AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Indian AI: ಭಾರತದ್ದೇ ಸ್ವಂತ ಎಐ ಫೌಂಡೇಶನ್ ಮಾಡಲ್ ನಿರ್ಮಾಣಕ್ಕೆ ಸರ್ವಮ್ ಸಂಸ್ಥೆ ಆಯ್ಕೆ

Sarvam AI to build India's first own AI Foundation Model: ಭಾರತದ ಮೊದಲ ಸ್ವಂತ ಎಐ ಫೌಂಡೇಶನ್ ಮಾಡಲು ನಿರ್ಮಿಸಲು ಸರ್ವಮ್ ಎಐ ಸಂಸ್ಥೆಯನ್ನು ಆಯ್ಕೆ ಮಾಡಲಾಗಿದೆ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ. ಎಐ ಮಾಡಲ್ ನಿರ್ಮಿಸಲು ಸಲ್ಲಿಕೆಯಾಗಿದ್ದ 67 ಪ್ರಸ್ತಾಪಗಳಲ್ಲಿ ಮೊದಲಿಗೆ ಸರ್ವಮ್ ಎಐ ಅನ್ನು ಆಯ್ಕೆ ಮಾಡಲಾಗಿದೆ. ಮುಂಬರುವ ದಿನಗಳಲ್ಲಿ ಇನ್ನೂ 2-3 ಕಂಪನಿಗಳಿಗೆ ಅನುಮತಿ ನೀಡಲು ಸರ್ಕಾರ ಯೋಜಿಸಿದೆ.

Indian AI: ಭಾರತದ್ದೇ ಸ್ವಂತ ಎಐ ಫೌಂಡೇಶನ್ ಮಾಡಲ್ ನಿರ್ಮಾಣಕ್ಕೆ ಸರ್ವಮ್ ಸಂಸ್ಥೆ ಆಯ್ಕೆ
ಸರ್ವಮ್ ಎಐ
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Apr 27, 2025 | 1:55 PM

Share

ನವದೆಹಲಿ, ಏಪ್ರಿಲ್ 27: ಭಾರತದ್ದೇ ಸ್ವಂತ ಎಐ ಪರಿಸರ (AI ecosystem) ನಿರ್ಮಿಸುವತ್ತ ಸರ್ಕಾರ ಮತ್ತೊಂದು ಪ್ರಮುಖ ಹೆಜ್ಜೆ ಇರಿಸಿದೆ. ಎಐ ಫೌಂಡೇಶನ್ ಮಾಡಲ್​​ವೊಂದನ್ನು (AI Foundation Model) ಸೃಷ್ಟಿಸಲು ಸರ್ವಮ್ ಎಐ (Sarvam AI) ಸಂಸ್ಥೆಯನ್ನು ಆಯ್ಕೆ ಮಾಡಲಾಗಿದೆ. ಕೇಂದ್ರ ಐಟಿ ಸಚಿವ ಡಾ. ಅಶ್ವಿನಿ ವೈಷ್ಣವ್ ನಿನ್ನೆ ಶನಿವಾರ ಹೇಳಿದ್ದಾರೆ. ಚ್ಯಾಟ್​​ಜಿಟಿಪಿ ತರಹದ ಎಐ ಎಲ್​​ಎಲ್​​ಎಂ ಅನ್ನು ಸೃಷ್ಟಿಸಲು ಭಾರತಕ್ಕೆ ಬಹಳ ಕಷ್ಟ ಎಂದು ಓಪನ್​ಎಐ ಸಿಇಒ ಸ್ಯಾಮ್ ಆಲ್ಟ್​​ಮ್ಯಾನ್ ಹೇಳಿದ ಹಿನ್ನೆಲೆಯಲ್ಲಿ ಭಾರತದ ಈ ನಡೆ ಗಮನಾರ್ಹ ಎನಿಸಿದೆ.

ಎಐ ಫೌಂಡೇಶನ್ ಮಾಡಲ್ ನಿರ್ಮಾಣಕ್ಕೆ ಸರ್ಕಾರ ನೀಡಿದ ಆಹ್ವಾನಕ್ಕೆ ಉದ್ಯಮ ವಲಯದಿಂದ ಭರ್ಜರಿ ಸ್ಪಂದನೆ ಸಿಕ್ಕಿದೆ. 67 ಪ್ರಸ್ತಾಪಗಳು ಸರ್ಕಾರಕ್ಕೆ ಸಲ್ಲಿಕೆಯಾದುವಂತೆ. ಅದರಲ್ಲಿ ಕೆಲವನ್ನು ಸರ್ಕಾರ ಆಯ್ಕೆ ಮಾಡುತ್ತಿದೆ. ಸರ್ವಮ್ ಎಐಗೆ ಮೊದಲು ಅನುಮತಿ ಸಿಕ್ಕಿದೆ. ನಿನ್ನೆ ಇಸಿಎಂಎಸ್ ಸ್ಕೀಮ್​​ಗೆ ಮಾರ್ಗಸೂಚಿ ಬಿಡುಗಡೆ ಮಾಡುವಾಗ ಕೇಂದ್ರ ಸಚಿವರು ಈ ಮಾಹಿತಿ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನೂ 2-3 ಸ್ಟಾರ್ಟಪ್​​ಗಳಿಗೆ ಅನುಮತಿ ನೀಡಲಾಗುವುದು ಎಂದೂ ಅವರು ಹೇಳಿದ್ದಾರೆ.

