ಬ್ಯಾಂಕ್ ಅಕೌಂಟ್, ಫಿಕ್ಸೆಡ್ ಡೆಪಾಸಿಟ್ ನಾಮಿನಿ ನಿಯಮದಲ್ಲಿ ಬದಲಾವಣೆ; ಮಸೂದೆ ಮಂಡನೆಗೆ ಕೇಂದ್ರ ಸಜ್ಜು

Banking laws amendment bill 2024: ಬ್ಯಾಂಕ್ ಖಾತೆ ಮತ್ತು ಫಿಕ್ಸೆಡ್ ಡೆಪಾಸಿಟ್ ನಾಮಿನಿ ನಿಯಮಗಳಲ್ಲಿ ಸರ್ಕಾರ ಬದಲಾವಣೆ ಮಾಡುತ್ತಿದೆ. ಕ್ಲೈಮ್ ಆಗದೇ ಬ್ಯಾಂಕ್ ಅಕೌಂಟ್ ಮತ್ತು ಎಫ್​ಡಿಯಲ್ಲಿ ಹಣ ಉಳಿಯುವುದನ್ನು ತಪ್ಪಿಸಲು ಈ ಕ್ರಮ ತೆಗೆದುಕೊಳ್ಳಲಾಗಿದೆ. ಈ ಸಂಬಂಧ ಬ್ಯಾಂಕಿಂಗ್ ಕಾನೂನು ತಿದ್ದುಪಡಿ ಮಸೂದೆ ರೂಪಿಸಲಾಗಿದ್ದು ಈ ಅಧಿವೇಶನದಲ್ಲಿ ಸಂಸತ್​ನಲ್ಲಿ ಅನುಮೋದನೆಗೆ ಬರಲಿದೆ.

ಬ್ಯಾಂಕ್ ಅಕೌಂಟ್, ಫಿಕ್ಸೆಡ್ ಡೆಪಾಸಿಟ್ ನಾಮಿನಿ ನಿಯಮದಲ್ಲಿ ಬದಲಾವಣೆ; ಮಸೂದೆ ಮಂಡನೆಗೆ ಕೇಂದ್ರ ಸಜ್ಜು
ಡೆಪಾಸಿಟ್​
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Nov 25, 2024 | 3:36 PM

ನವದೆಹಲಿ, ನವೆಂಬರ್ 25: ಕೇಂದ್ರ ಸರ್ಕಾರ ಬ್ಯಾಂಕ್ ಖಾತೆ ಮತ್ತು ಫಿಕ್ಸೆಡ್ ಡೆಪಾಸಿಟ್ ಖಾತೆಗಳ ನಾಮಿನೇಶನ್ ನಿಯಮಗಳಲ್ಲಿ ಬದಲಾವಣೆ ತರಲು ಹೊರಟಿದೆ. ಬ್ಯಾಂಕಿಂಗ್ ಕಾನೂನು ತಿದ್ದುಪಡಿ ಮಸೂದೆಯನ್ನು ಸಂಸತ್​ನಲ್ಲಿ ಮಂಡಿಸಲಾಗುತ್ತಿದೆ. ಇವತ್ತು ಚಳಿಗಾಲದ ಅಧಿವೇಶನ ಆರಂಭವಾಗಿದ್ದು, ಮಸೂದೆಯನ್ನು ಲೋಕಸಭೆಯಲ್ಲಿ ಪ್ರಸ್ತುತಪಡಿಸುವ ನಿರೀಕ್ಷೆ ಇದೆ. ಮುಂಗಾರು ಅಧಿವೇಶನದಲ್ಲೇ ಈ ಮಸೂದೆಯನ್ನು ಸಂಸತ್​ಗೆ ಪರಿಚಯಿಸಲಾಗಿತ್ತು. ಬ್ಯಾಂಕಿಂಗ್ ಸೇವೆಯನ್ನು ಉತ್ತಮ ಪಡಿಸಲು ಕೆಲ ನಿಯಮ ಬದಲಾವಣೆ ಮಾಡಲಾಗಿದೆ. ಲೋಕಸಭೆ ಮತ್ತು ರಾಜ್ಯಸಭೆಗಳಲ್ಲಿ ಈ ಸಮೂದೆಗೆ ಅನುಮೋದನೆ ಸಿಗುವ ಸಾಧ್ಯತೆ ಇದೆ.

ಬ್ಯಾಂಕಿಂಗ್ ಕಾನೂನು ತಿದ್ದುಪಡಿ ಮಸೂದೆಯ ನಿಯಮಗಳೇನಿವೆ?

ಒಂದು ಬ್ಯಾಂಕ್ ಖಾತೆಯಲ್ಲಿ ಸದ್ಯ ಒಬ್ಬ ನಾಮಿನಿಯನ್ನು ಹೆಸರಿಸುವ ಅವಕಾಶ ಇದೆ. ಈಗ ಬದಲಾದ ನಿಯಮದಲ್ಲಿ ನಾಲ್ಕು ನಾಮಿನಿಗಳನ್ನು ಹೆಸರಿಸುವ ಅವಕಾಶ ಸಿಗುತ್ತದೆ.

