ಬಜೆಟ್​ಗೆ ಸಿದ್ಧತೆ ಎಷ್ಟು ತಿಂಗಳು ಮುಂಚೆ ಶುರುವಾಗುತ್ತೆ? ಯೂನಿಯನ್ ಬಜೆಟ್ ಬಗ್ಗೆ ತಿಳಿಯಬೇಕಾದ ಕೆಲ ಸಂಗತಿಗಳು

Union Budget 2024: ಫೆಬ್ರುವರಿ 1ರಂದು ಹಣಕಾಸು ಸಚಿವರು ಲೋಕಸಭೆಯಲ್ಲಿ ಕೇಂದ್ರ ಬಜೆಟ್ ಅನ್ನು ಮಂಡನೆ ಮಾಡಲಿದ್ದಾರೆ. ಈ ಬಾರಿಯದ್ದು ಮಧ್ಯಂತರ ಬಜೆಟ್ ಆಗಿದೆ. ಬಜೆಟ್ ಎಂಬುದು ಒಂದು ಹಣಕಾಸು ವರ್ಷಕ್ಕೆ ಸರ್ಕಾರದ ಆದಾಯ ಮತ್ತು ವೆಚ್ಚದ ವಿವರಗಳನ್ನು ಒಳಗೊಂಡಿರುತ್ತದೆ. ಆರು ತಿಂಗಳಿಂದಲೇ ಬಜೆಟ್​ಗೆ ತಯಾರಿ ನಡೆಯುತ್ತದೆ. ವಿವಿಧ ಇಲಾಖೆ, ಉದ್ಯಮ ವಲಯದ ಪ್ರತಿನಿಧಿಗಳೊಂದಿಗೆ ಸಮಾಲೋಚನೆ ನಡೆಸಿ ಬಜೆಟ್ ರೂಪಿಸಲಾಗುತ್ತದೆ.

ಬಜೆಟ್​ಗೆ ಸಿದ್ಧತೆ ಎಷ್ಟು ತಿಂಗಳು ಮುಂಚೆ ಶುರುವಾಗುತ್ತೆ? ಯೂನಿಯನ್ ಬಜೆಟ್ ಬಗ್ಗೆ ತಿಳಿಯಬೇಕಾದ ಕೆಲ ಸಂಗತಿಗಳು
ಕೇಂದ್ರ ಬಜೆಟ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Jan 11, 2024 | 1:04 PM

ಫೆಬ್ರುವರಿ 1ರಂದು ಮಂಡಿಸಲಾಗುವ ಕೇಂದ್ರ ಬಜೆಟ್ (Union Budget) ಬಗ್ಗೆ ಇಡೀ ದೇಶದ ಗಮನ ನೆಟ್ಟಿರುತ್ತದೆ. ಈ ವರ್ಷ ಚುನಾವಣೆ ಇರುವುದರಿಂದ ಮಧ್ಯಂತರ ಬಜೆಟ್ ಮಾತ್ರವೇ ಮಂಡನೆ ಆಗುತ್ತದೆ. ಏಪ್ರಿಲ್-ಮೇ ತಿಂಗಳಲ್ಲಿ ಚುನಾವಣೆ ಬಳಿಕ ಹೊಸ ಸರ್ಕಾರದಿಂದ ಪೂರ್ಣ ಪ್ರಮಾಣದ ಬಜೆಟ್ ಪ್ರಸ್ತುತಪಡಿಸಲಾಗುತ್ತದೆ. ಈ ಬಾರಿ ಫೆಬ್ರುವರಿ 1ರದ್ದು ಮಧ್ಯಂತರ ಬಜೆಟ್ ಆದರೂ ಸಾಕಷ್ಟು ಕುತೂಹಲವಂತೂ ಇದೆ.

