AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

MSMEs shining: ನೊಂದಾಯಿತ ಸಣ್ಣ ಉದ್ದಿಮೆಗಳಲ್ಲಿ ಸೃಷ್ಟಿಯಾದ ಉದ್ಯೋಗಗಳ ಸಂಖ್ಯೆ 23 ಕೋಟಿ

Job creation by MSMEs: ಉದ್ಯಮ್ ಪೋರ್ಟಲ್​ನಲ್ಲಿ ನೊಂದಾಯಿತವಾದ 5.49 ಕೋಟಿ ಎಂಎಸ್​ಎಂಇಗಳಿಂದ 23 ಕೋಟಿಗೂ ಅಧಿಕ ಉದ್ಯೋಗಗಳ ಸೃಷ್ಟಿಯಾಗಿದೆ. ಕಳೆದ 15 ತಿಂಗಳಲ್ಲಿ ನೊಂದಾಯಿತ ಉದ್ದಿಮೆಗಳ ಸಂಖ್ಯೆ ದ್ವಿಗುಣಗೊಂಡಿದೆ. ಉದ್ಯೋಗಗಳ ಸಂಖ್ಯೆ 10 ಕೋಟಿಯಷ್ಟು ಏರಿದೆ. ಈ ನೊಂದಾಯಿತ ಎಂಎಸ್​ಎಂಇಗಳಲ್ಲಿ ಮೈಕ್ರೋ ಯುನಿಟ್, ಅಂದರೆ ಕಿರು ಉದ್ದಿಮೆಗಳ ಸಂಖ್ಯೆಯೇ 5.41 ಕೋಟಿ ಇದೆ.

MSMEs shining: ನೊಂದಾಯಿತ ಸಣ್ಣ ಉದ್ದಿಮೆಗಳಲ್ಲಿ ಸೃಷ್ಟಿಯಾದ ಉದ್ಯೋಗಗಳ ಸಂಖ್ಯೆ 23 ಕೋಟಿ
ಮ್ಯಾನುಫ್ಯಾಕ್ಚರಿಂಗ್ ಕ್ಷೇತ್ರ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Nov 24, 2024 | 5:01 PM

Share

ನವದೆಹಲಿ, ನವೆಂಬರ್ 24: ಅಧಿಕೃತವಾಗಿ ನೊಂದಾಯಿಸಲಾಗಿರುವ ಸಣ್ಣ ಹಾಗೂ ಮಧ್ಯಮ ಉದ್ದಿಮೆಗಳಲ್ಲಿರುವ ಒಟ್ಟು ಉದ್ಯೋಗಗಳ ಸಂಖ್ಯೆ 23 ಕೋಟಿ ಗಡಿ ದಾಟಿದೆ. ಎಂಎಸ್​ಎಂಇ ಸಚಿವಾಲಯದಿಂದ ಇತ್ತೀಚೆಗೆ ಬಿಡುಗಡೆಯಾದ ದತ್ತಾಂಶದ ಪ್ರಕಾರ ಸರ್ಕಾರದ ಉದ್ಯಮ್ ಪೋರ್ಟಲ್​ನಲ್ಲಿ 5.49 ಕೋಟಿ ಎಂಎಸ್​ಎಂಇಗಳು ನೊಂದಾಯಿತವಾಗಿವೆ. ಇವುಗಳಲ್ಲೆದರಲ್ಲೂ ಇರುವ ಉದ್ಯೋಗಿಗಳ ಸಂಖ್ಯೆ 23.14 ಕೋಟಿ ಎನ್ನಲಾಗಿದೆ.

ಕಳೆದ 15 ತಿಂಗಳಲ್ಲಿ ಈ ಎಂಎಸ್​ಎಂಇಗಳಲ್ಲಿನ ಉದ್ಯೋಗಿಗಳ ಸಂಖ್ಯೆ 10 ಕೋಟಿಯಷ್ಟು ಹೆಚ್ಚಾಗಿದೆ. 2023ರ ಆಗಸ್ಟ್ ತಿಂಗಳಲ್ಲಿ ನೊಂದಾಯಿತವಾಗಿದ್ದ 2.33 ಕೋಟಿ ಎಂಎಸ್​ಎಂಇಗಳಲ್ಲಿ 13.15 ಕೋಟಿ ಉದ್ಯೋಗಗಳಿದ್ದವು. ಈಗ ನೊಂದಾಯಿತ ಉದ್ದಿಮೆಗಳ ಸಂಖ್ಯೆಯೂ ಹೆಚ್ಚಿದೆ. ಉದ್ಯೋಗಗಳ ಸಂಖ್ಯೆಯೂ ಹೆಚ್ಚಿದೆ.

