ್ಪಿಸಬಹುದು.
  • ಮನಸ್ಸನ್ನು ಶಾಂತವಾಗಿಡಲು ಮತ್ತು ಒತ್ತಡವನ್ನು ನಿವಾರಿಸಲು ಸಂಗೀತವು ಉತ್ತಮ ಮಾರ್ಗವಾಗಿದ್ದು, ನೀವು ಮಲಗುವ ಮುನ್ನ ನಿಮ್ಮ ನೆಚ್ಚಿನ ಹಾಡುಗಳನ್ನು ಕೇಳುವುದು ಕೂಡಾ ಉತ್ತಮ.
  • ಪ್ರತಿನಿತ್ಯ ವ್ಯಾಯಾಮ, ಧ್ಯಾನವನ್ನು ಅಭ್ಯಾಸ ಮಾಡಿ
  • ಮಧ್ಯಾಹ್ನ ಅಥವಾ ಸಂಜೆ ಕೆಫೀನ್, ಆಲ್ಕೋಹಾಲ್ ಸೇವಿಸುವುದನ್ನು ತಪ್ಪಿಸಿ.
  • ಮಲಗುವ ಅರ್ಧ ಗಂಟೆ ಮೊದಲು ಟಿವಿ ಅಥವಾ ಮೊಬೈಲ್ ಆಫ್ ಮಾಡಿ ವಿಶ್ರಾಂತಿ ಪಡೆಯಲು ಸಮಯ ನೀಡಿ.
  • ಒಳ್ಳೆಯ ನಿದ್ರೆಗಾಗಿ ಆರಾಮದಾಯಕವಾದ ಹಾಸಿಗೆ ಮತ್ತು ದಿಂಬನ್ನು ಬಳಸಿ.
  • ನಿದ್ರೆಯಲ್ಲಿ ಮಾತನಾಡುವುದನ್ನು ನಿಲ್ಲಿಸಲು ಯಾವುದೇ ನಿರ್ದಿಷ್ಟ ಚಿಕಿತ್ಸೆ ಇಲ್ಲ. ಆದರೆ ಈ ಅಭ್ಯಾಸ ನಿಮಗೆ ತೊಂದರೆ ನೀಡುತ್ತಿದೆ ಎಂದಾದರೆ ನೀವು ತಜ್ಞರನ್ನು ಸಂಪರ್ಕಿಸುವುದು ಉತ್ತಮ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಮಾಲಾಶ್ರೀ ಅಂಚನ್​
ಮಾಲಾಶ್ರೀ ಅಂಚನ್​

ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವರು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
ಕಣ್ಣು ಆಪರೇಷನ್​​ಗೆ ಕರೆದು ಕೇವಲ ಅನಸ್ತೇಷಿಯಾ ಕೊಟ್ಟು ಕಳುಹಿಸಿದ್ರು!
ಕಣ್ಣು ಆಪರೇಷನ್​​ಗೆ ಕರೆದು ಕೇವಲ ಅನಸ್ತೇಷಿಯಾ ಕೊಟ್ಟು ಕಳುಹಿಸಿದ್ರು!
ತಾಂಡವ್ ಕ್ಯಾಪ್ಟನ್ ಆದ್ರೆ ಪ್ರಶಾಂತ್​​ಗೆ ಸಂಕಷ್ಟ: ವಿಡಿಯೋ ನೋಡಿ
ತಾಂಡವ್ ಕ್ಯಾಪ್ಟನ್ ಆದ್ರೆ ಪ್ರಶಾಂತ್​​ಗೆ ಸಂಕಷ್ಟ: ವಿಡಿಯೋ ನೋಡಿ
ದಸರಾದಲ್ಲಿ ಸಚಿವರನ್ನ ತಡೆದ ಮಹತ್ವದ ಬೆಳವಣಿಗೆ: ಸಿಎಂ ಭೇಟಿಯಾದ ಐಪಿಎಸ್
ದಸರಾದಲ್ಲಿ ಸಚಿವರನ್ನ ತಡೆದ ಮಹತ್ವದ ಬೆಳವಣಿಗೆ: ಸಿಎಂ ಭೇಟಿಯಾದ ಐಪಿಎಸ್
ಮತದಾನ ಕೇಂದ್ರದ ಬಳಿಯೇ ಸಚಿವರ ಕಾಲಿಗೆ ನಮಸ್ಕರಿಸಿದ ಬಿಜೆಪಿ ಆಭ್ಯರ್ಥಿ
ಮತದಾನ ಕೇಂದ್ರದ ಬಳಿಯೇ ಸಚಿವರ ಕಾಲಿಗೆ ನಮಸ್ಕರಿಸಿದ ಬಿಜೆಪಿ ಆಭ್ಯರ್ಥಿ
ದೊಡ್ಡಬಳ್ಳಾಪುರದ ತೂಬಗೆರೆಯಲ್ಲಿ ಕಂಪಿಸಿದ ಭೂಮಿ
ದೊಡ್ಡಬಳ್ಳಾಪುರದ ತೂಬಗೆರೆಯಲ್ಲಿ ಕಂಪಿಸಿದ ಭೂಮಿ
ಬಹಳ ದಿನಗಳ ಬಳಿಕ ಸುತ್ತೂರು ಶಕ್ತಿಪೀಠಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ
ಬಹಳ ದಿನಗಳ ಬಳಿಕ ಸುತ್ತೂರು ಶಕ್ತಿಪೀಠಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ
ಮೆಕ್ಕಾದಲ್ಲಿ ಸಿಲುಕಿದ 4,000 ಕನ್ನಡಿಗರು: ನೆರವಿಗೆ ಧಾವಿಸುವಂತೆ CMಗೆ ಮನವಿ
ಮೆಕ್ಕಾದಲ್ಲಿ ಸಿಲುಕಿದ 4,000 ಕನ್ನಡಿಗರು: ನೆರವಿಗೆ ಧಾವಿಸುವಂತೆ CMಗೆ ಮನವಿ
ತಾಂಡವ್ ರಾಮ್, ಗಗನ್ ಚಿನ್ನಪ್ಪ ಸ್ನೇಹದ ನಡುವೆ ಬಂದ ಸೌಂದರ್ಯಾ ಶೆಟ್ಟಿ
ತಾಂಡವ್ ರಾಮ್, ಗಗನ್ ಚಿನ್ನಪ್ಪ ಸ್ನೇಹದ ನಡುವೆ ಬಂದ ಸೌಂದರ್ಯಾ ಶೆಟ್ಟಿ
ನಿರುದ್ಯೋಗಿ ತರ ವರ್ತಿಸಬೇಡಿ: ಪ್ರಿಯಾಂಕ್ ಖರ್ಗೆಗೆ ಜೋಶಿ ಟಾಂಗ್
ನಿರುದ್ಯೋಗಿ ತರ ವರ್ತಿಸಬೇಡಿ: ಪ್ರಿಯಾಂಕ್ ಖರ್ಗೆಗೆ ಜೋಶಿ ಟಾಂಗ್
ಶಿಕ್ಷಕರ ಕ್ಷೇತ್ರದ ಚುನಾವಣೆ ವೇಳೆ ಗಲಾಟೆ :ಮುನಿರತ್ನ ಮೇಲೆ ಹಲ್ಲೆಗೆ ಯತ್ನ!
ಶಿಕ್ಷಕರ ಕ್ಷೇತ್ರದ ಚುನಾವಣೆ ವೇಳೆ ಗಲಾಟೆ :ಮುನಿರತ್ನ ಮೇಲೆ ಹಲ್ಲೆಗೆ ಯತ್ನ!