ಭಾರತದಲ್ಲಿ ವರ್ಷಕ್ಕೆ ತಯಾರಾಗುವ ಆಹಾರಧಾನ್ಯಗಳು 330 ಮಿಲಿಯನ್ ಟನ್; ರಫ್ತಿನಿಂದ ಬರುವ ಆದಾಯ 50 ಬಿಲಿಯನ್ ಡಾಲರ್

Foodgrain production in India: ಭಾರತದಲ್ಲಿ ವರ್ಷಕ್ಕೆ 330 ಮಿಲಿಯನ್ ಟನ್​ಗಳಷ್ಟು ಆಹಾರಧಾನ್ಯಗಳ ಉತ್ಪಾದನೆ ಆಗುತ್ತದೆ. ರಫ್ತುಗಳಿಂದ ದೇಶಕ್ಕೆ 50 ಬಿಲಿಯನ್ ಡಾಲರ್ ಆದಾಯ ಸಿಗುತ್ತಿದೆ ಎಂದು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ತಿಳಿಸಿದ್ದಾರೆ. ನವದೆಹಲಿಯಲ್ಲಿ ಇತ್ತೀಚೆಗೆ ನಡೆದ ಗ್ಲೋಬಲ್ ಸಾಯಿಲ್ ಕಾನ್ಫರೆನ್ಸ್ ಕಾರ್ಯಕ್ರಮದಲ್ಲಿ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಪಾಲ್ಗೊಂಡು ಮಾತನಾಡುತ್ತಿದ್ದರು.

ಭಾರತದಲ್ಲಿ ವರ್ಷಕ್ಕೆ ತಯಾರಾಗುವ ಆಹಾರಧಾನ್ಯಗಳು 330 ಮಿಲಿಯನ್ ಟನ್; ರಫ್ತಿನಿಂದ ಬರುವ ಆದಾಯ 50 ಬಿಲಿಯನ್ ಡಾಲರ್
ಕೃಷಿ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Nov 24, 2024 | 5:40 PM

ನವದೆಹಲಿ, ನವೆಂಬರ್ 24: ಭಾರತ ಆಹಾರ ವಸ್ತುಗಳಲ್ಲಿ ಬಹುತೇಕ ಸ್ವಾವಲಂಬನೆ ಸಾಧಿಸಿದೆ. ಆಹಾರಧಾನ್ಯಗಳ ರಫ್ತು ಮಾಡುವ ಪ್ರಮುಖ ದೇಶಗಳಲ್ಲಿ ಭಾರತವೂ ಇದೆ. ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಇತ್ತೀಚೆಗೆ ನೀಡಿದ ಮಾಹಿತಿ ಪ್ರಕಾರ ಭಾರತದಲ್ಲಿ ವಾರ್ಷಿಕವಾಗಿ 330 ಮಿಲಿಯನ್ ಟನ್​ಗಳಷ್ಟು ಆಹಾರಧಾನ್ಯಗಳನ್ನು ತಯಾರಿಸಲಾಗುತ್ತದೆ. ಅಂದರೆ 33,000 ಕೋಟಿ ಕಿಲೋಗ್ರಾಮ್​ನಷ್ಟು ಆಹಾರಧಾನ್ಯಗಳು ಪ್ರತೀ ವರ್ಷ ಭಾರತದಲ್ಲಿ ತಯಾರಾಗುತ್ತವೆ.

