ಧೋನಿ ಜೆರ್ಸಿ ಗಿಫ್ಟ್; ಮಾಸ್ಟರ್ಕಾರ್ಡ್ನಿಂದ ಸಿಎಸ್ಕೆ ಕೋ-ಬ್ರ್ಯಾಂಡ್ ಕ್ರೆಡಿಟ್ ಕಾರ್ಡ್ಗಳ ಬಿಡುಗಡೆ
Mastercard releases CSK co-branded credit cards: ಸಿಎಸ್ಕೆ ಕೋ-ಬ್ರ್ಯಾಂಡಿಂಗ್ ಇರುವ ಎರಡು ಕ್ರೆಡಿಟ್ ಕಾರ್ಡ್ಗಳನ್ನು ಸಿಟಿ ಯೂನಿಯನ್ ಬ್ಯಾಂಕ್ ಹಾಗೂ ಮಾಸ್ಟರ್ಕಾರ್ಡ್ ಸಂಸ್ಥೆಗಳು ಬಿಡುಗಡೆ ಮಾಡಿವೆ. ಸಿಎಸ್ಕೆ ಮಾಸ್ಟರ್ವರ್ಲ್ಡ್ ಕ್ರೆಡಿಟ್ ಕಾರ್ಡ್ ಮತ್ತು ಸಿಎಸ್ಕೆ ಮಾಸ್ಟರ್ ಕ್ರೆಡಿಟ್ ಕಾರ್ಡ್ ಲಭ್ಯ ಇವೆ. ಸಿಎಸ್ಕೆ ಮತ್ತು ಧೋನಿ ಫ್ಯಾನ್ಸ್ಗೆ ಜೆರ್ಸಿಗಳು ವೆಲ್ಕಂ ಗಿಫ್ಟ್ ಆಗಿ ಸಿಗುತ್ತವೆ. ಪ್ರಮುಖ ರೆಸ್ಟೋರೆಂಟ್ಗಳಲ್ಲಿ ಡೈನಿಂಗ್ ಡಿಸ್ಕೌಂಟ್ ಮತ್ತಿತರ ಆಫರ್ಸ್ ಇವೆ.

ನವದೆಹಲಿ, ಏಪ್ರಿಲ್ 16: ಮಹೇಂದ್ರ ಸಿಂಗ್ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತರಾದರೂ ಐಪಿಎಲ್ನಲ್ಲಿ (IPL- 2025) ಅವರಿನ್ನೂ ಸೂಪರ್ ಸ್ಟಾರ್. ಚೆನ್ನೈ ಸೂಪರ್ ಕಿಂಗ್ಸ್ನಲ್ಲಿ ಅವರ ಆಟಕ್ಕಾಗಿ ಕಾಯುವ ಫ್ಯಾನ್ಸ್ ಅಸಂಖ್ಯ. ಧೋನಿ ಈಗಲೂ ಸಾಕಷ್ಟು ಜಾಹೀರಾತುಗಳಿಗೆ ಡಿಮ್ಯಾಂಡ್ ಹೊಂದಿರುವ ವ್ಯಕ್ತಿ. ಇದೀಗ ಮಾಸ್ಟರ್ಕಾರ್ಡ್ ಸಿಎಸ್ಕೆ ಬ್ರ್ಯಾಂಡ್ನಲ್ಲಿ ಕ್ರೆಡಿಟ್ ಕಾರ್ಡ್ವೊಂದನ್ನು ಬಿಡುಗಡೆ ಮಾಡಿದೆ. ಸಿಟಿ ಯೂನಿಯನ್ ಬ್ಯಾಂಕ್ ಸಿಎಸ್ಕೆ ಮಾಸ್ಟರ್ವರ್ಲ್ಡ್ ಪ್ಲಾಟಿನಂ ಕ್ರೆಡಿಟ್ ಕಾರ್ಡ್ ಇದು. ಹಾಗೆಯೇ ಸಿಎಸ್ಕೆ ಮಾಸ್ಟರ್ ಕ್ರೆಡಿಟ್ ಕಾರ್ಡ್ ಅನ್ನೂ ಬಿಡುಗಡೆ ಮಾಡಲಾಗಿದೆ.