ಅಸಂಘಟಿತ ವಲಯಕ್ಕೆ ಸೇರಿದ ಅಥವಾ ಅನೌಪಚಾರಿಕ ಅತಿಸಣ್ಣ ಉದ್ದಿಮೆಗಳಲ್ಲಿ ಉದ್ಯಮ್ ಪೋರ್ಟಲ್​ಗೆ ನೊಂದಾಯಿತವಾಗಿರುವಂಥವು 2.38 ಕೋಟಿ. ಇಷ್ಟು ಕಿರು ಉದ್ದಿಮೆಗಳಲ್ಲಿ 2.84 ಕೋಟಿ ಉದ್ಯೋಗಗಳಿವೆ. ಒಟ್ಟಾರೆ ನೊಂದಾಯಿತ 5.49 ಕೋಟಿ ಎಂಎಸ್​ಎಂಇಗಳಲ್ಲಿ ಅತಿಸಣ್ಣ ಉದ್ದಿಮೆಗಳ ಸಂಖ್ಯೆಯೇ 5.41 ಕೋಟಿ ಇದೆ. ಸಣ್ಣ ಗಾತ್ರದ ಉದ್ದಿಮೆಗಳ ಸಂಖ್ಯೆ 7.27 ಲಕ್ಷ ಇದ್ದರೆ, ಮಧ್ಯಮ ಉದ್ದಿಮೆಗಳ ಸಂಖ್ಯೆ 68,682 ಇದೆ.

ಇದನ್ನೂ ಓದಿ: ಭಾರತದ ಸ್ಟಾರ್ಟಪ್​ಗಳಿಗೆ ಈ ವಾರ ಫಂಡಿಂಗ್ ಸುಗ್ಗಿ; ಶೇ. 226ರಷ್ಟು ಫಂಡಿಂಗ್ ಹೆಚ್ಚಳ

ಆರ್​ಬಿಐ ದತ್ತಾಂಶದ ಪ್ರಕಾರ 2023-24ರ ಹಣಕಾಸು ವರ್ಷದಲ್ಲಿ ದೇಶದಲ್ಲಿ 4.67 ಕೋಟಿ ಉದ್ಯೋಗಗಳ ಸೃಷ್ಟಿಯಾಗಿದೆ. ಇದರಿಂದ ಒಟ್ಟು ಉದ್ಯೋಗಗಳ ಸಂಖ್ಯೆ 64.33 ಕೋಟಿಗೆ ಏರಿದೆ. ಕೃಷಿ ಕ್ಷೇತ್ರದಲ್ಲಿನ ಉದ್ಯೋಗಗಳ ಪಾಲು ಬರೋಬ್ಬರಿ ಶೇ. 45ರಷ್ಟಿದೆ. ಇದು ಆರ್ಥಿಕ ಸಮೀಕ್ಷೆಯಲ್ಲಿ ಕಂಡುಕೊಳ್ಳಲಾದ ಸಂಖ್ಯೆ. ಅದರ ಪ್ರಕಾರ ಸುಮಾರು 25ರಿಂದ 29 ಕೋಟಿಯಷ್ಟು ಉದ್ಯೋಗಗಳು ಕೃಷಿ ವಲಯದಲ್ಲಿ ಇವೆ.

ಸಣ್ಣ ಉದ್ದಿಮೆಗಳಿಗೆ ಸರ್ಕಾರ ಸಾಲದ ವ್ಯವಸ್ಥೆಯಿಂದ ಹಿಡಿದು ವಿವಿಧ ಕ್ರಮಗಳ ಮೂಲಕ ಸಾಕಷ್ಟು ಪ್ರೋತ್ಸಾಹ ನೀಡುತ್ತಿದೆ. ಆದರೂ ಕೆಲ ಪ್ರಮಾಣದ ಉದ್ದಿಮೆಗಳು ಹೆಚ್ಚು ಕಾಲ ಸಾಗುವುದಿಲ್ಲ. 2020ರಿಂದ ಈಚೆಗೆ ಸುಮಾರು 50,000 ಸಮೀಪದಷ್ಟು ಎಂಎಸ್​ಎಂಇಗಳು ಮುಚ್ಚಿದ್ದು, ಇದರಿಂದ ಮೂರು ಲಕ್ಷಕ್ಕೂ ಹೆಚ್ಚು ಉದ್ಯೋಗ ನಷ್ಟವೂ ಆಗಿರುವುದು ಕಂಡು ಬಂದಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