AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

2025ರ ಮೇ ತಿಂಗಳಲ್ಲಿ ಬ್ಯಾಂಕುಗಳಿಗೆ 13 ದಿನ, ಕರ್ನಾಟಕದಲ್ಲಿ 7 ದಿನ ರಜೆ; ಇಲ್ಲಿದೆ ಪಟ್ಟಿ

2025 May, bank holidays list: 2025ರ ಮೇ ತಿಂಗಳಲ್ಲಿ ದೇಶಾದ್ಯಂತ ಬ್ಯಾಂಕುಗಳಿಗೆ 13 ರಜಾದಿನಗಳಿವೆ. ಮೇ ಡೇ, ಗುರು ರಬೀಂದ್ರ ಜಯಂತಿ, ಬುದ್ಧ ಪೂರ್ಣಿಮಾ ಮೊದಲಾದ ರಜೆಗಳಿವೆ. ಕರ್ನಾಟಕದಲ್ಲಿ ಮೇ 1ರಂದು ಇರುವ ಕಾರ್ಮಿಕರ ದಿನಕ್ಕೆ ವಿಶೇಷ ರಜೆ ಇದೆ. ಅದು ಬಿಟ್ಟರೆ ಶನಿವಾರ ಮತ್ತು ಭಾನುವಾರದ ರಜೆಗಳೇ ಇರುವುದು.

2025ರ ಮೇ ತಿಂಗಳಲ್ಲಿ ಬ್ಯಾಂಕುಗಳಿಗೆ 13 ದಿನ, ಕರ್ನಾಟಕದಲ್ಲಿ 7 ದಿನ ರಜೆ; ಇಲ್ಲಿದೆ ಪಟ್ಟಿ
ಬ್ಯಾಂಕ್ ರಜಾ ದಿನ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Apr 28, 2025 | 3:00 PM

Share

ಬೆಂಗಳೂರು, ಏಪ್ರಿಲ್ 28: ಮುಂಬರುವ ಮೇ ತಿಂಗಳಲ್ಲಿ ದೇಶದ ವಿವಿಧ ಸ್ಥಳಗಳಲ್ಲಿ ಬ್ಯಾಂಕುಗಳಿಗೆ 13 ರಜಾ ದಿನಗಳಿವೆ. ಇಲ್ಲಿ ಪ್ರದೇಶವಾರು ರಜೆಗಳು (Bank holidays list) ಬೇರೆ ಬೇರೆ ಇವೆ. ಕಾರ್ಮಿಕರ ದಿನ, ರವೀಂದ್ರನಾಥ್ ಠಾಗೋರ್ ಜಯಂತಿ, ಬುದ್ಧ ಪೂರ್ಣಿಮಾ, ಕಾಜಿ ನಸರುಲ್ ಜಯಂತಿ ಇತ್ಯಾದಿ ದಿನಗಳು ಮೇ ತಿಂಗಳಲ್ಲಿವೆ. ಕಾರ್ಮಿಕ ದಿನಕ್ಕೆ ಬಹುತೇಕ ಎಲ್ಲಾ ರಾಜ್ಯಗಳಲ್ಲೂ ರಜೆ ಇರುತ್ತದೆ. ಇದು ಬಿಟ್ಟರೆ ನಾಲ್ಕು ಭಾನುವಾರ ಹಾಗೂ ಎರಡು ಶನಿವಾರಗಳ ನಿಯಮಿತ ರಜೆಗಳೂ ಮೇ ತಿಂಗಳಲ್ಲಿ ಇವೆ.

ಕರ್ನಾಟಕದಲ್ಲಿ ಭಾನುವಾರ, ಶನಿವಾರಗಳ ಆರು ದಿನಗಳನ್ನು ಹೊರತುಪಡಿಸಿದರೆ, ಕಾರ್ಮಿಕ ದಿನಕ್ಕೆ ಮಾತ್ರವೇ ರಜೆ ಇದೆ. ಹೀಗಾಗಿ, ಮೇ ತಿಂಗಳಲ್ಲಿ ಕರ್ನಾಟಕಕ್ಕೆ ಏಳು ದಿನ ಮಾತ್ರವೇ ಬ್ಯಾಂಕುಗಳು ಬಂದ್ ಆಗಿರುತ್ತವೆ.