ಆಹಾರಧಾನ್ಯಗಳ ಉತ್ಪಾದನೆಯಲ್ಲಿ ಚೀನಾ ಬಿಟ್ಟರೆ ಭಾರತವೇ ನಂಬರ್ ಒನ್. ಜಾಗತಿಕ ಆಹಾರಧಾನ್ಯಗಳ ಉತ್ಪಾದನೆಯಲ್ಲಿ ಚೀನಾ ಪಾಲು ಶೇ. 17ರಷ್ಟು ಇದ್ದರೆ ಭಾರತದ ಪಾಲು ಶೇ. 14 ಇದೆ. ಐರೋಪ್ಯ ಒಕ್ಕೂಟದಲ್ಲಿರುವ ಎಲ್ಲಾ ದೇಶಗಳನ್ನು ಸೇರಿಸಿದರೆ ಶೇ. 17ರಷ್ಟು ಆಹಾರಧಾನ್ಯಗಳನ್ನು ಮಾತ್ರವೇ ಬೆಳೆಯಲಾಗುತ್ತದೆ. ರಷ್ಯಾ, ಅಮೆರಿಕ, ಇಂಡೋನೇಷ್ಯಾ, ಬಾಂಗ್ಲಾದೇಶ, ಬ್ರೆಜಿಲ್, ಅರ್ಜೆಂಟೀನಾ ಮೊದಲಾದವು ಪ್ರಮುಖ ಆಹಾರಧಾನ್ಯ ಉತ್ಪಾದಿಸುವ ದೇಶಗಳಾಗಿವೆ.

ಆಹಾರಧಾನ್ಯಗಳ ರಫ್ತು ವಿಚಾರಕ್ಕೆ ಬಂದರೆ ಚೀನಾ ಮತ್ತು ಭಾರತ ತುಸು ಹಿಂದುಳಿದಿವೆ. ಇತ್ತೀಚೆಗೆ ಭಾರತದ ಆಹಾರಧಾನ್ಯ ರಫ್ತು ಹೆಚ್ಚುತ್ತಿರುವುದು ಗಮನಾರ್ಹ. ಸಚಿವ ಚೌಹಾಣ್ ಪ್ರಕಾರ ಭಾರತದಲ್ಲಿ ಆಹಾರಧಾನ್ಯಗಳ ರಫ್ತಿನಿಂದ ಒಂದು ವರ್ಷದಲ್ಲಿ 50 ಬಿಲಿಯನ್ ಡಾಲರ್ ಆದಾಯ ಸಿಗುತ್ತಿದೆಯಂತೆ.

ಇದನ್ನೂ ಓದಿ: ನೊಂದಾಯಿತ ಸಣ್ಣ ಉದ್ದಿಮೆಗಳಲ್ಲಿ ಸೃಷ್ಟಿಯಾದ ಉದ್ಯೋಗಗಳ ಸಂಖ್ಯೆ 23 ಕೋಟಿ

ಮಣ್ಣಿನ ಸಾರದ ಗುಣಮಟ್ಟ ಇಳಿಕೆ: ಸಚಿವರ ಆತಂಕ

ಶಿವರಾಜ್ ಸಿಂಗ್ ಚೌಹಾಣ್ ಅವರು ಇತ್ತೀಚೆಗೆ ನಡೆದ ‘ಗ್ಲೋಬಲ್ ಸಾಯಿಲ್ಸ್ ಕಾನ್ಫರೆನ್ಸ್ 2024’ (ಜಾಗತಿಕ ಮಣ್ಣಿನ ಸಮ್ಮೇಳನ) ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು. ಈ ವೇಳೆ ಅವರು ಸುಸ್ಥಿರವಾದಂತಹ ಮತ್ತು ಆದಾಯಯುಕ್ತ ಕೃಷಿಕಾರಿಕೆ, ಸರ್ವರಿಗೂ ಆಹಾರ ಭದ್ರತೆ ಕಲ್ಪಿಸುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಲು ಸರ್ಕಾರ ಸದಾ ಸಿದ್ಧ ಇರುತ್ತದೆ ಎಂದು ಭರವಸೆ ನೀಡಿದರು. ಹಾಗೆಯೇ, ಕೃಷಿಗಾರಿಕೆಯಲ್ಲಿ ಪ್ರಸಕ್ತ ವಿಧಾನಗಳ ಲೋಪದೋಷಗಳು, ಮಣ್ಣಿನ ಆರೋಗ್ಯಕ್ಕೆ ಆಗಿರುವ ಹಾನಿ ಇತ್ಯಾದಿ ಬಗ್ಗೆ ಕೃಷಿ ಸಚಿವರು ಆತಂಕ ಕೂಡ ವ್ಯಕ್ತಪಡಿಸಿದ್ದಾರೆ.

