AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶ್ರೀಮಂತರ ಸಂಪತ್ತು ಮುಚ್ಚಿಟ್ಟಿದ್ದೇ ಹೆಚ್ಚು; ಬೆಚ್ಚಿಬೀಳಿಸುತ್ತದೆ ಆರ್​​ಬಿಐ ಎಂಪಿಸಿ ಸದಸ್ಯರ ವರದಿ

Richer the people get, lesser their reported income: ನೂರು ಜನರಲ್ಲಿ ಅತೀ ಶ್ರೀಮಂತ ಐವರು ಮಂದಿ ತಮ್ಮ ಶೇ. 96ರಷ್ಟು ಸಂಪತ್ತನ್ನು ಮರೆ ಮಾಚುತ್ತಾರಂತೆ. ಅತಿ ಕಡಿಮೆ ಆದಾಯ ಇರುವ ಕೆಳಗಿನ 10 ಜನರು ಹೆಚ್ಚೂಕಡಿಮೆ ಎರಡು ಪಟ್ಟು ಹೆಚ್ಚು ಸಂಪತ್ತನ್ನು ತೋರ್ಪಡಿಸುತ್ತಾರಂತೆ. ಡೆಲ್ಲಿ ಸ್ಕೂಲ್ ಆಫ್ ಎಕನಾಮಿಕ್ಸ್​​ನ ನಿರ್ದೇಶಕರಾದ ರಾಮ್ ಸಿಂಗ್ ಪ್ರಕಟಿಸಿದ ವರದಿಯೊಂದರಲ್ಲಿ ಈ ಕೆಲ ಅಚ್ಚರಿ ಸಂಗತಿಗಳಿವೆ.

ಶ್ರೀಮಂತರ ಸಂಪತ್ತು ಮುಚ್ಚಿಟ್ಟಿದ್ದೇ ಹೆಚ್ಚು; ಬೆಚ್ಚಿಬೀಳಿಸುತ್ತದೆ ಆರ್​​ಬಿಐ ಎಂಪಿಸಿ ಸದಸ್ಯರ ವರದಿ
ಶ್ರೀಮಂತರು ಮತ್ತು ಬಡವರು....
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Apr 15, 2025 | 12:17 PM

ನವದೆಹಲಿ, ಏಪ್ರಿಲ್ 15: ಶ್ರೀಮಂತರ ಶ್ರೀಮಂತಿಕೆ ಹೆಚ್ಚಿದಷ್ಟೂ, ಅವರು ತಮ್ಮ ಸಂಪತ್ತನ್ನು ಮುಚ್ಚಿಡುವ (Reported income) ಪ್ರವೃತ್ತಿಯೂ ಹೆಚ್ಚುತ್ತದೆ. ತೆರಿಗೆ ಬಾಧ್ಯತೆ ಕಡಿಮೆ ಮಾಡಲು ಶ್ರೀಮಂತರು ಈ ತಂತ್ರ ಅನುಸರಿಸುತ್ತಾರೆ. ಆರ್​ಬಿಐನ ಮಾನಿಟರಿ ಪಾಲಿಸಿ ಕಮಿಟಿಯ ಆರು ಸದಸ್ಯರಲ್ಲಿ ಒಬ್ಬರಾದ ರಾಮ್ ಸಿಂಗ್ (Ram Singh) ಅವರು ಸಂಶೋಧನಾ ವರದಿಯೊಂದನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ಭಾರತದ ಶೇ. 5 ಅತಿ ಶ್ರೀಮಂತರು ತಮ್ಮ ಆದಾಯದಲ್ಲಿ ಶೇ. 4ರಷ್ಟನ್ನು ಮಾತ್ರವೇ ಬಹಿರಂಗಪಡಿಸುತ್ತಾರೆ ಎನ್ನುವ ಸಂಗತಿಯನ್ನು ತಿಳಿಸಿದ್ದಾರೆ. ಶ್ರೀಮಂತಿಕೆ ಹೆಚ್ಚಾದಂತೆ, ಸಂಪತ್ತು ಮರೆಮಾಚುವುದೂ ಹೆಚ್ಚುತ್ತದೆ.

