AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಡಿಸೆಂಬರ್ ತಿಂಗಳಲ್ಲಿ ಬ್ಯಾಂಕುಗಳಿಗೆ 17 ದಿನ ರಜೆ; ಕರ್ನಾಟಕದಲ್ಲಿ 8 ದಿನ ಮಾತ್ರ; ಇಲ್ಲಿದೆ ರಜಾದಿನಗಳ ಪಟ್ಟಿ

Bank holidays 2024 December: ಡಿಸೆಂಬರ್ ತಿಂಗಳಲ್ಲಿ ಭಾರತದ ಬ್ಯಾಂಕುಗಳಿಗೆ ಒಟ್ಟಾರೆ 17 ದಿನಗಳ ರಜೆ ಇದೆ. ಇದರಲ್ಲಿ ಪ್ರಾದೇಶಿಕ ರಜೆಗಳೂ ಒಳಗೊಂಡಿವೆ. ಡಿಸೆಂಬರ್​ನಲ್ಲಿ ಒಂದು ಹೆಚ್ಚುವರಿ ಭಾನುವಾರದ ರಜೆ ಇದೆ. ಒಟ್ಟು 7 ದಿನ ನಿಯಮಿತ ರಜೆ ಇದೆ. ಕರ್ನಾಟಕದಲ್ಲಿ ಕ್ರಿಸ್ಮಸ್ ಹಬ್ಬವೂ ಸೇರಿ ಒಟ್ಟು 8 ದಿನಗಳ ಕಾಲ ಬ್ಯಾಂಕುಗಳು ಬಂದ್ ಆಗಿರುತ್ತವೆ.

ಡಿಸೆಂಬರ್ ತಿಂಗಳಲ್ಲಿ ಬ್ಯಾಂಕುಗಳಿಗೆ 17 ದಿನ ರಜೆ; ಕರ್ನಾಟಕದಲ್ಲಿ 8 ದಿನ ಮಾತ್ರ; ಇಲ್ಲಿದೆ ರಜಾದಿನಗಳ ಪಟ್ಟಿ
ಬ್ಯಾಂಕ್ ರಜಾದಿನ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Nov 25, 2024 | 2:21 PM

Share

ನವದೆಹಲಿ, ನವೆಂಬರ್ 25: ದೇಶಾದ್ಯಂತ ಡಿಸೆಂಬರ್ ತಿಂಗಳಲ್ಲಿ ಕನಿಷ್ಠ 8 ದಿನಗಳು ಬ್ಯಾಂಕ್​ಗೆ ರಜೆ ಇದೆ. ಪ್ರಾದೇಶಿಕ ರಜೆಗಳನ್ನೂ ಸೇರಿಸಿದರೆ ಡಿಸೆಂಬರ್​ನಲ್ಲಿ ಒಟ್ಟಾರೆ ರಜಾ ದಿನಗಳ ಸಂಖ್ಯೆ 17 ಆಗುತ್ತದೆ. ಕರ್ನಾಟಕ ಸೇರಿದಂತೆ ಹೆಚ್ಚಿನ ರಾಜ್ಯಗಳಲ್ಲಿ ಡಿಸೆಂಬರ್​ನಲ್ಲಿ 8 ರಜಾದಿನಗಳು ಮಾತ್ರವೇ ಇರುವುದು. ಈಶಾನ್ಯ ರಾಜ್ಯಗಳಾದ ಸಿಕ್ಕಿಂ, ಮೇಘಾಲಯ, ಮಿಝೋರಾಂನಲ್ಲಿ ಈ ತಿಂಗಳು ಹೆಚ್ಚು ರಜೆ ಇದೆ. ಗೋವಾ, ಪಂಜಾಬ್ ಮತ್ತು ಹರ್ಯಾಣ ರಾಜ್ಯಗಳಲ್ಲೂ ಡಿಸೆಂಬರ್​ನಲ್ಲಿ ಹೆಚ್ಚು ರಜೆಯನ್ನು ಕಾಣಬಹುದು. ಡಿಸೆಂಬರ್ 25ರಂದು ಕ್ರಿಸ್ಮಸ್ ಹಬ್ಬದ ಪ್ರಯುಕ್ತ ದೇಶದ ಎಲ್ಲೆಡೆ ಸಾರ್ವತ್ರಿಕ ರಜೆ ಇರುತ್ತದೆ.

