AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

FD rates: ಆರ್​​ಬಿಐ ಬಡ್ಡಿದರ ಕಡಿತದ ಬಳಿಕ ಎಸ್​​ಬಿಐ, ಎಚ್​​ಡಿಎಫ್​​ಸಿ, ಐಸಿಐಸಿಐ ಬ್ಯಾಂಕಲ್ಲಿ ಇತ್ತೀಚಿನ ಎಫ್​​ಡಿ ದರಗಳಿವು

Fixed Deposit rates in SBI, HDFC and ICICI banks: ಆರ್​​ಬಿಐ ಏಪ್ರಿಲ್ ಮೊದಲ ವಾರದಲ್ಲಿ ರಿಪೋ ದರವನ್ನು 25 ಮೂಲಾಂಕಗಳಷ್ಟು ಕಡಿಮೆಗೊಳಿಸಿದೆ. ಎಸ್​​ಬಿಐ, ಎಚ್​​ಡಿಎಫ್​​ಸಿ, ಐಸಿಐಸಿಐ ಸೇರಿ ಹಲವು ಬ್ಯಾಂಕುಗಳು ಬಡ್ಡಿದರವನ್ನು ಪರಿಷ್ಕರಿಸಿವೆ. 3 ಕೋಟಿ ರೂ ಒಳಗಿನ ಠೇವಣಿಗಳಿಗೆ ಮೂರು ಪ್ರಮುಖ ಬ್ಯಾಂಕುಗಳಲ್ಲಿ ಬಡ್ಡಿ ಎಷ್ಟು ನೀಡಲಾಗುತ್ತದೆ, ಈ ಮಾಹಿತಿ ಇಲ್ಲಿದೆ...

FD rates: ಆರ್​​ಬಿಐ ಬಡ್ಡಿದರ ಕಡಿತದ ಬಳಿಕ ಎಸ್​​ಬಿಐ, ಎಚ್​​ಡಿಎಫ್​​ಸಿ, ಐಸಿಐಸಿಐ ಬ್ಯಾಂಕಲ್ಲಿ ಇತ್ತೀಚಿನ ಎಫ್​​ಡಿ ದರಗಳಿವು
ಡೆಪಾಸಿಟ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Apr 17, 2025 | 4:19 PM

Share

ಬೆಂಗಳೂರು, ಏಪ್ರಿಲ್ 17: ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ಏಪ್ರಿಲ್ ಎಂಪಿಸಿ ಸಭೆಯಲ್ಲಿ ರಿಪೋ ದರ ಅಥವಾ ಬಡ್ಡಿದರವನ್ನು (Repo Rate) ಶೇ. 6ಕ್ಕೆ ಇಳಿಸಿದೆ. ಇದಾದ ಬಳಿಕ ಕೆಲ ಬ್ಯಾಂಕುಗಳು ಲೋನ್ ರೇಟ್ ಮತ್ತು ಡೆಪಾಸಿಟ್ ರೇಟ್​​ಗಳನ್ನು (FD rates) ಇಳಿಸಿವೆ. ಇನ್ನೂ ಕೆಲ ಬ್ಯಾಂಕುಗಳು ಹಳೆಯ ದರಗಳನ್ನೇ ಉಳಿಸಿಕೊಂಡಿವೆ. ದೇಶದ ಮೂರು ಪ್ರಮುಖ ಬ್ಯಾಂಕುಗಳಾದ ಎಚ್​​ಡಿಎಫ್​​​ಸಿ, ಎಸ್​​ಬಿಐ ಮತ್ತು ಐಸಿಐಸಿಐ ಬ್ಯಾಂಕುಗಳಲ್ಲಿ 3 ಕೋಟಿ ರೂಗಿಂತ ಕಡಿಮೆ ಮೊತ್ತದ ಠೇವಣಿಗಳಿಗೆ ಎಷ್ಟು ಬಡ್ಡಿ ನೀಡಲಾಗುತ್ತಿದೆ, ಈ ಮಾಹಿತಿ ಕೆಳಕಂಡಂತಿದೆ:

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಫಿಕ್ಸೆಡ್ ಡೆಪಾಸಿಟ್ ದರ

  • 7ರಿಂದ 45 ದಿನಗಳವರೆಗಿನ ಠೇವಣಿ: ಶೇ. 3.5 ಬಡ್ಡಿ
  • 46ರಿಂದ 179 ದಿನಗಳು: ಶೇ. 5.50
  • 180ರಿಂದ 210 ದಿನಗಳು: ಶೇ. 6.25
  • 211 ದಿನಗಳಿಂದ 1 ವರ್ಷ: ಶೇ. 6.50
  • 1ರಿಂದ 2 ವರ್ಷ: ಶೇ. 6.70
  • 2ರಿಂದ 3 ವರ್ಷ: ಶೇ. 6.90
  • 3ರಿಂದ 5 ವರ್ಷ: ಶೇ. 6.75
  • 5ರಿಂದ 10 ವರ್ಷ: ಶೇ. 6.50

ಯಾವುದೇ ಠೇವಣಿಗೂ ಹಿರಿಯ ನಾಗರಿಕರಿಗೆ ಶೇ. 0.50ರಷ್ಟು ಹೆಚ್ಚು ಬಡ್ಡಿ ಸಿಗುತ್ತದೆ. ಎಸ್​​​ಬಿಐ ವೀ ಕೇರ್ ಸ್ಕೀಮ್​​ನಲ್ಲಿ 5ರಿಂದ 10 ವರ್ಷದ ಠೇವಣಿಗೆ ಹೆಚ್ಚುವರಿ ಶೇ. 1ರಷ್ಟು ಬಡ್ಡಿ ಸಿಗುತ್ತದೆ.

ಇದನ್ನೂ ಓದಿ: ಒಮ್ಮೆಯೂ ಸಾಲ ಮಾಡದವನಿಗೆ ಸಿಗಲ್ವಾ ಸಾಲ? ಇರಲ್ವಾ ಕ್ರೆಡಿಟ್ ಸ್ಕೋರ್? ಇಲ್ಲಿದೆ ಉತ್ತರ

ಇದನ್ನೂ ಓದಿ
Image
ಷೇರುಪೇಟೆಯಲ್ಲಿ ಗೆಲ್ಲೋದು ಹೇಗೆ? ಶ್ರೀಮಂತರಾಗುವ 7 ಟ್ರಿಕ್ಸ್
Image
ಸಿಎಸ್​​ಕೆ ಬ್ರ್ಯಾಂಡ್ ಕ್ರೆಡಿಟ್ ಕಾರ್ಡ್, ಭರ್ಜರಿ ಗಿಫ್ಟ್, ಸೌಲಭ್ಯ
Image
ಹಳೆಯ ಬ್ಯಾಂಕ್ ಅಕೌಂಟ್ ಮುಚ್ಚಿದರೆ ಸಮಸ್ಯೆಯಾ?
Image
ಬೆಳಕಿಗೆ ಬಾರದ ಶ್ರೀಮಂತರ ಶೇ. 96 ಸಂಪತ್ತು: ಶಾಕಿಂಗ್ ವರದಿ