ರಾಸಾಯನಿಕ ರಸಗೊಬ್ಬರಗಳ ಬಳಕೆ ಹೆಚ್ಚುತ್ತಿದೆ. ಅವುಗಳ ಮೇಲೆ ಅವಲಂಬನೆಯೂ ಹೆಚ್ಚುತ್ತಿದೆ. ನೈಸರ್ಗಿಕ ಸಂಪನ್ಮೂಲಗಳನ್ನು ಅತಿಯಾಗಿ ಬಳಸಲಾಗುತ್ತಿದೆ. ಜೊತೆಗೆ ಅಸ್ಥಿರವಾದಂತಹ ಹವಾಮಾನವೂ ಇದೆ. ಇವೆಲ್ಲವೂ ಕೂಡ ಮಣ್ಣಿನ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತಿದೆ ಎನ್ನುವ ಸಂಗತಿಯನ್ನು ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿಗಳು ಎತ್ತಿ ಹೇಳಿದ್ದಾರೆ.

‘ಭಾರತದಲ್ಲಿನ ಮಣ್ಣಿನ ಆರೋಗ್ಯ ಇವತ್ತು ದುಸ್ಥಿತಿಯಲ್ಲಿದೆ. ಹಲವು ಅಧ್ಯಯನಗಳ ಪ್ರಕಾರ ಶೇ. 30ರಷ್ಟು ಮಣ್ಣು ಸತ್ವ ಕಳೆದುಕೊಂಡಿದೆ. ಸವಕಳಿ, ಮಾಲಿನಗಳಿಂದಾಗಿ ಮಣ್ಣಿನಲ್ಲಿ ಅಗತ್ಯ ನೈಟ್ರೋಜನ್ ಮತ್ತು ಕಿರುಪೋಷಕಾಂಶಗಳ ಪ್ರಮಾಣ ಕಡಿಮೆ ಆಗುತ್ತಿದೆ. ಮಣ್ಣಿನಲ್ಲಿ ಸಾವಯವತೆಯ ಕೊರತೆಯಿಂದಾಗಿ ಅದರ ಸತ್ವ ಕುಂದಿದೆ’ ಎಂದು ಶಿವರಾಜ್ ಸಿಂಗ್ ಚೌಹಾಣ್ ಬೇಸರ ಹೊರಹಾಕಿದ್ದಾರೆ.

ಇದನ್ನೂ ಓದಿ: ಭಾರತದ ಸ್ಟಾರ್ಟಪ್​ಗಳಿಗೆ ಈ ವಾರ ಫಂಡಿಂಗ್ ಸುಗ್ಗಿ; ಶೇ. 226ರಷ್ಟು ಫಂಡಿಂಗ್ ಹೆಚ್ಚಳ

ಮಣ್ಣಿನ ಸಾರವನ್ನು ಹೆಚ್ಚಿಸಲು, ನೀರನ್ನು ಮಿತವಾಗಿ ಬಳಸಲು ಹೀಗೆ ಸುಸ್ಥಿರ ಕೃಷಿಗಾರಿಕೆ ತಂತ್ರಗಳನ್ನು ಅಳವಡಿಲಸು ಸರ್ಕಾರ ತೆಗೆದುಕೊಂಡಿರುವ ಹಲವು ಕ್ರಮಗಳನ್ನು ಅವರು ಉಲ್ಲೇಖಿಸಿದ್ದಾರೆ. ಸಾಯಿಲ್ ಹೆಲ್ತ್ ಕಾರ್ಡ್, ಕೃಷಿ ಸಿಂಚಯ್ ಯೋಜನೆ ಇತ್ಯಾದಿಯನ್ನು ವಿವರಿಸಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