2025ರ ಮೇ ತಿಂಗಳ ಬ್ಯಾಂಕ್ ರಜಾ ದಿನಗಳ ಪಟ್ಟಿ

  • ಮೇ 1, ಬುಧವಾರ: ಕಾರ್ಮಿಕರ ದಿನ / ಮಹಾರಾಷ್ಟ್ರ ದಿನ (ಮಹಾರಾಷ್ಟ್ರ, ಕರ್ನಾಟಕ, ತಮಿಳುನಾಡು, ಅಸ್ಸಾಮ್ ಸೇರಿ ಬಹುತೇಕ ರಾಜ್ಯಗಳಲ್ಲಿ ರಜೆ)
  • ಮೇ 4: ಭಾನುವಾರದ ರಜೆ
  • ಮೇ 8, ಗುರುವಾರ: ಗುರು ರಬೀಂದ್ರ ಜಯಂತಿ (ದೆಹಲಿ, ಪಶ್ಚಿಮ ಬಂಗಾಳ ಮೊದಲಾದ ಕೆಲ ರಾಜ್ಯಗಳಲ್ಲಿ ರಜೆ)
  • ಮೇ 10: ಎರಡನೇ ಶನಿವಾರದ ರಜೆ
  • ಮೇ 11: ಭಾನುವಾರದ ರಜೆ
  • ಮೇ 12, ಸೋಮವಾರ: ಬುದ್ಧ ಪೂರ್ಣಿಮಾ (ಮಧ್ಯಪ್ರದೇಶ, ಉತ್ತರಪ್ರದೇಶ, ಮಹಾರಾಷ್ಟ್ರ, ದೆಹಲಿ, ಛತ್ತೀಸ್​​​ಗಡ, ಜಾರ್ಖಂಡ್, ಹಿಮಾಚಲ, ಶ್ರೀನಗರ್, ಜಮ್ಮು, ಮಧ್ಯಪ್ರದೇಶ, ಅರುಣಾಚಲ ಪ್ರದೇಶ, ಮಿಜೋರಾಂ, ತ್ರಿಪುರಾ, ಉತ್ತರಾಖಂಡ್ ರಾಜ್ಯಗಳಲ್ಲಿ ರಜೆ)
  • ಮೇ 16, ಶುಕ್ರವಾರ: ಸಿಕ್ಕಿಂ ರಾಜ್ಯ ಸಂಸ್ಥಾಪನಾ ದಿನ
  • ಮೇ 18: ಭಾನುವಾರದ ರಜೆ
  • ಮೇ 24: ನಾಲ್ಕನೇ ಶನಿವಾರದ ರಜೆ
  • ಮೇ 25: ಭಾನುವಾರ ರಜೆ
  • ಮೇ 26, ಸೋಮವಾರ: ಕಾಜಿ ನಜರುಲ್ ಇಸ್ಲಾಂ ಜಯಂತಿ (ತ್ರಿಪುರಾದಲ್ಲಿ ರಜೆ)
  • ಮೇ 29, ಗುರುವಾರ: ಮಹಾರಾಣಾ ಪ್ರತಾಪ್ ಜಯಂತಿ (ಹರ್ಯಾಣ, ಹಿಮಾಚಲ ಪ್ರದೇಶದಲ್ಲಿ ರಜೆ)
  • ಮೇ 30, ಶುಕ್ರವಾರ: ಗುರು ಅರ್ಜುನ್ ದೇವ್ ಬಲಿದಾನ ದಿನ (ಪಂಜಾಬ್​​ನಲ್ಲಿ ರಜೆ)