ಎಚ್​​ಡಿಎಫ್​​ಸಿ ಬ್ಯಾಂಕ್​​ನಲ್ಲಿನ ಎಫ್​​ಡಿಗಳ ದರ ಪಟ್ಟಿ

  • 7ರಿಂದ 29 ದಿನಗಳು: ಶೇ. 3 ಬಡ್ಡಿ
  • 30ರಿಂದ 45 ದಿನಗಳು: ಶೇ. 3.50
  • 46ರಿಂದ 89 ದಿನಗಳು: ಶೇ. 4.50
  • 90ದಿನದಿಂದ 6 ತಿಂಗಳು: ಶೇ. 4.50
  • 6ರಿಂದ 9 ತಿಂಗಳು: ಶೇ. 5.75
  • 9 ತಿಂಗಳಿಂದ 1 ವರ್ಷ: ಶೇ. 6
  • 1 ವರ್ಷದಿಂದ 15 ತಿಂಗಳು: ಶೇ. 6.60
  • 15 ತಿಂಗಳಿಂದ 18 ತಿಂಗಳು: ಶೇ. 7.10
  • 18 ತಿಂಗಳಿಂದ 21 ತಿಂಗಳು: ಶೇ. 7.25 ಬಡ್ಡಿ
  • 21 ತಿಂಗಳು ಮೇಲ್ಪಟ್ಟ ಅವಧಿ: ಶೇ. 7 ಬಡ್ಡಿ

ಇಲ್ಲಿಯೂ ಹಿರಿಯ ನಾಗರಿಕರ ಎಲ್ಲಾ ಠೇವಣಿಗಳಿಗೆ ಶೇ. 0.50ರಷ್ಟು ಹೆಚ್ಚು ಬಡ್ಡಿ ಪ್ರಾಪ್ತವಾಗುತ್ತದೆ.

ಇದನ್ನೂ ಓದಿ: ಬ್ಯಾಂಕ್ ಅಕೌಂಟ್, ಫಿಕ್ಸೆಡ್ ಡೆಪಾಸಿಟ್ ನಾಮಿನಿ ನಿಯಮದಲ್ಲಿ ಬದಲಾವಣೆ; ಮಸೂದೆ ಮಂಡನೆಗೆ ಕೇಂದ್ರ ಸಜ್ಜು

ಐಸಿಐಸಿಐ ಬ್ಯಾಂಕ್​​​ನಲ್ಲಿ ಎಫ್​​ಡಿ ದರಗಳು

  • 7ರಿಂದ 29 ದಿನಗಳು: ಶೇ. 3 ಬಡ್ಡಿ
  • 30ರಿಂದ 45 ದಿನಗಳು: ಶೇ. 3.50
  • 46ರಿಂದ 60 ದಿನಗಳು: ಶೇ. 4.25
  • 61ರಿಂದ 90 ದಿನಗಳು: ಶೇ. 4.50
  • 91ರಿಂದ 184 ದಿನಗಳು: ಶೇ. 4.75
  • 185ರಿಂದ 270 ದಿನಗಳು: ಶೇ. 5.75
  • 271 ದಿನದಿಂದ 1 ವರ್ಷ: ಶೇ. 6
  • 1 ವರ್ಷದಿಂದ 15 ತಿಂಗಳು ಶೇ. 6.70
  • 15ತಿಂಗಳಿಂದ 2 ವರ್ಷ: ಶೇ. 7.25
  • 2ರಿಂದ 5 ವರ್ಷ: ಶೇ. 7
  • 5ರಿಂದ 10 ವರ್ಷ: ಶೇ. 6.90 ಬಡ್ಡಿ.

ಹಿರಿಯ ನಾಗರಿಕರಿಗೆ ಇಲ್ಲಿಯೂ ಶೇ. 0.50 ಹೆಚ್ಚು ಬಡ್ಡಿ ಸಿಗುತ್ತದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 4:08 pm, Thu, 17 April 25