ನಾಗಾಲ್ಯಾಂಡ್ ಹಾಗೂ ಕೆಲವೆಡೆ ಡಿಸೆಂಬರ್ 22ರಿಂದ ಆಚೆಗೆ ಕನಿಷ್ಠ ಆರೇಳು ದಿನ ರಜೆ ಇದೆ. ನಾಗಾಲ್ಯಾಂಡ್​ನಲ್ಲಿ ಸತತ ಆರು ದಿನ ರಜೆ ಇದೆ.

2024ರ ಡಿಸೆಂಬರ್​ನಲ್ಲಿ ಬ್ಯಾಂಕುಗಳ ರಜಾದಿನಗಳ ಪಟ್ಟಿ

  1. ಡಿಸೆಂಬರ್ 1: ಭಾನುವಾರದ ರಜೆ
  2. ಡಿಸೆಂಬರ್ 3, ಮಂಗಳವಾರ: ಸೇಂಟ್ ಫ್ರಾನ್ಸಿಸ್ ಜೇವಿಯರ್ ಔತಣ (ಗೋವಾದಲ್ಲಿ ರಜೆ)
  3. ಡಿಸೆಂಬರ್ 8: ಭಾನುವಾರದ ರಜೆ
  4. ಡಿಸೆಂಬರ್ 14: ಎರಡನೇ ಶನಿವಾರದ ರಜೆ
  5. ಡಿಸೆಂಬರ್ 12, ಗುರುವಾರ: ಪಾ ತೋಗನ್ ನೆಂಗ್​ಮಿಂಜಾ ಸಾಂಗ್ಮಾ (ಮೇಘಾಲಯದಲ್ಲಿ ರಜೆ)
  6. ಡಿಸೆಂಬರ್ 15: ಭಾನುವಾರದ ರಜೆ
  7. ಡಿಸೆಂಬರ್ 18, ಬುಧವಾರ: ಗುರು ಘಾಸಿದಾಸ್ ಜಯಂತಿ, ಉ ಸೋಸೋ ತಾಮ್ ಪುಣ್ಯತಿಥಿ (ಪಂಜಾಬ್, ಹರ್ಯಾಣದಲ್ಲಿ, ಹಾಗು ಮೇಘಾಲಯದಲ್ಲಿ ರಜೆ)
  8. ಡಿಸೆಂಬರ್ 19, ಗುರುವಾರ: ಗೋವಾ ವಿಮೋಚನಾ ದಿನ (ಗೋವಾದಲ್ಲಿ ರಜೆ)
  9. ಡಿಸೆಂಬರ್ 22: ಭಾನುವಾರದ ರಜೆ
  10. ಡಿಸೆಂಬರ್ 24, ಮಂಗಳವಾರ: ಕ್ರಿಸ್ಮಸ್, ಗುರು ತೇಗ್ ಬಹದೂರ್ ಬಲಿದಾನ ದಿನ (ಮೇಘಾಲಯ, ಮಿಝೋರಾಂ, ನಾಗಾಲ್ಯಾಂಡ್ ರಾಜ್ಯಗಳಲ್ಲಿ ಹಾಗೂ ಪಂಜಾಬ್, ಹರ್ಯಾಣದಲ್ಲಿ ರಜೆ)
  11. ಡಿಸೆಂಬರ್ 25, ಬುಧವಾರ: ಕ್ರಿಸ್ಮಸ್ ಹಬ್ಬಕ್ಕೆ ದೇಶಾದ್ಯಂತ ಎಲ್ಲೆಡೆ ರಜೆ
  12. ಡಿಸೆಂಬರ್ 26, ಗುರುವಾರ: ಮೇಘಾಲಯ, ನಾಗಾಲ್ಯಾಂಡ್ ಮೊದಲಾದ ಕೆಲವೆಡೆ ರಜೆ
  13. ಡಿಸೆಂಬರ್ 27, ಶುಕ್ರವಾರ: ನಾಗಾಲ್ಯಾಂಡ್​ನಲ್ಲಿ ರಜೆ
  14. ಡಿಸೆಂಬರ್ 28: ನಾಲ್ಕನೇ ಶನಿವಾರದ ರಜೆ
  15. ಡಿಸೆಂಬರ್ 29: ಭಾನುವಾರದ ರಜೆ
  16. ಡಿಸೆಂಬರ್ 30, ಸೋಮವಾರ: ಟಮು ಲೋಸರ್, ಯು ಕಿಯಾಂಗ್ ನಾಂಗ್​ಬಾ (ಸಿಕ್ಕಿಂ, ಮೇಘಾಲಯದಲ್ಲಿ ರಜೆ)
  17. ಡಿಸೆಂಬರ್ 31, ಮಂಗಳವಾರ: ಹೊಸ ವರ್ಷಾಚರಣೆ ಪ್ರಯುಕ್ತ ಮಿಜೋರಾಂನಲ್ಲಿ ರಜೆ