ಇದನ್ನೂ ಓದಿ: ಭಾರತದ್ದೇ ಸ್ವಂತ ಎಐ ಫೌಂಡೇಶನ್ ಮಾಡಲ್ ನಿರ್ಮಾಣಕ್ಕೆ ಸರ್ವಮ್ ಸಂಸ್ಥೆ ಆಯ್ಕೆ

ಇದನ್ನೂ ಓದಿ
Image
ಚಿನ್ನದ ಶುದ್ಧತೆ, ತೆರಿಗೆ, ಮೇಕಿಂಗ್ ಚಾರ್ಜಸ್ ಇತ್ಯಾದಿ ವಿವರ
Image
ಭಾರತೀಯ ವಿಮಾನಗಳಿಗೆ ಪ್ರವೇಶ ನಿರ್ಬಂಧಿಸಿ ಪಾಕ್ ಯಡವಟ್ಟು?
Image
ಎಸ್​​ಬಿಐ, ಎಚ್​​​ಡಿಎಫ್​​ಸಿ, ಐಸಿಐಸಿಐ ಬ್ಯಾಂಕುಗಳ ಎಫ್​​​ಡಿ ದರಪಟ್ಟಿ
Image
ಒಡವೆ ಸಾಲಗಳಿಗೆ ಆರ್​​ಬಿಐ ನಿರ್ಬಂಧ? ಎನ್​​ಬಿಎಫ್​​ಸಿಗಳಿಗೆ ಫಜೀತಿ

2025ರ ಮೇ ತಿಂಗಳಲ್ಲಿ ಕರ್ನಾಟಕದಲ್ಲಿ ಬ್ಯಾಂಕ್ ರಜಾದಿನಗಳು

  • ಮೇ 1, ಬುಧವಾರ: ಕಾರ್ಮಿಕರ ದಿನ
  • ಮೇ 4: ಭಾನುವಾರದ ರಜೆ
  • ಮೇ 10: ಎರಡನೇ ಶನಿವಾರದ ರಜೆ
  • ಮೇ 11: ಭಾನುವಾರದ ರಜೆ
  • ಮೇ 18: ಭಾನುವಾರದ ರಜೆ
  • ಮೇ 24: ನಾಲ್ಕನೇ ಶನಿವಾರದ ರಜೆ
  • ಮೇ 25: ಭಾನುವಾರ ರಜೆ