ಶೇ. 0.1ರಷ್ಟು ಅತಿಶ್ರೀಮಂತರು ಬಹಿರಂಗಪಡಿಸುವ ಆದಾಯ ಶೇ. 2 ಮಾತ್ರವೇ. ಇನ್ನೂ ಹೆಚ್ಚಿನ ಶ್ರೀಮಂತರು ಶೇ. 0.5ರಷ್ಟು ಆಸ್ತಿಯನ್ನು ತೋರ್ಪಡಿಸುತ್ತಾರೆ. ಅಂದರೆ ಅವರ ಶೇ. 99.5ರಷ್ಟು ಸಂಪತ್ತು ಬೆಳಕಿಗೆ ಬರುವುದೇ ಇಲ್ಲ. ಅವರ ನೂರು ರುಪಾಯಿಯಲ್ಲಿ 50 ಪೈಸೆ ಮಾತ್ರವೇ ತೆರಿಗೆ ಲೆಕ್ಕಕ್ಕೆ ಹೋಗುತ್ತದೆ. ಫೋರ್ಬ್ಸ್ ಶ್ರೀಮಂತರ ಪಟ್ಟಿಯಲ್ಲಿರುವ ಅಗ್ರ 10 ಭಾರತೀಯ ಕುಟುಂಬಗಳು 0.6 ಪ್ರತಿಶತದಷ್ಟು ಸಂಪತ್ತನ್ನು ಮಾತ್ರವೇ ತೋರಿಸಿದ್ದಾರೆ.

ಇದನ್ನೂ ಓದಿ: ಒಮ್ಮೆಯೂ ಸಾಲ ಮಾಡದವನಿಗೆ ಸಿಗಲ್ವಾ ಸಾಲ? ಇರಲ್ವಾ ಕ್ರೆಡಿಟ್ ಸ್ಕೋರ್? ಇಲ್ಲಿದೆ ಉತ್ತರ

ಇದನ್ನೂ ಓದಿ
Image
ಷೇರುಪೇಟೆಯ ಇವತ್ತಿನ ಉತ್ಸಾಹಕ್ಕೆ ಏನು ಕಾರಣ?
Image
ಆಯುಷ್ಮಾನ್ ಭಾರತ್ ಸ್ಕೀಮ್: ಈ ಚಿಕಿತ್ಸೆಗಳಿಗೆ ಸಿಗಲ್ಲ ವಿಮೆ
Image
ಕ್ರೆಡಿಟ್ ಸ್ಕೋರ್ ಇಲ್ಲದವರಿಗೆ ಸಿಗಲ್ವಾ ಸಾಲ?
Image
ಪಿಎನ್​​ಬಿಗೆ ಚೋಕ್ಸಿ ಟೊಪ್ಪಿ ಹಾಕಿದ ಕಥೆ

ಇದಕ್ಕೆ ತದ್ವಿರುದ್ಧದ ವರ್ತನೆ ಕೆಳಗಿನ ಸ್ತರದ ಜನರದ್ದು. ಅತ್ಯಂತ ಕಡಿಮೆ ಆದಾಯ ಹೊಂದಿರುವ ಶೇ. 10ರಷ್ಟು ಕುಟುಂಬಗಳು ತಮ್ಮ ಆದಾಯಕ್ಕಿಂತ ಶೇ. 188ರಷ್ಟು ಹೆಚ್ಚಿನ ಸಂಪತ್ತನ್ನು ತೋರಿಸುತ್ತವೆ.

ಡೆಲ್ಲಿ ಸ್ಕೂಲ್ ಆಫ್ ಎಕನಾಮಿಕ್ಸ್​ನ ನಿರ್ದೇಶಕರಾಗಿರುವ ರಾಮ್ ಸಿಂಗ್ ಅವರು ಬರೆದಿರುವ ‘ಶ್ರೀಮಂತರು ತಮ್ಮ ಆದಾಯ ಮರೆಮಾಚುತ್ತಾರಾ?’ ಎನ್ನುವ ಈ ಪೇಪರ್​​​ನಲ್ಲಿ ಇನ್ನೂ ಕೆಲ ಅಚ್ಚರಿ ಮತ್ತು ಆಘಾತಕಾರಿ ಸಂಗತಿಗಳಿವೆ. ಚುನಾವಣೆ ಸ್ಪರ್ಧೆಗೆ ನಾಮಪತ್ರದ ಜೊತೆ ಸಲ್ಲಿಸುವ ಅಫಿಡವಿಟ್​ಗಳು, ಆದಾಯ ತೆರಿಗೆ ಇಲಾಖೆ ಪ್ರಕಟಿಸಿದ ಅಂಕಿ ಅಂಶಗಳು, ಫೋರ್ಬ್ಸ್ ಶ್ರೀಮಂತರ ಪಟ್ಟಿ, ಇವುಗಳ ಆಧಾರದ ಮೇಲೆ ರಾಮ್ ಸಿಂಗ್ ಅವರು ಈ ವರದಿಯನ್ನು ಬರೆದಿದ್ದಾರೆ.

