AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Pahelgam Terrorist Attack: ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶವಾಗಿ ಮುಂದುವರಿದಿದ್ದರೆ ಉಗ್ರರ ದಾಳಿ ನಡೆಯುತ್ತಿರಲಿಲ್ಲ: ಯತ್ನಾಳ್

Pahelgam Terrorist Attack: ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶವಾಗಿ ಮುಂದುವರಿದಿದ್ದರೆ ಉಗ್ರರ ದಾಳಿ ನಡೆಯುತ್ತಿರಲಿಲ್ಲ: ಯತ್ನಾಳ್

ಅರುಣ್​ ಕುಮಾರ್​ ಬೆಳ್ಳಿ
|

Updated on: Apr 23, 2025 | 3:58 PM

ಉಗ್ರರು ನಡೆಸಿರುವ ದಾಳಿಗೆ ಭದ್ರತಾ ಲೋಪ ಕಾರಣ ಅಂತ ಹೇಳುವುದು ಸರಿಯಲ್ಲ, ಕೆಲವರ ಕುಯುಕ್ತಿಯಿಂದ ಅದು ನಡೆದಿದೆ. ಭಯೋತ್ಪಾದಕರು ಪೊಲೀಸರ ಡ್ರೆಸ್ ನಲ್ಲಿ ಬಂದು ದಾಳಿ ನಡೆಸಿದ್ದಾರೆ, ಜನಸಾಮಾನ್ಯರಿಗೆ ಅವರು ಪೊಲೀಸರಲ್ಲ, ಉಗ್ರರು ಅಂತ ಹೇಗೆ ಗೊತ್ತಾಗಬೇಕು? ರಾಜ್ಯ ಬಿಟ್ಟು ಹೊರಬಂದಿರುವ ಕಾಶ್ಮೀರಿ ಪಂಡಿತರನ್ನು ವಾಪಸ್ಸು ಕರೆತಂದು ನೆಲೆಗೊಳಿಸಿದ ಮೇಲೆ ಚುನಾವಣೆ ನಡೆಸಬೇಕಿತ್ತು ಎಂದು ಯತ್ನಾಳ್ ಹೇಳಿದರು.

ಹಾವೇರಿ, ಏಪ್ರಿಲ್ 23: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು (PM Narendra Modi) ಆರ್ಟಿಕಲ್ 370 ತೆರವುಗೊಳಿಸಿದ ನಂತರ ಕಾಶ್ಮೀರದಲ್ಲಿ ಶಾಂತಿ ಸುವ್ಯವಸ್ಥೆ ನೆಲೆಸಿತ್ತು, ಈ ಪ್ರಾಂತ್ಯ ತನ್ನ ಕೈ ತಪ್ಪಿಹೋಗುತ್ತಿದೆ ಅಂತ ಪಾಕಿಸ್ತಾನಕ್ಕೆ ಹತಾಶೆ ಶುರುವಾಗಿತ್ತು, ಅದರ ಪರಿಣಾಮವೇ ನಿನ್ನೆ ಪಹೆಲ್ಗಾಮ್ ನಲ್ಲಿ ಉಗ್ರರ ದಾಳಿ ನಡೆದು 28 ಅಮಾಯಕ ಹಿಂದೂಗಳು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಬಿಜೆಪಿ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು. ಕಳೆದ 10 ವರ್ಷಗಳ ಅವಧಿಯಲ್ಲಿ ಪ್ರಧಾನಿ ಮೋದಿಯವರು ಆ ಪ್ರದೇಶದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ, ಅದು ಕೇಂದ್ರಾಡಳಿತ ಪ್ರದೇಶವಾಗಿ ಉಳಿದಿದ್ದರೆ ಇನ್ನಷ್ಟು ಅಬಿವೃದ್ಧಿ ನಡೆಯುತ್ತಿತ್ತು, ಚುನಾವಣೆ ನಡೆಸುವ ಅವಶ್ಯಕತೆ ಇರಲಿಲ್ಲ ಎಂದು ಯತ್ನಾಳ್ ಹೇಳಿದರು.

ಇದನ್ನೂ ಓದಿ:   ನನ್ನ ಉಚ್ಚಾಟನೆ ನಂತರ ಬಿಜೆಪಿಯಲ್ಲಿ ಒಗ್ಗಟ್ಟು ಕಂಡುಬರುತ್ತಿದೆ ಅನ್ನೋದು ಸುಳ್ಳು: ಬಸನಗೌಡ ಯತ್ನಾಳ್

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