ಇದನ್ನೂ ಓದಿ: ಭಾರತ, ಜಪಾನ್ ಜಿಡಿಪಿಯನ್ನೂ ಮೀರಿಸಿದ ಈ ಒಂದು ರಾಜ್ಯದ ಆರ್ಥಿಕತೆ

ಇದನ್ನೂ ಓದಿ
Image
ಭಾರತೀಯ ವಿಮಾನಗಳಿಗೆ ಪ್ರವೇಶ ನಿರ್ಬಂಧಿಸಿ ಪಾಕ್ ಯಡವಟ್ಟು?
Image
ಭಾರತದಲ್ಲಿ ಐಫೋನ್ ತಯಾರಿಕೆ ಕ್ಷಿಪ್ರವಾಗಿ ಹೆಚ್ಚಿಸಲು ಆ್ಯಪಲ್ ಗುರಿ
Image
ದಕ್ಷಿಣ ಏಷ್ಯಾದ ನಂ. 1 ಆಗಿದ್ದ ಪಾಕಿಸ್ತಾನ ಭಿಕಾರಿ ಆದ ಕಥೆ
Image
ಎಂಇಐಎಲ್​​ಗೆ ಎರಡು ಕೈಗಾ ಅಣುಸ್ಥಾವರ ನಿರ್ಮಾಣದ ಗುತ್ತಿಗೆ

ಲಾರ್ಜ್ ಲ್ಯಾಂಗ್ವೇಜ್ ಮಾಡಲ್​ಗೂ ಫೌಂಡೇಶನ್ ಮಾಡಲ್​​ಗೂ ಏನು ವ್ಯತ್ಯಾಸ?

ಲಾರ್ಜ್ ಲ್ಯಾಂಗ್ವೇಜ್ ಮಾಡಲ್ ಅಥವಾ ಎಲ್​​ಎಲ್​​ಎಂ ಎಂಬುದು ಫೌಂಡೇಶನ್ ಮಾಡಲ್​​ನ ಒಂದು ವಿಧ ಅಷ್ಟೇ. ಎಲ್​​ಎಲ್​​ಎಂಗಳು ಪಠ್ಯಗಳ ಮೇಲೆ ಟ್ರೈನ್ ಆಗಿರುವ ಎಐ ಮಾಡಲ್​​ಗಳಾಗಿವೆ. ಇವು ಪಠ್ಯ ಆಧಾರಿತ ಡಾಟಾ ಜನರೇಟ್ ಮಾಡುತ್ತವೆ. ಮನುಷ್ಯರ ಭಾಷೆಯನ್ನು ಅರಿತು ಸಂವಾದ ನಡೆಸಬಲ್ಲುವು. ಚ್ಯಾಟ್​​ಜಿಪಿಟಿ, ಜೆಮಿನಿ ಎಐ ಇತ್ಯಾದಿ ಇದಕ್ಕೆ ಉದಾಹರಣೆ.

ಎಐ ಫೌಂಡೇಶನ್ ಮಾಡಲ್​​ನಲ್ಲಿ ಪಠ್ಯ ಮಾತ್ರವಲ್ಲ, ಇಮೇಜ್, ಆಡಿಯೋ, ವಿಡಿಯೋ ಅಥವಾ ಇನ್ನೂ ಬಹು ವಿಧವಾದ ದತ್ತಾಂಶಗಳಲ್ಲಿ ಟ್ರೈನ್ ಮಾಡಲಾಗುತ್ತದೆ. ಇವು ಮಲ್ಟಿಮೋಡಲ್ ಮಾಡಲ್ ಆಗಿರುತ್ತವೆ. ವಿವಿಧ ಭಾವಚಿತ್ರ, ಶಬ್ದ, ದೃಶ್ಯಗಳನ್ನು ಗ್ರಹಿಸಿ, ಅರ್ಥ ಮಾಡಿಕೊಳ್ಳುವ ಸಾಮರ್ಥ್ಯ ಹೊಂದಿರುತ್ತವೆ. ಚ್ಯಾಟ್ ಜಿಪಿಟಿ 4ವಿ, ಜೆಮಿನಿ 1.5 ಇತ್ಯಾದಿಯನ್ನು ಫೌಂಡೇಶನ್ ಮಾಡಲ್​​ಗಳೆಂದು ಪರಿಗಣಿಸಲಾಗುತ್ತದೆ.