ಆರ್ಥಿಕ ಅಸಮಾನತೆ ಇನ್ನೂ ಹೆಚ್ಚಿದೆಯಾ?

ಶ್ರೀಮಂತರು ತೆರಿಗೆಯಿಂದ ತಪ್ಪಿಸಿಕೊಳ್ಳಲು ಆಸ್ತಿಪಾಸ್ತಿ ವಿವರನ್ನು ಸಹಜವಾಗಿಯೇ ಮುಚ್ಚಿಡಲು ಯತ್ನಿಸುತ್ತಾರೆ. ಹೀಗೆ ಮುಚ್ಚಿಟ್ಟರೂ ಭಾರತದಲ್ಲಿ ಆರ್ಥಿಕ ಅಸಮಾನತೆ ದಟ್ಟವಾಗಿ ಕಾಣುತ್ತದೆ. ದೇಶದ ಶೇ. 60ರಷ್ಟು ಸಂಪತ್ತು ಐದು ಪ್ರತಿಶತ ಜನರ ಕೈಯಲ್ಲಿದೆ. ಕೆಳಗಿನ ಶೇ. 50ರಷ್ಟು ಜನರ ಬಳಿ ಇರುವ ಆಸ್ತಿ ಶೇ. 3 ಮಾತ್ರವೇ ಎಂದು ಆಕ್ಸ್​​ಫ್ಯಾಮ್ ವರದಿ ಇತ್ತೀಚೆಗೆ ತಿಳಿಸಿತ್ತು.

ಇದನ್ನೂ ಓದಿ: ಮೆಹುಲ್ ಚೋಕ್ಸಿ, ನೀರವ್ ಮೋದಿ 13,000 ಕೋಟಿ ರೂ ಪಂಗನಾಮ ಹಾಕಿ ದೇಶ ಬಿಟ್ಟುಹೋದ ಕಥೆ

ಆದರೆ, ಶ್ರೀಮಂತರು ಮುಚ್ಚಿಟ್ಟ ಆಸ್ತಿಯನ್ನು ಪರಿಗಣಿಸಿದರೆ ಈ ಅಸಮಾನತೆಯ ಅಂತರ ಇನ್ನೂ ಹೆಚ್ಚಾಗಬಹುದು. ದೇಶದ ಶೇ. 80ಕ್ಕಿಂತಲೂ ಹೆಚ್ಚು ಆಸ್ತಿ ಕೇವಲ ಐದು ಪ್ರತಿಶತ ಜನರ ಬಳಿ ನೆಲಸಿದ್ದರೂ ಇರಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 12:10 pm, Tue, 15 April 25

