Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತದ ಷೇರು ಮಾರುಕಟ್ಟೆಗೆ ಇವತ್ತು ಶುಭ ಮಂಗಳವಾರ; ಭರ್ಜರಿ ಗೂಳಿ ಆಟಕ್ಕೆ ಕಾರಣವೇನು?

Reasons for positive vibe in Indian stock market: ಭಾರತದ ಷೇರು ಮಾರುಕಟ್ಟೆ ಇವತ್ತು ಸಖತ್ ಏರಿಕೆ ಕಾಣುತ್ತಿದೆ. ಜಾಗತಿಕವಾಗಿ ಹಲವು ಮಾರುಕಟ್ಟೆಗಳೂ ಪಾಸಿಟಿವ್ ಆಗಿವೆ. ಟ್ರಂಪ್ ಟ್ಯಾರಿಫ್ ಗೊಂದಲದ ಮಧ್ಯೆ ಷೇರುಪೇಟೆ ಸಕಾರಾತ್ಮಕವಾಗಿ ವರ್ತಿಸಲು ಕೆಲ ಕಾರಣಗಳಿವೆ. ಯುಎಸ್ ಡಾಲರ್ ಮೌಲ್ಯ ಕಡಿಮೆ ಆಗಿರುವುದು, ಹಣದುಬ್ಬರ ನಿಯಂತ್ರಣದಲ್ಲಿರುವುದು ಇವೇ ಮುಂತಾದ ಕೆಲ ಸಂಗತಿಗಳು ಮಾರುಕಟ್ಟೆಗೆ ಪಾಸಿಟಿವ್ ವೈಬ್ ತಂದಿದೆ.

ಭಾರತದ ಷೇರು ಮಾರುಕಟ್ಟೆಗೆ ಇವತ್ತು ಶುಭ ಮಂಗಳವಾರ; ಭರ್ಜರಿ ಗೂಳಿ ಆಟಕ್ಕೆ ಕಾರಣವೇನು?
ಷೇರು ಮಾರುಕಟ್ಟೆ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Apr 15, 2025 | 11:09 AM

ಮುಂಬೈ, ಏಪ್ರಿಲ್ 15: ಕಳೆದ ವಾರದ ಕೊನೆಯಲ್ಲಿ ಕಂಡಿದ್ದ ಏರಿಕೆಯನ್ನು ಷೇರು ಮಾರುಕಟ್ಟೆ (Stock Market) ಇವತ್ತೂ ಮುಂದುವರಿಸಿದೆ. ಸತತ ಎರಡು ಸೆಷನ್ ಮಾರುಕಟ್ಟೆಯಲ್ಲಿ ಗೂಳಿ ಓಟ ನಡೆದಿದೆ. ಹಿಂದಿನ ಸೆಷನ್​​ನದಕ್ಕಿಂತಲೂ ಇವತ್ತು ಮಾರುಕಟ್ಟೆ ಪಾಸಿಟಿವ್ ಆಗಿದೆ. ಬಿಎಸ್​​ಇ ಮತ್ತು ಎನ್​​ಎಸ್​​ಇನ ಬಹುತೇಕ ಎಲ್ಲಾ ಸೂಚ್ಯಂಕಗಳು ಹಸಿರು ಬಣ್ಣದಲ್ಲಿವೆ. ಅಂದರೆ, ಎಲ್ಲಾ ಸೆಕ್ಟರ್​​ಗಳ ಷೇರುಗಳಿಗೆ ಬೇಡಿಕೆ ಬಂದಿದೆ. ಶೇ. 2ಕ್ಕಿಂತಲೂ ಹೆಚ್ಚು ಏರಿಕೆ ಆಗಿದೆ. ಸೆನ್ಸೆಕ್ಸ್ ಒಂದು ಹಂತದಲ್ಲಿ 1,750 ಅಂಕಗಳಷ್ಟು ಏರಿತ್ತು. ನಿಫ್ಟಿ ಬರೋಬ್ಬರಿ 540 ಅಂಕಗಳಷ್ಟು ಹೆಚ್ಚಳ ಕಂಡಿತು. ಹಿಂದಿನ ವಾರದಲ್ಲಿ ಕಂಡಿದ್ದ ನಷ್ಟವನ್ನು ಮಾರುಕಟ್ಟೆ ತರಾತುರಿಯಲ್ಲಿ ಮತ್ತೆ ಗಳಿಸುವಂತೆ ಕಂಡು ಬರುತ್ತಿದೆ.