ಈ ಕ್ರೆಡಿಟ್ ಕಾರ್ಡ್ಗಳಲ್ಲಿ ಹಲವು ಬೆನಿಫಿಟ್ಗಳಿವೆ ಎಂದು ಮಾಸ್ಟರ್ ಕಾರ್ಡ್ ಹೇಳಿಕೊಂಡಿದೆ. ಐಪಿಎಲ್ ಕ್ರಿಕೆಟ್ ಪ್ರೇಮಿಗಳು ಮತ್ತು ಧೋನಿ ಫ್ಯಾನ್ಸ್ಗೆ ಖುಷಿ ಕೊಡುವ ಸಂಗತಿಯೂ ಇದೆ. ಕ್ರಿಕೆಟ್ ಪ್ರೇಮಿಗಳನ್ನು ಖುಷಿಪಡಿಸಲೆಂದೇ ಕಾರ್ಡ್ ಫೀಚರ್ಸ್ ರೂಪಿಸಲಾಗಿದೆ. ಸಿಎಸ್ಕೆ ಮಾತ್ರವಲ್ಲ, ಎಸ್ಆರ್ಎಚ್ ಕೋ-ಬ್ರ್ಯಾಂಡಿಂಗ್ನಲ್ಲೂ ಕ್ರೆಡಿಟ್ ಕಾರ್ಡ್ ಬಿಡುಗಡೆ ಮಾಡಲಾಗಿದೆ.
ಸಿಎಸ್ಕೆ ಮತ್ತು ಧೋನಿ ಫ್ಯಾನ್ಸ್ಗೆ ಗಿಫ್ಟ್ ನೀಡುವ ಕಾರ್ಡ್ಗಳು
ಸಿಎಸ್ಕೆ ಕೋ-ಬ್ರ್ಯಾಂಡಿಂಗ್ನ ಸಿಟಿ ಯೂನಿಯನ್ ಬ್ಯಾಂಕ್ ಮಾಸ್ಟರ್ ಕ್ರೆಡಿಟ್ ಕಾರ್ಡ್ ಅನ್ನು ಪಡೆದರೆ ಸಿಎಸ್ಕೆ ಫ್ಯಾನ್ ಜೆರ್ಸಿ ವೆಲ್ಕಂ ಗಿಫ್ಟ್ ಆಗಿ ಸಿಗುತ್ತದೆ. ಆದರೆ, ನಿರ್ದಿಷ್ಟ ಪ್ರಮಾಣದಲ್ಲಿ ಕಾರ್ಡ್ ವೆಚ್ಚ ಇರಬೇಕು ಎನ್ನುವ ನಿಯಮ ಇದೆ. ಕಾರ್ಡ್ ಬಳಸುತ್ತಾ ಹೋದಂತೆ ಸಿಎಸ್ಕೆ ಬ್ರ್ಯಾಂಡೆಡ್ ಗಿಫ್ಟ್ ಸಿಗುವ ಅವಕಾಶ ಇದೆ. ವಿವಿಧ ಶಾಪಿಂಗ್ನಲ್ಲಿ ಡಿಸ್ಕೌಂಟ್ ಸಿಗುತ್ತದೆ. ಈ ವಿವರನ್ನು ಸಿಟಿ ಯೂನಿಯನ್ ಬ್ಯಾಂಕ್ನಲ್ಲಿ ಪಡೆಯಬಹುದು.
