ಯತ್ನಾಳ್ ಬಗ್ಗೆ ಬಹಳ ಕನಸಿಟ್ಟುಕೊಂಡಿದ್ದೆವು, ಅದರೆ ಬಚ್ಚಲು ಬಾಯಿಂದಾಗಿ ಎಲ್ಲ ಹಾಳುಮಾಡಿಕೊಂಡಿದ್ದಾರೆ: ಸ್ವಾಮೀಜಿ
ನುಡಿದರೆ ಮುತ್ತಿನ ಹಾರದಂತಿರಬೇಕು, ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು, ನುಡಿದರೆ ಸ್ಫಟಿಕದ ಸಲಾಕೆಯಂತಿರಬೇಕು, ನುಡಿದರೆ ಲಿಂಗ ಮೆಚ್ಚಿ ಅಹುದಹುದೆನ್ನಬೇಕು ಎಂದು ಬಸವಣ್ಣನವರ ವಚನಗಳನ್ನು ತಮ್ಮ ಮಾತಿನಲ್ಲಿ ಬಳಸಿದ ವೀರತಿಶಾನಂದ ಸ್ವಾಮೀಜಿ, ಯತ್ನಾಳ್ ಮಾತಾಡಿದರೆ, ಅವರ ಕ್ಷೇತ್ರದವರು, ಸಮಾಜದವರು ಕೂಡ ಅಹುದುದೆನ್ನುತ್ತಿಲ್ಲ, ಇವರ ರಾಜಕೀಯ ಭವಿಷ್ಯ ಏನಾಗಲಿದೆಯೋ ಎಂದರು.
ವಿಜಯಪುರ, ಏಪ್ರಿಲ್ 28: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಪ್ರವಾದಿ ಮೊಹಮ್ಮದ್ ಅವರ ವಿರುದ್ಧ ಅವಹೇಳನಕಾರಿಯಾಗಿ ಮಾತಾಡಿದ್ದಕ್ಕೆ ವಿಜಯಪುರದ ಮುಸಲ್ಮಾನರು ನಡೆಸುತ್ತಿರುವ ಪ್ರತಿಭಟನೆಯಲ್ಲಿ ಕೆಲ ಮಠಾಧೀಶರು (seers) ಕೂಡ ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ ಮಾತಾಡಿದ ಮನಗೂಳಿ ಮಠದ ವೀರತಿಶಾನಂದ ಸ್ವಾಮೀಜಿ ಅವರು, ಪ್ರವಾದಿಯವರ ಬಗ್ಗೆ ಯತ್ನಾಳ್ ಅವಹೇಳನಕಾರಿಯಾಗಿ ಮಾತಾಡಿದ್ದು ಅಕ್ಷಮ್ಯ ಅಪರಾಧ, ಚಿಕ್ಕ ವಯಸ್ಸಿನಲ್ಲೇ ಯತ್ನಾಳ್ ಅವರು ಕೇಂದ್ರದಲ್ಲಿ ಸಚಿವರಾದಾಗ, ಮುಂದೊಂದು ದಿನ ಪ್ರಧಾನ ಮಂತ್ರಿ ಅಗುತ್ತಾರೆ ಎಂದು ಭಾವಿಸಿದ್ದೆವು, ನಂತರ ಅವರ ರಾಜ್ಯ ರಾಜಕಾರಣಕ್ಕೆ ಬಂದು ತಾನು ಮುಖ್ಯಮಂತ್ರಿಯಾಗಲಿದ್ದೇನೆ ಎಂದಾಗ ಪಂಚಮಸಾಲಿ ಸಮಾಜದ ನಾಯಕರೊಬ್ದರು ಮುಖ್ಯಮಂತ್ರಿಯಾಗುತ್ತಾರೆ ಅಂತ ಸಂಭ್ರಮಿಸಿದ್ದೆವು, ಅದರೆ ಯತ್ನಾಳ್ ತಮ್ಮ ಬಚ್ಚಲು ಮತ್ತು ಹರಕು ಬಾಯಿಂದಾಗಿ ಎಲ್ಲವನ್ನೂ ಕಳೆದುಕೊಂಡಿದ್ದಾರೆ ಎಂದು ಹೇಳಿದರು.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
New Year 2026 Live: ಬ್ರಿಗೇಡ್ ರಸ್ತೆಯಲ್ಲಿ ನ್ಯೂ ಇಯರ್ ಸಂಭ್ರಮಾಚರಣೆ
ಪುಟಿನ್ ನಿವಾಸದ ಮೇಲೆ ದಾಳಿ ಮಾಡಿದ ಉಕ್ರೇನ್; ರಷ್ಯಾದಿಂದ ವಿಡಿಯೋ ಬಿಡುಗಡೆ
ಕನ್ಯಾಕುಮಾರಿಯಲ್ಲಿ 2025ರ ಕೊನೆಯ ಸೂರ್ಯಾಸ್ತದ ನೋಡಲು ಆಗಮಿಸಿದ ಜನಸಾಗರ
ನ್ಯೂಇಯರ್ ಸೆಲೆಬ್ರೇಷನ್ ಮುನ್ನ ಮಳೆ ಎಂಟ್ರಿ: ಪಾರ್ಟಿ ಪ್ರಿಯರಿಗೆ ಶಾಕ್!

