ಸಚಿವ ತಿಮ್ಮಾಪುರ ಪಹಲ್ಗಾಮ್ ಉಗ್ರರ ಸಂದರ್ಶನ ಮಾಡಿಕೊಂಡು ಬಂದಂತಿದೆ: ಅರ್ ಅಶೋಕ
ಪಾಕಿಸ್ತಾನದ ಜೊತೆ ಯುದ್ಧ ಬೇಡವೆನ್ನುವ ಮುಖ್ಯಮಂತ್ರಿ ಸಿದ್ದರಾಮಯ್ಯ ಪಾಕಿಸ್ತಾನಕ್ಕೆ ಭಾರತದ ನಿಜವಾದ ರಾಯಭಾರಿ ಆಗುತ್ತಾರೆ. ಇವರನ್ನ ರಾಯಭಾರಿಯಾಗಿ ಕಳಿಸಿದರೆ ಪಾಕಿಸ್ತಾನ ತನ್ನ ಎಲ್ಲ ಅತ್ಯುನ್ನತ ಗೌರವ ಪುರಸ್ಕಾರಗಳನ್ನು ಇವರಿಗೆ ನೀಡಿ ಅಲ್ಲಿನ ರಸ್ತೆಗಳಲ್ಲಿ ಚಿನ್ನದ ರಥದಲ್ಲಿ ಮೆರವಣಿಗೆ ಮಾಡಿಸುತ್ತದೆ ಎಂದು ವಿರೋಧ ಪಕ್ಷದ ನಾಯಕ ಅರ್ ಅಶೋಕ ವ್ಯಂಗ್ಯವಾಡಿದರು.
ಬೆಂಗಳೂರು, ಏಪ್ರಿಲ್ 28: ಪಹಲ್ಗಾಮ್ ಉಗ್ರರ ದಾಳಿಯಲ್ಲಿ(Pahalgam Terror attack) ಧರ್ಮವನ್ನು ಕೇಳ ಟಾರ್ಗೆಟ್ ಮಾಡಲಾಯಿತು ಎಂದು ಭಯೋತ್ಪಾದಕರ ಗುಂಡಿಗೆ ಬಲಿಯಾದವರ ಕುಟುಂಬಸ್ಥರು ಹೇಳುತ್ತಿದ್ದಾಗ್ಯೂ ಕಾಂಗ್ರೆಸ್ ಕೆಲ ಮಂತ್ರಿಗಳು ಅದನ್ನು ಅಲ್ಲಗಳೆಯುತ್ತಿರುವುದಕ್ಕೆ ಬಿಜೆಪಿ ನಾಯಕ ಅರ್ ಅಶೋಕ ಕಿಡಿಕಾರಿದ್ದಾರೆ. ಉಗ್ರಗಾಮಿಗಳಲ್ಲಿ ಜನರ ಧರ್ಮ ಕೇಳುವಷ್ಟು ಪುರುಸೊತ್ತು ಎಲ್ಲಿತ್ತು ಅಂತ ಸಚಿವ ಆರ್ ಬಿ ತಿಮ್ಮಾಪುರ ಹೇಳಿರುವುದಕ್ಕೆ ಪ್ರತಿಕ್ರಿಯಿಸಿದ ಅಶೋಕ, ತಿಮ್ಮಾಪುರ ಉಗ್ರರ ಸಂದರ್ಶನ ಮಾಡಿದ್ದಾರೆಯೇ ಅಥವಾ ಉಗ್ರರು ಮಾತಾಡಿರುವುದನ್ನು ಕೇಳಿಸಿಕೊಂಡಿದ್ದಾರೆಯೇ ಎಂದು ಪ್ರಶ್ನಿಸಿದರು. ಇವರಿಗೆ ವೋಟು ಮುಖ್ಯವೇ ಹೊರತು ದೇಶವಲ್ಲ ಎಂದು ಅಶೋಕ ಹೇಳಿದರು.
ಇದನ್ನೂ ಓದಿ: ಶಾಸಕರ ಅಮಾನತು ವಾಪಸ್ಸು ಪಡೆಯುವಂತೆ ಸ್ಪೀಕರ್ ಹಾಗೂ ಕಾನೂನು ಸಚಿವರಿಗೆ ಮನವಿ ಮಾಡಿದ್ದೇವೆ: ಅಶೋಕ
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಬೆಂಗಾವಲು ವಾಹನ ಡ್ರೈವರ್ ಆತ್ಮಹತ್ಯೆ: ಆಸ್ಪತ್ರೆಗೆ ಬಂದು ಕಣ್ಣೀರಿಟ್ಟ ಅಶೋಕ್

ಅಪ್ಪನಿಗೆ ಜೀವಾವಧಿ ಶಿಕ್ಷೆ ಆಗಬೇಕು, ಇಲ್ಲಂದ್ರೆ ನಾನೇ ಕೊಲೆ ಮಾಡ್ತೀನಿ ಮಗ

ಟೀಂ ಇಂಡಿಯಾಕ್ಕೆ ಗೌತಮ್ ಗಂಭೀರ್ ಮನೆಯಲ್ಲಿ ಆತಿಥ್ಯ

ಜನರನ್ನು ಕಂಗಾಲಾಗಿಸಿದ ಬೃಹತ್ ಹೆಬ್ಬಾವನ್ನು ಹಿಡಿದ ಟ್ರಾಫಿಕ್ ಪೊಲೀಸ್!