ಇದನ್ನೂ ಓದಿ: ಮಿಂಚುತ್ತಿರುವ ಭಾರತೀಯ ಗೇಮ್​ಗಳು; ‘ಇಂಡಸ್’, ‘ರೇಜ್ ಎಫೆಕ್ಟ್’, ‘ಫೌಜಿ’ ಮೊದಲಾದವುಗಳ ಜಾಗತಿಕ ಸದ್ದು

ಕರ್ನಾಟಕದಲ್ಲಿ ಡಿಸೆಂಬರ್​ನಲ್ಲಿ 8 ಬ್ಯಾಂಕ್ ರಜಾದಿನಗಳು

ಕರ್ನಾಟಕ ರಾಜ್ಯದಲ್ಲಿ ಡಿಸೆಂಬರ್ ತಿಂಗಳಲ್ಲಿ ಒಂದೇ ಒಂದು ಸಾರ್ವತ್ರಿಕ ರಜೆ ಇರುವುದು. ಅದು ಡಿಸೆಂಬರ್ 25ರ ಕ್ರಿಸ್ಮಸ್ ಹಬ್ಬಕ್ಕೆ. ಅದು ಬಿಟ್ಟರೆ ಈ ತಿಂಗಳು ಒಂದು ಹೆಚ್ಚುವರಿ ಭಾನುವಾರ ಸಿಕ್ಕಿದೆ. ಒಟ್ಟು ಐದು ಭಾನುವಾರಗಳು ಹಾಗೂ ಎರಡು ಶನಿವಾರದ ರಜೆಗಳಿವೆ. ಕ್ರಿಸ್ಮಸ್ ಹಬ್ಬವೂ ಸೇರಿದರೆ ಡಿಸೆಂಬರ್​​ನಲ್ಲಿ ಕರ್ನಾಟಕದಲ್ಲಿ ರಜಾದಿನಗಳ ಸಂಖ್ಯೆ 8 ಆಗುತ್ತದೆ.

  1. ಡಿಸೆಂಬರ್ 1: ಭಾನುವಾರದ ರಜೆ
  2. ಡಿಸೆಂಬರ್ 8: ಭಾನುವಾರದ ರಜೆ
  3. ಡಿಸೆಂಬರ್ 14: ಎರಡನೇ ಶನಿವಾರದ ರಜೆ
  4. ಡಿಸೆಂಬರ್ 15: ಭಾನುವಾರದ ರಜೆ
  5. ಡಿಸೆಂಬರ್ 22: ಭಾನುವಾರದ ರಜೆ
  6. ಡಿಸೆಂಬರ್ 25, ಬುಧವಾರ: ಕ್ರಿಸ್ಮಸ್ ಹಬ್ಬ
  7. ಡಿಸೆಂಬರ್ 28: ನಾಲ್ಕನೇ ಶನಿವಾರದ ರಜೆ
  8. ಡಿಸೆಂಬರ್ 29: ಭಾನುವಾರದ ರಜೆ

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