ಕೇಂದ್ರ ಬಜೆಟ್ ಅನ್ನು ಪ್ರತೀ ವರ್ಷ ಪ್ರಸ್ತುತಪಡಿಸಲಾಗುತ್ತದೆ. ಮುಂದಿನ ಒಂದು ಹಣಕಾಸು ವರ್ಷಕ್ಕೆ ಸರ್ಕಾರದ ಆದಾಯ ಮತ್ತು ಖರ್ಚಿನ ವಿವರ ಇದಾಗಿದೆ. ಹಣಕಾಸು ವರ್ಷ ಏಪ್ರಿಲ್ 1ರಂದು ಆರಂಭವಾಗಿ ಮರುವರ್ಷ ಮಾರ್ಚ್ 31ಕ್ಕೆ ಅಂತ್ಯವಾಗುತ್ತದೆ. ಫೆಬ್ರುವರಿ 1ರಂದು ಪ್ರಸ್ತುತವಾಗುವ ಬಜೆಟ್ 2023ರ ಏಪ್ರಿಲ್ 1ರಿಂದ 2024ರ ಮಾರ್ಚ್ 31ರವರೆಗಿನ ಅವಧಿಗೆ ಅನ್ವಯ ಆಗುತ್ತದೆ.

ಆರು ತಿಂಗಳ ಮುಂಚೆಯೇ ಸಿದ್ಧತೆ ಶುರು

ಬಜೆಟ್ ರೂಪಿಸುವುದು ಸಣ್ಣ ವಿಚಾರವಲ್ಲ. ಬಹಳ ತಯಾರಿ ಬೇಕಾಗುತ್ತದೆ. ಸಂಸತ್​ನಲ್ಲಿ ಬಜೆಟ್ ಮಂಡನೆ ಮಾಡುವ ಆರು ತಿಂಗಳ ಮುಂಚಿನಿಂದಲೇ ಸಿದ್ಧತೆ ನಡೆದಿರುತ್ತದೆ. ವಿವಿಧ ಸರ್ಕಾರಿ ಇಲಾಖೆ, ವಿವಿಧ ಉದ್ಯಮ ಪ್ರತಿನಿಧಿಗಳು ಮೊದಲಾದವರೊಂದಿಗೆ ಹಣಕಾಸು ಸಚಿವಾಲಯ ಸಮಾಲೋಚನೆ ನಡೆಸುತ್ತದೆ. ಯಾವ್ಯಾವ ಕ್ಷೇತ್ರದಿಂದ ಏನೇನು ಬೇಡಿಕೆಗಳಿವೆ, ಯಾವ ಕ್ಷೇತ್ರಗಳಿಗೆ ಆದ್ಯತೆ ಕೊಡಬೇಕು ಇತ್ಯಾದಿ ಎಲ್ಲ ಸಂಗತಿಗಳನ್ನು ಅವಲೋಕಿಸಿ ನಿರ್ಧರಿಸಲಾಗುತ್ತದೆ.

ಯಾವುದಾದರೂ ತೊಡಕು ಬಂದರೆ ಪ್ರಧಾನಿಯವರೋ ಅಥವಾ ಕೇಂದ್ರ ಸಂಪುಟದಲ್ಲೋ ಒಮ್ಮತದ ಮೂಲಕ ಪರಿಹಾರ ಕಂಡುಕೊಳ್ಳಲಾಗುತ್ತದೆ.

ಇದನ್ನೂ ಓದಿ: Union Budget: ಚುನಾವಣೆ ಹೊಸ್ತಿಲಲ್ಲಿ ಕೇಂದ್ರ ಬಜೆಟ್; ಏನೇನು ನಿರೀಕ್ಷೆಗಳಿವೆ? ಮುಂಗಡಪತ್ರ ಹೇಗಿರಲಿದೆ?

ಬಜೆಟ್ ಹೇಗೆ ಮಂಡನೆ ಆಗುತ್ತದೆ?

ಹಿಂದೆ ಕೇಂದ್ರ ಬಜೆಟ್ ಅನ್ನು ಫೆಬ್ರುವರಿ ಕೊನೆಯಲ್ಲಿ ಮಾಡಲಾಗುತ್ತಿತ್ತು. 2017ರಿಂದ ಫೆಬ್ರುವರಿ 1ಕ್ಕೆ ಮಾಡಲಾಗುತ್ತಿದೆ. ಹಿಂದೆ ರೈಲ್ವೆ ಬಜೆಟ್ ಪ್ರತ್ಯೇಕವಾಗಿರುತ್ತಿತ್ತು. ಈಗ ಕೇಂದ್ರ ಬಜೆಟ್​ನಲ್ಲೇ ರೈಲ್ವೆಯದ್ದೂ ಒಳಗೊಂಡಿರುತ್ತದೆ.