ಬ್ಯಾಂಕುಗಳಿಗೆ ರಜೆ ಇದ್ದರೂ ಹೆಚ್ಚಿನ ಬ್ಯಾಂಕಿಂಗ್ ಕಾರ್ಯಗಳನ್ನು ಎಟಿಎಂ, ನೆಟ್​​ಬ್ಯಾಂಕಿಂಗ್, ಯುಪಿಐ ಇತ್ಯಾದಿ ಮೂಲಕ ಮಾಡಬಹುದು. ಇವು ಯಾವುದೇ ದಿನವಾದರೂ ತೆರೆದೇ ಇರುತ್ತವೆ. ದೊಡ್ಡ ಮೊತ್ತದ ವಹಿವಾಟು ಮಾಡಲು, ಡಿಡಿ ಪಡೆಯಲು, ಸಾಲಕ್ಕೆ ಅರ್ಜಿ ಸಲ್ಲಿಸಲು ಇತ್ಯಾದಿ ಕೆಲ ಕಾರ್ಯಗಳಿಗೆ ಬ್ಯಾಂಕ್ ಕಚೇರಿಗೆ ಹೋಗುವುದು ಅನಿವಾರ್ಯವಾಗಬಹುದು. ಅಂಥ ಕೆಲಸಗಳನ್ನು ಹೊಂದಿರುವವರು ಮುಂಚಿತವಾಗಿ ರಜಾದಿನಗಳು ಯಾವತ್ತೆಂದು ತಿಳಿದಿರುವುದು ಉತ್ತಮ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಡ್ರ್ಯಾಗನ್ ಬೋಟಿಂಗ್​​: ಮೈಸೂರಿಗೆ ಬರುವವರು ಇದನ್ನು ಮಿಸ್ ಮಾಡ್ಬೇಡಿ
ಡ್ರ್ಯಾಗನ್ ಬೋಟಿಂಗ್​​: ಮೈಸೂರಿಗೆ ಬರುವವರು ಇದನ್ನು ಮಿಸ್ ಮಾಡ್ಬೇಡಿ
ಆಂಧ್ರದ ಶ್ರೀಕಾಕುಳಂನಲ್ಲಿ ರೈಲಿನ ಮೇಲೆ ಹತ್ತಿದ ಯುವಕನ ಹುಚ್ಚಾಟ
ಆಂಧ್ರದ ಶ್ರೀಕಾಕುಳಂನಲ್ಲಿ ರೈಲಿನ ಮೇಲೆ ಹತ್ತಿದ ಯುವಕನ ಹುಚ್ಚಾಟ
ಚಿಕ್ಕಮಗಳೂರು ಅರಣ್ಯ ಪ್ರದೇಶದಲ್ಲಿ ಕಾಡ್ಗಿಚ್ಚು: ವಿಡಿಯೋ ನೋಡಿ
ಚಿಕ್ಕಮಗಳೂರು ಅರಣ್ಯ ಪ್ರದೇಶದಲ್ಲಿ ಕಾಡ್ಗಿಚ್ಚು: ವಿಡಿಯೋ ನೋಡಿ
ಕುಡಿದ ಮತ್ತಿನಲ್ಲಿ ಮಗನನ್ನೇ ಕಡಿದ ಅಪ್ಪ, ಛಿದ್ರವಾದ ಕುಟುಂಬ
ಕುಡಿದ ಮತ್ತಿನಲ್ಲಿ ಮಗನನ್ನೇ ಕಡಿದ ಅಪ್ಪ, ಛಿದ್ರವಾದ ಕುಟುಂಬ
ಕೊಪ್ಪಳ ಅಜ್ಜನ ಜಾತ್ರೆ ದ್ರೋಣ್ ಕ್ಯಾಮೆರಾದಲ್ಲಿ ಕಂಡಿದ್ದು ಹೀಗೆ
ಕೊಪ್ಪಳ ಅಜ್ಜನ ಜಾತ್ರೆ ದ್ರೋಣ್ ಕ್ಯಾಮೆರಾದಲ್ಲಿ ಕಂಡಿದ್ದು ಹೀಗೆ
ಬಿಗ್ ಬಾಸ್ ಫಿನಾಲೆಗೆ ಗಿಲ್ಲಿ, ಧನುಷ್: ಭವಿಷ್ಯ ನುಡಿದ ಸ್ಪಂದನಾ ಸೋಮಣ್ಣ
ಬಿಗ್ ಬಾಸ್ ಫಿನಾಲೆಗೆ ಗಿಲ್ಲಿ, ಧನುಷ್: ಭವಿಷ್ಯ ನುಡಿದ ಸ್ಪಂದನಾ ಸೋಮಣ್ಣ
ಸಿದ್ದರಾಮಯ್ಯ ಹೊಸ ದಾಖಲೆ: ಬೆಂಬಲಿಗರಿಂದ ನಾಟಿ ಕೋಳಿ ಔತಣ
ಸಿದ್ದರಾಮಯ್ಯ ಹೊಸ ದಾಖಲೆ: ಬೆಂಬಲಿಗರಿಂದ ನಾಟಿ ಕೋಳಿ ಔತಣ
ಆಂಧ್ರದಲ್ಲಿ ಭಾರಿ ಅನಿಲ ಸೋರಿಕೆಯಾಗಿ ಬೆಂಕಿ ದುರಂತ; ಸ್ಥಳೀಯರ ಸ್ಥಳಾಂತರ
ಆಂಧ್ರದಲ್ಲಿ ಭಾರಿ ಅನಿಲ ಸೋರಿಕೆಯಾಗಿ ಬೆಂಕಿ ದುರಂತ; ಸ್ಥಳೀಯರ ಸ್ಥಳಾಂತರ
ಗವಿಸಿದ್ದೇಶ್ವರ ಮಹಾರಥೋತ್ಸವ: ಪುಣ್ಯ ಕ್ಷಣಕ್ಕೆ ಸಾಕ್ಷಿಯಾದ 5 ಲಕ್ಷ ಮಂದಿ
ಗವಿಸಿದ್ದೇಶ್ವರ ಮಹಾರಥೋತ್ಸವ: ಪುಣ್ಯ ಕ್ಷಣಕ್ಕೆ ಸಾಕ್ಷಿಯಾದ 5 ಲಕ್ಷ ಮಂದಿ
ಮೂಳೆ ಬಿದ್ದು ಹೋಗೋಕಿಂತ ಮೊದಲು ಮದುವೆ ಆಗು: ಗಿಲ್ಲಿ ಮೇಲೆ ಅಶ್ವಿನಿ ಆಕ್ರೋಶ
ಮೂಳೆ ಬಿದ್ದು ಹೋಗೋಕಿಂತ ಮೊದಲು ಮದುವೆ ಆಗು: ಗಿಲ್ಲಿ ಮೇಲೆ ಅಶ್ವಿನಿ ಆಕ್ರೋಶ