ಅಕ್ಕನಿಗೆ ಗಂಡ ಮತ್ತು ಅವನ ಮನೆಯವರಿಂದ ವಿಪರೀತ ಹಿಂಸೆ: ಸಹೋದರಿ
ಅಕ್ಕನಿಗೆ ಗಂಡ ಮತ್ತು ಅವನ ಮನೆಯವರಿಂದ ವಿಪರೀತ ಹಿಂಸೆ: ಸಹೋದರಿ
ಶಿರೂರು ದುರಂತ ಸಂಭವಿಸಿ ವರ್ಷ ಕಳೆದರೂ ಮುಗಿಯದ ಜನರ ಆತಂಕ
ಶಿರೂರು ದುರಂತ ಸಂಭವಿಸಿ ವರ್ಷ ಕಳೆದರೂ ಮುಗಿಯದ ಜನರ ಆತಂಕ
ಕ್ರಾಂತಿವೀರ ದಂಥ ಬಿರುದುಗಳೆಲ್ಲ ನನಗೆ ಬೇಡ ಎಂದು ನಗುತ್ತಾ ಹೇಳಿದ ರಾಜಣ್ಣ
ಕ್ರಾಂತಿವೀರ ದಂಥ ಬಿರುದುಗಳೆಲ್ಲ ನನಗೆ ಬೇಡ ಎಂದು ನಗುತ್ತಾ ಹೇಳಿದ ರಾಜಣ್ಣ
ಕರ್ನಾಟಕದ ಎಲ್ಲ ಸಂಸದರಿಗೆ ಇದು ಸ್ವಾಭಿಮಾನದ ಪ್ರಶ್ನೆ: ಶಿವಕುಮಾರ್
ಕರ್ನಾಟಕದ ಎಲ್ಲ ಸಂಸದರಿಗೆ ಇದು ಸ್ವಾಭಿಮಾನದ ಪ್ರಶ್ನೆ: ಶಿವಕುಮಾರ್
ಬೆಳಗಾವಿ ಎಪಿಎಂಸಿ ಪ್ರತಿ ಕ್ವಿಂಟಾಲ್ ಈರುಳ್ಳಿ ಬೆಲೆ ₹800 ರಿಂದ ₹1,200!
ಬೆಳಗಾವಿ ಎಪಿಎಂಸಿ ಪ್ರತಿ ಕ್ವಿಂಟಾಲ್ ಈರುಳ್ಳಿ ಬೆಲೆ ₹800 ರಿಂದ ₹1,200!
ದರ್ಶನ್ ಜಾಮೀನು ರದ್ದಿಗೆ ಅರ್ಜಿ; ವಿಚಾರಣೆಯ ಲೈವ್ ವಿಡಿಯೋ ಇಲ್ಲಿದೆ
ದರ್ಶನ್ ಜಾಮೀನು ರದ್ದಿಗೆ ಅರ್ಜಿ; ವಿಚಾರಣೆಯ ಲೈವ್ ವಿಡಿಯೋ ಇಲ್ಲಿದೆ
ವಿರಾಟ್ ಕೊಹ್ಲಿ ಮೇಲೂ ಕೇಸ್ ಆಗುತ್ತಾ? ಪರಮೇಶ್ವರ್ ಕೊಟ್ಟರು ಮಾಹಿತಿ
ವಿರಾಟ್ ಕೊಹ್ಲಿ ಮೇಲೂ ಕೇಸ್ ಆಗುತ್ತಾ? ಪರಮೇಶ್ವರ್ ಕೊಟ್ಟರು ಮಾಹಿತಿ
ಸ್ವಾಮೀಜಿ ಮಠದ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲಿ: ಕಾಶಪ್ಪನವರ್
ಸ್ವಾಮೀಜಿ ಮಠದ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲಿ: ಕಾಶಪ್ಪನವರ್
ಲಂಡನ್​​ನಲ್ಲಿ ಪ್ರಧಾನಿ ಮೋದಿಗೆ ಭರ್ಜರಿ ಸ್ವಾಗತ, ಎಲ್ಲೆಲ್ಲೂ ಜೈಕಾರ
ಲಂಡನ್​​ನಲ್ಲಿ ಪ್ರಧಾನಿ ಮೋದಿಗೆ ಭರ್ಜರಿ ಸ್ವಾಗತ, ಎಲ್ಲೆಲ್ಲೂ ಜೈಕಾರ
ಪ್ರವೀಣ್ ಜೀವನವನ್ನೇ ಬದಲಿಸಿದ ಸುಕೃತಾ ನಾಗ್
ಪ್ರವೀಣ್ ಜೀವನವನ್ನೇ ಬದಲಿಸಿದ ಸುಕೃತಾ ನಾಗ್