ನವೆಂಬರ್​ನಲ್ಲಿ ಪಿಎಂಐ ಔಟ್​ಪುಟ್ ಇಂಡೆಕ್ಸ್ 59.5; ಭಾರತದಲ್ಲಿ ಬಿಸಿನೆಸ್ ಚಟುವಟಿಕೆ ತೀವ್ರ

PMI reading in November 2024: ಎಸ್ ಅಂಡ್ ಪಿ ಗ್ಲೋಬಲ್ ಸಂಸ್ಥೆ ಬಿಡುಗಡೆ ಮಾಡಿದ ಭಾರತದ ಪಿಎಂಐ ಔಟ್​ಪುಟ್ ಇಂಡೆಕ್ಸ್ ನವೆಂಬರ್​ನಲ್ಲಿ 59.5ಕ್ಕೆ ಏರಿದೆ. ಕಳೆದ ಮೂರು ತಿಂಗಳಲ್ಲೇ ಇದು ಗರಿಷ್ಠ ಮಟ್ಟ ಎನಿಸಿದೆ. ಮ್ಯಾನುಫ್ಯಾಕ್ಚರಿಂಗ್ ವಲಯದಲ್ಲಿ ಕಚ್ಚಾ ವಸ್ತುಗಳ ಬೆಲೆಗಳು ಹೆಚ್ಚಿವೆ. ಸರ್ವಿಸ್ ಸೆಕ್ಟರ್​ನಲ್ಲಿ ಆಹಾರವಸ್ತುಗಳ ಬೆಲೆ, ವೇತನ ವೆಚ್ಚದ ಹಿನ್ನಡೆ ಇದೆ. ಆದರೂ ಇವು ಉತ್ತಮ ಬೆಳವಣಿಗೆ ಹೊಂದಿರುವುದನ್ನು ಪಿಎಂಐ ಇಂಡೆಕ್ಸ್ ಸೂಚಿಸಿದೆ.

ನವೆಂಬರ್​ನಲ್ಲಿ ಪಿಎಂಐ ಔಟ್​ಪುಟ್ ಇಂಡೆಕ್ಸ್ 59.5; ಭಾರತದಲ್ಲಿ ಬಿಸಿನೆಸ್ ಚಟುವಟಿಕೆ ತೀವ್ರ
ಮ್ಯಾನುಫ್ಯಾಕ್ಚರಿಂಗ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Nov 25, 2024 | 12:58 PM

ನವದೆಹಲಿ, ನವೆಂಬರ್ 25: ಭಾರತದ ಪಿಎಂಐ ಔಟ್​ಪುಟ್ ಇಂಡೆಕ್ಸ್ ಅಕ್ಟೋಬರ್​ನಲ್ಲಿ 59.1 ಇದ್ದದ್ದು ನವೆಂಬರ್​ನಲ್ಲಿ 59.5ಕ್ಕೆ ಏರಿದೆ. ಭಾರತದಲ್ಲಿ ಬಿಸಿನೆಸ್ ಚಟುವಟಿಕೆ ತೀವ್ರಗೊಳ್ಳುತ್ತಿರುವುದಕ್ಕೆ ಇದು ಕನ್ನಡಿ ಹಿಡಿದಿದೆ. ಎಸ್ ಅಂಡ್ ಪಿ ಗ್ಲೋಬಲ್ ಸಂಸ್ಥೆ ಪರ್ಚೇಸಿಂಗ್ ಮ್ಯಾನೇಜರ್ಸ್ ಇಂಡೆಕ್ಸ್ (ಪಿಎಂಐ) ಸಿದ್ಧಪಡಿಸಿದೆ. 59.5 ಪಿಎಂಐ ಇರುವುದು ಕಳೆದ ಮೂರು ತಿಂಗಳಲ್ಲೇ ಗರಿಷ್ಠ ಮಟ್ಟ ಎನಿಸಿದೆ. ಬೆಲೆಗಳ ಒತ್ತಡದಲ್ಲೂ ಉತ್ಪಾದನಾ ಚುಟುವಟಿಕೆ ಹೆಚ್ಚುತ್ತಿರುವುದು ಸ್ಪಷ್ಟವಾಗಿದೆ.