ಅಮೆರಿಕದ ಷೇರುಪೇಟೆ ಜೊತೆಗೆ ಬಾಂಡ್ ಮಾರುಕಟ್ಟೆಯೂ ಕುಸಿತ; ಇದು ಚೀನಾ ತಂತ್ರವಾ?

ನಿನ್ನೆ ಅಮೆರಿಕದ ಷೇರು ಪೇಟೆ ಜೊತೆಗೆ ಬಾಂಡ್ ಮಾರುಕಟ್ಟೆ ಕೂಡ ಕುಸಿದಿತ್ತು. ಸಾಮಾನ್ಯವಾಗಿ ಎರಡೂ ಕೂಡ ತದ್ವಿರುದ್ಧ ದಿಕ್ಕಿನಲ್ಲಿರುತ್ತವೆ. ಒಂದೇ ದಿಕ್ಕಿನಲ್ಲಿರುವುದು ಬಹಳ ಅಪರೂಪ. ಬಸವ್ ಕ್ಯಾಪಿಟಲ್ ಸಂಸ್ಥೆಯ ಸಂದೀಪ್ ಪಾಂಡೆ ಪ್ರಕಾರ ಷೇರು ಮಾರುಕಟ್ಟೆ ಜೊತೆಗೆ ಬಾಂಡ್ ಮಾರುಕಟ್ಟೆ ಕುಸಿಯಲು ಚೀನಾ ಮಾಡಿದ ತಂತ್ರ ಕಾರಣವಂತೆ. ಡೊನಾಲ್ಡ್ ಟ್ರಂಪ್ ಅಧಿಕಾರಕ್ಕೆ ಬಂದಾಗ ಆಮದು ಸುಂಕ ಕ್ರಮ ತೆಗೆದುಕೊಳ್ಳುವ ಸುಳಿವು ಇತ್ತು. ಇದನ್ನು ಅರಿತು ಚೀನಾ ಹಾಗೂ ಕೆಲ ದೇಶಗಳು ಸಾಕಷ್ಟು ಯುಎಸ್ ಸರ್ಕಾರಿ ಬಾಂಡ್​​ಗಳನ್ನು ಖರೀದಿಸಿದ್ದುವು. ಈಗ ಟ್ಯಾರಿಫ್ ಕ್ರಮ ಜಾರಿಗೊಳಿಸಿದ ಬಳಿಕ ಚೀನಾ ಯುಎಸ್ ಬಾಂಡ್​​ಗಳನ್ನು ಮಾರಿದೆ. ಇದರಿಂದಾಗಿ ಬಾಂಡ್ ಮಾರುಕಟ್ಟೆ ಕುಸಿದಿದೆ ಎನ್ನುತ್ತಾರೆ ಪಾಂಡೆ.

ಇದನ್ನೂ ಓದಿ: PM Mudra Scheme: ಮಹಿಳೆಯರಿಗೆ ವರದಾನವಾಗುತ್ತಿರುವ ಪಿಎಂ ಮುದ್ರಾ ಯೋಜನೆ

ಇದನ್ನೂ ಓದಿ
Image
ಸೆನ್ಸೆಕ್ಸ್ ಇತಿಹಾಸದಲ್ಲೇ 5 ಅತಿದೊಡ್ಡ ಆಘಾತಗಳು
Image
ಮಾರುಕಟ್ಟೆ ಅಲುಗಾಟದಲ್ಲೂ ವಾರನ್ ಬಫೆಟ್ ಆಸ್ತಿ ಹೆಚ್ಚಿದ್ದು ಹೇಗೆ?
Image
ವಿದೇಶೀ ಹೂಡಿಕೆದಾರರಿಗೆ ನಿಯಮ ಸಡಿಲಿಸಿದ ಸೆಬಿ
Image
ಷೇರು ಯಾವಾಗ ಮಾರಬೇಕು? ದೀರ್ಘಾವಧಿ ಇಟ್ಟುಕೊಳ್ಳಬೇಕಾ?