ಫೆಬ್ರುವರಿ 1ರಂದು ಬಜೆಟ್ ಮಂಡನೆಗೆ ಒಂದು ದಿನ ಮುನ್ನ, ಅಂದರೆ ಜನವರಿ 31ರಂದು ಸಂಸತ್​ನಲ್ಲಿ ಬಜೆಟ್ ಅಧಿವೇಶನ ಮೊದಲುಗೊಳ್ಳುತ್ತದೆ. ರಾಷ್ಟ್ರಪತಿಯವರು ಜಂಟಿ ಸದನ ಉದ್ದೇಶಿಸಿ ಭಾಷಣ ಮಾಡುತ್ತಾರೆ.

ಇದನ್ನೂ ಓದಿ: ಶ್ರೀಮಂತಿಕೆಯಲ್ಲಿ ಅಂಬಾನಿ ಫ್ಯಾಮಿಲಿ ಹಿಂದಿಕ್ಕಿದ ಅದಾನಿ ಫ್ಯಾಮಿಲಿ; ಸಂಪತ್ತು ಹೆಚ್ಚಳಕ್ಕೆ ಸುಪ್ರೀಂ ತೀರ್ಪು ಪುಷ್ಟಿ

ಫೆಬ್ರುವರಿ 1ರಂದು ಹಣಕಾಸು ಸಚಿವರು ಲೋಕಸಭೆಯಲ್ಲಿ ಬಜೆಟ್ ಮಂಡನೆ ಮಾಡುತ್ತಾರೆ. ಕೆಲವೊಮ್ಮೆ ಹಣಕಾಸು ಸಚಿವರ ಬದಲು ಬೇರೆಯವರೂ ಬಜೆಟ್ ಮಂಡನೆ ಮಾಡಬಹುದು. 2019ರಲ್ಲಿ ಅಂದಿನ ಹಣಕಾಸು ಸಚಿವ ಅರುಣ್ ಜೇಟ್ಲಿ ಅನಾರೋಗ್ಯ ಸ್ಥಿತಿಯಲ್ಲಿದ್ದಾಗ, ಪೀಯುಶ್ ಗೋಯಲ್ ಅವರು ಬಜೆಟ್ ಮಂಡನೆ ಮಾಡಿದ್ದರು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 12:52 pm, Thu, 4 January 24

‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಉಗ್ರಂ ಮಂಜು ತಲೆ ಮೇಲೆ ಬಾಟಲಿ ಹೊಡೆದ ಮೋಕ್ಷಿತಾ
ಉಗ್ರಂ ಮಂಜು ತಲೆ ಮೇಲೆ ಬಾಟಲಿ ಹೊಡೆದ ಮೋಕ್ಷಿತಾ
ವಾಟ್ ಎ ಬಾಲ್... ಡೇಂಜರಸ್ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್
ವಾಟ್ ಎ ಬಾಲ್... ಡೇಂಜರಸ್ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್
ವೀರಸೌಧದಲ್ಲಿ ಗಾಂಧಿ ಪ್ರತಿಮೆ ಅನಾವರಣಗೊಳಿಸಿದ ಸಿದ್ದರಾಮಯ್ಯ, ಡಿಕೆಶಿ
ವೀರಸೌಧದಲ್ಲಿ ಗಾಂಧಿ ಪ್ರತಿಮೆ ಅನಾವರಣಗೊಳಿಸಿದ ಸಿದ್ದರಾಮಯ್ಯ, ಡಿಕೆಶಿ
ಹುತಾತ್ಮ ಯೋಧರ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ: ಸಿಎಂ
ಹುತಾತ್ಮ ಯೋಧರ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ: ಸಿಎಂ