ಏನಿದು ಪಿಎಂಐ?

ಪಿಎಂಐ ಎಂದರೆ ಪರ್ಚೇಸಿಂಗ್ ಮ್ಯಾನೇಜರ್ ಇಂಡೆಕ್ಸ್. ಆರ್ಥಿಕ ಚುಟವಟಿಕೆಯ ತೀವ್ರತೆಯನ್ನು ಇದು ಅಳೆಯಲು ಬಳಕೆ ಆಗುತ್ತದೆ. ಖಾಸಗಿ ವಲಯದ ಕಂಪನಿಗಳ ಪ್ರಾಡಕ್ಟ್ ಮ್ಯಾನೇಜರ್​ಗಳ ಸಮೀಕ್ಷೆ ಮಾಡಲಾಗುತ್ತದೆ. ಉತ್ಪಾದನೆಗೆ ಬೇಕಾದ ಸರಕುಗಳನ್ನು ಖರೀದಿಸುವುದು ಇದೇ ಪ್ರಾಡಕ್ಟ್ ಮ್ಯಾನೇಜರ್ ಅಥವಾ ಪರ್ಚೇಸಿಂಗ್ ಮ್ಯಾನೇಜರ್ಸ್. ಹೀಗಾಗಿ, ಇದಕ್ಕೆ ಪರ್ಚೇಸಿಂಗ್ ಮ್ಯಾನೇಜರ್ಸ್ ಇಂಡೆಕ್ಸ್ ಎಂದೂ ಕರೆಯಲಾಗುತ್ತದೆ.

ಇದನ್ನೂ ಓದಿ: ಮಿಂಚುತ್ತಿರುವ ಭಾರತೀಯ ಗೇಮ್​ಗಳು; ‘ಇಂಡಸ್’, ‘ರೇಜ್ ಎಫೆಕ್ಟ್’, ‘ಫೌಜಿ’ ಮೊದಲಾದವುಗಳ ಜಾಗತಿಕ ಸದ್ದು

ಇಲ್ಲಿ ಹಿಂದಿನ ತಿಂಗಳಿನಷ್ಟೇ ಚಟುವಟಿಕೆ ಈ ತಿಂಗಳೂ ಇದ್ದಲ್ಲಿ ಪಿಎಂಐ 50 ಎಂದು ನಮೂದಿಸಲಾಗುತ್ತದೆ. ಪಿಎಂಐ 50ಕ್ಕಿಂತ ಹೆಚ್ಚು ಇದ್ದರೆ ಹೆಚ್ಚಿನ ಆರ್ಥಿಕ ಚಟುವಟಕೆ ಇರುವುದನ್ನು ಸೂಚಿಸುತ್ತದೆ. ಪಿಎಂಐ 50ಕ್ಕಿಂತ ಕಡಿಮೆ ಇದ್ದರೆ ಆರ್ಥಿಕ ಚಟುವಟಿಕೆ ಕಡಿಮೆಗೊಂಡಿದೆ ಎಂದರ್ಥ.

ನವೆಂಬರ್​ನ ಪಿಎಂಐ ಅಂಕಿಯು ಮ್ಯಾನುಫ್ಯಾಕ್ಚರಿಂಗ್ ಸೆಕ್ಟರ್ ಉತ್ತಮಗೊಂಡಿರುವುದನ್ನು ಬೊಟ್ಟು ಮಾಡಿ ತೋರಿಸುತ್ತಿದೆ. ಹೊಸ ಆರ್ಡರ್​ಗಳು ಹೆಚ್ಚುತ್ತಿವೆ. ಈ ಸೆಕ್ಟರ್ ನಿರೀಕ್ಷೆ ಮೀರಿ ಬೆಳೆದಿದೆ. ಸರ್ವಿಸಸ್ ಸೆಕ್ಟರ್​ನಲ್ಲಿ ಉದ್ಯೋಗ ಮಟ್ಟ ಹೆಚ್ಚಿರುವುದು ತಿಳಿದುಬಂದಿದೆ.