ಭಾರತದ ಷೇರು ಮಾರುಕಟ್ಟೆ ಗರಿಗೆದರಲು ಪ್ರಮುಖ ಕಾರಣಗಳು

ಅಮೆರಿಕದ ಷೇರು ಮಾರುಕಟ್ಟೆಯ ಕುಸಿತವನ್ನು ತಡೆಯಲಾದರೂ ಡೊನಾಲ್ಡ್ ಟ್ರಂಪ್ ತಮ್ಮ ಟ್ಯಾರಿಫ್ ನಿಲುವನ್ನು ಸ್ವಲ್ಪ ಮೆತ್ತಗಾಗಿಸಬಹುದು. ವಿವಿಧ ದೇಶಗಳ ಜೊತೆ ಸಂಧಾನ ಅಥವಾ ಮಾತುಕತೆ ನಡೆಸಲು ಮುಂದಾಗಬಹುದು ಎಂಬುದು ಮಾರುಕಟ್ಟೆಯ ಆಶಯ. ಇದು ಷೇರು ಮಾರುಕಟ್ಟೆ ಗರಿಗೆದರಲು ಒಂದು ಕಾರಣ.

ಯುಎಸ್ ಡಾಲರ್ ದುರ್ಬಲವಾಗಿರುವುದು ಭಾರತದ ಷೇರು ಮಾರುಕಟ್ಟೆಗೆ ಪಾಸಿಟಿವ್

ಅಮೆರಿಕದ ಡಾಲರ್ ಮೌಲ್ಯ ಎರಡು ವರ್ಷಗಳ ಕನಿಷ್ಠ ಮಟ್ಟಕ್ಕೆ ಇಳಿದಿದೆ. ಎರಡು ವರ್ಷದಲ್ಲಿ ಯುಎಸ್ ಡಾಲರ್ ಇಂಡೆಕ್ಸ್ 100ಕ್ಕಿಂತ ಕಡಿಮೆ ಮಟ್ಟದಲ್ಲಿದೆ. ಇದು ವಿದೇಶಿ ಹೂಡಿಕೆದಾರರ ಧೋರಣೆಯನ್ನು ಬದಲಾಗುವಂತೆ ಮಾಡುತ್ತಿರಬಹುದು.

ಟ್ರಂಪ್ ಒತ್ತಡಕ್ಕೆ ಬಗ್ಗದ ಫೆಡರಲ್ ರಿಸರ್ವ್

ಟ್ಯಾರಿಫ್ ಹೇಗೇ ಇರಲಿ ಬಡ್ಡಿದರ ಇಳಿಸಲೇಬೇಕು ಎಂದು ಫೆಡರಲ್ ರಿಸರ್ವ್ ಮೇಲೆ ಡೊನಾಲ್ಡ್ ಟ್ರಂಪ್ ಬಾರಿ ಬಾರಿ ಒತ್ತಡ ಹಾಕುತ್ತಿದ್ದಾರೆ. ಆದರೆ, ಈ ಸಂಸ್ಥೆ ಅಮೆರಿಕ ಅಧ್ಯಕ್ಷರ ಒತ್ತಡಕ್ಕೆ ಬಗ್ಗುತ್ತಿಲ್ಲ. ಟ್ಯಾರಿಫ್​​ನಿಂದ ಹಣದುಬ್ಬರ ಹೆಚ್ಚುತ್ತದೆ. ಹೀಗಾಗಿ, ಬಡ್ಡಿದರ ಇಳಿಸಲು ಸಾಧ್ಯವಿಲ್ಲ ಎಂದು ಫೆಡರಲ್ ರಿಸರ್ವ್ ಸ್ಪಷ್ಟವಾಗಿ ಹೇಳಿದೆ. ಈ ಗಟ್ಟಿ ನಿಲುವು ಮಾರುಕಟ್ಟೆಗೆ ಸಕಾರಾತ್ಮಕ ಎನಿಸಿದೆ.