ಸಿಎಸ್ಕೆ ಕೋ-ಬ್ರ್ಯಾಂಡಿಂಗ್ನ ಮಾಸ್ಟರ್ವರ್ಲ್ಡ್ ಕ್ರೆಡಿಟ್ ಕಾರ್ಡ್ನಲ್ಲಿ ಧೋನಿಯ ಒರಿಜಿನಲ್ 7ನೇ ನಂಬರ್ ಜೆರ್ಸಿಯು ವೆಲ್ಕಂ ಗಿಫ್ಟ್ ಆಗಿ ಸಿಗುತ್ತದೆ. ಇಲ್ಲಿಯೂ ಕೂಡ ಚೆನ್ನೈ ಫ್ರಾಂಚೈಸಿಯ ಬೇರೆ ಬೇರೆ ಗಿಫ್ಟ್ ಮತ್ತು ಡಿಸ್ಕೌಂಟ್ ಪಡೆಯುವ ಅವಕಾಶ ಇರುತ್ತದೆ.
ಸಿಎಸ್ಕೆ ಕೋ-ಬ್ರ್ಯಾಂಡ್ನ ಕ್ರೆಡಿಟ್ ಕಾರ್ಡ್ಗಳಲ್ಲಿ ಮತ್ತೇನು ಫೀಚರ್ಸ್?
ಸಿಎಸ್ಕೆ ಕೋ-ಬ್ರ್ಯಾಂಡ್ನ ಈ ಎರಡು ಕ್ರೆಡಿಟ್ ಕಾರ್ಡ್ಗಳು ಮಾಸ್ಟರ್ಕಾರ್ಡ್ನ ವಿವಿಧ ಸೌಲಭ್ಯಗಳನ್ನು ನೀಡುತ್ತವೆ. ಒನ್ ಡೈನ್ಸ್ ಫ್ರೀ, ಒನ್ ನೈಟ್ ಫ್ರೀ ಪ್ರೋಗ್ರಾಮ್, ಕ್ಯೂಲಿನರಿ ಕ್ಲಬ್ ಪ್ರೋಗ್ರಾಮ್ ಫೀಚರ್ ಇರುತ್ತದೆ.
ಇದನ್ನೂ ಓದಿ: IPL 2025: ಸತತ ಸೋಲುಗಳಿಂದ ಕಂಗೆಟ್ಟು ದೇವರ ಮೊರೆ ಹೋದ ಸಿಎಸ್ಕೆ ತಂಡ; ಗೈರಾದ ಧೋನಿ
ಮಾಸ್ಟರ್ಕಾರ್ಡ್ ಒನ್ ಡೈನ್ಸ್ ಫ್ರೀ ಪ್ರೋಗ್ರಾಮ್ನಲ್ಲಿ ಕಾರ್ಡ್ದಾರರು ಭಾರತ ಸೇರಿದಂತೆ ಏಷ್ಯಾ ಪೆಸಿಫಿಕ್ ಪ್ರದೇಶದ ಪ್ರಮುಖ ನಗರಗಳ ದೊಡ್ಡ ರೆಸ್ಟೋರೆಂಟ್ಗಳಲ್ಲಿ ಊಟ ಮಾಡಿದರೆ ಒಂದು ಕಾಂಪ್ಲಿಮೆಂಟರಿ ಮೈನ್ ಕೋರ್ಸ್ ಉಚಿತವಾಗಿ ಸಿಗುತ್ತದೆ.
ಒನ್ ನೈಟ್ ಫ್ರೀ ಪ್ರೋಗ್ರಾಮ್ನಲ್ಲಿ ಪಾರ್ಟ್ನರ್ ಹೋಟೆಲ್ ಮತ್ತು ರೆಸಾರ್ಟ್ನಲ್ಲಿ ಒಂದು ರಾತ್ರಿ ಸ್ಟೇ ಉಚಿತ ಸಿಗುತ್ತದೆ. ಇವಷ್ಟೇ ಅಲ್ಲದೆ, ಏರ್ಪೋರ್ಟ್ಗಳಲ್ಲಿ ಲಾಂಜ್ ಸರ್ವಿಸ್ ಕೂಡ ಲಭ್ಯ ಇರುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