ಉತ್ಪಾದನೆಗೆ ಬಳಸಲಾಗುವ ಕಚ್ಚಾ ವಸ್ತುಗಳ ಬೆಲೆ ಏರುತ್ತಿದೆ. ಸರ್ವಿಸಸ್ ಸೆಕ್ಟರ್​ನಲ್ಲಿ ಆಹಾರ ಮತ್ತು ವೇತನ ವೆಚ್ಚ ಹೆಚ್ಚುತ್ತಿದೆ. ಈ ಹಿನ್ನಡೆಗಳ ನಡುವೆಯೂ ಮ್ಯಾನುಫ್ಯಾಕ್ಚರಿಂಗ್ ಮತ್ತು ಸರ್ವಿಸ್ ಸೆಕ್ಟರ್​​ಗಳು ಉತ್ತಮವಾಗಿ ಬೆಳವಣಿಗೆ ಹೊಂದುತ್ತಿವೆ ಎಂದು ಎಚ್​ಎಸ್​ಬಿಸಿಯಲ್ಲಿ ಭಾರತ ವಿಭಾಗದ ಮುಖ್ಯ ಆರ್ಥಿಕತಜ್ಞ ಪ್ರಾಂಜಲ್ ಭಂಡಾರಿ ಹೇಳಿದ್ದಾರೆ.

ಇದನ್ನೂ ಓದಿ: ಭಾರತದಲ್ಲಿ ವರ್ಷಕ್ಕೆ ತಯಾರಾಗುವ ಆಹಾರಧಾನ್ಯಗಳು 330 ಮಿಲಿಯನ್ ಟನ್; ರಫ್ತಿನಿಂದ ಬರುವ ಆದಾಯ 50 ಬಿಲಿಯನ್ ಡಾಲರ್

ಭಾರತದ ಪ್ರೈವೇಟ್ ಸೆಕ್ಟರ್​ನಲ್ಲಿ ನವೆಂಬರ್ ತಿಂಗಳಲ್ಲಿ ಬೆಲೆ ಒತ್ತಡ ಅಧಿಕ ಇತ್ತು. 2023ರ ಆಗಸ್ಟ್​ ಬಳಿಕ ಇದು ಗರಿಷ್ಠ ಒತ್ತಡ ಎನಿಸಿದೆ. ಪಿಎಂಐ ಇಂಡೆಕ್ಸ್ ಸಮೀಕ್ಷೆಯಲ್ಲಿ ಪಾಲ್ಗೊಂಡ ಮ್ಯಾನೇಜರ್​ಗಳು ಉತ್ಪಾದನಾ ವೆಚ್ಚದಲ್ಲಿ ಹೆಚ್ಚಳವಾಗಿರುವುದನ್ನು ಹೈಲೈಟ್ ಮಾಡಿದ್ದಾರೆ. ಅಲೂಮಿನಿಯಂ, ಕಾಟನ್, ಲೆದರ್, ರಬ್ಬರ್ ಮೊದಲಾದ ವಿವಿಧ ಕಚ್ಛಾ ವಸ್ತುಗಳ ಬೆಲೆ ಏರಿಕೆ ಆಗಿದೆ.

ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದ ಸರ್ವಿಸ್ ಸೆಕ್ಟರ್​ನ ಮ್ಯಾನೇಜರುಗಳು ಅಡುಗೆ ಎಣ್ಣೆ, ಮೊಟ್ಟೆ, ಮಾಂಸ, ತರಕಾರಿ ಬೆಲೆಗಳ ಹೆಚ್ಚಳ ಆಗಿರುವುದನ್ನು ಎತ್ತಿ ತೋರಿಸಿದ್ದಾರೆ. ಸಂಬಳದ ಹೊರೆಯೂ ಹೆಚ್ಚಿದೆ ಎಂದಿದ್ದಾರಂತೆ ಅವರು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