ಇದನ್ನೂ ಓದಿ: ಪಿಎಂಜೆಎವೈ ಹೆಲ್ತ್ ಇನ್ಷೂರೆನ್ಸ್ ಸ್ಕೀಮ್​​ನಲ್ಲಿ ಒಳಗೊಳ್ಳದ ಚಿಕಿತ್ಸೆಗಳ್ಯಾವುವು? ಇಲ್ಲಿದೆ ಕೆಲ ಮಾಹಿತಿ

ಸಕಾರಾತ್ಮಕವಾಗಿದೆ ಭಾರತದ ಹಣದುಬ್ಬರ

ಈ ಬಾರಿಯ ಆರ್​​ಬಿಐ ಎಂಪಿಸಿ ಸಭೆಯಲ್ಲಿ ಮಾಡಲಾಗಿರುವ ಅಂದಾಜು ಪ್ರಕಾರ ಈ ವರ್ಷ (2025-26) ಹಣದುಬ್ಬರವು ನಿಯಂತ್ರಣದಲ್ಲೇ ಇರುವ ಸಾಧ್ಯತೆ ಇದೆ. ಹಾಗೆಯೇ, ಬಡ್ಡಿದರವನ್ನು ಏರಿಸುವ ಸಾಧ್ಯತೆಯನ್ನು ತಳ್ಳಿಹಾಕಿದೆ. ಸತತ ಎರಡು ಬಾರಿ ಬಡ್ಡಿದರ ಇಳಿಸಲಾಗಿದೆ. ಈ ವರ್ಷದಲ್ಲಿ ಇನ್ನೂ ಎರಡು ಬಾರಿ ಬಡ್ಡಿ ಇಳಿಸುವ ಸಾಧ್ಯತೆ ಇದೆ. ಇದು ಮಾರುಕಟ್ಟೆಯಲ್ಲಿ ವಿಶ್ವಾಸ ಮೂಡಲು ಕಾರಣವಾಗಿರಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