ಇದನ್ನೂ ಓದಿ: ನವೆಂಬರ್​ನಲ್ಲಿ ಪಿಎಂಐ ಔಟ್​ಪುಟ್ ಇಂಡೆಕ್ಸ್ 59.5; ಭಾರತದಲ್ಲಿ ಬಿಸಿನೆಸ್ ಚಟುವಟಿಕೆ ತೀವ್ರ

ಬ್ಯಾಂಕ್ ಅಕೌಂಟ್ ಮಾತ್ರವಲ್ಲ, ಫಿಕ್ಸೆಡ್ ಡೆಪಾಸಿಟ್​ನಲ್ಲೂ ನಾಲ್ಕು ನಾಮಿನಿಗಳಿಗೆ ಅವಕಾಶ ಕಲ್ಪಿಸಲಾಗುತ್ತದೆ. ಇಲ್ಲಿ ಎರಡು ರೀತಿಯ ನಾಮಿನೇಶನ್​ಗಳ ಆಯ್ಕೆ ಇರುತ್ತದೆ. ಮೊದಲನೆಯದರಲ್ಲಿ ಯಾವ್ಯಾವ ನಾಮಿನಿಗೆ ಆಸ್ತಿಯಲ್ಲಿ ಎಷ್ಟು ಪಾಲು ಎಂದು ನಮೂದಿಸಬಹುದು.

ಎರಡನೆಯ ಆಯ್ಕೆಯಲ್ಲಿ, ಒಂದಕ್ಕಿಂತ ಹೆಚ್ಚು ಸಂಖ್ಯೆಯಯಲ್ಲಿ ನಾಮಿನಿಗಳಿದ್ದರೆ ಪ್ರೈಮರಿ ನಾಮಿನಿಯೊಬ್ಬರನ್ನು ಆರಿಸಬಹುದು. ಆ ಪ್ರಾಥಮಿಕ ನಾಮಿನಿ ನಿಧನರಾದರೆ ಆಗ ನಂತರದ ನಾಮಿನಿಗಳಿಗೆ ಹಕ್ಕು ವರ್ಗಾವಣೆ ಆಗುತ್ತದೆ.

ಆರ್​ಬಿಐ ನಿಯಮಗಳ ಪ್ರಕಾರ ಫಿಕ್ಸೆಡ್ ಡೆಪಾಸಿಟ್​ಗೆ ನಾಮಿನೇಶನ್ ಕಡ್ಡಾಯವಾಗಿದೆ. ಖಾತೆದಾರ ಮೃತಪಟ್ಟಾಗ ಹಣ ವರ್ಗಾವಣೆ ಸುಲಭವಾಗಿ ಆಗುತ್ತದೆ. ನಾಮಿನೇಶನ್ ಕಡ್ಡಾಯವಾದರೂ ನಾಮಿನಿ ಹೆಸರಿಸುವುದು ಕಡ್ಡಾಯವಲ್ಲ. ಯಾರೂ ನಾಮಿನಿ ಇಲ್ಲವಾದಲ್ಲಿ ಅದನ್ನು ಘೋಷಿಸಬಹುದು. ನಾಮಿನಿ ಇಲ್ಲದ ಠೇವಣಿಯ ಹೂಡಿಕೆದಾರರು ಮೃತಪಟ್ಟರೆ ಕಾನೂನು ಪ್ರಕಾರ ಅವರ ವಾರಸುದಾರರು ಸೂಕ್ತ ದಾಖಲೆ ನೀಡಿ ಹಣ ಪಡೆದುಕೊಳ್ಳಲು ಸಾಧ್ಯ.

ಇದನ್ನೂ ಓದಿ: ಬ್ಯಾಂಕ್​ನಿಂದ ಕ್ಯಾಷ್ ಪಡೆದರೆ ತೆರಿಗೆ ಕಡಿತ ಆಗುತ್ತೆ… ನೀವು ತಿಳಿದಿರಲೇಬೇಕಾದ ನಿಯಮಗಳಿವು…

ದೊಡ್ಡಮೊತ್ತದ ಬಡ್ಡಿ ಎನ್ನುವ ವ್ಯಾಖ್ಯಾನದಲ್ಲಿ ಬದಲಾವಣೆ

ಬ್ಯಾಂಕಿಂಗ್ ಕಾನೂನು ತಿದ್ದುಪಡಿ ಮಸೂದೆಯಲ್ಲಿ ಬದಲಾಗಿರುವ ನಿಯಮಗಳಲ್ಲಿ ಸಬ್​ಸ್ಟ್ಯಾನ್ಷಿಯಲ್ ಇಂಟರೆಸ್ಟ್ ಎನ್ನುವ ಪದದ ವ್ಯಾಖ್ಯಾನವೂ ಇದೆ. ಸಬ್​ಸ್ಟ್ಯಾನ್ಷಿಯಲ್ ಇಂಟರೆಸ್ಟ್ ಅಥವಾ ದೊಡ್ಡಮೊತ್ತದ ಬಡ್ಡಿ ಎಂದರೆ ಅದು 5 ಲಕ್ಷ ರೂಗಿಂತಲೂ ಹೆಚ್ಚು ಎಂದು ಪರಿಗಣಿಸಲಾಗುತ್ತದೆ. ಈಗ ಬದಲಾದ ನಿಯಮದ ಪ್ರಕಾರ, ಅದು 2 ಕೋಟಿ ರೂಗೆ ಏರಿಕೆ ಮಾಡಲಾಗಿದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್