ಇದನ್ನೂ ಓದಿ: 2026ರೊಳಗೆ ಅಮೆರಿಕದ ಮಾರುಕಟ್ಟೆಗೆ ಶೇ. 100 ಮೇಡ್ ಇನ್ ಇಂಡಿಯಾ ಐಫೋನ್: ಆ್ಯಪಲ್ ಗುರಿ

ಸರ್ವಮ್ ಎಐ ಕಂಪನಿ ಯಾರದ್ದು?

ವಿವೇಕ್ ರಾಘವನ್ ಮತ್ತು ಪ್ರತ್ಯುಶ್ ಕುಮಾರ್ ಅವರು 2023ರ ಜುಲೈನಲ್ಲಿ ಸ್ಥಾಪಿಸಿದ ಕಂಪನಿ ಸರ್ವಮ್ ಎಐ. ಇದು ಎಐ ಮಾಡಲ್​​ಗಳನ್ನು ಟ್ರೈನ್ ಮಾಡಲು ಬೇಕಾದ ಅವಿಷ್ಕಾರಗಳನ್ನು ಮಾಡುವ ಕಂಪನಿ. ನಂದನ್ ನಿಲೇಕಣಿ ಹೂಡಿಕೆ ಮಾಡಿರುವ ಎಐ ಫಾರ್ ಭಾರತ್ ಎನ್ನುವ ಸಂಸ್ಥೆಯಲ್ಲಿ ವಿವೇಕ್ ಮತ್ತು ಪ್ರತ್ಯೂಶ್ ಕೆಲಸ ಮಾಡಿ ಅನುಭವ ಹೊಂದಿದ್ದವರು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 1:44 pm, Sun, 27 April 25

ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ
ಓವರ್ ಮಧ್ಯದಲ್ಲಿಯೇ ಅಫ್ರಿದಿ ಬೌಲಿಂಗ್ ನಿಲ್ಲಿಸಿದ ಅಂಪೈರ್
ಓವರ್ ಮಧ್ಯದಲ್ಲಿಯೇ ಅಫ್ರಿದಿ ಬೌಲಿಂಗ್ ನಿಲ್ಲಿಸಿದ ಅಂಪೈರ್
ವಿಮಾನ ನಿಲ್ದಾಣದಲ್ಲಿ ಮೋದಿಗೆ ಜೋರ್ಡಾನ್‌ ಪ್ರಧಾನಿಯಿಂದ ಆತ್ಮೀಯ ಸ್ವಾಗತ
ವಿಮಾನ ನಿಲ್ದಾಣದಲ್ಲಿ ಮೋದಿಗೆ ಜೋರ್ಡಾನ್‌ ಪ್ರಧಾನಿಯಿಂದ ಆತ್ಮೀಯ ಸ್ವಾಗತ
ಉದ್ಯೋಗಾಕಾಂಕ್ಷಿಗಳಿಗೆ ಗುಡ್​ನ್ಯೂಸ್​​​: ಪೊಲೀಸ್ ಇಲಾಖೆಯಿಂದ ತರಬೇತಿ
ಉದ್ಯೋಗಾಕಾಂಕ್ಷಿಗಳಿಗೆ ಗುಡ್​ನ್ಯೂಸ್​​​: ಪೊಲೀಸ್ ಇಲಾಖೆಯಿಂದ ತರಬೇತಿ
ಅಶ್ವಿನಿ ಗೌಡ, ಚೈತ್ರಾ ಕುಂದಾಪುರ ನಡುವೆ ಜಗಳ: ಗಿಲ್ಲಿ ರಿಯಾಕ್ಷನ್ ನೋಡಿ..
ಅಶ್ವಿನಿ ಗೌಡ, ಚೈತ್ರಾ ಕುಂದಾಪುರ ನಡುವೆ ಜಗಳ: ಗಿಲ್ಲಿ ರಿಯಾಕ್ಷನ್ ನೋಡಿ..
ಭಲೇ ಆನೆ: ಪೊಲೀಸರಂತೆ ವಾಹನ ತಪಾಸಣೆ ಮಾಡಿದ ಕಾಡಾನೆ, ವಿಡಿಯೋ ನೋಡಿ
ಭಲೇ ಆನೆ: ಪೊಲೀಸರಂತೆ ವಾಹನ ತಪಾಸಣೆ ಮಾಡಿದ ಕಾಡಾನೆ, ವಿಡಿಯೋ ನೋಡಿ
ತಲ್ವಾರ್ ಹಿಡಿದು ಡ್ಯಾನ್ಸ್ ಮಾಡಿ ಫೇಸ್​ಬುಕ್ ಪೋಸ್ಟ್: ಇಬ್ಬರ ಬಂಧನ
ತಲ್ವಾರ್ ಹಿಡಿದು ಡ್ಯಾನ್ಸ್ ಮಾಡಿ ಫೇಸ್​ಬುಕ್ ಪೋಸ್ಟ್: ಇಬ್ಬರ ಬಂಧನ