‘ರಾಜ್​ಕುಮಾರ್ ಎಂಬ ಹೆಸರು ಕನ್ನಡ ಸಿನಿಮಾದ ಅಭಿವೃದ್ಧಿಗೆ ಕಾರಣ’: ಬರಗೂರು
‘ರಾಜ್​ಕುಮಾರ್ ಎಂಬ ಹೆಸರು ಕನ್ನಡ ಸಿನಿಮಾದ ಅಭಿವೃದ್ಧಿಗೆ ಕಾರಣ’: ಬರಗೂರು
ರ‍್ಯಾಂಡಮ್ಮಾಗಿ ಗುಂಡು ಹಾರಿದ ಕಾರಣ ಪ್ರಾಣ ಉಳಿದಿದ್ದೇ ಹೆಚ್ಚು: ದೊಡ್ಡಬಸಯ್ಯ
ರ‍್ಯಾಂಡಮ್ಮಾಗಿ ಗುಂಡು ಹಾರಿದ ಕಾರಣ ಪ್ರಾಣ ಉಳಿದಿದ್ದೇ ಹೆಚ್ಚು: ದೊಡ್ಡಬಸಯ್ಯ
ಪಹಲ್ಗಾಮ್ ದಾಳಿ ಹಿನ್ನೆಲೆ ದೆಹಲಿಯಲ್ಲಿ ಸರ್ವ ಪಕ್ಷಗಳ ಸಭೆ ಆರಂಭ
ಪಹಲ್ಗಾಮ್ ದಾಳಿ ಹಿನ್ನೆಲೆ ದೆಹಲಿಯಲ್ಲಿ ಸರ್ವ ಪಕ್ಷಗಳ ಸಭೆ ಆರಂಭ
ಸಿಡಿದ ಒಂದೇ ಗುಂಡು ಕ್ಷಣಾರ್ಧದಲ್ಲಿ ಪತಿಯ ಪ್ರಾಣ ತೆಗೆದುಕೊಂಡಿತು: ಪಲ್ಲವಿ
ಸಿಡಿದ ಒಂದೇ ಗುಂಡು ಕ್ಷಣಾರ್ಧದಲ್ಲಿ ಪತಿಯ ಪ್ರಾಣ ತೆಗೆದುಕೊಂಡಿತು: ಪಲ್ಲವಿ
ಅಣ್ಣಾವ್ರ ಹುಟ್ಟುಹಬ್ಬವನ್ನು ಭಿನ್ನವಾಗಿ ಆಚರಿಸಿದ ‘ಸಿಟಿಲೈಟ್ಸ್’ ತಂಡ
ಅಣ್ಣಾವ್ರ ಹುಟ್ಟುಹಬ್ಬವನ್ನು ಭಿನ್ನವಾಗಿ ಆಚರಿಸಿದ ‘ಸಿಟಿಲೈಟ್ಸ್’ ತಂಡ
ಚೆನಾಬ್ ನದಿಗೆ ನಿರ್ಮಿಸಿದ ಬಾಗ್ಲಿಹಾರ್ ಡ್ಯಾಂ ವಿಡಿಯೋ ಇಲ್ಲಿದೆ
ಚೆನಾಬ್ ನದಿಗೆ ನಿರ್ಮಿಸಿದ ಬಾಗ್ಲಿಹಾರ್ ಡ್ಯಾಂ ವಿಡಿಯೋ ಇಲ್ಲಿದೆ
ಭರತ್ ಭೂಷಣ್ ಅಂತಿಮ ಸಂಸ್ಕಾರವನ್ನು ನೆರವೇರಿಸಿದ ಸಹೋದರ ಪ್ರೀತಂ
ಭರತ್ ಭೂಷಣ್ ಅಂತಿಮ ಸಂಸ್ಕಾರವನ್ನು ನೆರವೇರಿಸಿದ ಸಹೋದರ ಪ್ರೀತಂ
ಪಹಲ್ಗಾಮ್ ಸ್ವರ್ಗದಲ್ಲಿ ತೇಲಾಡುವಾಗ ಉಗ್ರರ ಭೀಕರತೆ ಬಿಚ್ಚಿಟ್ಟ ಪಲ್ಲವಿ
ಪಹಲ್ಗಾಮ್ ಸ್ವರ್ಗದಲ್ಲಿ ತೇಲಾಡುವಾಗ ಉಗ್ರರ ಭೀಕರತೆ ಬಿಚ್ಚಿಟ್ಟ ಪಲ್ಲವಿ
ಚಿತೆಯಲ್ಲಿ ಮಲಗಿದ ಪತಿಯ ಕೈ ಹುಡುಕಿ ಹಿಡಿದ ಪತ್ನಿ: ಹೃದಯ ಹಿಂಡುವ ದೃಶ್ಯ
ಚಿತೆಯಲ್ಲಿ ಮಲಗಿದ ಪತಿಯ ಕೈ ಹುಡುಕಿ ಹಿಡಿದ ಪತ್ನಿ: ಹೃದಯ ಹಿಂಡುವ ದೃಶ್ಯ
ಅಪ್ಪಾಜಿಯ ಸಮಾಧಿಗೆ ಪೂಜೆ ಮಾಡಿ, ಶಿವಣ್ಣ ಹೇಳಿದ್ದು ಹೀಗೆ..
ಅಪ್ಪಾಜಿಯ ಸಮಾಧಿಗೆ ಪೂಜೆ ಮಾಡಿ, ಶಿವಣ್ಣ ಹೇಳಿದ್ದು ಹೀಗೆ..