ಉಗ್ರರ ದಾಳಿ ನಡುವೆಯೂ ಕಾಶ್ಮೀರದಲ್ಲಿ ನಿಲ್ಲದ ಪ್ರವಾಸಿಗರ ಭೇಟಿ
ಉಗ್ರರ ದಾಳಿ ನಡುವೆಯೂ ಕಾಶ್ಮೀರದಲ್ಲಿ ನಿಲ್ಲದ ಪ್ರವಾಸಿಗರ ಭೇಟಿ
ನಟ ಶ್ರೀಮುರಳಿ ಕಂಠದಲ್ಲಿ ‘ನೀಡು ಶಿವ ನೀಡದಿರು ಶಿವ..’ ಹಾಡು ಕೇಳಿ..
ನಟ ಶ್ರೀಮುರಳಿ ಕಂಠದಲ್ಲಿ ‘ನೀಡು ಶಿವ ನೀಡದಿರು ಶಿವ..’ ಹಾಡು ಕೇಳಿ..
ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ಸಮನ್ವಯತೆಯಿಂದ ಕೆಲಸ ಮಾಡಬೇಕು: ಸಿಎಂ
ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ಸಮನ್ವಯತೆಯಿಂದ ಕೆಲಸ ಮಾಡಬೇಕು: ಸಿಎಂ
ನನ್ನ ಆಯುಷ್ಯವನ್ನೂ ದೇವರು ನಮ್ಮ ಸೈನಿಕರಿಗೆ ನೀಡಲಿ: ಪಲ್ಲವಿ ರಾವ್
ನನ್ನ ಆಯುಷ್ಯವನ್ನೂ ದೇವರು ನಮ್ಮ ಸೈನಿಕರಿಗೆ ನೀಡಲಿ: ಪಲ್ಲವಿ ರಾವ್
ಬಾಗಲಕೋಟೆ: NWKRTC ಬಸ್​ ಚಾಲಕ, ಕಂಡಕ್ಟರ್​ ಮೇಲೆ ಕಟ್ಟಿಗೆಯಿಂದ ಹಲ್ಲೆ​
ಬಾಗಲಕೋಟೆ: NWKRTC ಬಸ್​ ಚಾಲಕ, ಕಂಡಕ್ಟರ್​ ಮೇಲೆ ಕಟ್ಟಿಗೆಯಿಂದ ಹಲ್ಲೆ​
ಕೆನಡ ಚುನಾವಣೆಯಲ್ಲಿ ಸೋತಿದ್ದಕ್ಕೆ ಭಾವುಕರಾದ ಖಲಿಸ್ತಾನ್ ಪರ ಜಗ್ಮೀತ್ ಸಿಂಗ್
ಕೆನಡ ಚುನಾವಣೆಯಲ್ಲಿ ಸೋತಿದ್ದಕ್ಕೆ ಭಾವುಕರಾದ ಖಲಿಸ್ತಾನ್ ಪರ ಜಗ್ಮೀತ್ ಸಿಂಗ್
ಸುದೀಪ್ ಮತ್ತು ಶಿವಣ್ಣನ ಜೊತೆಗಿನ ಗೆಳೆತನದ ಬಗ್ಗೆ ನಾನಿ ಮಾತು
ಸುದೀಪ್ ಮತ್ತು ಶಿವಣ್ಣನ ಜೊತೆಗಿನ ಗೆಳೆತನದ ಬಗ್ಗೆ ನಾನಿ ಮಾತು
ನಿನ್ನೆ ಶಿವಕುಮಾರ್ ಹೇಳಿದ್ದನ್ನೇ ಇಂದು ಪ್ರದೀಪ್ ಈಶ್ವರ್ ಪುನರುಚ್ಛರಿಸಿದರು
ನಿನ್ನೆ ಶಿವಕುಮಾರ್ ಹೇಳಿದ್ದನ್ನೇ ಇಂದು ಪ್ರದೀಪ್ ಈಶ್ವರ್ ಪುನರುಚ್ಛರಿಸಿದರು
ಮೋದಿ ನಿವಾಸದಲ್ಲಿ ಮಹತ್ವದ ಸಭೆ; ಸೇನಾ ಮುಖ್ಯಸ್ಥರು, ರಾಜನಾಥ್ ಸಿಂಗ್ ಭಾಗಿ
ಮೋದಿ ನಿವಾಸದಲ್ಲಿ ಮಹತ್ವದ ಸಭೆ; ಸೇನಾ ಮುಖ್ಯಸ್ಥರು, ರಾಜನಾಥ್ ಸಿಂಗ್ ಭಾಗಿ
ದೇವೇಗೌಡರಂತೆ ಮಂಜುನಾಥ್ ಸಹ ಪಹಲ್ಗಾಮ್ ಬಗ್ಗೆ ಅನಾವಶ್ಯಕ ಮಾತಾಡಲಿಲ್ಲ
ದೇವೇಗೌಡರಂತೆ ಮಂಜುನಾಥ್ ಸಹ ಪಹಲ್ಗಾಮ್ ಬಗ್ಗೆ ಅನಾವಶ್ಯಕ ಮಾತಾಡಲಿಲ್ಲ